Site icon Vistara News

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ಪವಿತ್ರಾ ಗೌಡ ಮ್ಯಾನೇಜರ್ ಅರೆಸ್ಟ್‌

Actor Darshan case pavithra Gowda manager Arrest

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ಮತ್ತೊಬ್ಬ ಆರೋಪಿ ಪೊಲೀಸರ ವಶವಾಗಿದ್ದಾನೆ. ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 16ಜನ (Actor Darshan) ಅರೆಸ್ಟ್ ಆಗಿದ್ದಾರೆ. ಈ ಮಧ್ಯೆ ಕೊಲೆ ಕೇಸ್ ನಲ್ಲಿ ಮತ್ತೊಬ್ಬ ವ್ಯಕ್ತಿಯನ್ನ ತಡರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪವಿತ್ರಾ ಗೌಡ ಮ್ಯಾನೇಜರ್ ದೇವರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರು ರಸ್ತೆಯಲ್ಲಿ ದೇವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ನಡೆದ ದಿನ ಅಂದರೆ ರೇಣುಕಾಸ್ವಾಮಿ ಕೊಲೆಯಾದ ಶೆಡ್‌ಗೆ ಪವಿತ್ರಾ ಜತೆಗೆ ದೇವರಾಜ್ ಕೂಡ ಹೋಗಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದೇವರಾಜ್‌ನನ್ನು ಪೊಲೀಸರು ವಶ ಪಡೆದುಕೊಂಡಿದ್ದಾರೆ.

ಪವಿತ್ರಾ ಗೌಡ ಮನೆಯಲ್ಲಿ ಇಂದು ಪೊಲೀಸರು ಮಹಜರು ನಡೆಸಲಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ನಂತರ ಪವಿತ್ರಾಗೌಡ ನೇರವಾಗಿ ತಮ್ಮ ಮನೆಗೆ ಹೋಗಿದ್ದರು. ರೇಣುಕಾ ಸ್ವಾಮಿ ಮೇಲೆ ಮೊದಲು ಹಲ್ಲೆ ನಡೆಸಿದ್ದೇ ಪವಿತ್ರಾ ಗೌಡ ಎನ್ನಲಾಗಿದೆ. ಪವಿತ್ರಾಗೌಡ ನೋಡುತ್ತಿದ್ದಂತೆ ರೇಣುಕಾಸ್ವಾಮಿ ಪವಿತ್ರಾ ಕಾಲಿಗೆ ಬಿದ್ದು ತಪ್ಪಾಯ್ತು ಅಂತ ಕ್ಷಮೆ ಕೇಳಿದ್ದನಂತೆ. ಸದ್ಯ ಪವಿತ್ರಾ ಮನೆಯಲ್ಲಿ ಪೊಲೀಸರು ಆ ದಿನ ಪವಿತ್ರಾ ಧರಿಸಿದ್ದ ಬಟ್ಟೆ ಹಾಗೂ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದ ಚಪ್ಪಲಿಯನ್ನ ಸೀಜ್ ಮಾಡಲಿದ್ದಾರೆ. ಪ್ರಕರಣದಲ್ಲಿ ಪವಿತ್ರಾ ಚಪ್ಪಲಿ ಕೂಡ ಮಹತ್ವದ ಸಾಕ್ಷ್ಯವಾಗಲಿದೆ.

ಇದನ್ನೂ ಓದಿ: Actor Darshan: ದರ್ಶನ್‌ ಬಂಧಿಸಿದ ಎಸಿಪಿ ಚಂದನ್ ಕುಮಾರ್‌ ಕೆಲಸಕ್ಕೆ ಸೆಲ್ಯೂಟ್‌ ಎಂದ ಗ್ರಾಮಸ್ಥರು!

ಇಂದಿನಿಂದ ಮತ್ತೊಂದು ಹಂತದ ತನಿಖೆಗೆ ಮುಂದಾಗಿದ್ದಾರೆ ಪೊಲೀಸರು. ಎವಿಡೆನ್ಸ್‌ಗಳನ್ನು ಮುಂದಿಟ್ಟುಕೊಂಡು ವಿಚಾರಣೆ ಪೊಲೀಸರು ನಡೆಸುತ್ತಿದ್ದಾರೆ . ಆರೋಪಿಗಳ ಬಳಿ ಇದ್ದ ಹತ್ತು ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮೊಬೈಲ್‌ನಲ್ಲಿ ಕೆಲ ಸ್ಫೋಟಕ ವಿಚಾರಗಳು ಪತ್ತೆಯಾಗಿವೆ. ವೆಪನ್ ಗಳು, 30 ಲಕ್ಷ ರೂ. ಹಣ, ಕಾರುಗಳು ಸೇರಿ ಹಲವು ವಸ್ತುಗಳು ಜಪ್ತಿಯಾಗಿವೆ. ಈಗಾಗಲೇ ಆರೋಪಿಗಳನ್ನು ವಿಚಾರಣೆ ಮಾಡಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಪ್ರಶ್ನೆಗಳ ಸುರಿಮಳೆ

ಶರಣಾಗಿರುವ ಆರೋಪಿಗಳನ್ನು ಡ್ರಿಲ್‌ ಮಾಡುತ್ತಿರುವ ಪೊಲೀಸರು, ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಪ್ರಕರಣದ ಸಂಬಂಧ ನೀವೇನಾದರೂ ಹಣ ಪಡೆದಿದ್ರಾ? ನಿಮ್ಮನ್ನು ಸಂಪರ್ಕಿಸಿದವರು ಯಾರು? ಯಾರ ಮಾತನ್ನು ನೀವು ಕೇಳಿ ನೀವು ಪ್ರಕರಣದಲ್ಲಿ ಭಾಗಿಯಾದಿರಿ? ದರ್ಶನ ಜತೆ ನೀವೇನಾದರೂ ನೇರವಾಗಿ ಸಂಪರ್ಕದಲ್ಲಿ ಇದ್ರಾ? ಆರೋಪಿ ರಘು ನಿಮ್ಮನ್ನು ಭೇಟಿಯಾಗಿ ಹೇಳಿದ್ದೇನು? ಶೆಡ್‌ ಒಳಗೆ ಯಾರೆಲ್ಲ ಹೋದರು? ನೀವೂ ಹೋಗಿದ್ರಾ ಎಂಬುದು ಸೇರಿ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.

Exit mobile version