ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ (Actor Darshan) ಅರೆಸ್ಟ್ ಆಗಿರುವುದು ಗೊತ್ತೇ ಇದೆ. ಇಂದು ದರ್ಶನ್ ಹಾಗೂ ಅವರ ಸಹಚರರ 14 ದಿನಗಳ ನ್ಯಾಯಾಂಗ ಬಂಧನ ಅವಧಿ ಪೂರ್ಣಗೊಳ್ಳಲಿದೆ. ಆದರೆ ಈ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ ಆಗುವ ಸಾಧ್ಯತೆ ಇದೆ. ಯಾಕೆಂದರೆ, ದರ್ಶನ್ಹಾಗೂ ಇತರ ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಪಟ್ಟಿಯನ್ನ ಪೊಲೀಸರು ಸಿದ್ಧ ಪಡಿಸಿದ್ದಾರೆ. ವತ್ತು ನ್ಯಾಯಾಲಯಕ್ಕೆ ರಿಮಾಂಡ್ ಅರ್ಜಿಯನ್ನು ಸಲ್ಲಿಸಲಿದ್ದಾರೆ.
ನಟ ದರ್ಶನ್ ಹಾಗೂ ಇತರರು ಜೂನ್ 11ರಂದು ಬಂಧನಕ್ಕೆ ಒಳಗಾದರು. ಬಂಧನದ ಬಳಿಕ ಒಂದೊಂದೇ ಸತ್ಯ ಹೊರ ಬರುತ್ತಿದೆ. ಇನ್ನೂ ಚಾರ್ಜ್ಶೀಟ್ ಸಲ್ಲಿಕೆ ಮಾಡಿಲ್ಲ. ಇದೇ ಕಾರಣ ಇಟ್ಟುಕೊಂಡು ದರ್ಶನ್ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಗೆ ಕೋರಲು ನಿರ್ಧರಿಸಲಾಗಿದೆ. ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕರೆ ಹೊರ ಬಂದು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಪೊಲೀಸರು ಕೋರ್ಟ್ ಎದುರು ಆತಂಕ ಹೊರಹಾಕಲಿದ್ದಾರೆ. ವಿದೇಶಕ್ಕೆ ತೆರಳುವ ಭಯವೂ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನೂ ಇವತ್ತು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ರನ್ನ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. 24 ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಮತ್ತೊಂದು ಕಡೆ ಜೈಲು ಊಟಕ್ಕೆ ಬೇಸತ್ತು, ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ದರ್ಶನ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಕೂಡ ಇಂದೇ ನಡೆಯಲಿದೆ.
ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ದೇಹ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯ ಪವಿತ್ರ ಗೌಡ ಆಪ್ತೆಯ ಪತಿ!
ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ದೇಹ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯ ಪವಿತ್ರ ಗೌಡ ಆಪ್ತೆಯ ಪತಿ!
ದರ್ಶನ್ ಬಂಧನವಾಗಿ 36 ದಿನಗಳಾಗಿವೆ. ಆದರೆ ಇಲ್ಲಿಯವರೆಗೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಆಗಲಿ ಎಂದು ದರ್ಶನ್ ಪರ ವಕೀಲರು ಕಾಯುತ್ತಿದ್ದಾರೆ.