ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್ (Actor Darshan) ಸೆರೆವಾಸ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನವೂ ದರ್ಶನ್ ಅವರ ಅಮ್ಮ ಹಾಗೂ ತಮ್ಮ ಮಗನ ಭೇಟಿಗೆ ಸೆರೆಮನೆಯತ್ತ ಕಾಲಿಟ್ಟಿರಲಿಲ್ಲ. ಇದೀಗ ದರ್ಶನ್ ತಾಯಿ, ತಮ್ಮ, ಪತ್ನಿ , ಮಗ ಭೇಟಿ ಮಾಡಿದ್ದಾರೆ. ಆದರೀಗ ಖಾಸಗಿ ವಾಹನದಲ್ಲಿಯೇ ನಟ ದರ್ಶನ್ ಕುಟುಂಬ ಜೈಲಿಗೆ ಎಂಟ್ರಿ ಕೊಟ್ಟಿರುವುದು ತಿಳಿದು ಬಂದಿದೆ. ಹೀಗಾಗಿ ಸಾಮಾನ್ಯರಿಗೊಂದು ಕಾನೂನು ನಟ ದರ್ಶನ್ ಕುಟುಂಬಕ್ಕೆ ಒಂದು ಕಾನೂನು ಎನ್ನುವಂತಾಗಿದೆ.
ಖಾಸಗಿ ವಾಹನದಲ್ಲಿಯೇ ನಟ ದರ್ಶನ್ ಕುಟುಂಬ ಜೈಲಿಗೆ ಎಂಟ್ರಿ ಕೊಟ್ಟಿದ್ದು, ಬಂಧಿಖಾನೆ ಇಲಾಖೆ ಕಾನೂನನ್ನು ಗಾಳಿಗೆ ತೂರಿ ರಾಜಾತಿಥ್ಯ ನೀಡಿದೆ. ಸಾಮಾನ್ಯರು ಜೈಲಿಗೆ ಎಂಟ್ರಿ ಕೊಡಬೇಕಾದರೆ ಹತ್ತಾರು ರೂಲ್ಸ್ ಹೇಳುತ್ತಾರೆ. ಅದೇ ನಟ ದರ್ಶನ್ ಕುಟುಂಬಕ್ಕೆ ಮಾತ್ರ ಕಂಡಿಷನ್ ಇಲ್ಲವೆಂಬಂತಾಗಿದೆ.
ರಾಜಾರೋಷವಾಗಿ ನಟ ದರ್ಶನ್ ಕುಟುಂಬದವರಿಗೆ ಜೈಲು ಎಂಟ್ರಿ ನೀಡಲಾಗಿದೆ. ಮಾಧ್ಯಮಗಳ ಕಣ್ತಪ್ಪಿಸಿ ನಟ ದರ್ಶನ್ ಅವರನ್ನು ಕುಟುಂಬ ಭೇಟಿ ಮಾಡಿದೆ. ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ತಾಯಿ, ತಮ್ಮ ಪತ್ನಿ ಮಗ ಎಂಟ್ರಿ ಕೊಟ್ಟರು. ಹತ್ತು ಗಂಟೆ ಸುಮಾರಿಗೆ ಕುಟುಂಬ ಜೈಲಿಗೆ ಬಂದಿತ್ತು. ಪರಪ್ಪನ ಅಗ್ರಹಾರ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಉದಯ್ ದರ್ಶನ್ ಭೇಟಿಗೆ ಕರೆದೊಯ್ದರು. ಉದಯ್ ಅವರು ಕಳೆದ ಸೋಮವಾರ ಸಹ ಮಾಧ್ಯಮಗಳ ಕಣ್ತಪ್ಪಿಸಿ ಪತ್ನಿ ಮಗನನ್ನು ಕರೆದೊಯ್ದಿದ್ದರು. ಇಂದು ಕೂಡ ಖಾಸಗಿ ಕಾರಿನಲ್ಲಿ ಉದಯ್ ಕುಟುಂಬವನ್ನು ಕರೆದೊಯ್ದಿದ್ದಾರೆ.
ಇದನ್ನೂ ಓದಿ: Actor Darshan: ದರ್ಶನ್ ನನ್ನ ಮಗು, ಆತ ಕೊಟ್ಟ ಕೊಡುಗೆ ಕಡೆ ನೋಡೋಣ ಎಂದ ಹಂಸಲೇಖ!
ದರ್ಶನ್ ತನ್ನ ಕುಟುಂಬದವರ ಜೊತೆಗೆ ಕೂಡ ಸುಮಧುರ ಬಾಂಧವ್ಯ ಹೊಂದಿಲ್ಲ. ಸಹೋದರ ದಿನಕರ್ ಮೇಲೆ ಆತ ಈ ಹಿಂದೆ ಹಲ್ಲೆ ನಡೆಸಿದ್ದಿದೆ. ತಾಯಿ ಮೀನಾ ಅವರ ಮಾತು ಕೂಡ ಕೇಳಿಸಿಕೊಳ್ಳದೆ ಪುಂಡಾಟ ಮಾಡಿದ ಉದಾಹರಣೆ ಇದೆ. ಆದರೂ, ಮನೆಯವರು ಬಂದರೆ ಮಾತ್ರ ಒಳಗೆ ಬಿಡಿ ಎಂದು ದರ್ಶನ್ ಜೈಲು ಸಿಬ್ಬಂದಿಗೆ ತಿಳಿಸಿದ್ದಾನೆ.
ಜೈಲೂಟ ಒಗ್ಗದೆ ಇದ್ದರೂ ವಿಧಿಯಿಲ್ಲದೆ ಜೈಲೂಟ ಸವಿಯುತ್ತಿರುವ ದರ್ಶನ್ ಇಂದು ಜೈಲಿನ ಮೆನುವಿನಂತೆ ಉಪ್ಪಿಟ್ಟು ಸೇವಿಸಿದ್ದಾನೆ. ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ನಟ ದರ್ಶನ್ ತಾಯಿ ಮತ್ತು ಸಹೋದರ ಇಂದು ಭೇಟಿ ನೀಡಲಿದ್ದು, ದರ್ಶನ್‌ಗೆ ತಾಯಿ ಮತ್ತು ಸಹೋದರ ಧೈರ್ಯ ಹೇಳಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಮಡದಿ ಮಗ ಆಗಮಿಸಿದ್ದರು. ಅವರು ಬಂದು ಹೋದ ದಿನ ಖುಷಿಯಾಗಿದ್ದ ದರ್ಶನ್, ಬಳಿಕ ಮತ್ತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಸಹ ಬಂಧಿಗಳ ಜೊತೆ ಬೆರೆಯದೆ ಒಬ್ಬಂಟಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾನೆ.
ದರ್ಶನ್ ಭೇಟಿ ಮಾಡಿದ ರಕ್ಷಿತಾ- ಪ್ರೇಮ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ರನ್ನು (Actor Darshan) ಕೆಲ ಆಪ್ತರು ಭೇಟಿ ಮಾಡುತ್ತಿದ್ದಾರೆ. ಈ ನಡುವೆ ನಟಿ ರಕ್ಷಿತಾ, ಪ್ರೇಮ್ ದಂಪತಿ ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿ ಬಳಿಕ ಪ್ರಕರಣದ ಬಗ್ಗೆ ರಕ್ಷಿತಾ, ಪ್ರೇಮ್ ದಂಪತಿ ಬೇಸರ ಹೊರಹಾಕಿದ್ದು, ಇಂತಹ ಪ್ರಕರಣ ನಡೆಯಬಾರದಿತ್ತು ಎಂದು ಹೇಳಿದ್ದಾರೆ.
ನಟ ದರ್ಶನ್ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ನಟಿ ರಕ್ಷಿತಾ, ಈ ಘಟನೆ ನಡೆದಿರುವುದು ದುರಾದೃಷ್ಟಕರ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ ಎಂದು ಹೇಳಿದರು.
ನಿರ್ದೇಶಕ ಜೋಗಿ ಪ್ರೇಮ್ ಪ್ರತಿಕ್ರಿಯಿಸಿ, ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಈ ಸಂದರ್ಭದಲ್ಲಿ ಪ್ರಕರಣದ ಈ ಬಗ್ಗೆ ಮಾತನಾಡುವುದು ಸರಿಯಲ್ಲ. ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಹೇಳಿ, ಜೈಲಿನಲ್ಲಿ ದರ್ಶನ್ ಜತೆ ನಡೆದ ಮಾತುಕತೆ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.