ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆದ ಬಳಿಕ ರೇಣುಕಾಸ್ವಾಮಿ ನಿವಾಸಕ್ಕೆ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಭೇಟಿ ನೀಡಿ, ಮೃತ ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಮಾತ್ರವಲ್ಲ ಹಲವು ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ (Actor Darshan) ನೀಡಿದ್ದಾರೆ. ಆದರೀಗ ವಿಸ್ತಾರ ನ್ಯೂಸ್‌ನಲ್ಲಿ ಭಾವನಾ ಬೆಳಗೆರೆ ಅವರು ʻಕುಡಿದಾಗ ಮಾತ್ರ ದರ್ಶನ್ ಅಗ್ರೆಸ್ಸಿವ್ ಆಗಿ ಮಾತಾಡಡುತ್ತಾರೆ. ಹಾಗೇ ಈ ಕೃತ್ಯ ಕುಡಿದಾಗಲೇ ಮಾಡಿರಬಹುದುʼʼಎಂದು ಹೇಳಿಕೆ ನೀಡಿದ್ದಾರೆ.
ಭಾವನಾ ಬೆಳಗೆರೆ ಮಾತನಾಡಿ ʻʻದರ್ಶನ್ ಅವರು ಕುಡಿದು ಮಾತನಾಡುವಾಗ ಅಗ್ರೆಸಿವ್ ಆಗಿ ಮಾತಾಡ್ತಾರೆ. ಇಲ್ಲ ಅಂದರೆ ಆರಾಮಾಗಿ ಮಾತನಾಡುತ್ತಾರೆ. ಪ್ರತಿ ಬಾರಿ ಮಾತನಾಡುವಾಗ ಅಲ್ವಾ! ಎಂಬ ಉತ್ತರಕ್ಕೆ ಕಾಯುತ್ತಾರೆ. ಮಿಕ್ಕಿದ ದಿನದಲ್ಲಿ ಕ್ಯಾಮೆರಾಗೆ ಅಟ್ಯಾಕ್ ಮಾಡಲು ಬರುತ್ತಾರೆ. ಕುಡಿದಿದ್ದಾಗ ಯಾರು ಏನೇ ಹೇಳಿದ್ದರೂ ಒಪ್ಪಿಕೊಳ್ಳಲ್ಲ. ಇಂದು ನಾನು ತಂದೆಯವರೆ ಹಿಸ್ಟರಿ ಇಟ್ಟುಕೊಂಡು ಮಾತಾಡ್ತಾ ಇಲ್ಲ. ನನ್ನ ಸ್ವತಃ ಅಣುಭವ ಹಂಚಿಕೊಳ್ಳುತ್ತಿರುವೆʼʼಎಂದರು.
ಇದನ್ನೂ ಓದಿ: Actor Darshan: ರೇಣುಕಾಸ್ವಾಮಿಯನ್ನ ಹೀರೊ ಮಾಡೋದು ನಿಲ್ಲಿಸಿ, ದರ್ಶನ್‌ನ ಬಿಟ್ಟುಕೊಡಲ್ಲ ಎಂದ ಖ್ಯಾತ ನಿರೂಪಕಿ!
ʻʻಆಗಿನ ಕಾಲದ ನಟರನ್ನು ನಾವು ಪೂಜಿಸುತ್ತಿದ್ದೇವು. ಅಣ್ಣಾವ್ರ ಆಗಲಿ ಹಲವು ನಟರು ಇಷ್ಟವಾಗುತ್ತಿದ್ದರು. ಆದರೆ ಆಗ ಅಭಿಮಾನಿಗಳ ನಡುವೆ ಜಿದ್ದಾ ಜಿದ್ದಿ ಇರಲಿಲ್ಲ. ಆದರೆ ಈಗ ದರ್ಶನ್ ಅಥವಾ ಅಪ್ಪು, ಸುದೀಪ್ ಈ ರೀತಿ ಅಭಿಮಾನಿಗಳು ಮಾತನಾಡಲು ಶುರು ಮಾಡಿದ್ದಾರೆ. ಮುಂಚೆ ಎಲ್ಲರೂ ಒಟ್ಟಿಗೆ ನಿಂತು ಬೆಳೆಸುತ್ತಿದ್ದರು. ಆದರೀಗ ಒಬ್ಬರ ಫ್ಯಾನ್ಸ್ ಇನ್ನೊಬ್ಬರ ಸಿನಿಮಾ ಕೂಡ ನೋಡುತ್ತಿಲ್ಲʼʼಎಂದರು.
ನಮ್ಮ ತಂದೆ ಅವತ್ತು ಬುದ್ಧಿ ಹೇಳಿದ್ದೇ ತಪ್ಪಾ?
ʻʻನನ್ನ ತಂದೆ ದರ್ಶನ್ ಅವರಿಗೆ ವಿಜಯಲಕ್ಷ್ಮಿ ಅವರನ್ನು ಹೊಡೆಯಬೇಡ ಎಂದಿದ್ದಾಗ, ದರ್ಶನ್ ನನ್ನ ಹೆಂಡತಿ ಅವಳು ಹೊಡತ್ತೀನಿ, ನೀನು ಯಾರು ಎಂದು ಕೇಳಿದ್ದರು. ಆದರೆ ನನ್ನ ತಂದೆ ಬುದ್ಧಿ ಮಾತು ಹೇಳಿದ್ದರು. ಕುಡಿದಾಗ ಮಾತ್ರ ದರ್ಶನ್ ಹೀಗೆ. ಆದರೆ ಬೇರೆ ಸಮಯದಲ್ಲಿ ತುಂಬ ಸಾಫ್ಟ್. ಈ ಕೃತ್ಯ ಆದಾಗ ಅವರು ಕುಡಿದಾಗಲೇ ಮಾಡಿರೋದು. ಆದರೆ ಈಗ ಕಾನೂನು ಒಂದೇ. ಕುಡಿದು ಮಾಡಿದೆ ಅಂತ ಕ್ಷಮೆ ಏನು ಕಡಿಮೆ ಆಗಲ್ಲ. ಆದರೆ ದರ್ಶನ್ ಯಾವಾಗ ಈ ರೀತಿಯ ಗೂನವನ್ನು ಸರಿ ಮಾಡ್ಕೋತ್ತಾರೆ? ಆದರೆ ಮುಂದೆ ಏನಾಗುತ್ತೆ ಎನ್ನುವುದು ಗೊತ್ತಿಲ್ಲʼʼಎಂದರು.
ರೇಣುಕಾ ಸ್ವಾಮಿ ಚಿತ್ರದುರ್ಗದವರಾಗಿದ್ದು ಬಡ ಮಧ್ಯಮ ಕುಟುಂಬದವರಾಗಿದ್ದಾರೆ. ಕಳೆದ ವರ್ಷ ಇದೇ ತಿಂಗಳು ಮದುವೆಯಾಗಿದ್ದ ರೇಣುಕಾ ಸ್ವಾಮಿಯ ಪತ್ನಿ ಐದು ತಿಂಗಳ ಗರ್ಭಿಣಿ. ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸ್ವಾಮಿಯನ್ನು ಶನಿವಾರ ಅಪಹರಣ ಮಾಡಿದ್ದ ನಟ ದರ್ಶನ್ ಸಹಚರರು ಪಟ್ಟಣಗೆರೆಯ ಶೆಡ್ನಲ್ಲಿ ಕೂಡಿಹಾಕಿ ಹೊಡೆದು, ಚಿತ್ರಹಿಂಸೆ ನೀಡಿ ಕೊಲೆ ಮಾಡಿ, ಚರಂಡಿಗೆ ಎಸಗಿ ಹೋಗಿದ್ದರು.