ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನ ಕಳೆದಂತೆ ಒಂದಲ್ಲ ಒಂದು ಅಪ್‌ಡೇಟ್ ಬರುತ್ತಲೇ ಇದೆ. ತನಿಖೆ ವೇಳೆ ಒಂದೊಂದೇ (Actor Darshan) ವಿಚಾರಗಳು ಬಯಲಾಗುತ್ತಿವೆ. ದರ್ಶನ್ ತಪ್ಪಿಸಿಕೊಳ್ಳುವುದಕ್ಕೆ ಎಷ್ಟೇ ಪ್ಲಾನ್ ಮಾಡಿದ್ದರೂ ಈ ಬಗ್ಗೆ ಪೊಲೀಸರು ಗೊತ್ತಾಗುತ್ತಿತ್ತು .ಪೊಲೀಸರಿಗೆ ಇಡೀ ಈ ಕೇಸ್ ಬಗ್ಗೆ ಕ್ಲ್ಯೂ ಕೊಟ್ಟಿದ್ದೇ RED ಕಲರ್. ಹಾಗಾದ್ರೆ ಏನದು ರೆಡ್ ಕಲರ್ ಕ್ಲೂ? ಎಂಬುದು ತಿಳಿಯಲು ಮುಂದೆ ಓದಿ.
ಮೂವರು ಆರೋಪಿಗಳು ಸರೆಂಡರ್ ಆಗುವ ಮುಂಚೆಯೇ ಪೊಲೀಸರು ರೆಡ್ ಕಲರ್ ಜಾಡು ಹಿಡಿದಿದ್ದರು. ಪಟ್ಟಣಗೆರೆ ಶೆಡ್, ರೆಡ್ ಕಾರು, ಟವರ್ ಡಂಪ್ ಇವುಗಳು ದರ್ಶನ್ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದ್ದವು. ಆರೋಪಿಗಳು ಸರೆಂಡರ್ ಆಗಿದ್ದರೂ ಅದಕ್ಕೂ ಮುಂಚೆಯೇ ದರ್ಶನ್ ರೆಡ್ ಕಾರ್ ರಹಸ್ಯ ಗೊತ್ತಾಗಿತ್ತು. ಆರೋಪಿಗಳು ಅರೆಸ್ಟ್ ಆಗಿದ್ದು ಜೂನ್ 10ನೇ ತಾರೀಖು.. ಆದ್ರೆ ಅದಕ್ಕೂ ಮುಂಚೆಯೇ ಗೊತ್ತಾಗಿತ್ತು ಪೊಲೀಸರಿಗೆ ಕೇಸ್ ನ ಕ್ಲೂ.
ಪ್ರಕರಣ ದಾಖಲಾದ ಬೆನ್ನಲ್ಲೇ ಇಡೀ ಕೇಸ್‌ವನ್ನು ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಬೆನ್ನಟ್ಟಿದ್ದರು. ಶವ ಎಸೆದ ಜಾಗವನ್ನ ಸಂಪೂರ್ಣವಾಗಿ ಗಮನ ಕೊಟ್ಟಿದ್ದರು. ಸಿಸಿಟಿವಿಯಲ್ಲಿ ಅನುಮಾಸ್ಪದ ಓಡಾಟ ನೋಡಿದಾಗ ರೆಡ್ ಕಲರ್ ಕಾರು ಮೇಲೆ ಡೌಟ್ ಆಗಿತ್ತು. ಆ ಕಾರು ಫಾಲೋ ಮಾಡಿದಾಗ ಸೀದಾ ಕನೆಕ್ಟ್ ಆಗಿದ್ದು ಪಟ್ಟಣಗೆರೆ ಶೆಡ್. ಅಲ್ಲಿಂದ ಇಡೀ ಆರ್ ಆರ್ ನಗರ ಗ್ಯಾಂಗ್‌ನ ಸುಳಿವು ಸಿಕ್ಕಿದೆ.
ಇದನ್ನೂ ಓದಿ: Actor Darshan: ಇವತ್ತಾದ್ರೂ ದರ್ಶನ್‌ಗೆ ಸಿಗುತ್ತಾ ಮನೆ ಊಟಕ್ಕೆ ಅನುಮತಿ?
ಮೊದಲು ಸಿಕ್ಕಿದ್ದು ವಿನಯ್. ವಿನಯ್ ನಂತರ ಗೊತ್ತಾಗಿತ್ತು ಇಡೀ ಗ್ಯಾಂಗ್‌ನ ರಹಸ್ಯ. ವಿನಯ್ ಅವರನ್ನು ಹಿಡಿಯಲು ಇನ್ಸ್ಪೆಕ್ಟರ್ ಗಿರೀಶ್ ಎಲ್ಲಾ ರೀತಿ ಪ್ಲ್ಯಾನ್ ಹಾಕಿದ್ದರು. ಹತ್ತನೇ ತಾರೀಖು ಅರೆಸ್ಟ್ ಮಾಡುವುದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಆದ್ರೆ ಅಷ್ಟರಲ್ಲೇ ಮೂವರು ಬಂದು ಸರೆಂಡರ್ ಆಗಿದ್ದರು. ಕಾರ್ತಿಕ್, ರಾಘವೇಂದ್ರ, ನಿಖಿಲ್ ಸರೆಂಡರ್ ಆದವರು. ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ನಂತರ ಅವರಿಂದ ವಿನಯ್ ಬಗ್ಗೆ ಬಾಯ್ಬಿಡಿಸಿದಾಗ ಇಡೀ ಕೇಸ್ ಬೆಳಕಿಗೆ ಬಂದಿದೆ.
ಇವತ್ತಾದ್ರೂ ದರ್ಶನ್‌ಗೆ ಸಿಗುತ್ತಾ ಮನೆ ಊಟಕ್ಕೆ ಅನುಮತಿ?
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್‌ಗೆ (Actor Darshan) ಇಂದು (ಜುಲೈ 22) ಮತ್ತೊಂದು ಮಹತ್ವದ ದಿನ ಆಗಲಿದೆ. ಮನೆ ಊಟಕ್ಕೆ ಅವಕಾಶ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಹೀಗಾಗಿ ಇವತ್ತಾದರೂ ನಟನಿಗೆ ಮನೆ ಊಟಕ್ಕೆ ಅನುಮತಿ ಸಿಗುತ್ತಾ ಎನ್ನುವ ಪ್ರಶ್ನೆ ಮೂಡಿದೆ.
ದರ್ಶನ್‌ಗೆ ಮನೆ ಊಟದ ವಿಚಾರದ ಬಗ್ಗೆ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಜೈಲೂಟದಿಂದಾಗಿ ಫುಡ್ ಪಾಯಿಸನಿಂಗ್ ಹಾಗೂ ಅತಿಸಾರ ಆಗುತ್ತಿದೆ. ಹೀಗಾಗಿ ಮನೆಯೂಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಮನವಿ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.
ಇತ್ತ ಈ ವಿಚಾರಕ್ಕೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿಗೂ ನ್ಯಾಯಾಧೀಶರು ಸೂಚಿಸಿದ್ದರು. ದರ್ಶನ್‌ಗೆ ಮನೆ ಊಟಕ್ಕೆ ಅವಕಾಶ ನೀಡಬೇಡಿ ಅಂತಲೂ ಇಂದು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ದರ್ಶನ್‌ಗೆ ಮನೆ ಊಟಕ್ಕೆ ಅನುಮತಿ ಸಿಗುತ್ತಾ ಎನ್ನುವ ಪ್ರಶ್ನೆಗೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.