ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಸೇರಿ ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದಕ್ಕೂ ಮುಂಚೆ ಪವಿತ್ರಾ ಗೌಡ ಪರಪ್ಪನ ಅಗ್ರಹಾರಕ್ಕೆ ಅಂದರ್ ಆದರು. ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ , ಕಣ್ಣೀರು ಹಾಕುತ್ತ ಮೌನಕ್ಕೆ ಜಾರಿದ್ದಾರೆ ಎನ್ನಲಾಗಿದೆ. ನನ್ನಿಂದಲೇ ನಟ ದರ್ಶನ್‌ಗೆ ಈ ರೀತಿ ಸ್ಥಿತಿ ಬಂತು ಎಂದು ಮಹಿಳಾ ವಿಭಾಗದ ಡಿ ಬ್ಯಾರಕ್ ನಲ್ಲಿ ಪವಿತ್ರಾ ಕಣ್ಣೀರಿಟ್ಟು ಮೌನಕ್ಕೆ ಜಾರಿದ್ದಾರೆ ಎನ್ನಲಾಗಿದೆ. ಇತ್ತ ದರ್ಶನ್ ಕೂಡ ಜೈಲಿನ ಮೇನು ಪ್ರಕಾರ ಪಲಾವ್ ಸೇವನೆ ಮಾಡಿ, ಬೀಸಿ ನೀರು ಕುಡಿದಿದ್ದಾರೆ ಎನ್ನಲಾಗಿದೆ.
ಪವಿತ್ರಾ ಗೌಡ ಜೈಲಿನಲ್ಲಿ ಸರಿಯಾಗಿ ಊಟ ನಿದ್ರೆ ಮಾಡದೇ ಫುಲ್ ಸೈಲೆಂಟ್ ಆಗಿದ್ದಾರೆ. ಹೈಫೈ ಜೀವನ ನಡೆಸಿದ್ದ ಪವಿತ್ರಾ ಗೌಡ ಸಹ ಬಂಧಿಗಳ ಜತೆ ಜೈಲುವಾಸ ಅನುಭವಿಸುತ್ತಿದ್ದಾರೆ. ಇತ್ತ ದರ್ಶನ್ ಕೂಡ ಸಾಮಾನ್ಯ ಕೈದಿಯಂತೆ ಜೈಲುವಾಸ ಅನುಭವಿಸುತ್ತಿದ್ದಾರೆ. ದರ್ಶನ್ ಇರುವ ವಿಶೇಷ ಬ್ಯಾರಕ್‌ನಲ್ಲಿ ಅಟ್ಯಾಚ್ಡ್ ಬಾತ್ ರೂಮ್ ಇದೆ. ಬೆಳಗ್ಗೆ ದರ್ಶನ್ ಪಲಾವ್ ಸೇವಿಸಿದ್ದಾರೆ. ಕುಡಿಯಲು ಬಿಸಿ ನೀರು ಕೇಳಿ ಪಡೆದಿದ್ದಾರೆ.
ಇದನ್ನೂ ಓದಿ: CNG Price: ಸಿಎನ್‌ಜಿ ದರ ಹೆಚ್ಚಳ; ಬೆಂಗಳೂರಿನಲ್ಲಿ ಏರಿಕೆ ಇಲ್ಲ
ಹೇಗಿದೆ ಕೊಠಡಿ?
ಜೈಲಿನ ಮೂರನೇ ಸೆಕ್ಟರ್ ಭಾಗದಲ್ಲಿ ಇರುವ ಭದ್ರತಾ ವಿಭಾಗದಲ್ಲಿ ಒಂದು ಕೊಠಡಿ ದರ್ಶನ್‌ಗೆ ನೀಡಲಾಗಿದೆ. ಇಲ್ಲಿ ಹೊರಗಿನ ಕೈದಿಗಳಿಗೆ ಬರಲು ಅವಕಾಶ ಇಲ್ಲ. ಭದ್ರತಾ ವಿಭಾಗದ ಸಿಬ್ಬಂದಿ ಹಾಗೂ ಕೈದಿಗಳಿಗೆ ಅಷ್ಟೇ ಅವಕಾಶ ನೀಡಲಾಗಿದೆ. ದರ್ಶನ್ ಹಾಗೂ ವಿನಯ್ ಒಂದೇ ಕೊಠಡಿಯಲ್ಲಿ ಇದ್ದಾರೆ. ಪ್ರದೂಷ್ ಹಾಗೂ ಧನರಾಜ್ ಮತ್ತೊಂದು ಕೊಠಡಿಯಲ್ಲಿ ಸೆರೆವಾಸದಲ್ಲಿದ್ದಾರೆ. ಕೊಠಡಿಯ ಒಳಗೆ ಅಟ್ಯಾಚ್ ಬಾತ್ ರೂಮ್ ಕೂಡ ಇದೆ. ಮಲಗಲು ಚಾಪೆ ಹಾಗೂ ಬೆಡ್ ಶೀಟ್ ನೀಡಲಾಗಿದೆ. ದರ್ಶನ್ ಇರುವ ಕೊಠಡಿಯಲ್ಲಿ ಯಾವುದೇ ಟಿವಿ ವ್ಯವಸ್ಥೆ .ಇಲ್ಲ. ಕೊಠಡಿಯ ಒಳಗೆ ಬೇರೆ ಯಾವುದೇ ವ್ಯವಸ್ಥೆ ಇಲ್ಲ ಯಾರಾದರೂ ಭೇಟಿಗೆ ಬಂದರೆ ಅವರನ್ನು ಸಿಬ್ಬಂದಿ ಕರೆದೊಯ್ದು ಭೇಟಿ ಮಾಡಿಸುತ್ತಾರೆ. ಭದ್ರತಾ ವಿಭಾಗದ ಸುತ್ತಮುತ್ತ ಯಾವಾಗಲೂ ಪೊಲೀಸ್ ಕಣ್ಗಾವಲು ಇರುತ್ತದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಸೇರಿ ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹನ್ನೆರಡು ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನಟ ದರ್ಶನ್, ವಿನಯ್, ಪ್ರದೋಶ್ ಮತ್ತು ಧನರಾಜ್‌ನನ್ನು 24ನೇ ಎಸಿಎಂಎಂ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ. ಇದರಿಂದ 13 ವರ್ಷಗಳ ನಂತರ ನಟ ದರ್ಶನ್ ಮತ್ತೆ ಜೈಲು ಸೇರುವಂತಾಗಿದೆ.