ಬೆಂಗಳೂರು: ಪಟ್ಟಣಗೆರೆ ಶೆಡ್‌ನಲ್ಲಿ (Pattanagere Shed) ನಡೆದ ರೇಣುಕಾ ಸ್ವಾಮಿ ಹತ್ಯೆಯ (Renuka Swamy Murder) ವಿವರಗಳು ಇನ್ನೂ ಒಂದೊಂದಾಗಿ ಹೊರಬೀಳುತ್ತಿವೆ. ಜತೆಗೆ ನಟ ದರ್ಶನ್ ಅವರು ಜೈಲಿಗೆ ಹೋಗುತ್ತಿದ್ದಂತೆ ತಾಯಿ, ತಮ್ಮನ ನೆನಪು ಮಾಡಿಕೊಂಡಿದ್ದರಂತೆ. ದರ್ಶನ್ ಜೈಲು ಸೇರಿ ವಾರ ಕಳೆಯುತ್ತ ಬಂದಿದೆ. ಜೈಲಲ್ಲಿ ಒಂಟಿಯಾಗಿರುವ ದರ್ಶನ್‌ಗೆ ತಾಯಿ ಮತ್ತು ತಮ್ಮನ ನೆನಪಾಗಿದ್ಯಂತೆ.
ವಾರದಲ್ಲಿ ಎರಡು ಬಾರಿ ದರ್ಶನ್ ಅವರನ್ನು ಮಾತನಾಡಿಸಬಹುದು. ಈಗಾಗಲೇ ದರ್ಶನ್ ಪತ್ನಿ ಮತ್ತು ಪುತ್ರ ದರ್ಶನ್ ಅವರನ್ನು ನೋಡಿಕೊಂಡು ಹೋಗಿದ್ದಾರೆ. ಇದಾದ ನಂತರ ದರ್ಶನ್ ಬೇರೆ ಯಾರನ್ನೂ ನೋಡಲು ಮನಸ್ಸು ಮಾಡ್ತಿಲ್ಲ. ಆದರೆ ತಾಯಿ,ತಮ್ಮ ಬಂದರೆ ಮಾತ್ರ ಅವಕಾಶ ನೀಡಿ ಎಂದು ಜೈಲು ಅಧಿಕಾರಿಗಳ ಬಳಿ ಕೇಳಿಕೊಂಡಿದ್ದಾರಂತೆ. ದರ್ಶನ್ ಈ ಪ್ರಕರಣಕ್ಕೂ ಮುನ್ನ ತಾಯಿ ಮತ್ತು ತಮ್ಮನಿಂದ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿತ್ತು.
ಪೊಲೀಸ್ ಕಸ್ಟಡಿಯಲ್ಲಿದ್ದಾಗ , ತಾಯಿ ಮೀನಾ ಆಗಲಿ, ತಮ್ಮ ದಿನಕರ್ ಆಗಲಿ ದರ್ಶನ್ ನೋಡಲು ಬಂದಿರಲಿಲ್ಲ. ಆ ಸಮಯದಲ್ಲಿ ಬೇಡ ಅಂತ ತಾಯಿ, ತಮ್ಮ ಸುಮ್ಮನಾಗಿದ್ರೋ ಏನೋ ಗೊತ್ತಿಲ್ಲ. ಆದರೆ ಈಗ ದರ್ಶನ್ ಅವರು ನ್ ತಾಯಿ ಕನವರಿಕೆ ಮಾಡ್ತಿದ್ದಾರಂತೆ. ಹೀಗಾಗಿ ತಾಯಿ ಮತ್ತು ತಮ್ಮನಿಗೆ ಮಾತ್ರ ಎಂಟ್ರಿ ಕೊಡಿ ಎಂದು ದರ್ಶನ್ ಮನವಿ ಮಾಡಿದ್ದಾರೆ.
Actor Darshan: ಒಂದಲ್ಲ, ಎರಡಲ್ಲ…. ಬರೋಬ್ಬರಿ 50 ನಿಮಿಷ ರೇಣುಕಾ ಸ್ವಾಮಿ ಮೇಲೆ ದರ್ಶನ್ ಕ್ರೌರ್ಯ!ಇದನ್ನೂ ಓದಿ:
ಪರಪ್ಪನ ಅಗ್ರಹಾರ ಜೈಲಿಗೆ ಸೋಮವಾರ (ಜೂನ್ 24) ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಕಪ್ಪು ಬಣ್ಣದ ಕಿಯಾ ಕಾರಿನಲ್ಲಿ ಆಗಮಿಸಿದ್ದರು. ಮೊದಲು ಜೈಲಿನ ಚೆಕ್ ಪೋಸ್ಟ್ ಸಮೀಪ ಕಾರು ನಿಲ್ಲಿಸಲಾಗಿತ್ತು. ಆಗ ಮಾಧ್ಯಮಗಳ ಕ್ಯಾಮೆರಾ ಕಂಡು ವಿಜಯಲಕ್ಷ್ಮಿ, ವಿನೀಶ್ ವಾಪಸ್ ತೆರಳಿದರು. ನಂತರ ಬೇರೊಂದು ಕಾರಿನಲ್ಲಿ ಜೈಲಿನ ಬಳಿ ಬಂದಿದ್ದರು. ಆಗ ಮಾಧ್ಯಮಗಳ ಕಣ್ತಪ್ಪಿಸಿ ಜೈಲಿನ ಒಳಗೆ ದರ್ಶನ್ ಪತ್ನಿ, ಪುತ್ರನನ್ನು ಪೊಲೀಸರು ಕರೆದೊಯ್ದಿದ್ದರು. ದರ್ಶನ್ ಭೇಟಿ ಬಳಿಕ ಇದೇ ಮೊದಲ ಬಾರಿಗೆ ವಿಜಯಲಕ್ಷ್ಮೀ ಅವರು ಪೋಸ್ಟ್ ಮಾಡಿದ್ದರು.
ದರ್ಶನ್ ಪತ್ನಿ, ಪುತ್ರ ಭೇಟಿ ಮಾಡಿ ಹೊರಟ ಬಳಿಕ, ನಟ ವಿನೋದ್ ಪ್ರಭಾಕರ್ ಅವರು ಸ್ನೇಹಿತರ ಜತೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ನಿರ್ಗಮಿಸಿದ್ದರು. ನಂತರ ಮಾತನಾಡಿದ ವಿನೋದ್ ಪ್ರಭಾಕರ್ ಅವರು, ಮೃತ ರೇಣುಕಾ ಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿ ಭಗವಂತ ನೀಡಲಿ. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದಿದ್ದರು.