ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ (Actor Darshan) ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ. ದರ್ಶನ್ ಫ್ಯಾನ್ಸ್ ಜೈಲಿನ ಎದುರು ಸೇರುತ್ತಿದ್ದಾರೆ. ದರ್ಶನ್ ಪರ ಘೋಷಣೆ ಕೂಗುತ್ತಿದ್ದಾರೆ.ಹೀಗಾಗಿ ದರ್ಶನ್ ಅವರೇ ಈಗ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ್ದಾರೆ. ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.
ದರ್ಶನ್ ಹೇಳಿದ್ದು ಹೀಗೆ ʻʻಅಭಿಮಾನಿಗಳು ಯಾರು ಕೂಡ ಜೈಲಿನ ಬಳಿ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು. ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ಹೋಗುವುದು. ಅದರಲ್ಲೂ ನಿನ್ನೆ ವಿಶೇಷ ಚೇತನ ಯುವತಿ ಸೌಮ್ಯ ಭೇಟಿಗೆ ಆಗಮಿಸಿದ್ದು ಕೂಡ ಬೇಸರ ತಂದಿದೆʼʼಎಂದು ಸಂದೇಶ ರವಾನಿಸಿದ್ದಾರೆ.
ಇತ್ತೀಚೆಗೆ ಸೌಮ್ಯ ಹೆಸರಿನ ವಿಶೇಷ ಚೇತನ ಯುವತಿ ದರ್ಶನ್ ಭೇಟಿಗೆ ಬಂದಿದ್ದರು. ಜೈಲಿನ ಬಳಿ ಬಂದು ದರ್ಶನ್ ಭೇಟಿಗೆ ಹಠ ಮಾಡಿದ್ದರು. ಇದನ್ನು ಕೇಳಿ ದರ್ಶನ್ ಬೇಸರಗೊಂಡಿದ್ದಾರೆ. ಅನ್ನ ಆಹಾರ ಸೇವಿಸದೇ ಹಠ ಮಾಡಿದ್ದರು ಸೌಮ್ಯ. ನಟ ದರ್ಶನ್ ಕೊಡಿಸಿದ್ದ ಆಟೋದಲ್ಲಿ ಪೋಷಕರ ಜತೆ ಸೌಮ್ಯ ಆಗಮಿಸಿದ್ದರು. ಸೌಮ್ಯ ಜೈಲಿನ ಬಳಿ ಆಗಮಿಸಿದ್ದ ವಿಚಾರ ತಿಳಿದು ದರ್ಶನ್ ಬೇಸರಗೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸೂರ್ಯಕಾಂತ್ ಎಂಬ ವಿಶೇಷ ಚೇತನ ಕೂಡ ಆಗಮಿಸಿದ್ದ.ತ್ರಿ ವೀಲರ್ ಬೈಕ್‌ನಲ್ಲಿ ವಿಶೇಷ ಚೇತನ ಆಗಮಿಸಿದ್ದ . ಈ ಎಲ್ಲಾ ವಿಚಾರ ತಿಳಿದು ಅಭಿಮಾನಿಗಳ ಬಳಿ ದರ್ಶನ್ ಈ ರೀತಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Actor Darshan: ದರ್ಶನ್ ಅಣ್ಣ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ ಎಂದ ಟಾಲಿವುಡ್ ಸ್ಟಾರ್ ನಾಗ ಶೌರ್ಯ!
ಯುವತಿ ಪೋಷಣೆಗೆ ಆಟೋ ಕೊಡಿಸಿದ್ದ ದರ್ಶನ್
2016 ರಲ್ಲಿ ಈ ಬಡ ಕುಟುಂಬಕ್ಕೆ ನಟ ದರ್ಶನ್ ಆಟೋವೊಂದನ್ನು ಕೊಡಿಸಿದ್ದರು. ಲಕ್ಷ್ಮೀ ಹಾಗೂ ರಂಗಸ್ವಾಮಿ ದಂಪತಿಯ ಪುತ್ರಿ ಸೌಮ್ಯಳನ್ನು ಪೋಷಣೆಗಾಗಿ ನಟ ದರ್ಶನ್ ಖುದ್ದು ಆಟೋ ಕೊಡಿಸಿದ್ದರು. ಹೀಗಾಗಿ ಇದೇ ಆಟೋದಲ್ಲಿ ಜೈಲಿಗೆ ಬಂದು ದರ್ಶನ್ ಭೇಟಿಗಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಇಂದು ದರ್ಶನ್ ಭೇಟಿಗೆ ಅವರ ಕುಟುಂಬದವರು ಬರುತ್ತಿದ್ದು, ವಿಶೇಷ ಚೇತನ ಯುವತಿ ಭೇಟಿಗೆ ಅವಕಾಶವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನ ಸೆರೆವಾಸ ಏಳನೇ ದಿನಕ್ಕೆ ಕಾಲಿಟ್ಟಿದೆ. ರಾತ್ರಿ ಮುದ್ದೆ, ಅನ್ನ, ಸಾಂಬಾರ್, ಚಪಾತಿ ಮತ್ತು ಮಜ್ಜಿಗೆ ಕುಡಿದು ದರ್ಶನ್ ತಡವಾಗಿ ನಿದ್ರೆಗೆ ಜಾರಿದರು. ಮುಂಜಾನೆ 6 ಗಂಟೆ ಸುಮಾರಿಗೆ ಎಚ್ಚರಗೊಂಡು ಎಂದಿನಂತೆ ಬಿಸಿನೀರು ಸೇವಿಸಿದ್ದಾರೆ ದರ್ಶನ್. ಕೆಲಹೊತ್ತು ಕೊಠಡಿಯಲ್ಲಿ ವಾಕಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ ಗ್ಯಾಂಗ್‌ನ ನಾಲ್ವರು ತುಮಕೂರು ಜೈಲಿಗೆ ಶಿಫ್ಟ್
ತುಮಕೂರು: ನಟ ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renuka Swamy Murder) ನಾಲ್ವರು ಆರೋಪಿಗಳನ್ನು ತುಮಕೂರಿನ ಜೈಲಿಗೆ ಪೊಲೀಸರು ಕರೆತಂದಿದ್ದಾರೆ. ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.