Site icon Vistara News

Actor Darshan: ಇನ್ಮುಂದೆ ದರ್ಶನ್‌ ಕೈದಿ ನಂಬರ್‌ ನನ್ನ ಗಾಡಿ ಮೇಲೆ ಇರತ್ತೆ ಎಂದು ಗಳಗಳನೇ ಅತ್ತ ಅಭಿಮಾನಿ!

Actor Darshan 6106 will put my vehicle told by darshan fan

ಮೈಸೂರು: ರೇಣುಕಾ ಸ್ವಾಮಿ ಕೊಲೆ (Renuka Swamy murder) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ (Parappana Agrahara) ಜೈಲು ಸೇರಿರುವ ನಟ ದರ್ಶನ್‌ನನ್ನು (Actor Darshan) ಭದ್ರತೆ ದೃಷ್ಟಿಯಿಂದ ಬೇರೆ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆಗಳಿವೆ. ಇದರ ನಡುವೆ ಇದೀಗ ದಚ್ಚು ಫ್ಯಾನ್ಸ್‌ ತಮ್ಮ ಹೀರೋ ಗೆ ಈ ಗತಿ ಬಂತಲ್ಲ ಎಂದು ಕಣ್ಣೀರಿಡುತ್ತಿದ್ದಾರೆ. ದರ್ಶನ್‌ ಕೈದಿ ನಂಬರ್‌ 6106 ಎನ್ನುವುದು ಗೊತ್ತೇ ಇದೆ. ಇದೀಗ ದರ್ಶನ್‌ ಫ್ಯಾನ್‌ ಧನುಷ್‌ ಎಂಬುವರು ನಮಗೆ ಇದೇ ಲಕ್ಕಿ ನಂಬರ್ ಎಂದು ವಿಡಿಯೊ ಮೂಲಕ ಕಣ್ಣೀರಿಟ್ಟಿದ್ದಾರೆ.

ಮೈಸೂರಿನಲ್ಲಿ ದರ್ಶನ್‌ ಅಭಿಮಾನಿ ಧನುಷ್‌ ಇದೀಗ ದರ್ಶನ್‌ ಕುರಿತಾಗಿ ಕಣ್ಣೀರಿಟ್ಟು 6106 ಇನ್ಮುಂದೆ ನಮಗೆ ಇದೇ ಲಕ್ಕಿ ನಂಬರ್ ಎಂದಿದ್ದಾರೆ. ಮಾತ್ರವಲ್ಲ ಇನ್ಮುಂದೆ ಆ ನಂಬರ್ ನಮ್ಮ ಗಾಡಿ ಮೇಲೆ ಇರುತ್ತೆ ಎಂದೂ ಹೇಳಿಕೊಂಡಿದ್ದಾರೆ. ದರ್ಶನ್‌ಗೆ ನೀಡಿರುವ ಈ ನಂಬರ್‌ವನ್ನು ಆರ್ ಟಿಒನಲ್ಲಿ ರಿಜಿಸ್ಟರ್ ಮಾಡಿಸಲು ಅಭಿಮಾನಿ ಮುಂದಾಗಿದ್ದಾರೆ. ದರ್ಶನ್ ಜೈಲುವಾಸ ನೆನೆದು ಗಳಗಳನೆ ಕಟ್ಟೀರಿಟ್ಟಿದ್ದಾರೆ. ಶೀಘ್ರವಾಗಿ ದರ್ಶನ್‌ ಬಿಡುಗಡೆಗೆ ಆಗಬೇಕು ನಾಡ ಅಧಿದೇವತೆ ಚಾಮುಂಡಿಯಲ್ಲಿ ಹರಕೆ ಕೂಡ ಹೊತ್ತಿದ್ದಾರೆ ಧನುಷ್‌. ದರ್ಶನ್ ಬಿಡುಗಡೆಯಾದರೆ 101 ತೆಂಗಿನಕಾಯಿ ಒಡೆಯುವುದಾಗಿ ಕೂಡ ಹರಕೆ ಹೊತ್ತಿದ್ದಾರೆ. ʻʻನಮ್ಮ ಬಾಸ್ ಏನೂ ತಪ್ಪೇ ಮಾಡಿಲ್ಲ. ನಮ್ಮ‌ ಬಾಸ್ ಅವರನ್ನು ನಾವು ಎಂದೂ ಬಿಟ್ಟುಕೊಡೋದಿಲ್ಲ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿಲ್ಲ ಅಂದ್ರೆ ರಾಜಾರೋಷವಾಗಿ ಬರ್ತಾರೆʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Actor Darshan: ಪರಪ್ಪನ ಅಗ್ರಹಾರದಿಂದ‌ ದರ್ಶನ್ ಬೇರೆ ಜೈಲಿಗೆ ಶಿಫ್ಟ್? ಇಂದು ಜಾಮೀನು ಅರ್ಜಿ ಸಲ್ಲಿಕೆ

ದರ್ಶನ್‌ನನ್ನು ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಅವಕಾಶ ಕೊಡುವಂತೆ ಎಸ್‌ಪಿಪಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ. ಒಂದು ವೇಳೆ ನ್ಯಾಯಾಲಯ ಅರ್ಜಿ ಪುರಸ್ಕರಿಸಿದರೆ ತುಮಕೂರು ಜೈಲಿಗೆ ಕಳಿಸಲಾಗುತ್ತದೆ. ಇಲ್ಲವಾದರೆ ಪರಪ್ಪನ ಅಗ್ರಹಾರದ ಭದ್ರತಾ ಸಿಬ್ಬಂದಿ ಕೊಠಡಿಯಲ್ಲೇ ನಟ ಕಾಲ ಕಳೆಯಬೇಕಾಗಿದೆ.

ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಮನವಿ ಮಾಡಿರುವ ಕಾರಣಗಳೆಂದರೆ, ಜನಪ್ರಿಯ ನಟನಾಗಿರುವುದರಿಂದ ಹಲವರು ಪರಿಚಯವಿದ್ದು ಕೈದಿಗಳ ನಡುವೆ ಗಲಾಟೆಯಾಗುವ ಸಾಧ್ಯತೆ ಇದೆ. ಸಹ ಕೈದಿಗಳು ದರ್ಶನ್ ಮೇಲೆ ಅಟ್ಯಾಕ್ ಮಾಡಬಹುದು. ಪ್ರಕರಣದಲ್ಲಿರುವ ಹಲವು ಆರೋಪಿಗಳಿಗೆ ರೌಡಿ ಕಾಂಟ್ಯಾಕ್ಟ್ ಇರುವ ಹಿನ್ನೆಲೆಯಲ್ಲಿ, ರೌಡಿಗಳ ಮುಖಾಂತರ ಸಾಕ್ಷಿ ನಾಶ ಮಾಡುವಲ್ಲಿ ಯತ್ನಿಸುವ ಸಾಧ್ಯತೆ ಇದೆ. ಜೊತೆಗೆ ದರ್ಶನ್‌ನನ್ನು ನೋಡಲು ಕೈದಿಗಳಿಂದ ಜೈಲಿನೊಳಗೆ ಹಾಗೂ ಅಭಿಮಾನಿಗಳಿಂದ ಜೈಲಿನ ಹೊರಗೆ ದೊಂಬಿ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೇರೆ ಜೈಲಿಗೆ ಸ್ಥಳಾಂತರ ಮಾಡಲು ಎಸ್ಪಿಪಿ ಮನವಿ ಮಾಡಿದ್ದಾರೆ.

Exit mobile version