Site icon Vistara News

Actor Darshan: ದರ್ಶನ್‌ ಅತ್ಯಂತ ಸರಳ, ದೇವತಾ ಮನುಷ್ಯ; ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದ ಖ್ಯಾತ ನಟಿ!  

Actor Darshan very simple person Yamuna Srinidhi

ಬೆಂಗಳೂರು:  ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಬಂಧಿತನಾಗಿರುವ ನಟ ದರ್ಶನ್‌ಗೆ (Actor Darshan) ಮತ್ತೆ ಪರಪ್ಪನ ಅಗ್ರಹಾರವೇ ಗತಿಯಾಗಿದೆ. ನಟ ದರ್ಶನ್‌ ಸೇರಿ ಹಲವು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18ರವರೆಗೆ ವಿಸ್ತರಣೆ ಮಾಡಲಾಗಿದೆ. ಬೆಂಗಳೂರಿನಲ್ಲಿರುವ ಆರ್ಥಿಕ ಅಪರಾಧಗಳ ಕೋರ್ಟ್‌ ನ್ಯಾಯಾಧೀಶರು ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.  ದರ್ಶನ್ ಪ್ರಕರಣದ ಬಗ್ಗೆ ಅವರ ಜತೆ ನಟಿಸಿರೋ ಯಮುನಾ ಶ್ರೀನಿಧಿ ವಿಸ್ತಾರ ಜತೆ ಮಾತನಾಡಿದ್ದಾರೆ. ದರ್ಶನ್‌ ಅಭಿಮಾನಿಗಳಿಗೆ ತೀರ್ಪು ಬರುವವರೆಗೆ ತಾಳ್ಮೆಯಿಂದರಲು ಮನವಿ ಮಾಡಿದ್ದಾರೆ.

ದರ್ಶನ್‌ ಅಭಿನಯದ ತಾರಕ್‌ ಸಿನಿಮಾದಲ್ಲಿ ಯಮುನಾ ಶ್ರೀನಿಧಿ ಅವರು ನಟಿಸಿದ್ದರು. ಇದೀಗ ವಿಸ್ತಾರ ಜತೆ ದರ್ಶನ್‌ ಕುರಿತಾಗಿ ಮಾತನಾಡಿದ್ದು ಹೀಗೆ.

ʻʻಆರೋಪಿ ಸ್ಥಾನದಲ್ಲಿ ಯಾರ ಬೇಕಾದರೂ ಇರಬಹುದು. ನ್ಯಾಯಾಂಗ ಇದೆ..ಪೊಲೀಸ್‌ ಇದ್ದಾರೆ. ಅವರ ಕೆಲಸಗಳ ಬಗ್ಗೆ ಮಾತನಾಡುವಷ್ಟು ಜ್ಞಾನ ನನಗೆ ಖಂಡಿತವಾಗಲೂ ಇಲ್ಲ. ನಾವು ಏನಿದ್ರೂ ಅವರ ತೀರ್ಪು ಬಂದಾಗ ಏನು ಎಂದು ಕಾಯುತ್ತ ಇರುವ ಸಾಮಾನ್ಯ ಪ್ರಜೆಗಳು. ನಾನು ನಂಬಿರುವುದು ಉಹಾ ಪೋಹಗಳು. ತಾರಕ್‌ ಸಿನಿಮಾ ವೇಳೆ ನಾನು ದರ್ಶನ್‌ ಅವರ ಜತೆ ಕೆಲಸ ಮಾಡಿದ್ದೆ. ದೇವತಾ ಮನುಷ್ಯ ಅನಿಸಿತ್ತು. ಅವರ ಸರಳತೆ , ಟ್ರೀಟ್‌ ಮಾಡೋದು ಖುಷಿ ಕೊಡತ್ತೆ. ದರ್ಶನ್‌ ಅವರು ಮಗ ಎನ್ನುವ ಪ್ರೀತಿ ಕೊಟ್ಟಿದ್ದಾರೆ. ದರ್ಶನ್‌ ಪ್ರಕರಣಕ್ಕೂ 10 ದಿನ ಮುಂಚೆ ಮೈಸೂರಿನಲ್ಲಿ ಅವರನ್ನು ಮೀಟ್‌ ಮಾಡಿದ್ವಿ. ನಂತರ ನನ್ನ ಗುರುತು ಹಿಡಿದು ಮಾತನಾಡಿಸಿದ್ರು. ಖುಷಿಯಾಯ್ತುʼʼಎಂದರು.

ಇದನ್ನೂ ಓದಿ: Actor Darshan: ದರ್ಶನ್‌ ಕೇಸ್‌ ಬಗ್ಗೆ ಮಾತನಾಡದೇ ಇರೋದಕ್ಕೆ ಕಾರಣ ತಿಳಿಸಿದ ಸಮಲತಾ; ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದೇನು?

ʻʻಅಭಿಮಾನಿಗಳ ಬಗ್ಗೆ ನನ್ನ ಅನಸಿಕೆ ಏನೆಂದರೆ ಯಾರೂ ಪ್ರಚೋದಿಸಿಲ್ಲ ಎಂದರೆ ಯಾರೂ ಏನೂ ಮಾಡುವದಕ್ಕೆ ಹೋಗುವುದಿಲ್ಲ. ತೀರ್ಪು ಬರುವ ಮುಂಚೆಯೇ ಏನೇನೋ ಪೋಸ್ಟ್‌ ಹಾಕಿದ್ದಾರೆ. ಪ್ರಚೋದಿನೆಯಿಂದಾಗಿ ಅಭಿಮಾನಿಗಳು ಈ ರೀತಿ ವರ್ತಿಸಿದ್ದಾರೆ ಎಂಬುದು ನನ್ನ ನಂಬಿಕೆ. ಹಾಗೇ ವಿಜಯಲಕ್ಷ್ಮಿ ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಕ್ಷಮೆಯಾಧರಿತ್ರಿಯಾಗಿ ಬದುಕಬೇಕು ಎಂದು ನನ್ನ ತಂದೆ ಹೇಳಿದ್ದರು. ಇದೀಗ ಅವರು ಗಂಡನ ಪಕ್ಕ ನಿಂತು ಹೋರಾಡುತ್ತಿದ್ದಾರೆ. ಹಾಗೇ ಮಗನ ವಿಚಾರಕ್ಕೆ ಬಂದರೆ ಮಕ್ಕಳ ಮನಸ್ಸು ಕೂಡ ತುಂಬ ಸೂಕ್ಷ್ಮ. ಬೇರೆಯವರ ಬಗ್ಗೆ ಬೇಕಾಬಿಟ್ಟಿ ಮಾತನಾಡುವುದು ತುಂಬ ಸುಲಭ. ಆದರೆ ವಿನೀಶ್‌ ನೋಡದಾಗ ತುಂಬ ಬೇಜರಾಗತ್ತೆ. ಅಭಿಮಾನಿಗಳಲ್ಲಿ ಕೇಳೊದು ಇಷ್ಟೇ. ತೀರ್ಪು ಬರುವವರೆಗೆ ದಯವಿಟ್ಟು ತಾಳ್ಮೆ ಇರಬೇಕು ಎಂದು ಕೇಳಿಕೊಳ್ಳುತ್ತೇನೆʼʼಎಂದರು.

ಪೊಲೀಸ್‌ ಕಸ್ಟಡಿ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್‌ ಸೇರಿ ಹಲವು ಆರೋಪಿಗಳ ಅವಧಿಯು ಮುಕ್ತಾಯಗೊಂಡ ಕಾರಣ ವಿಡಿಯೊ ಕಾನ್ಫರೆನ್ಸ್‌ ಮೂಲಕ ಜಡ್ಜ್‌ ಎದುರು ಆರೋಪಿಗಳನ್ನು ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಜುಲೈ 18ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಿ ಆದೇಶ ಹೊರಡಿಸಿದರು. ಇದರಿಂದಾಗಿ ದರ್ಶನ್‌ ಹಾಗೂ ಗ್ಯಾಂಗ್‌ಗೆ ಹಿನ್ನಡೆಯಾದಂತಾಗಿದೆ.

Exit mobile version