Actor Darshan: ಪತ್ನಿಗೆ ಗೌರವ ಕೊಡದ ನೀನ್ಯಾವ ಗಂಡ್ಸಲೇ; ದರ್ಶನ್‌ ವಿರುದ್ಧ ಅಹೋರಾತ್ರ ಆಕ್ರೋಶ! - Vistara News

ಸ್ಯಾಂಡಲ್ ವುಡ್

Actor Darshan: ಪತ್ನಿಗೆ ಗೌರವ ಕೊಡದ ನೀನ್ಯಾವ ಗಂಡ್ಸಲೇ; ದರ್ಶನ್‌ ವಿರುದ್ಧ ಅಹೋರಾತ್ರ ಆಕ್ರೋಶ!

Actor Darshan:  ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ. ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ ಎಂದಿದ್ದರು ದರ್ಶನ್. ಇದೀಗ ದರ್ಶನ್‌ ಅವರು ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

VISTARANEWS.COM


on

Actor Darshan ahoratra releases video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಅವರು 25 ವರ್ಷದ ಸುದೀರ್ಘ ಪ್ರಯಾಣದ ಬಗ್ಗೆ ಮಾತನಾಡಿದರು. ಈ ವೇಳೆ ʻʻಕೊನೆಗೆ ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ. ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯʼʼ ಎಂದಿದ್ದರು ದರ್ಶನ್. ಇದೀಗ ದರ್ಶನ್‌ ಅವರು ಈ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ದರ್ಶನ್‌ ಕಾರ್ಯಕ್ರಮದಲ್ಲಿ ಅನೇಕರಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರವನ್ನ ಕೊಟ್ಟರು. ವೈಯಕ್ತಿಕ ಹಾಗೂ ವೃತ್ತಿಪರ ವಿಚಾರಗಳನ್ನ ಯಾವುದೇ ಮುಚ್ಚು ಮರೆಯಿಲ್ಲದೇ ಹಂಚಿಕೊಂಡರು. ಕೊನೆಯಲ್ಲಿ ತಂತ್ರಜ್ಞರು, ನಟಿಯರು ಆಗಿರಬಹುದು, ಗೊತ್ತೋ-ಗೊತ್ತಿಲ್ಲದೆಯೋ ನೋವು ಮಾಡಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದರು. ಆದರೀಗ ನಟನ ವಿರುದ್ಧ ಅಹೋರಾತ್ರ ಹಿಗ್ಗಾಮುಗ್ಗವಾಗಿ ಬೈದಿದ್ದಾರೆ.

ಟ್ವಿಟರ್‌ನಲ್ಲಿ ಅಹೋರಾತ್ರ ಎಂಬುವರು ದರ್ಶನ್‌ ಬಗ್ಗ ಕೆಟ್ಟದ್ದಾಗಿ ಮಾತನಾಡಿ, ʻʻನೀನು ಹೆಣ್ಣನ್ನು ಅಗೌರವಿಸುವಂತಹವನು. ಹೆಣ್ಣು ಮಕ್ಕಳನ್ನು ನಿಂದನೆಗೆ ಬಳಸುವವನು.. ಹೆಣ್ಣನ್ನು ಗೈಡ್ ಮಾಡು ಅಂದರೆ, ತಲೆ ಹಿಡಿಬೇಡಿ. ತಲೆ ಹೊಡಿಬೇಡಿ ಎಂದವನು ನೀನು. ನೀನೇನು ಸಾಚಾನಾ? ಯಾರಿಗೆ ಬುದ್ದಿ ಹೇಳುವುದಕ್ಕೆ ನಿನಗೇನು ಅರ್ಹತೆ ಇದೆಯೋ? ನೀನು ಗಂಡಲ್ಲ ಅಂತ ಹೇಳುವುದಕ್ಕೆ ಒಂದು ಸಾಕ್ಷಿʼʼಎಂದು ಹೇಳಿದ್ದಾರೆ. ಇದರ ಜತೆಗೆ ಚಾಣಕ್ಯ ಸಿದ್ಧಾಂತದ ಬಗ್ಗೆಯೂ ಮಾತನಾಡಿದ್ದಾರೆ.

ಇದನ್ನೂ ಓದಿ: Actor Darshan: ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ, ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದ ದರ್ಶನ್!

ʻʻಮೂರು ಸಾವಿರದ ಐನೂರು ವರ್ಷಗಳ ಹಿಂದೆ, ಹೆಣ್ಣಿಗೆ ಇರುವೆ ಕಷ್ಟವಾದಾಗ, ಪ್ರತಿ ರಾಜರೂ ಸಾವಿರಾರು ದಾಸಿರನ್ನು ಇಟ್ಟುಕೊಂಡಿ ಸೋಶಿಸುತ್ತಿದ್ದಾಗ, ಆ ಶೋಷಣೆಯಿಂದ ಹೆಣ್ಣು ಮಕ್ಕಳನ್ನು ಕಾಪಾಡಲು ಚಾಣಕ್ಯ ಒಂದು ಭಾಷೆ ಬಳಸಿದ್ದಾರೆ. ಅದುವೇ ಷಂಡʼʼಎಂದು ಅಹೋರಾತ್ರ ಹೇಳಿದ್ದಾರೆ. ʻʻನಾಳೆ ಇವಳು ಅಂದರೆ, ನಿನ್ನ ಭಾವನೆಯಲ್ಲಿ ಹೆಣ್ಣು ಅಂದರೆ ಏನಲೇ.. ನಿನ್ನ ಸ್ವಂತ ಧರ್ಮ ಪತ್ನಿಗೆ ಗೌರವ ಕೊಡದ ನೀನು ಯಾವ ಗಂಡಲೇʼʼಎಂದು ಆಕ್ರೋಶ ಹೊರ ಹಾಕಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Dolly Dhananjay: ʻಕೋಟಿʼ ಸಿನಿಮಾ ಮೊದಲ ಹಾಡು ಬಿಡುಗಡೆ!

Dolly Dhananjay: `ಕೋಟಿ `ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್‌ ಇಂದಿರಾ, ತಾರಾ, ಸರ್ದಾರ್‌ ಸತ್ಯ ಮುಂತಾದವರು ಅಭಿನಯಿಸಿದ್ದಾರೆ. ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

VISTARANEWS.COM


on

Dolly Dhananjay Kotie Cinema Kannada
Koo

ಬೆಂಗಳೂರು: ಡಾಲಿ ಧನಂಜಯ್ (Dolly Dhananjay) ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಈಗ ಬಿಡುಗಡೆಯಾಗಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ. ʻಕೋಟಿʼ ಸಿನಿಮಾದ ಹಾಡುಗಳ ಹಕ್ಕನ್ನು ʻಸರಿಗಮʼ ಖರೀದಿಸಿದ್ದು ಈ ಹಾಡಿನ ಲಿರಿಕಲ್ ವಿಡಿಯೋವನ್ನು ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ‌ ವೀಕ್ಷಿಸಬಹುದು.

ಹಾಡಿನ ಸಂಯೋಜಕರಾದ ವಾಸುಕಿ ವೈಭವ್ “ಇದು ನನ್ನ ಮತ್ತು ಅರ್ಮಾನ್ ಮಲಿಕ್ ಕಾಂಬಿನೇಷನ್ನಿನ ಮೊದಲ ಹಾಡು. ಸಾಹಿತ್ಯ ಯೋಗರಾಜ್ ಭಟ್ ಅವರದ್ದು. ಅವರ ಜತೆ ಕೆಲಸ ಮಾಡುವುದು ಯಾವಾಗಲೂ ಖುಷಿ ಮತ್ತು ಕಲಿಕೆಯ ವಿಚಾರ. ಜನರಿಗೆ ಖಂಡಿತ ಈ ಹಾಡು ಇಷ್ಟವಾಗತ್ತೆ‌ ಅನ್ನೊ ನಂಬಿಕೆ ಇದೆ” ಎಂದು ಹೇಳಿದರು.

“ವಾಸುಕಿ ಹೊಸ ತಲೆಮಾರಿನ ಪ್ರತಿಭಾವಂತ ಸಂಗೀತ ನಿರ್ದೇಶಕ. ಯೋಗರಾಜ್ ಭಟ್ ಅವರ ಸಾಹಿತ್ಯದ ದೊಡ್ಡ ಅಭಿಮಾನಿ ನಾನು. ಈ ಇಬ್ಬರ ಕಾಂಬಿನೇಷನ್ನಿನ ಈ ಹಾಡನ್ನು ಅರ್ಮಾನ್ ಮಲಿಕ್ ತುಂಬಾ ಚೆನ್ನಾಗಿ ಹಾಡಿದ್ದಾರೆ. ಈ ಹಾಡು ಕನ್ನಡದ ಕಿವಿ ಮತ್ತು ಮನಸುಗಳಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಕೋಟಿಯ ನಿರ್ದೇಶಕ ‘ಪರಮ್’ ಅಭಿಪ್ರಾಯ ಪಟ್ಟರು.

`ಕೋಟಿ `ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್‌ ಇಂದಿರಾ, ತಾರಾ, ಸರ್ದಾರ್‌ ಸತ್ಯ ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: Crowd Funding: ಕಂದಮ್ಮನ ಚಿಕಿತ್ಸೆಗೆ ಹರಿದು ಬಂದ ನೆರವು; 3 ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮೆರಮನ್.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Continue Reading

ಕರ್ನಾಟಕ

Chaya Singh: ನಟಿ ಛಾಯಾ ಸಿಂಗ್ ಮನೆಯಲ್ಲಿ ಕಳ್ಳತನ; ಚಿನ್ನಾಭರಣ ಕದ್ದಿದ್ದ ಮನೆಕೆಲಸದಾಕೆ ಬಂಧನ

Chaya Singh: ನಟಿ ಛಾಯಾ ಸಿಂಗ್‌ ಅವರ ತಾಯಿ ಮನೆಯಲ್ಲಿ 66 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ಆಭರಣ ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವಾಗಿದ್ದವು. ಈ ಸಂಬಂಧ ಮನೆಕೆಲಸದಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

Chaya Singh
Koo

ಬೆಂಗಳೂರು: ಕನ್ನಡದ ‘ಅಮೃತಧಾರೆ’ ಧಾರಾವಾಹಿಯ ನಟಿ ಛಾಯಾ ಸಿಂಗ್ (Chaya Singh) ಅವರ ತಾಯಿ ಮನೆಯಲ್ಲಿ ಕಳ್ಳತನ ಮಾಡಿದ್ದ ಮನೆಕೆಲಸದಾಕೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಛಾಯಾಸಿಂಗ್ ಅವರ ತಾಯಿ ಚಮನಲತಾ ಅವರ ಬಸವೇಶ್ವರನಗರದ ನಿವಾಸದಲ್ಲಿ ಕಳ್ಳತನ ನಡೆದಿತ್ತು. 66 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಕಳವಾಗಿದ್ದವು. ಇದೀಗ ಮನೆಯಲ್ಲಿ ಕಳ್ಳತನ ಮಾಡಿರುವುದು ಮನೆಕೆಲಸದಾಕೆ ಎಂಬುವುದು ತಿಳಿದುಬಂದಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ನಟಿಯ ತಾಯಿ ಮನೆಯಲ್ಲಿ ಚಿನ್ನಾಭರಣ ಕಳವಾಗಿದ್ದ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಕೆಲಸದಾಕೆ ಉಷಾ ಈ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದ್ದು, ಅವರನ್ನು ಬಂಧಿಸಿ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲಸದ ವೇಳೆ, ಚಿನ್ನಾಭರಣ ದೋಚಿ ಏನೂ ಅರಿಯದಂತೆ ಕೆಲಸದಾಕೆ ವರ್ತಿಸಿದ್ದಳು. ಇದೀಗ ಆಕೆಯ ಕಳ್ಳತನ ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಇದನ್ನೂ ಓದಿ | Actor Dhanush: ಧನುಷ್‌ಗೆ ಐಶ್ವರ್ಯಾ ದೋಖಾ; ಐಶ್ವರ್ಯಾಗೆ ಧನುಷ್‌ ಮೋಸ! ಖ್ಯಾತ ಗಾಯಕಿಯಿಂದ ಸೆನ್ಷೆಷನಲ್‌ ಮಾಹಿತಿ

ಛಾಯಾ ಸಿಂಗ್ ಕುಟುಂಬ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದೆ. ಛಾಯಾ ಸಿಂಗ್ ಪ್ರಸ್ತುತ ಕನ್ನಡದ ‘ಅಮೃತಧಾರೆ’ ಧಾರಾವಾಹಿಯಲ್ಲಿ ನಾಯಕಿ ಭೂಮಿಕಾ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಇನ್ನು ಶಿವರಾಜ್‌ಕುಮಾರ್ ನಟನೆಯ ‘ಭೈರತಿ ರಣಗಲ್ ಸಿನಿಮಾದಲ್ಲಿ ಛಾಯಾ ಸಿಂಗ್ ಅಭಿನಯಿಸಿದ್ದು, ಈ ವರ್ಷಾಂತ್ಯದಲ್ಲಿ ಸಿನಿಮಾ ತೆರೆ ಕಾಣಲಿದೆ.

ನಟಿ ವೈಷ್ಣವಿ ಗೌಡಗೆ ನೋಟಿಸ್‌ ಕೊಟ್ಟ ಟ್ರಾಫಿಕ್‌ ಪೊಲೀಸರು; ಸೀತಮ್ಮ ಮಾಡಿದ ತಪ್ಪೇನು?

Vaishnavi Gowda
Vaishnavi Gowda

ಬೆಂಗಳೂರು: ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ (Vaishnavi Gowda) ಅವರಿಗೆ ಬೆಂಗಳೂರು ಟ್ರಾಫಿಕ್‌ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ. ಧಾರಾವಾಹಿಯ ದೃಶ್ಯವೊಂದರಲ್ಲಿ ಹೆಲ್ಮೆಟ್‌ ಧರಿಸದೆ ಸ್ಕೂಟರ್‌ನಲ್ಲಿ ಸಂಚರಿಸಿದ ಕಾರಣಕ್ಕೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ ಎನ್ನಲಾಗಿದ್ದು, ಸದ್ಯ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಸದ್ಯ ಝೀ ಕನ್ನಡ ವಾಹಿನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ʼಸೀತಾ ರಾಮʼ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ನಾಯಕಿ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2023ರ ಜುಲೈ 17ರಂದು ಆರಂಭವಾದ ಈ ಧಾರಾವಾಹಿ ವೀಕ್ಷಕರ ಗಮನ ಸೆಳೆಯುತ್ತಿದೆ. ಆರಂಭವಾಗಿ ಸುಮಾರು 10 ತಿಂಗಳು ಕಳೆದಿದ್ದರೂ ಈಗಲೂ ಟಾಪ್‌ ಲಿಸ್ಟ್‌ನಲ್ಲಿದೆ. ಉತ್ತಮ ಟಿಆರ್‌ಪಿ ಪಡೆದುಕೊಳ್ಳುತ್ತಿರುವ ಈ ಧಾರಾವಾಹಿಯ ದೃಶ್ಯವೇ ಸದ್ಯ ವೈಷ್ಣವಿ ಗೌಡ ಅವರಿಗೆ ಫಜೀತಿ ತಂದಿಟ್ಟಿದೆ.

ಏನಿದು ಪ್ರಕರಣ?

ʼಸೀತಾ ರಾಮʼ ಧಾರಾವಾಹಿಯ 14ನೇ ಸಂಚಿಕೆಯ ದೃಶ್ಯ ಸದ್ಯ ಪ್ರಕರಣದ ಕೇಂದ್ರ ಬಿಂದು. ಇದರಲ್ಲಿ ಸೀತಾ (ವೈಷ್ಣವಿ ಗೌಡ) ಹಾಗೂ ಆಕೆಯ ಗೆಳೆತಿ ಪ್ರಿಯಾ (ಶ್ವೇತಾ ಶಂಕರಪ್ಪ) ಸ್ಕೂಟರ್‌ನಲ್ಲಿ ತೆರಳುವ ದೃಶ್ಯವಿದೆ. ಸ್ಕೂಟರ್‌ ಓಡಿಸುತ್ತಿದ್ದ ಶ್ವೇತಾ ಹೆಲ್ಮೆಟ್ ಧರಿಸಿದ್ದರೆ ಹಿಂದಿನ ಸೀಟಿನಲ್ಲಿದ್ದ ವೈಷ್ಣವಿ ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ಉಲ್ಲೇಖಿಸಿ ಮಂಗಳೂರಿನ ಜಯಪ್ರಕಾಶ್‌ ಎಕ್ಕೂರು ಎನ್ನುವವರು ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದರು. ವೈಷ್ಣವಿ ಗೌಡ ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿದ್ದಾರೆ ಎಂದು ತಿಳಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಣಿಸಿದ ಪೊಲೀಸರಿಗೆ ಬಳಿಕ ಧಾರಾವಾಹಿಯ ಶೂಟಿಂಗ್ ಬೆಂಗಳೂರಿನ ನಂದಿನಿ ಲೇಔಟ್​ನಲ್ಲಿ ನಡೆದ ವಿಚಾರ ಗೊತ್ತಾಗಿತ್ತು. ಬಳಿಕ ಇದನ್ನು ಬೆಂಗಳೂರಿನ ರಾಜಾಜಿನಗರ ಠಾಣೆಗೆ ವರ್ಗಾಯಿಸಲಾಯಿತು. ಸದ್ಯ ಸ್ಕೂಟರ್‌ ಮಾಲೀಕರಾದ ಸವಿತಾ ಹಾಗೂ ವೈಷ್ಣವಿ ಅವರಿಗೆ ತಲಾ 500 ರೂ. ದಂಡ ವಿಧಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.

ಹಿಂದಿಗೆ ರಿಮೇಕ್‌

ಸದ್ಯ ʼಸೀತಾ ರಾಮʼ ಧಾರಾವಾಹಿ ಹಿಂದಿಗೆ ರಿಮೇಕ್‌ ಆಗುತ್ತಿದೆ. ಹಿಂದಿ ರಿಮೇಕ್‌ಗೆ ‘ಮೇ ಹೂ ಸಾತ್ ತೆರೆ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಇದು ಝೀ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕನ್ನಡದಲ್ಲಿ ವೈಷ್ಣವಿ ಗೌಡ ಜತೆಗೆ ರಾಮ್‌ ಆಗಿ ಗಗನ್ ಚಿನ್ನಪ್ಪ ನಟಿಸುತ್ತಿದ್ದಾರೆ. ಧಾರಾವಾಹಿಯ ಪ್ರಧಾನ ಆಕರ್ಷಣೆಯಾದ ಸಿಹಿ ಪಾತ್ರದಲ್ಲಿ ಪುಟಾಣಿ ರೀತು ಸಿಂಗ್ ಮೋಡಿ ಮಾಡಿದ್ದಾರೆ. ಇವರ ಜತೆಗೆ ಪೂಜಾ ಲೋಕೇಶ್, ಅಶೋಕ್, ಮುಖ್ಯಮಂತ್ರಿ ಚಂದ್ರು ಮೊದಲಾದವರು ಈ ಧಾರಾವಾಹಿಯ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಹಿಂದಿಯಲ್ಲಿ ಗಗನ್ ಚಿನ್ನಪ್ಪ ಮಾಡಿರುವ ರಾಮ್‌ ಪಾತ್ರವನ್ನು ಕರಣ್ ವೋಹ್ರಾ ನಿರ್ವಹಿಸಲಿದ್ದು, ವೈಷ್ಣವಿ ಗೌಡ ಅವರ ಸೀತಾ ಪಾತ್ರವನ್ನು ಪಾತ್ರವನ್ನು ‘ಜಾನ್ಸಿ ಕಿ ರಾಣಿ’ ಧಾರಾವಾಹಿ ಖ್ಯಾತಿಯ ಉಲ್ಕಾ ಗುಪ್ತಾ ಮಾಡುತ್ತಿದ್ದಾರೆ. ಇದರ ಜತೆಗೆ ʼಸೀತಾ ರಾಮʼ ಮಲೆಯಾಳಂಗೂ ಡಬ್‌ ಆಗುತ್ತಿದೆ. ಝೀ ಕೇರಳಂ ವಾಹಿನಿಯಲ್ಲಿ ಇದು ಪ್ರಸಾರವಾಗಲಿದೆ.

ಇದನ್ನೂ ಓದಿ: Seetha Raama Serial: ಹಿಂದಿಗೆ ರಿಮೇಕ್‌ ಆಗ್ತಿದೆ ಕನ್ನಡದ ಈ ಜನಪ್ರಿಯ ಧಾರಾವಾಹಿ

ವಿಶೇಷ ಎಂದರೆ ʼಸೀತಾ ರಾಮʼ ಧಾರಾವಾಹಿಯೂ ರಿಮೇಕ್‌. ಇದು ಮರಾಠಿಯ ‘ಮಜಿ ತುಜಿ ರೆಶಿಮಗತ್’ ಧಾರಾವಾಹಿಯ ಕಥೆಯನ್ನು ಆಧರಿಸಿ ತಯಾರಾಗಿದೆ. ಈ ಧಾರಾವಾಹಿ ಝೀ ಮರಾಠಿಯಲ್ಲಿ 2021ರ ಆಗಸ್ಟ್​ನಿಂದ 2023ರ ಜನವರಿವರೆಗೆ ಪ್ರಸಾರವಾಗಿತ್ತು. 458 ಕಂತುಗಳನ್ನು ಹೊಂದಿದ್ದ ಇದರಲ್ಲಿ ಪ್ರಾರ್ಥನಾ ಬೆಹೆರೆ ಹಾಗೂ ಶ್ರೇಯಸ್ ತಲ್ಪಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Continue Reading

ಕರ್ನಾಟಕ

Vidyarthi Vidyarthiniyare Movie: ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಟ್ರೈಲರ್ ಔಟ್; ಧುಮ್ಮಿಕ್ಕಿದ ಹರೆಯದ ತೊರೆ!

Vidyarthi Vidyarthiniyare Movie: ರ‍್ಯಾಪರ್ ಚಂದನ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ʼವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದೆ. ಕಾಲೇಜು ಹುಡುಗ, ಹುಡುಗಿಯರ ಹದಿ ಹರೆಯದ ಹುಚ್ಚು ಮನಸ್ಸಿನ ಹೊಯ್ದಾಟವನ್ನು ಇಲ್ಲಿ ತೆರೆದಿಡಲಾಗಿದೆ.

VISTARANEWS.COM


on

Vidyarthi Vidyarthiniyare Movie
Koo

ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ʼವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare Movie) ಚಿತ್ರವು ಶೀರ್ಷಿಕೆಯಲ್ಲಿಯೇ ಟೀನೇಜ್ ಸ್ಟೋರಿಯ ಕಂಪು ಹೊಂದಿದ್ದು, ಈಗಾಗಲೇ ನಾನಾ ಕ್ರೀಯಾಶೀಲ ಚಟುವಟಿಕೆಗಳ ಮೂಲಕ ಪ್ರೇಕ್ಷಕರನ್ನು ತಲುಪಿತ್ತು. ಆ ಕಾರಣದಿಂದಲೇ ಎಲ್ಲರೂ ಟ್ರೈಲರ್‌ನತ್ತ ದೃಷ್ಟಿ ನೆಟ್ಟಿದ್ದರು. ಇದೀಗ ಚಿತ್ರತಂಡ ಯುವ ಆವೇಗದಿಂದ ತೊನೆದಾಡುತ್ತಿರುವಂತೆ ಭಾಸವಾಗುವ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದೆ. ಅದರೊಳಗೆ ಹದಿಹರೆಯದ ಮನಸುಗಳ ನಾನಾ ಮಗ್ಗುಲುಗಳು ಹರೆಯದ ತೊರೆಯೊಂದಿಗೆ ಧುಮ್ಮಿಕ್ಕಿ ಹರಿದಿವೆ. ಈ ಟ್ರೈಲರ್ ಅನ್ನು ಸೈಡ್ ಎ ಅಂತ ಹೆಸರಿಸಲಾಗಿದೆ. ಇದನ್ನು ನೋಡುತ್ತಲೇ ಒಟ್ಟಾರೆ ಸಿನಿಮಾದಲ್ಲೇನೋ ಇದೆಯೆಂಬ ಗಟ್ಟಿಯಾದ ಭರವಸೆ ತಂತಾನೇ ಮೂಡುತ್ತದೆ. ಸೈಡ್ ಬಿ ಟ್ರೈಲರ್‌ಗಾಗಿ ಕಾತರವೂ ಮೂಡಿಕೊಳ್ಳುತ್ತೆ. ಅಷ್ಟರಮಟ್ಟಿಗೆ ಈ ಟ್ರೈಲರ್ ಪರಿಣಾಮಕಾರಿಯಾಗಿ ಮೂಡಿ ಬಂದಿದೆ!

ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಟೈಟಲ್ಲೇ ಹೇಳುವಂತೆ ಯೂತ್ಸ್ ಸಬ್ಜೆಕ್ಟ್ ಸಿನಿಮಾ. ಕಾಲೇಜು ಹುಡುಗ, ಹುಡುಗಿಯರ, ಹದಿ ಹರೆಯದ ಹುಚ್ಚು ಮನಸ್ಸಿನ ಹೊಯ್ದಾಟವನ್ನು ಇಲ್ಲಿ ತೆರೆದಿಡಲಾಗಿದೆ. ಹಾಗಂತ ಇದು ಮಾಮೂಲಿಯಾಗೂ ಇದು ಸಿದ್ಧಸೂತ್ರದ ಚೌಕಟ್ಟಿಗೊಳಪಟ್ಟಿಲ್ಲ ಅನ್ನೋದು ಟ್ರೈಲರ್ ಎಳೆಯಲ್ಲಿ ಸ್ಪಷ್ಟವಾಗುತ್ತದೆ. ಹೊಡೆದಾಟ, ಬಡಿದಾಟ, ರ‍್ಯಾಗಿಂಗ್, ಬಿಸಿ ರಕ್ತದ ಹುಡುಗರ ಪುಂಡಾಟಿಕೆ ಸೇರಿ ಇಲ್ಲಿ ಎಲ್ಲವೂ ಇದೆ. ಅದರ ಜೊತೆ ಜೊತೆಗೇ ಶೈಕ್ಷಣಿಕ ಪರಿಸರದ ಕ್ರೌರ್ಯದ ಮುಖವೊಂದನ್ನು ಬಯಲಾಗಿಸುವ ಪ್ರಯತ್ನವೂ ಗಮನ ಸೆಳೆಯುವಂತಿದೆ. ಮೋಜು ಮಸ್ತಿಯಲ್ಲಿ ಮೈಮರೆತ ಮನಸ್ಥಿತಿಗಳ ಕಥೆಯ ಸೂಚನೆಯಿದೆ. ಹಿಡಿತ ತಪ್ಪಿದ ಮಕ್ಕಳನ್ನು ಹಾದಿಗೆ ತರುವ ಯತ್ನವೂ ಇದೆ. ಪ್ರಸ್ತುತ ಕಾಲದ ಟೀನೇಜ್ ಹುಡುಗರ ಕಹಾನಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ ಟ್ರೈಲರ್.

ಚಂದನ್ ಶೆಟ್ಟಿ ಈ ಚಿತ್ರದ ಮೂಲಕ ಡಿಫರೆಂಟಾಗಿ ಕಾಣಿಸಲಿದ್ದಾರೆಂಬ ನಿಖರ ಮಾಹಿತಿಯನ್ನು ನಿರ್ದೇಶಕ ಅರುಣ್ ಅಮುಕ್ತ ನೀಡುತ್ತಾ ಬಂದಿದ್ದಾರೆ. ಅವರ ಪಾತ್ರವನ್ನು ಅಷ್ಟೇ ಗೌಪ್ಯವಾಗಿ ಕಾಪಾಡಿಕೊಂಡು ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ ಚಿತ್ರತಂಡ. ಒಟ್ಟಾರೆಯಾಗಿ ಟ್ರೈಲರ್ ನೋಡಿದರೆ ನಿರ್ದೇಶಕರು ಹೊಸದೇನನ್ನೋ ಹೇಳುವ ಪ್ರಯತ್ನ ಮಾಡಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಅರುಣ್ ಅಮುಕ್ತ ಅತ್ಯಂತ ಆಸ್ಥೆಯಿಂದ ಈ ಸಿನಿಮಾವನ್ನು ರೂಪಿಸಿದ್ದಾರೆಂಬುದಕ್ಕೂ ಕೂಡ ಈ ಟ್ರೈಲರಿನಲ್ಲಿ ಸಾಕ್ಷಿಗಳಿವೆ. ಕಾಲೇಜು ಕೇಂದ್ರಿತ ಕಥೆ ಅಂದಾಕ್ಷಣ ಒಂದು ಕಲ್ಪನೆ ಮೊಳೆತುಕೊಳ್ಳುತ್ತದೆ. ಅದನ್ನು ಮೀರಿದ ಆತ್ಮದೊಂದಿಗೆ ಅರುಣ್ ಅಮುಕ್ತ ಈ ಸಿನಿಮಾವನ್ನು ದೃಷ್ಯೀಕರಿಸಿರುವ ಲಕ್ಷಣಗಳಿವೆ. ಈವರೆಗೂ ಹಂತ ಹಂತವಾಗಿ ಕಾಯ್ದುಕೊಂಡಿದ್ದ ಕುತೂಹಲವನ್ನು ಈ ಸೈಡ್ ಎ ಟ್ರೈಲರ್ ಸಾರ್ಥಕಗೊಳಿಸಿದೆ.

ಇದನ್ನೂ ಓದಿ | Turbo Trailer Out: ಮಮ್ಮುಟ್ಟಿ ನಟನೆಯ ‘ಟರ್ಬೋ’ ಟ್ರೈಲರ್‌ ಔಟ್‌: ರಾಜ್‌ ಬಿ ಶೆಟ್ಟಿ ಖದರ್‌ಗೆ ಫ್ಯಾನ್ಸ್‌ ಫಿದಾ!

ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಜಿ. ಕಶ್ಯಪ್ ಕಾರ್ಯಕಾರಿ ನಿರ್ಮಾಪಕ, ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ ಅರುಣ್ ಸುರೇಶ್ ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಚಂದನ್ ಶೆಟ್ಟಿ , ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Continue Reading

ಸಿನಿಮಾ

Song Release: ‘ಇದು ನಮ್ ಶಾಲೆ’ ಚಿತ್ರದ ಹಾಡಿನ ಅನಾವರಣ

ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್.ಎಂ. ಸುರೇಶ್ ಅವರು ಶ್ರೀ ಜೇನುಕಲ್ ಪ್ರೊಡಕ್ಷನ್ ಅವರ “ಇದು ನಮ್ ಶಾಲೆ” ಚಿತ್ರದ ಹಾಡನ್ನು (Song Release) ಇತ್ತೀಚೆಗೆ ಅನಾವರಣಗೊಳಿಸಿದರು.

VISTARANEWS.COM


on

By

Song Release
Koo

ಬೆಂಗಳೂರು: ಶ್ರೀ ಜೇನುಕಲ್ ಪ್ರೊಡಕ್ಷನ್ ಅವರ ಮೊದಲ “ಇದು ನಮ್ ಶಾಲೆ” ಚಿತ್ರದ ಹಾಡುಗಳ ಬಿಡುಗಡೆ (Song Release) ಸಮಾರಂಭ ಇತ್ತೀಚೆಗೆ ನಡೆಯಿತು. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಮೊದಲ ಹಾಡನ್ನು ಖ್ಯಾತ ಐಪಿಎಸ್ ಅಧಿಕಾರಿ (IPS officer) ರವಿ ಡಿ. ಚನ್ನಣ್ಣವರ್ (Ravi D. Channannavar) ಹಾಗೂ ಎರಡನೇ ಗೀತೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Board of Film Commerce) ಅಧ್ಯಕ್ಷರಾದ ಎನ್.ಎಂ. ಸುರೇಶ್ (N.M. Suresh) ಅವರು ಅನಾವರಣಗೊಳಿಸಿದರು.

ಇದೇ ಸಮಯದಲ್ಲಿ ಚಿತ್ರದ ಪೋಸ್ಟರ್ ಅನ್ನೂ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.

ಕಾರ್ಯಕ್ರಮದ ವೇಳೆ ಮಾತನಾಡಿದ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್, ಇದು ಖಾಸಗಿ ಹಾಗೂ ಸರ್ಕಾರಿ ಶಾಲೆಯ ಸುತ್ತಲಿನ ಕಥೆ ಎಂದು ತಿಳಿಸಿದರು.

ನಾನು ಕೂಡ ಸರ್ಕಾರಿ ಶಾಲೆಯಲ್ಲೇ ಕಲಿತು ಐಪಿಎಸ್ ಅಧಿಕಾರಿ ಆಗಿದ್ದೇನೆ. ಸಿನಿಮಾ ಮೂಲಕ ಒಳ್ಳೆಯ ವಿಷಯಗಳನ್ನು ಹೇಳಿದಾಗ ಜನರಿಗೆ ಬೇಗ ತಲಪುತ್ತದೆ. ನನಗೆ ಡಾ| ರಾಜಕುಮಾರ್ ಎಂದರೆ ಪಂಚಪ್ರಾಣ. ಸುದೀಪ್ ಅಭಿನಯದ ಚಿತ್ರಗಳ ಗೆದ್ದೆ ಗೆಲುವೆ ಒಂದು ದಿನ, ಅರಳುವ ಹೂವುಗಳೆ ಹಾಗೂ ಶಿವರಾಜಕುಮಾರ್ ಅವರ ಓಂ ಚಿತ್ರದ ಹೇ ದಿನಕರ ಹಾಡುಗಳು ನನಗೆ ಸ್ಪೂರ್ತಿ.. ಕಾಲೇಜು ದಿನಗಳಲ್ಲಿ ಈ ಹಾಡುಗಳನ್ನು ಕೇಳಿ ಬೆಳೆದವನು ನಾನು ಎಂದು ಹೇಳಿ ಚಿತ್ರತಂಡಕ್ಕೆ ಶುಭ ಹಾರೈಸಿದರು.


ನಿರ್ದೇಶಕ ಕೃಷ್ಣ ಬೆಳ್ತಂಗಡಿ ಮಾತನಾಡಿ, ಸಿನಿಮಾ, ರಾಜಕೀಯ ಸೇರಿದಂತೆ ಅನೇಕ ವಿಭಾಗಗಳಲ್ಲಿ ಪತ್ರಕರ್ತನಾಗಿ ಕಾರ್ಯ ನಿರ್ವಹಿಸರುವ ನಾನು, “ಬಣ್ಣದಕೊಡೆ” ಚಿತ್ರದ ಮೂಲಕ ನಿರ್ದೇಶಕನಾದೆ. “ಇದು ನಮ್ ಶಾಲೆ” ನನ್ನ ನಿರ್ದೇಶನದ ಮೂರನೇ ಚಿತ್ರ. ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಕುರಿತಾದ ಚಿತ್ರ. ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ತಿಳಿಸಿ ಕೊಡುವ ಚಿತ್ರ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಸೆನ್ಸರ್ ಕೂಡಾ ಆಗಿದ್ದು, ಬಿಡುಗಡೆಯ ಹೊಸ್ತಿಲಿನಲ್ಲಿದೆ‌. ಅರಸೀಕೆರೆ, ಜೇನುಕಲ್, ಗೀಜಿಹಳ್ಳಿ ಹಾಗೂ ಬೆಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ‌ ಎಂದು ತಿಳಿಸಿದರು.

ರವಿ ಆಚಾರ್ ಚಿತ್ರ ನಿರ್ಮಾಣ ಮಾಡಿದ್ದು, ಅರಸೀಕೆರೆ ಉಮೇಶ್ ಅವರ ಸಹಕಾರ ಚಿತ್ರಕ್ಕಿದೆ. ನಾಗರಾಜ್ ಅದವಾನಿ ಛಾಯಾಗ್ರಾಹಣ, ಹಿತನ್ ಹಾಸನ್ ಸಂಗೀತ ಈ ಸಿನಿಮಾಕ್ಕಿದೆ. ಪುಣ್ಯ ಹಾಗೂ ಪೂಜ್ಯ ಅನ್ನುವ ಇಬ್ಬರು ಹೆಣ್ಣು ಮಕ್ಕಳು ಪ್ರಧಾನ ಭೂಮಿಕೆಯಲ್ಲಿ ಇದ್ದಾರೆ ಎಂದರು.


ಇದನ್ನೂ ಓದಿ: Vijay Surya: ತಾಯಂದಿರ ದಿನ ತನ್ನ ಹೆಸರನ್ನೇ ಬದಲಿಸಿಕೊಂಡ ʻಅಗ್ನಿಸಾಕ್ಷಿ’ ನಟ! ಹೊಸ ಹೆಸರೇನು?

ಶಂಕರ್ ಭಟ್, ಪೂಜಾ ಸುಮನ್, ಈಶ್ವರ್ ದಲ, ಮಲ್ಲಿಕಾರ್ಜುನ್ ತುಮಕೂರು, ಶಿವಲಿಂಗೇಗೌಡ ಮಂಡ್ಯ, ಮುರಳಿಕೃಷ್ಣ, ಬಸವರಾಜ್, ವಾಣಿ ಗೌಡ, ರಾಜು ನಾಯಕ್, ಮಾಸ್ಟರ್ ರಾಮು, ಗಂಗಾ ರವಿ, ಕಲಾ ಉಮೇಶ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಅರಸೀಕೆರೆ ಜನಪ್ರಿಯ ಶಾಸಕರಾದ ಶಿವಲಿಂಗೇಗೌಡರು ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಅವರು ತಿಳಿಸಿದರು.

ನಿರ್ಮಾಪಕರಾದ ರವಿ ಆಚಾರ್, ಕಾರ್ಯಕಾರಿ ನಿರ್ಮಾಪಕರಾದ ಅರಸೀಕೆರೆ ಉಮೇಶ್ ಹಾಗೂ ಸಂಗೀತ ನಿರ್ದೇಶಕ ಹಿತನ್ ಹಾಸನ್ “ಇದು ನಮ್ ಶಾಲೆ” ಚಿತ್ರದ ಕುರಿತು ಮಾತನಾಡಿದರು.

Continue Reading
Advertisement
Dolly Dhananjay Kotie Cinema Kannada
ಸ್ಯಾಂಡಲ್ ವುಡ್27 mins ago

Dolly Dhananjay: ʻಕೋಟಿʼ ಸಿನಿಮಾ ಮೊದಲ ಹಾಡು ಬಿಡುಗಡೆ!

terror module
ದೇಶ32 mins ago

Terror Module Bust: ಪಂಜಾಬ್‌ನಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಸಿಖ್ ಉಗ್ರ ಸಂಘಟನೆ ಜತೆ ನಂಟು ಹೊಂದಿದ್ದ ನಾಲ್ವರು ಅರೆಸ್ಟ್‌

woman murder case
ಕ್ರೈಂ36 mins ago

Murder Case: ʼನೇಹಾ ಹಿರೇಮಠ ಥರ ಕೊಲೆ ಮಾಡ್ತೀನಿ…ʼ ಎಂದವನು ಮಾಡಿಯೇ ಬಿಟ್ಟ! ಪಾಗಲ್‌ ಪ್ರೇಮಿಯಿಂದ ಮತ್ತೊಬ್ಬ ಯುವತಿಯ ಹತ್ಯೆ

Rashmika Mandanna Reacts To India Decade of Growth Amid Lok Sabha Polls
ಟಾಲಿವುಡ್54 mins ago

Rashmika Mandanna: ʻನಮೋʼ ಸಾಧನೆಗೆ ಕಿರಿಕ್‌ ಬ್ಯೂಟಿ ರಶ್ಮಿಕಾ ಕ್ಲೀನ್‌ ಬೋಲ್ಡ್‌!

Job Alert
ಉದ್ಯೋಗ1 hour ago

Job Alert: ಗಮನಿಸಿ; ಬಿಎಂಟಿಸಿಯ 2,500 ಕಂಡಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 18 ಕೊನೆಯ ದಿನ

viral video garbage bengaluru roads
ವೈರಲ್ ನ್ಯೂಸ್2 hours ago

Viral video: ʼಅಸಹ್ಯಕರ!ʼ ಬೆಂಗಳೂರಿನ ರಸ್ತೆಗಳ ಕಸದ ವಿಡಿಯೋ ಪೋಸ್ಟ್‌ ಮಾಡಿದ ಕಿರಣ್ ಮಜುಂದಾರ್ ಶಾ

Stone pelting
ದೇಶ2 hours ago

Stone Pelting: ಉತ್ತರಪ್ರದೇಶದಲ್ಲಿ ಗುಂಪು ಘರ್ಷಣೆ; ಕಲ್ಲು ತೂರಾಟ, ಕೇಳಿಬಂತು ಗುಂಡಿನ ಸಪ್ಪಳ

Crowd Funding
ದೇಶ2 hours ago

Crowd Funding: ಕಂದಮ್ಮನ ಚಿಕಿತ್ಸೆಗೆ ಹರಿದು ಬಂದ ನೆರವು; 3 ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

Prajwal Revanna Case
ಕರ್ನಾಟಕ2 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

copper mine lift collapse
ಪ್ರಮುಖ ಸುದ್ದಿ2 hours ago

M‌ine Lift Collapse: ತಾಮ್ರದ ಗಣಿಯೊಳಗೆ ಲಿಫ್ಟ್‌ ಕುಸಿದು 14 ಮಂದಿ ಪಾತಾಳದಲ್ಲಿ ಟ್ರ್ಯಾಪ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ2 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ5 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ14 hours ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 202417 hours ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 202420 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ21 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು22 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ1 day ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌