ಬೆಂಗಳೂರು: ದರ್ಶನ್ (Actor Darshan) ಕೇಸ್‌ಗೆ ಸಂಬಂಧಪಟ್ಟಂತೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಾಲ್ವರು ಆರೋಪಿಗಳ ಪ್ರತ್ಯೇಕ ವಿಚಾರಣೆ ಆಗುತ್ತಿದೆ. ದರ್ಶನ್ ಮನೆಯಲ್ಲಿ ಸಿಕ್ಕ 40 ಲಕ್ಷ ರೂ, ಹಣದ ಬಗ್ಗೆ ಹಾಗೂ ಸಾಕ್ಷ್ಯಗಳ ನಾಶ ಮಾಡುವ ಫ್ಲಾನ್ ಬಗ್ಗೆ ತನಿಖೆ ಆಗುತ್ತಿದೆ. ಎಸಿಪಿ ಚಂದನ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಕಳೆದ ಎರಡು ಗಂಟೆಗಳಿಂದ ನಟ ದರ್ಶನ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಅದರಲ್ಲೂ ಮುಂಜಾನೆಯಿಂದಲೂ ಪೊಲೀಸರು ಆರೋಪಿ ವಿನಯ್‌ನನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ರೇಣುಕಾಸ್ವಾಮಿಯನ್ನು ಹೆಚ್ಚಾಗಿ ಹಲ್ಲೆ ಮಾಡಿದ್ದು ಇದೇ ಆರೋಪಿ ವಿನಯ್. ವಿನಯ್ ಮೊಬೈಲ್‌ನಲ್ಲಿ ವೀಡಿಯೋ ಸಾಕ್ಷ್ಯ ಸಿಕ್ಕಿದ್ದು, ವೀಡಿಯೊ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಮುಂಜಾನೆಯಿಂದಲೂ ವಿಡಿಯೋ ಕಳುಹಿಸಿದ್ದ ವ್ಯಕ್ತಿಯ ಬಗ್ಗೆ ಬಾಯಿಬಿಡುತ್ತಿಲ್ಲ ಆರೋಪಿ ವಿನಯ್. ಇತ್ತ ಮೊಬೈಲ್‌ನಲ್ಲಿ ಕೆಲ ನಂಬರ್‌ಗಳನ್ನು ವಿನಯ್ ಡಿಲೀಟ್ ಮಾಡಿದ್ದು ಪರಿಶೀಲನೆ ವೇಳೆ ಬಯಲಾಗಿದೆ. ಹೀಗಾಗಿ ಮೊಬೈಲ್‌ವನ್ನು ಎಫ್ ಎಸ್ ಎಲ್ ರವಾನೆ ಮಾಡಿದ್ದು ರಿಟ್ರೀವ್ ಮಾಡೋ ಕೆಲಸ ಆಗುತ್ತ ಇದೆ.
ಮಾತ್ರವಲ್ಲ ರೇಣುಕಾ ಸ್ವಾಮಿಯನ್ನು ಕರೆಂಟ್ ಹೊಡೆದು ಸಾಯಿಸಿರುವುದಾಗಿ ಆರೋಪಿ ವಿನಯ್ ಒಪ್ಪಿಕೊಂಡಿದ್ದಾನೆ. ಎಲೆಕ್ಟ್ರಿಕ್ ಡಿವೈಸ್ ಎಲ್ಲಿ ಖರೀದಿ ಮಾಡಿದ್ದು ಎನ್ನುವ ಬಗ್ಗೆ ಇನ್ನೊಬ್ಬ ಆರೋಪಿ ಬಾಯಿಬಿಡದ ಧನರಾಜ್ ಬಾಯಿ ಬಿಡುತ್ತಿಲ್ಲ. ಪ್ರದೂಶ್ ಹಾಗೂ ವಿನಯ್ ಇಬ್ಬರನ್ನೂ ಜತೆಯಾಗಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಕೆಲ ಸಾಕ್ಷಿಗಳಿಗೆ ಹಣದ ಆಸೆ ತೋರಿಸಿದ್ದೇ ಈ ಇಬ್ಬರು. ಯಾರಿಗೆಲ್ಲ ಹಣದ ಆಸೆ ತೋರಿಸಿದ್ರಿ? ಯಾರಿಗೆಲ್ಲ ಈಗಾಗಲೇ ಹಣ ಕೊಟ್ಟಿದ್ದೀರ? ಎನ್ನುವ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಕಳೆದ ಎರಡು ಗಂಟೆಗಳಿಂದ ನಾಲ್ಕು ಆರೋಪಿಗಳ ವಿಚಾರಣೆ ಆಗುತ್ತಲೇ ಇದೆ.
ಇದನ್ನೂ ಓದಿ: Actor Darshan: ದರ್ಶನ್ ಪ್ರಕರಣ; ಶಿವಣ್ಣನ ವಿರುದ್ಧ ಪ್ರಶಾಂತ್ ಸಂಬರಗಿ ಆಕ್ರೋಶ!
ಇನ್ನು ಮೂಲಗಳ ಪ್ರಕಾರ ದರ್ಶನ್ ಪ್ರಕರಣದಲ್ಲಿ ಮತ್ತಷ್ಟು ಜನರು ಕಂಬಿ ಹಿಂದೆ ಬೀಳುವ ಎಲ್ಲಾ ಲಕ್ಷಣಗಳು ಕಂಡಿವೆ ಎನ್ನಲಾಗಿದೆ. ಒಬ್ಬೊಬ್ಬನನ್ನು ವಿಚಾರಣೆ ನಡೆಸಿದಾಗಲು ಹೊಸ ಹೊಸ ಹೆಸರು ಹೊರ ಬರುತ್ತಿದೆ. ಈಗ ಮತ್ತೊಬ್ಬ ವ್ಯಕ್ತಿಯ ಹೆಸರು ಕೊಲೆ ಕೇಸಿನಲ್ಲಿ ಕೇಳಿ ಬರುತ್ತಿದೆ.