ಬೆಂಗಳೂರು: ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರು 25 ವರ್ಷದ ಸುದೀರ್ಘ ಪ್ರಯಾಣದ ಬಗ್ಗೆ ಮಾತನಾಡಿದರು. ಈ ವೇಳೆ ʻʻಕೊನೆಗೆ ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ. ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯʼʼ ಎಂದಿದ್ದರು ದರ್ಶನ್. ಇದೀಗ ದರ್ಶನ್ ಅವರು ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ದರ್ಶನ್ ಕಾರ್ಯಕ್ರಮದಲ್ಲಿ ಅನೇಕರಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರವನ್ನ ಕೊಟ್ಟರು. ವೈಯಕ್ತಿಕ ಹಾಗೂ ವೃತ್ತಿಪರ ವಿಚಾರಗಳನ್ನ ಯಾವುದೇ ಮುಚ್ಚು ಮರೆಯಿಲ್ಲದೇ ಹಂಚಿಕೊಂಡರು. ಕೊನೆಯಲ್ಲಿ ತಂತ್ರಜ್ಞರು, ನಟಿಯರು ಆಗಿರಬಹುದು, ಗೊತ್ತೋ-ಗೊತ್ತಿಲ್ಲದೆಯೋ ನೋವು ಮಾಡಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದರು. ಆದರೀಗ ನಟನ ವಿರುದ್ಧ ಅಹೋರಾತ್ರ ಹಿಗ್ಗಾಮುಗ್ಗವಾಗಿ ಬೈದಿದ್ದಾರೆ.
ಟ್ವಿಟರ್‌ನಲ್ಲಿ ಅಹೋರಾತ್ರ ಎಂಬುವರು ದರ್ಶನ್ ಬಗ್ಗ ಕೆಟ್ಟದ್ದಾಗಿ ಮಾತನಾಡಿ, ʻʻನೀನು ಹೆಣ್ಣನ್ನು ಅಗೌರವಿಸುವಂತಹವನು. ಹೆಣ್ಣು ಮಕ್ಕಳನ್ನು ನಿಂದನೆಗೆ ಬಳಸುವವನು.. ಹೆಣ್ಣನ್ನು ಗೈಡ್ ಮಾಡು ಅಂದರೆ, ತಲೆ ಹಿಡಿಬೇಡಿ. ತಲೆ ಹೊಡಿಬೇಡಿ ಎಂದವನು ನೀನು. ನೀನೇನು ಸಾಚಾನಾ? ಯಾರಿಗೆ ಬುದ್ದಿ ಹೇಳುವುದಕ್ಕೆ ನಿನಗೇನು ಅರ್ಹತೆ ಇದೆಯೋ? ನೀನು ಗಂಡಲ್ಲ ಅಂತ ಹೇಳುವುದಕ್ಕೆ ಒಂದು ಸಾಕ್ಷಿʼʼಎಂದು ಹೇಳಿದ್ದಾರೆ. ಇದರ ಜತೆಗೆ ಚಾಣಕ್ಯ ಸಿದ್ಧಾಂತದ ಬಗ್ಗೆಯೂ ಮಾತನಾಡಿದ್ದಾರೆ.
ಇದನ್ನೂ ಓದಿ: Actor Darshan: ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ, ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದ ದರ್ಶನ್!
Anna Back 😂😂😭😭💥💥💥
— 𝐑𝐚𝐣𝐚𝐯𝐚𝐦𝐬𝐡𝐚 𝐅𝐢𝐠𝐡𝐭𝐞𝐫 (@IndianFighter29) February 18, 2024
Yeno nindu yaralu dengode nina @dasadarshan pic.twitter.com/vdUMxIGuM6
ʻʻಮೂರು ಸಾವಿರದ ಐನೂರು ವರ್ಷಗಳ ಹಿಂದೆ, ಹೆಣ್ಣಿಗೆ ಇರುವೆ ಕಷ್ಟವಾದಾಗ, ಪ್ರತಿ ರಾಜರೂ ಸಾವಿರಾರು ದಾಸಿರನ್ನು ಇಟ್ಟುಕೊಂಡಿ ಸೋಶಿಸುತ್ತಿದ್ದಾಗ, ಆ ಶೋಷಣೆಯಿಂದ ಹೆಣ್ಣು ಮಕ್ಕಳನ್ನು ಕಾಪಾಡಲು ಚಾಣಕ್ಯ ಒಂದು ಭಾಷೆ ಬಳಸಿದ್ದಾರೆ. ಅದುವೇ ಷಂಡʼʼಎಂದು ಅಹೋರಾತ್ರ ಹೇಳಿದ್ದಾರೆ. ʻʻನಾಳೆ ಇವಳು ಅಂದರೆ, ನಿನ್ನ ಭಾವನೆಯಲ್ಲಿ ಹೆಣ್ಣು ಅಂದರೆ ಏನಲೇ.. ನಿನ್ನ ಸ್ವಂತ ಧರ್ಮ ಪತ್ನಿಗೆ ಗೌರವ ಕೊಡದ ನೀನು ಯಾವ ಗಂಡಲೇʼʼಎಂದು ಆಕ್ರೋಶ ಹೊರ ಹಾಕಿದ್ದಾರೆ.