Site icon Vistara News

Actor Darshan: ಬದುಕು ನಾಯಿ ಪಾಡು ಆಗ್ಬಿಟ್ಟಿದೆ ಎಂದಿದ್ದ ದರ್ಶನ್;‌ ʻದಚ್ಚುʼ ಏಳು ಬೀಳು ಕುರಿತು ಗಣೇಶ್‌ ಕಾಸರಗೋಡು ಹೇಳಿದ್ದು ಹೀಗೆ!

Actor Darshan Ganesh Kasaragod About Darshan life

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎರಡನೇ ಆರೋಪಿಯಾಗಿರುವ ನಟ ದರ್ಶನ್‌ (Darshan Arrested)  ಕುರಿತು ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೀಗ ಪತ್ರಕರ್ತ ಗಣೇಶ್‌ ಕಾಸರಗೋಡು ಅವರು ದರ್ಶನ್‌ ಕುರಿತಾಗಿ ಹಲವಾರು ಸಂಗತಿಗಳನ್ನು ಹೇಳಿಕೊಂಡಿದ್ದಾರೆ. ಜತೆಗೆ ದರ್ಶನ್‌ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಗಣೇಶ್‌ ಕಾಸರಗೋಡು ಮಾತನಾಡಿ ʻʻದರ್ಶನ್‌ ಪ್ರಕರಣ ಹೀಗೆ ಆಗಬಾರದಿತ್ತು. ಆಗೋಗಿದೆ. ಸಿನಿಮಾದಲ್ಲಿಯೂ ಈ ರೀತಿ ಹತ್ಯೆಯಾಗಲ್ಲ. ಆದರೆ ರೇಣುಕಾ ಸ್ವಾಮಿ ಫೋಟೊ ಕಂಡು ಭಯ ಆಗೋಯ್ತು. ಆದರೆ ಇದನ್ನ ತಪ್ಪಿಸಲು ಒನ್ನರಿಂದ ಮಾತ್ರ ಸಾಧ್ಯವಿತ್ತು, ಅದು ಸುದೀಪ್‌ ಅವರಿಂದ ಮಾತ್ರ. ಆದರೆ ಆ ಸ್ನೇಹ ಮುರಿದು ಬಿತ್ತು. ದರ್ಶನ್‌ ಹಾಗೂ ಅಂಬರೀಶ್‌ ತುಂಬ ಸ್ನೇಹಿತರು. ಆದರೆ ಒಂದೇ ವ್ಯತ್ಯಾಸ ಅಂದರೆ, ಅಂಬರೀಶ್‌ ಅವರು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆ. ಆದರೆ ನಿರ್ಧಾರ ತಮ್ಮದು ತೆಗೆದುಕೊಳ್ಳುತ್ತಿದ್ದರು. ಆದರೆ ದರ್ಶನ್‌ ಅವರಲ್ಲಿ ಹಾಗಿಲ್ಲ. ಯಾರು ಹೇಳಿದ್ರೂ ಮಾಡಿ ಬಿಡೋಣ ಅನ್ನುವಂತ ವ್ಯಕ್ತಿತ್ವ. ದರ್ಶನ್‌ಗೆ ಅಂತಹ ಅಭಿಮಾನಿ ಬಳಗ, ನಿರ್ದೇಶಕರನ್ನು ಕಳೆದುಕೊಂಡರು. ಇದೀಗ ಉದ್ಯಮ ಕೂಡ ಗೊಂದಲ್ಲಿದೆ. ಬ್ಯಾನ್‌ ಮಾಡಬೇಕು ಎಂಬ ಮಾತು ಕೇಳಿ ಬರುತ್ತಿದೆ. ಯಾವ ಚೇಂಬರ್‌ ಏನು ಮಾಡ್ಲಿಕ್ಕೆ ಆಗತ್ತೆ? ಕಾನೂನು ಎಲ್ಲರಿಗೂ ಒಂದೇ. ಈಗ ದರ್ಶನ್‌ ಕಾನೂನು ಸುಳಿಯಲ್ಲಿ ಸಿಕ್ಕಾಕೊಂಡಿದ್ದಾರೆʼʼಎಂದರು.

ಇದನ್ನೂ ಓದಿ: Actor Darshan: ದರ್ಶನ್‌ ತುಂಬ ಮುಗ್ದ, ತಾಯಿ ಕಣ್ಣೀರು ಹಾಕೊಂಡು ಮಗನನ್ನು ಬೆಳೆಸಬೇಕು ಎಂದಿದ್ರು ಎಂದ ಲಹರಿ ವೇಲು!

ಬದುಕು ನಾಯಿ ಪಾಡು ಆಗಿದೆ

ʻʻಆಗಿನ ಕಾಲಕ್ಕೆ ದರ್ಶನ್‌ ಅವರು ನನ್ನ ಬದುಕು ನಾಯಿ ಪಾಡು ಆಗಿದೆ ಎಂದು ಹೇಳಿಕೊಂಡಿದ್ದರು. ಯಾರೋ ಅವಕಾಶ ಬಿಟ್ಟಿದ್ದು ಇವರಿಗೆ ಕೊಡ್ತಾ ಇದ್ದರು. ಇದೀಗ ಚಂದನವನದಲ್ಲಿ ಮೆರೆದು, ಇದೀಗ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಪ್ರಸ್ತುತ ದರ್ಶನ್‌ ಅವರದ್ದು ಈಗ ನಾಯಿ ಪಾಡೆ ಆಗಿದೆ. ಇಷ್ಟು ದೊಡ್ಡ ಅಭಿಮಾನಿಗಳು, ನೋಡುಗರನ್ನು ಇಟ್ಟುಕೊಂಡು ಈ ರೀತಿ ಮಾಡಬಾರದಿತ್ತುʼʼಎಂದರು.

ದರ್ಶನ್‌ ಈಗ ಪ್ರೊಡ್ಯೂಸರ್‌ ಕೂಡ!

ʻʻಇನ್ನು ದರ್ಶನ್‌ ಅಣ್ಣ ದಿನಕರ್‌ ಸ್ಕ್ರಿಪ್ಟ್‌ ಹಿಡದುಕೊಂಡು ಹಲವು ನಿರ್ದೇಶಕರ ಮನೆ ಬಾಗಲಿಗೆ ಹೋಗಿದ್ದ. ಆದರೆ ಯಾರೂ ಆ ಕಥೆಯನ್ನು ಇಷ್ಟ ಪಟ್ಟಿಲ್ಲ. ಚಾನ್ಸ್‌ ಯಾರೂ ದಿನಕರನಿಗೆ ಕೊಡಲೂ ಇಲ್ಲ. ಬಳಿಕ ದಿನಕರನೇ ನಿಂತು ಪ್ರೊಡ್ಯೂಸ್‌ ಮಾಡಿ ಸಿನಿಮಾ ಗೆದ್ದಿತ್ತು. ಅದುವೇ ಜೊತೆ ಜೊತೆಯಲಿ ಸಿನಿಮಾ. ಅದ್ಭುತ ಯಶಸ್ಸು ಪಡೆಯಿತು. 25 ದಿನ ಓಡಿತು. ಅಂತ ದೊಡ್ಡ ಸಿನಿಮಾ ಕೊಟ್ಟು ಕೂಡ ದಿನಕರ್‌ಗೆ ಅವಕಾಶ ಸಿಕ್ಕಿಲ್ಲ. ಅಲ್ಲಿಂದ ದರ್ಶನ್‌ ಅವರು ಅಲ್ಲಿಂದ ಪ್ರೊಡ್ಯೂಸರ್‌ ಆದರು. ದರ್ಶನ್‌ 10 ಸಿನಿಮಾ ಮಾಡಿದ್ರೂ 1 ಲಕ್ಷ ರೂ ಕೂಡ ಆಗಿರಲಿಲ್ಲ ಆಗ ಅವರಿಗಿದ್ದ ಸಂಭಾವನೆ. ಒಂದ ಸಲ ಸಿಕ್ಕಿದ್ದಾಗ ಈಗೆಲ್ಲ ಬಂದ ನಟರುಗಳು ಲಕ್ಷ ಲಕ್ಷ ರೂ. ಪಡೆಯುತ್ತಿದ್ದಾರೆ. ಆಗ 1 ಲಕ್ಷ ರೂ.ಗೂ ನಾನು ಪರದಾಡುತ್ತಿದ್ದೆ. ಆದರೆ ಈಗ ಡಿಮ್ಯಾಂಡ್‌ ಮಾಡ್ತಿದ್ದೇನೆ. ಕೊಡುವರು ಇದ್ದಾರೆ ಎಂದಿದ್ದರು ದರ್ಶನ್‌ʼʼ ಎಂದರು.

ಪೊಲೀಸರಿಂದ ಸಿದ್ಧತೆ

ದರ್ಶನ್ ಸೇರಿ 4 ಜನ ಬಂಧಿತ ಆರೋಪಿಗಳನ್ನು ಇಂದು ಕೋರ್ಟ್‌ಗೆ ಹಾಜರು ಪಡಿಸಲಿರುವ ಪೊಲೀಸರು ಅದಕ್ಕಾಗಿ ಸಿದ್ಧತೆ ಕೈಗೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಸಂಬಂಧ ಕಳೆದ 12 ದಿನಗಳಿಂದ ಎಲ್ಲ 17 ಆರೋಪಿಗಳ ವಿಚಾರಣೆ ನಡೆಸಿರುವ ಪೊಲೀಸರು ಈಗಾಗಲೇ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನಂತರ ಕೃತ್ಯಕ್ಕೆ ಸಂಬಂಧಿಸಿದ ಹಲವೆಡೆ ಮಹಜರು ಪ್ರಕ್ರಿಯೆ ನಡೆಸಿ, ಕೊಲೆಗೆ ಸಂಬಂಧಿಸಿದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನೂ ಸಂಗ್ರಹಿಸಿದ್ದಾರೆ.

ಕೊಲೆ ನಡೆದ ಆರ್.ಆರ್‌.ನಗರ ಶೆಡ್ ಬಳಿಯಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ, ಮೃತದೇಹ ಪತ್ತೆಯಾದ ಜಾಗ, ಆರೋಪಿಗಳು ಚಲನವಲನ ನಡೆಸಿದ್ದ ಜಾಗಗಳಲ್ಲಿನ ಸಾಕ್ಷ್ಯ ಕಲೆ ಹಾಕಿದ್ದಾರೆ. ಈಗಾಗಲೇ ಕೃತ್ಯಕ್ಕೆ ಬಳಸಿದ್ದ ವಸ್ತುಗಳು ಸೀಜ್ ಮಾಡಲಾಗಿದೆ. ಕೃತ್ಯ ನಡೆದ ದಿನ ಆರೋಪಿಗಳ ಸಂಪರ್ಕದಲ್ಲಿದ್ದ ನಟ ಚಿಕ್ಕಣ್ಣ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತಿತರರ ಹೇಳಿಕೆಗಳನ್ನೂ ದಾಖಲಿಸಲಾಗಿದೆ.

ಡಿ ಗ್ಯಾಂಗ್ ಕೊಲೆಯ ಆರೋಪ ಸಾಬೀತು ಪಡಿಸಲು ಪ್ರತಿಯೊಂದು ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಬಟ್ಟೆಗಳು, ರಕ್ತ ಮತ್ತು ಕೂದಲಿನ ಮಾದರಿ ಪಡೆದು ಎಫ್ಎಸ್ಎಲ್‌ಗೆ ರವಾನಿಸಿದ್ದಾರೆ. ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದ್ದು, ಮೊಬೈಲ್ ಡೇಟಾ ರಿಟ್ರೀವ್ ಮಾಡಿ ತನಿಖೆ ಕೈಗೊಳ್ಳಲಾಗಿದೆ. ತನಿಖೆ ವಿಚಾರವಾಗಿ ಖುದ್ದು ಕಮಿಷನರ್ ದಯಾನಂದ್ ನಿಗಾ ವಹಿಸಿದ್ದು, ಪ್ರತಿದಿನ ತನಿಖೆ ‌ವರದಿ ಪಡೆದು‌ ಚಾರ್ಜ್ ಶೀಟ್ ತಯಾರಿಕೆಗೆ ಸಿದ್ಧತೆ ನಡೆಸಿದ್ದಾರೆ. ದರ್ಶನ್‌ ಜೈಲಿಗೆ ಹೋಗುತ್ತಾರಾ ಎನ್ನುವ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

Exit mobile version