Site icon Vistara News

Actor Darshan: ಕಸ್ಟಡಿಯಲ್ಲಿರೋ ದರ್ಶನ್‌ಗೆ ಹೆಚ್ಚಾಯ್ತು ಬಿಪಿ; ಪವಿತ್ರಾಗೌಡ ಮಾತ್ರ ಕೂಲ್‌ ಕೂಲ್‌..!

Actor Darshan BP health update but pavithra Gowda In normal Condition

ಬೆಂಗಳೂರು:  ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ (Actor Darshan) ಕಳೆದ ಮಂಗಳವಾರ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದರು. ಅದೇ ದಿನ ಪವಿತ್ರಾ ಗೌಡ ಸೇರಿದಂತೆ 11 ಆರೋಪಿಗಳ ಬಂಧನವಾಗಿತ್ತು. ಜೂನ್ 11 ರಿಂದ ಇಂದಿನವರೆಗೂ ಪೊಲೀಸ್ ಕಸ್ಟಡಿಯಲ್ಲಿಯೇ ಇದ್ದಾರೆ ನಟ ದರ್ಶನ್. ನಾಳೆ ದರ್ಶನ್ ಆಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿಗೆ ಅಂತ್ಯವಾಗಲಿದೆ. ನಾಳೆ ಕೋರ್ಟ್‌ಗೆ ದರ್ಶನ್‌ ಹಾಗೂ ಗ್ಯಾಂಗ್‌ವನ್ನು ಪೊಲೀಸರು ಹಾಜರು ಪಡಿಸಲಿದ್ದಾರೆ. ಇದೀಗ ಬಂಧನವಾದ ಬಳಿಕ ದರ್ಶನ್ ಬಿಪಿ ಹೆಚ್ಚಾಗಿದೆ ಎಂದು ವರದಿಯಾಗಿದೆ. ನಾರ್ಮಲ್‌ ಆಗಿ ಒಬ್ಬ ವ್ಯಕ್ತಿಗೆ ಬಿಪಿ 124/77 ರಷ್ಟು ಇರುತ್ತದೆ. ಆದರೀಗ ಮಲ್ಲತ್ತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ನೀಡಿದ ವರದಿ ಪ್ರಕಾರ ದರ್ಶನ್‌ ಅವರಿಗೆ 165/95 ಬಿಪಿ ಇದೆಯಂತೆ. ಆದರೆ ಪವಿತ್ರಾಗೌಡ ಆರೋಗ್ಯದಲ್ಲಿ ಮಾತ್ರ ಯಾವುದೇ ಏರುಪೇರಾಗಿರಲಿಲ್ಲ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

ಮಲ್ಲತ್ತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ನೀಡಿದ ವರದಿ ಏನು?

ದರ್ಶನ್‌ಗೆ, ಬಿಪಿ- 165/95 ಇದೆ.
ಸ್ಯಾಚುರೇಶನ್- 97
ಪಲ್ಸ್-72
ತೂಕ- 107 kg
ಎತ್ತರ- 180cm
GRBS- 102 ಎಂದು ಮಾಹಿತಿ ನೀಡಿದ್ದಾರೆ.

ಕೊಲೆ ಪ್ರಕರಣದಲ್ಲಿ ಭಾಗಿಯಾದ ಬಹುತೇಕ ಆರೋಪಿಗಳ ಬಿಪಿ 130 ಕ್ಕೂ ಜಾಸ್ತಿ ಇದೆ ಎಂದೂ ಮಾಹಿತಿ ನೀಡಿದ್ದಾರೆ. ಆದರೆ ಪವಿತ್ರಾಗೌಡ ಆರೋಗ್ಯದಲ್ಲಿ ಮಾತ್ರ ಯಾವುದೇ ಏರುಪೇರಾಗಿರಲಿಲ್ಲ. ಬಂಧನವಾದ ಸಮಯದಲ್ಲಿ ಸಹಜವಾಗಿಯೇ ಪವಿತ್ರಾಗೌಡ ಇದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಮೃತದೇಹ ಮೊದಲು ಹಾಕಿದ್ದು ಎಲ್ಲಿ? ಬೆಳಕಿಗೆ ಬಂತು ಸ್ಫೋಟಕ ಅಂಶ!

ಇಂದಿನವರೆಗೂ ಪೊಲೀಸ್ ಕಸ್ಟಡಿಯಲ್ಲಿಯೇ ಇದ್ದಾರೆ ನಟ

ಜೂನ್ 11ರ ಮಂಗಳವಾರ ದರ್ಶನ್ ಬಂಧನವಾಗಿದ್ದರು. ಜೂನ್ 11 ರಿಂದ ಇಂದಿನವರೆಗೂ ಪೊಲೀಸ್ ಕಸ್ಟಡಿಯಲ್ಲಿಯೇ ಇದ್ದಾರೆ ನಟ ದರ್ಶನ್. ಸಿನಿಮಾ, ಶೂಟಿಂಗ್ ಎಂದು ಓಡಾಡ್ತಿದ್ದ ನಟನಿಗೆ ಈಗ ಪೊಲೀಸ್ ಠಾಣೆಯಲ್ಲಿ ವಾಸ. ನಾಳೆ ದರ್ಶನ್ ಆಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿಗೆ ಅಂತ್ಯವಾಗಲಿದೆ. ನಾಳೆ ಕೋರ್ಟ್‌ಗೆ ದರ್ಶನ್‌ ಹಾಗೂ ಗ್ಯಾಂಗ್‌ವನ್ನು ಪೊಲೀಸರು ಹಾಜರು ಪಡಿಸಲಿದ್ದಾರೆ. ಪ್ರಕರಣದ ತನಿಖೆ ಸಂಬಂಧ ಪೇಪರ್ ವರ್ಕ್ ಕೂಡ ಪೊಲೀಸರು ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಮತ್ತೆ ಪುನಃ ಕಸ್ಟಡಿಗೆ ಕೇಳದಿರಲು ಪೊಲೀಸರು ನಿರ್ಧಾರ ಮಾಡಿರುವುದಾಗಿ ವರದಿಯಾಗಿದೆ. ಬಹುತೇಕ ನಾಳೆ ದರ್ಶನ್, ಪವಿತ್ರಗೌಡ ಸೇರಿದಂತೆ ಎಲ್ಲರೂ ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಡಿ ಬಾಸ್ ಸ್ವ- ಇಚ್ಛೆಯ ಹೇಳಿಕೆ

ಪೊಲೀಸ್ ವಿಚಾರಣೆಯಲ್ಲಿ ನಟ ದರ್ಶನ್ ಅಲಿಯಾಸ್‌ ಡಿ ಬಾಸ್ ಸ್ವ- ಇಚ್ಛೆಯ ಹೇಳಿಕೆ ನೀಡಿದ್ದು, ಅದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೊಲೆಯಾದ ವ್ಯಕ್ತಿಯ ಶವವನ್ನು ವಿಲೇವಾರಿ ಮಾಡಿ, ಈ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಬೇಕು. ಪೊಲೀಸರು, ಲಾಯರ್ ಮತ್ತು ಶವ ಸಾಗಿಸುವ ವ್ಯಕ್ತಿಗಳಿಗೆ ತಗಲುವ ವೆಚ್ಚವನ್ನು ಬರಿಸಲು ಪ್ರದೂಶ್‌ಗೆ 30 ಲಕ್ಷ ಹಣ ನೀಡಿರುವುದಾಗಿ ದರ್ಶನ್‌ ಸ್ವ ಇಚ್ಛೆ ಹೇಳಿಕೆ ನೀಡಿದ್ದಾರೆ.

ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ನಡೆದ ಹಲ್ಲೆಯಲ್ಲಿ ತಾನು ಭಾಗಿಯಾಗಿದ್ದೇನೆ ಎಂದು ದರ್ಶನ್‌ ಒಪ್ಪಿಕೊಂಡಿಲ್ಲ. ಶೆಡ್‌ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳು, ಜೂನ್‌ 8ರಂದು ರಾತ್ರಿ ದರ್ಶನ್‌ ತನ್ನ ಜೀಪಿನಲ್ಲಿ ಶೆಡ್‌ ಕಡೆಗೆ ಆಗಮಿಸಿದ್ದನ್ನು ತೋರಿಸಿವೆ. ಹತ್ಯೆಯ ನಂತರ ದರ್ಶನ್‌ ಆರೋಪಿಗಳ ಜೊತೆಗೆ ಪಾರ್ಟಿ ಮಾಡಿದ್ದು ಕೂಡ ಪ್ರತ್ಯಕ್ಷದರ್ಶಿಗಳ ಸಾಕ್ಷಿಯಿಂದ ಗೊತ್ತಾಗಿದೆ. ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ಯಾವುದೇ ಸಿಸಿಟಿವಿ ಸಾಕ್ಷಿಗಳನ್ನು ಆರೋಪಿಗಳು ಉಳಿಸಿಲ್ಲ.

Exit mobile version