Site icon Vistara News

Actor Darshan: ದರ್ಶನ್‌ಗೆ ಗಲ್ಲು ಶಿಕ್ಷೆ ಆಗಬೇಕು ಎಂದ ರಮ್ಯಾಗೆ ಕೌಂಟರ್‌ ಕೊಟ್ಟ ಸಂಜನಾ ಗಲ್ರಾನಿ!

Actor Darshan case sanjana galrani Reaction about ramya statement

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿಯ ಭೀಕರ (Actor Darshan) ಹತ್ಯೆಯಲ್ಲಿ ಪವಿತ್ರಾ ಗೌಡ ಎ1, ದರ್ಶನ್​ ಎ2 ಆಗಿದ್ದಾರೆ.  ಈ ಕೊಲೆ ಕೇಸ್‌ನಲ್ಲಿ ದರ್ಶನ್‌ ಅವರು ಕೇಸ್‌ನಿಂದ ತಪ್ಪಿಸಿಕೊಳ್ಳಲು ಪ್ರತಿ ಹಂತದಲ್ಲೂ ಎಚ್ಚರವಹಿಸಿದ್ದರು. ಇದೀಗ ಪೊಲೀಸ್‌ ಕಸ್ಟಡಿಯಲ್ಲಿ ಇದ್ದಾರೆ ದರ್ಶನ್‌. ಈ ನಡುವೆ, ನಟಿ ಸಂಜನಾ ಗಲ್ರಾನಿ ಅವರು ಸ್ಪಷ್ಟ ಅಭಿಪ್ರಾಯ ನೀಡಿದ್ದು ದರ್ಶನ್ ತೂಗುದೀಪ ಬೆಂಬಲಕ್ಕೆ ನಿಂತಿದ್ದಾರೆ. ನಟ ದರ್ಶನ್ ತೂಗುದೀಪ ಆರೋಪಿಯೇ ಹೊರತು ಅಪರಾಧಿ ಅಲ್ಲ ಎಂದಿದ್ದಾರೆ. ಜತೆಗೆ ರಮ್ಯಾ ಅವರ ಟ್ವಿಟರ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತಿನ ನಡುವೆ ತಾವು ಮೂರು ತಿಂಗಳು ಜೈಲಿನಲ್ಲಿದ್ದ ಅವಧಿಯನ್ನು ನೆನಪಿಸಿಕೊಂಡಿದ್ದಾರೆ.

ನಟಿ ಸಂಜನಾ ಗಲ್ರಾನಿ ಮಾತನಾಡಿ ʻʻದರ್ಶನ್‌ ಅವರು ಕೆಟ್ಟವರಲ್ಲ . ತುಂಬ ಜಂಟಲ್‌ಮೆನ್‌. ಹಾಗೇ ನಾನು ಅವರ ಜತೆ ಕೆಲಸ ಮಾಡಿದ್ದೇನೆ. ಅವರನ್ನು ಎಲ್ಲೇ ಭೇಟಿ ಆದರೂ ಚೆನ್ನಾಗಿ ಮಾತಾಡುತ್ತಾರೆ. ನನಗೆ ಅವರ ಮೇಲೆ ಗೌರವ ಇದೆ. ʻಅರ್ಜುನ್‌ʼ ಸಿನಿಮಾ ಮಾಡುವಾಗ, ನರ್ವಸ್‌ ಆದಾಗ ಸಹಾಯ ಮಾಡಿದ್ದರು. ಆದರೆ ಈಗ ದರ್ಶನ್‌ ಅವರ ಈ ನ್ಯೂಸ್‌ ತುಂಬ ಕಾಡುತ್ತಿದೆʼʼ ಎಂದರು.

ಇನ್ನು ರಮ್ಯಾ ಅವರು ಗಲ್ಲು ಶಿಕ್ಷೆ ದರ್ಶನ್‌ ಅವರಿಗೆ ಆಗಬೇಕು ಎಂದು ಟ್ವೀಟ್‌ ಮಾಡಿದ್ದರು. ಈ ಬಗ್ಗೆ ಸಂಜನಾ ಅವರು ಪ್ರತಿಕ್ರಿಯೆ ನೀಡಿದ್ದು ಹೀಗೆ. ʻʻನೋಡಿ ಗಲ್ಲು ಶಿಕ್ಷೆ ಆಗಬೇಕು ಎಂದು ಹೇಳುವ ಅಧಿಕಾರ ಕೋರ್ಟ್‌ಗೆ ಇದೆ. ನನ್ನ ಉದಾಹರಣೆ ಕೊಡುತ್ತೇನೆ. ನಾನು ಡ್ರಗ್ಸ್‌ ಕೇಸ್‌ ವಿಚಾರವಾಗಿ ನನ್ನ ಕರೆದಾಗ ಏಕಾ ಏಕಿ ಅರೆಸ್ಟ್‌ ಮಾಡಿದ್ದರು. ಆಮೇಲೆ ಮೊಬೈಲ್‌ ತೆಗೆದುಕೊಂಡರು. ಆಮೇಲೆ ತುಂಬ ಕಷ್ಟ ಪಟ್ಟೆ. ಇನ್ನು ನ್ಯೂಸ್‌ನಲ್ಲಿ ನೋಡಿದಾಗ ಸಂಜನಾ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಬಂತು. ಇನ್ನು ಇಲ್ಲಿ ವಿಚಾರಣೆನೇ ಆಗಿಲ್ಲ. ಯಾವುದೇ ಹೇಳಿಕೆಯೇ ನೀಡಿಲ್ಲ. ಆಗಲೇ ತಪ್ಪು ಒಪ್ಪಿಕೊಂಡರು ಎಂದು ಮಾಧ್ಯಗಳಲ್ಲಿ ಬಂತು. ಡ್ರಗ್ಸ್‌ ದಂಧೆ ನಡೆಸುತ್ತಾರೆ ಎಂದೆಲ್ಲ ಹಬ್ಬಿತ್ತು. ಈ ತರ ರೂಮರ್ಸ್‌ವನ್ನು ಯಾರು ತಡಿಲಿಕ್ಕೆ ಆಗುತ್ತೆ. ನಮ್ಮ ವಕೀಲರು ಇನೋಸೆಂಟ್‌ ಅಂದರು ಯಾರು ಕ್ಯಾರ್‌ ಮಾಡಿಲ್ಲʼʼಎಂದಿದ್ದಾರೆ.

ಇದನ್ನೂ ಓದಿ: Actor Darshan: ಕೇಸ್‌ನಿಂದ ತಪ್ಪಿಸಿಕೊಳ್ಳೋಕೆ ಪ್ರತಿ ಹಂತದಲ್ಲೂ ಎಚ್ಚರವಹಿಸಿದ್ದ ದರ್ಶನ್; ಬೇಟೆಯ ಹಿಂದೆ ಭರ್ಜರಿ ಮಾಸ್ಟರ್‌ ಪ್ಲ್ಯಾನ್‌!

ʻʻಚಾರ್ಜ್‌ಶೀಟ್‌ವನ್ನು ಮೊದಲು ಗೌರವಿಸಬೇಕು. ಊಹಾಪೋಹಗಳು ನಿಜ ಅಲ್ಲ. ಇನ್ನು ದರ್ಶನ್‌ ಕೇಸ್‌ಗೆ ಸಂಬಂಧಪಟ್ಟಂತೆ ವಿಚಾರಣೆ ಇನ್ನೂ ನಡಯುತ್ತಿದೆ ಅಂದಿದ್ದಾರೆ. ಆದರೂ ಈ ಗಾಸಿಪ್‌ಗಳು ಯಾಕೆ ಅನ್ನೋದು ಗೊತ್ತಿಲ್ಲ. ಕೆಲವೊಂದು ಮಾಧ್ಯಮಗಳು ಟಿಆರ್‌ಪಿಗೋಸ್ಕರ ಏನೂ ಬೇಕಾದರು ಹಾಕುತ್ತಾರೆ. ದರ್ಶನ್‌ ಅವರು ಕೆಟ್ಟವರಲ್ಲʼʼಎಂದಿದ್ದಾರೆ.

ನಟಿ ಪವಿತ್ರಾ ಗೌಡ (Pavithra Gowda) ಜೈಲು ಪಾಲಾಗಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಪವಿತ್ರಾ ಗೌಡ ಅವರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್​ ಮಾಡಲಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿಯ ಭೀಕರ ಹತ್ಯೆಯಲ್ಲಿ ಪವಿತ್ರಾ ಗೌಡ ಎ1, ದರ್ಶನ್​ ಎ2 ಆಗಿದ್ದಾರೆ. ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿ ಆಗಿದ್ದು, ಜೂನ್​ 20 ಅವರ ಪೊಲೀಸ್​​ ಕಸ್ಟಡಿ ಅಂತ್ಯವಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ ಸರಿಯಾಗಿ ಊಟ, ನಿದ್ರೆ ಮಾಡದೆ ಚಡಪಡಿಸಿದ್ದರು ಎನ್ನಲಾಗಿದೆ.

Exit mobile version