ಬೆಂಗಳೂರು: ದರ್ಶನ್ ಸಿನಿಮಾ (Actor Darshan) ಸ್ಟೈಲ್ ಫಾಲೋ ಮಾಡ್ತಿದ ಫ್ಯಾನ್ಸ್ ಈಗ ದರ್ಶನ್ ಅವರ ಕೈದಿ ನಂಬರ್‌ವನ್ನು ಟ್ರೆಂಡ್ ಮಾಡಿದ್ದಾರೆ. ದರ್ಶನ್ ಕೈದಿ ನಂಬರ್‌ಗೆ ಡಿಮ್ಯಾಂಡ್ ಸಿಕ್ಕಾಪಟ್ಟೆ ಆಗಿದೆ. ದರ್ಶನ್ ಕೈದಿ ನಂಬರ್‌ವನ್ನು ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಜತೆಗೆ ಬೈಕ್,ಆಟೋಗಳ ಹಿಂದೆ ಕೂಡ ಇದೇ ಕೈದಿ ನಂಬರ್ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ನಮ್ಮ ಬಾಸ್ ಜೈಲಿಗೆ ಹೋದರು ಅಭಿಮಾನ ಕಡಿಮೆ ಆಗಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ʻʻಡಿ 6106ʼʼಎಂದು ಒಬ್ಬ ಅಭಿಮಾನಿ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ದರ್ಶನ್ ಕೈದಿ ನಂಬರ್‌ನಲ್ಲಿಯೇ ಮೊಬೈಲ್ ಕವರ್ ಕೂಡ ಬಂದಿದೆ. ಬೈಕ್,ಆಟೋಗಳ ಹಿಂದೆ ಕೂಡ ಇದೇ ಕೈದಿ ನಂಬರ್ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ತಮ್ಮ ವಾಹನಗಳಿಗೆ ಈ ರೀತಿಯ ಸ್ಟಿಕ್ಕರ್‌ವನ್ನು ನೂರಾರು ಫ್ಯಾನ್ಸ್ ಹಾಕಿಕೊಂಡು ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. ಕೈದಿ ನಂಬರ್ 6106 ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಟ್ರೆಂಡಿಂಗ್ ಆಗುತ್ತಿದೆ.
ಸದ್ಯ ಈಗ ಕೈದಿ ನಂಬರ್ 6106 ಸ್ಟಿಕ್ಕರ್ ಗಳಿಗೆ ಫುಲ್ ಡಿಮ್ಯಾಂಡ್ ಇದೆ ಎನ್ನಲಾಗಿದ್ದು ವಿಭಿನ್ನ ಬಣ್ಣ, ವಿನ್ಯಾಸದಲ್ಲಿ ದರ್ಶನ್ ಫ್ಯಾನ್ಸ್ ಇದನ್ನು ಮಾಡಿಸಿಕೊಂಡು ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುತ್ತಿದ್ದಾರೆ.ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇತ್ತೀಚೆಗೆ ಅವರ ವಿಶೇಷ ಚೇತನ ಅಭಿಮಾನಿಯೊಬ್ಬರು ಅವರನ್ನು ನೋಡಲು ಬಂದಿದ್ದರು. ಈ ಘಟನೆಯ ನಂತರ ಅಭಿಮಾನಿಗಳಿಗೆ ನಟ ದರ್ಶನ್ ಮನವಿ ಮಾಡಿದ್ದು ಜೈಲಿನಿಂದಲೇ ನಟ ದರ್ಶನ್ ಮನವಿ ತಿಳಿಸಿದ್ದಾರೆ.
ಇದನ್ನೂ ಓದಿ: Actor Darshan: ಆರಡಿ ದೇಹವ ಮೂರಡಿ ಬಗ್ಗಿಸಿ ನಮ್ಮೊಂದಿಗೆ ವಿನಯದಿ ಮಾತನಾಡಿದ ದರ್ಶನ್ ಅಣ್ಣ ಎಂದ ಖ್ಯಾತ ಗಾಯಕಿ!
ಖೈದಿ ನಂಬರ್ 6106 ಎಂಬ ಶೀರ್ಷಿಕೆ ನಮಗೆ ಬೇಕು ಎಂದು ಭದ್ರಾವತಿ ಮೂವೀ ಮೇಕರ್ಸ್ ಸಂಸ್ಥೆಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದೆ. ಈ ನಡುವೆ ಈ ಅರ್ಜಿಯನ್ನು ಪರಿಶೀಲಿಸಿದ ಮಂಡಳಿ, ಸದ್ಯಕ್ಕೆ ಈ ಟೈಟಲ್‌ಅನ್ನು ಕೊಡಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದು, ಸದ್ಯಕ್ಕೆ ಹೋಲ್ಡ್‌ನಲ್ಲಿಟ್ಟಿದೆ. ಸದ್ಯಕ್ಕೆ ಪೆಂಡಿಂಗ್ ಇಡಲಾಗಿದೆ ಎಂದು ಮಂಡಳಿ ಅರ್ಜಿ ಮೇಲೆ ಬರೆದಿದೆ. ಈಗಾಗಲೇ ಭದ್ರಾವತಿ ಮೂವೀ ಮೇಕರ್ಸ್ ಸಂಸ್ಥೆ ಕನ್ನಡಲ್ಲಿ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು, ಇದು ನಾಲ್ಕನೇ ಚಿತ್ರ.
ಈ ಮುಂಚೆ ಮೈಸೂರಿನಲ್ಲಿ ದರ್ಶನ್ ಅಭಿಮಾನಿ ಧನುಷ್ ದರ್ಶನ್ ಕುರಿತಾಗಿ ಕಣ್ಣೀರಿಟ್ಟು 6106 ಇನ್ಮುಂದೆ ನಮಗೆ ಇದೇ ಲಕ್ಕಿ ನಂಬರ್ ಎಂದಿದ್ದರು. ಮಾತ್ರವಲ್ಲ ಇನ್ಮುಂದೆ ಆ ನಂಬರ್ ನಮ್ಮ ಗಾಡಿ ಮೇಲೆ ಇರುತ್ತೆ ಎಂದೂ ಹೇಳಿಕೊಂಡಿದ್ದರು. ದರ್ಶನ್‌ಗೆ ನೀಡಿರುವ ಈ ನಂಬರ್‌ವನ್ನು ಆರ್ ಟಿಒನಲ್ಲಿ ರಿಜಿಸ್ಟರ್ ಮಾಡಿಸಲು ಅಭಿಮಾನಿ ಮುಂದಾಗಿದ್ದರು. ದರ್ಶನ್ ಜೈಲುವಾಸ ನೆನೆದು ಗಳಗಳನೆ ಕಟ್ಟೀರಿಟ್ಟಿದ್ದರು. ಶೀಘ್ರವಾಗಿ ದರ್ಶನ್ ಬಿಡುಗಡೆಗೆ ಆಗಬೇಕು ನಾಡ ಅಧಿದೇವತೆ ಚಾಮುಂಡಿಯಲ್ಲಿ ಹರಕೆ ಕೂಡ ಹೊತ್ತಿದ್ದರು ಧನುಷ್. ʻʻನಮ್ಮ ಬಾಸ್ ಏನೂ ತಪ್ಪೇ ಮಾಡಿಲ್ಲ. ನಮ್ಮ ಬಾಸ್ ಅವರನ್ನು ನಾವು ಎಂದೂ ಬಿಟ್ಟುಕೊಡೋದಿಲ್ಲ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿಲ್ಲ ಅಂದ್ರೆ ರಾಜಾರೋಷವಾಗಿ ಬರ್ತಾರೆʼʼಎಂದು ಹೇಳಿಕೊಂಡಿದ್ದರು.