Site icon Vistara News

Actor Darshan: ʻಡಿ ಗ್ಯಾಂಗ್’ ಟೈಟಲ್‌ಗೆ ಬೇಡಿಕೆ ; ನೋಂದಣಿಗೆ ಚೇಂಬರ್ ನಿರಾಕರಣೆ, ನಿರ್ಮಾಪಕರ ಬೇಸರ!

ಬೆಂಗಳೂರು: ದರ್ಶನ್ ಕೊಲೆ (Actor Darshan) ಆರೋಪ ಬೆನ್ನಲ್ಲೇ ʻಡಿ ಗ್ಯಾಂಗ್ʼ ಟೈಟಲ್ ಡಿಮ್ಯಾಂಡ್‌ ಕೂಡ ಹೆಚ್ಚಾಗಿದೆ. ಇದೀಗ ಇದೇ ಹೆಸರನ್ನು ಸಿನಿಮಾಕ್ಕಾಗಿ ರಿಜಿಸ್ಟರ್ ಮಾಡಿಸಲು ಮುಂದಾದ ಚಿತ್ರತಂಡಕ್ಕೆ ನಿರಾಸೆಯಾಗಿದೆ. ಚಿತ್ರತಂಡವೊಂದು ‘ಡಿ ಗ್ಯಾಂಗ್’ ಹೆಸರು ನೋಂದಣಿಗೆ ಫಿಲಂ ಚೇಂಬರ್​ಗೆ ಅರ್ಜಿ ಸಲ್ಲಿಸಿದೆ. ಆದರೆ ಆ ಹೆಸರನ್ನು ನೀಡಲು ಸಾಧ್ಯವಿಲ್ಲವೆಂದು ಚೇಂಬರ್ ಹೇಳಿದೆ.

ದಾವಣಗೆರೆಯ FM ಫಿಲ್ಮ್ಸ್ ಬ್ಯಾನರ್ ಅಡಿ ನಿರ್ದೇಶಕರು ʻಡಿ ಗ್ಯಾಂಗ್ʼ ಟೈಟಲ್ ನೋಂದಣಿ ಮಾಡಲು ಮುಂದಾಗಿದ್ದರು. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ನೋಂದಣಿಗೆ ಅವಕಾಶ ನೀಡಿಲ್ಲ. ಇದರಿಂದ ನಿರ್ದೇಶಕ ರಾಕಿ ಫೇಸ್ ಬುಕ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಿಎಂ ಫಿಲಮ್ಸ್​ ನಿರ್ಮಾಣ ಸಂಸ್ಥೆಯ ಮಂಜು ಎನ್ ನಾಯಕ್ ಎಂಬುವರು ‘ಡಿ ಗ್ಯಾಂಗ್’ ಹೆಸರಿನ ನೊಂದಣಿಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಹೆಸರನ್ನು ನೀಡಲು ಸಾಧ್ಯವಿಲ್ಲವೆಂದು ವಾಣಿಜ್ಯ ಮಂಡಳಿ ಹೇಳಿದೆ ಎಂದು ಅವರು ಫೇಸ್​ಬುಕ್​ ಪೋಸ್ಟ್ ಮೂಲಕ ತಿಳಿಸಿದ್ದಾರೆ. 

ʻʻಎರಡು ವರ್ಷಗಳಿಂದಲೂ ʻಡಿ ಗ್ಯಾಂಗ್ʼ ಶೀರ್ಷಿಕೆ ಮೇಲೆ ಕೆಲಸ ಮಾಡಿದ್ದೇವೆ. ಅದಕ್ಕೆ ಸಾಕ್ಷಿಯಾಗಿ ಯೂಟ್ಯೂಬ್‌ನಲ್ಲಿ ಹಾಡು ಕೂಡ ಇದೆ. ಈಗ ನಡೆಯುತ್ತಿರುವ ದರ್ಶನ್ ಪ್ರಕರಣಕ್ಕೂ ನಮ್ಮ ಟೈಟಲ್‌ಗೂ ಸಂಬಂಧ ಇಲ್ಲ. ಆದರೂ ವಾಣಿಜ್ಯ ಮಂಡಳಿ ಅವರು ನೋಂದಣಿ ಮಾಡಿಕೊಡಲಿಲ್ಲ.ಮುಂದೆ ದೊಡ್ಡ ನಿರ್ಮಾಪಕರು ಅಥವಾ ದೊಡ್ಡ ನಿರ್ದೇಶಕರಿಗೆ ಟೈಟಲ್ ಕೊಟ್ಟರೆ ಏನ್ ಕತೆ? ಆಗ ಮಾತನಾಡಲು ಸಾಕ್ಷಿ ಬೇಕು ಎಂದು ಫೇಸ್ ಬುಕ್‌ನಲ್ಲು ಹಾಕಿದ್ದೇನೆʼʼ ಎಂದು  ಎಂದು ‘ಡಿ ಗ್ಯಾಂಗ್’ ಸಿನಿಮಾವನ್ನು ನಿರ್ದೇಶಿಸಲು ಬಯಸಿರುವ ರಾಖಿ ಸೊಮ್ಲಿ ಎಂಬುವರು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Darshan: ʻಡೆವಿಲ್ ಗ್ಯಾಂಗ್‌ʼಗೆ ಜೀವಾವಧಿ ಶಿಕ್ಷೆ ಆಗತ್ತಾ? ಕಾನೂನು ತಜ್ಞರು ಹೇಳೋದೇನು?

ಚಿತ್ರತಂಡ ಹೇಳಿಕೊಂಡಿರುವಂತೆ ‘ಡಿ ಗ್ಯಾಂಗ್’ ಹೆಸರನ್ನಿಟ್ಟುಕೊಂಡೇ ಅವರು ಕತೆ, ಚಿತ್ರಕತೆ ರಚಿಸಿಕೊಂಡಿದ್ದಾರೆ. ಅಲ್ಲದೆ ಅವರು ಹೇಳಿಕೊಂಡಿರುವಂತೆ, ದರ್ಶನ್ ಕುರಿತು ಈಗ ನಡೆಯುತ್ತಿರುವ ಘಟನೆಗಳಿಗೂ ಅವರ ಸಿನಿಮಾಕ್ಕೂ ಸಂಬಂಧವಿಲ್ಲ. ಪ್ರಕರಣದ ವಿಚಾರಣೆ ನಡೆಯುತ್ತಿರುವ ಕಾರಣ ಟೈಟಲ್ ನೀಡಲಾಗುವುದಿಲ್ಲ ಎಂದು ಹೇಳಿದ್ದಾರಂತೆ ಅಧ್ಯಕ್ಷರು ಎಂದು ವರದಿಯಾಗಿದೆ .

Exit mobile version