Site icon Vistara News

Actor Darshan: ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು ಎಂದು ದರ್ಶನ್‌ಗೆ ತಿರುಗೇಟು ಕೊಟ್ಟ ಉಮಾಪತಿ!

Actor Darshan Renuka Swamy murder case umapathy counter

ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ (Renuka Swamy murder case) ಕೇಸ್‌ನ ಆರೋಪಿ, ನಟ ದರ್ಶನ್‌ (Actor Darshan) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸ್ವ ಇಚ್ಛೆ ಹೇಳಿಕೆ ನೀಡಿದ್ದಾನೆ. ಪ್ರಕರಣ ಮುಚ್ಚಿಹಾಕಲು 30 ಲಕ್ಷ ರೂ. ನೀಡಿರುವುದಾಗಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಅವರು ದರ್ಶನ್‌ ಕುರಿತಾಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು

ದರ್ಶನ್‌ ಅವರು ಸ್ನೇಹಿತರಾಗಿಗಿದ್ದಾಗ ಅವರು ನನ್ನ ಜತೆ ಚೆನ್ನಾಗಿಯೇ ಇದ್ದರು. ಅದೇನೋ ಅಂತರಲ್ಲ  6 ಗಂಟೆ ನಂತರ ಬ್ಯಾಡ್ ಮ್ಯಾನ್, 6ರ ಮುಂಚೆ ಗುಡ್ ಮ್ಯಾನ್ ಅಂತ. ಅದು ಅವರವರ ಹವ್ಯಾಸ. ನಮ್ಮ ಚಟ, ಚಟ್ಟ ಹತ್ತಿಸುವರೆಗೂ ಇರಬಾರದು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ. ನಾನು ನೋಡಿದ ಹಾಗೆ ದರ್ಶನ್ ಒಳ್ಳೆಯ ಮನುಷ್ಯನೇ. ನನಗಂತೂ ಅವರು ಅನ್ಯಾಯ ಮಾಡಿಲ್ಲ. ಆದರೆ ಆ ಮೈಸೂರು ಕೇಸ್ ನಂತರ ಅವರ ನಡವಳಿಕೆ ಬದಲಾಯ್ತು. ಕಾಟೇರ ಟೈಟಲ್ ಅವರೇ ಕೊಟ್ಟಿರಬಹುದು. ಆದರೆ ಅದು ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದ್ದು, ಅದಕ್ಕೆ ದುಡ್ಡು ಕೊಟ್ಟಿದ್ದು ನಾನೇʼʼ ಎಂದಿದ್ದಾರೆ.

ಕೊಲೆ ಕೇಸ್‌

ʻʻಯಾರೇ ಈ ಕೃತ್ಯ ಮಾಡಿದ್ದರೂ ಗಲ್ಲಿಗೇರಿಸಬೇಕು. ತಪ್ಪು ಎಲ್ಲರೂ ಮಾಡ್ತಾರೆ. ಯಾರಿಗೋ ತೊಂದರೆ ಕೊಟ್ಟು ಬದುಕ್ತೀವಿ ಎನ್ನುವುದು ತಪ್ಪು. ಪಾಪ ಪ್ರಜ್ಞೆ ಕಾಡುತ್ತ ಇರುತ್ತೆ. . ದರ್ಶನ್ ಕುಂತ್ರೆ ಜುಟ್ಟು, ನಿಂತರೆ ಕಾಲು ಇದು ನನ್ನ ಅನುಭವ ಎಂದಿದ್ದಾರೆ. ಇನ್ನಾದರೂ ಅವರು ಸುಧಾರಿಸಿಕೊಳ್ಳಬೇಕು. ಈ ಪ್ರಕರಣದಲ್ಲಿ ಲಿಂಕ್ ಇರೋದು ಕೆಲವರಿಗೆ ಮಾತ್ರ. ಇನ್ನೂ ಉಳಿದವರು ಅಮಾಯಕರು ದರ್ಶನ್ ಮೇಲಿನ ಪ್ರೀತಿಗೆ ಬಂದಿದ್ದಾರೆ ಅಷ್ಟೇ. ಇವಾಗ ಅವರು ಜೈಲಿಗೆ ಹೋಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿಯನ್ನು ಪ್ರೀತಿಸಿ ಬೇಡ ಹೇಳೋದಿಲ್ಲ. ಆದರೆ ನಿಮ್ಮ ಕುಟುಂಬನ ಬೀದಿಗೆ ಬಿಟ್ಟು ಪೋಷಕರನ್ನು ಬಲಿ ಕೊಟ್ಟು ಪ್ರೀತಿಸಲು ಹೋಗಬೇಡಿʼʼಎಂದರು.

ಇದನ್ನೂ ಓದಿ: Actor Darshan: `ನಾನೇ 30 ಲಕ್ಷ ರೂ. ಕೊಟ್ಟೆ….’ ಕೊಲೆ ಬಗ್ಗೆ ಸ್ವ ಇಚ್ಛೆ ಹೇಳಿಕೆ ನೀಡಿದ ದರ್ಶನ್‌

ʻಕಾಟೇರʼ ಸಿನಿಮಾದ 50ನೇ ದಿನದ ಸಂಭ್ರಮಾಚರಣೆ ಸಂದರ್ಭದಲ್ಲಿ ದರ್ಶನ್‌ (Actor Darshan) ʻರಾಬರ್ಟ್ʼ ಸಿನಿಮಾದ ನಿರ್ಮಾಪಕ ಉಮಾಪತಿಗೆ ‘ತಗಡು’ ಇನ್ನಿತರೆ ಕಠು ಪದಗಳನ್ನು ಬಳಸಿ ನಿಂದಿಸಿದ್ದರು. ಇದಾದ ಬಳಿಕ ನಿರ್ಮಾಪಕ ಉಮಾಪತಿ ಕೂಡ ಬೇಸರದಲ್ಲಿಯೇ ಪ್ರತಿಕ್ರಿಯೆ ನೀಡಿದ್ದರು. ಅಂದು ʻತಗಡುʼ ಅಂದಿದ್ದ ದರ್ಶನ್‌ಗೆ ಇಂದು ಉಮಾಪತಿ ಪರೋಕ್ಷವಾಗಿ ಪೋಸ್ಟ್‌ ಮೂಲಕ ತಿರುಗೇಟು ಕೊಟ್ಟಿದ್ದರು. “ತಾಳ್ಮೆ ಕೆಲವೊಮ್ಮೆ ಶಕ್ತಿ” ಎಂದು ವಿಡಿಯೊ ಪೋಸ್ಟ್ ಮಾಡಿದ್ದರು.

ದರ್ಶನ್‌ ಉಮಾಪತಿಗೆ ವಾರ್ನಿಂಗ್‌ ನೀಡಿದ್ದೇನು?

ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್‌ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ದರ್ಶನ್‌ ಈ ಬಗ್ಗೆ ಮಾತನಾಡಿ ʻʻತಗಡೇ, ರಾಬರ್ಟ್‌ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್‌ ಬಿಟ್ಟೆ ನೀನು?ʼʼ ಎಂದು ವೇದಿಕೆ ಮೇಲೆಯೇ ಉಮಾಪತಿಗೆ ಪ್ರಶ್ನೆ ಮಾಡಿದ್ದರು. ʻಈ ಕಥೆ ನಾನು ಮಾಡಿಸಿದೆ, ಕಥೆ ನಾನು ಕೊಟ್ಟೆ ಎಂದು ಎಂದು ಹೇಳಿಕೊಂಡು ಬಂದಿದ್ದೆಯಲ್ವಾ?ಇಂಥ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು. ಅಯ್ಯೋ ತಗಡೇ… ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಎಂದು ಉಮಾಪತಿಗೆ ನೇರವಾಗಿ ದರ್ಶನ್‌ ಖಡಕ್ ವಾರ್ನಿಂಗ್ ಕೊಟ್ಟಿದ್ದರು.

Exit mobile version