Site icon Vistara News

Actor Darshan: ಕೇಸ್‌ನಿಂದ ತಪ್ಪಿಸಿಕೊಳ್ಳೋಕೆ ಪ್ರತಿ ಹಂತದಲ್ಲೂ ಎಚ್ಚರವಹಿಸಿದ್ದ ದರ್ಶನ್; ಬೇಟೆಯ ಹಿಂದೆ ಭರ್ಜರಿ ಮಾಸ್ಟರ್‌ ಪ್ಲ್ಯಾನ್‌!

Actor Darshan was careful at every step to escape from Renuka case

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿಯ ಭೀಕರ (Actor Darshan) ಹತ್ಯೆಯಲ್ಲಿ ಪವಿತ್ರಾ ಗೌಡ ಎ1, ದರ್ಶನ್​ ಎ2 ಆಗಿದ್ದಾರೆ.  ಈ ಕೊಲೆ ಕೇಸ್‌ನಲ್ಲಿ ದರ್ಶನ್‌ ಅವರು ಕೇಸ್‌ನಿಂದ ತಪ್ಪಿಸಿಕೊಳ್ಳಲು ಪ್ರತಿ ಹಂತದಲ್ಲೂ ಎಚ್ಚರವಹಿಸಿದ್ದರು. ಕೊಲೆಯಾದ ಬೆನ್ನಲ್ಲೇ ಕೇಸ್‌ನಲ್ಲಿ ತನ್ನ ಹೆಸರೇ ಬರಬರಾದು ಎಂದು ಎಚ್ಚರ ವಹಿಸಿದ್ದರು. ಅದಕ್ಕೆ ಎಂದು 70 ಲಕ್ಷ ರೂ. ಹೆಚ್ಚು ಹಣವನ್ನು ದರ್ಶನ್‌ ರೆಡಿ ಮಾಡಿಕೊಂಡಿದ್ದರು. ಶವ ಬಿಸಾಡುವುದು, ಯಾರೂ ದರ್ಶನ್ ವಿರುದ್ಧ ಸಾಕ್ಷಿಗಳು ಹೇಳದಂತೆ ಇರುವುದು ಹೀಗೆ ಅನೇಕ ಸಾಕ್ಷ್ಯಗಳನ್ನು ನಾಶ ಮಾಡಲು ದರ್ಶನ್‌ ಪ್ಲ್ಯಾನ್‌ ನಡೆಸಿದ್ದರು. ವಿನಯ್, ಪ್ರದೂಷ್‌ ಮೂಲಕ ಕೇಸ್ ತನ್ನವರೆಗೂ ಬರದಂತೆ ಹಣ ನೀಡಿ ಮುಚ್ಚಿ ಹಾಕಿಸಲು ಸಂಚು ಹೂಡಿದ್ದರು. ಹಾಗಾದ್ರೆ ದರ್ಶನ್ ಕೇಸ್‌ನಿಂದ ತಪ್ಪಿಸಿಕೊಳ್ಳೋಕೆ ಏನೆಲ್ಲಾ ಪ್ಲಾನ್ ಮಾಡಿದ್ದರು ಎಂಬುದು ತಿಳಿಯಲು ಮುಂದೆ ಓದಿ.

ಮೊದಲ ಹಂತದಲ್ಲಿ ರೇಣುಕಾಸ್ವಾಮಿ ಶವ ಬಿಸಾಡೋದ್ರಲ್ಲಿ ನಡೆದಿತ್ತು ಪ್ಲ್ಯಾನ್‌!

ರೇಣುಕಾ ಸ್ವಾಮಿ ಸತ್ತ ಬಳಿಕ ಯಾರಿಗೂ ಕಾಣದಂತೆ ಶವ ಬಿಸಾಡುವ ಪ್ರಯತ್ನ ನಡೆಸಿದ್ದರು ಟೀಂ. ಆದರೆ ಆರೋಪಿಗಳಿಗೆ ಶವ ಬಿಸಾಡಲು ಸಾಕಷ್ಟು ಕನ್ಫ್ಯೂಷನ್ ಆಗಿತ್ತು. ಇದಕ್ಕೂ ಮುಂಚೆ ಸೋಮನಹಳ್ಳಿ ಬ್ರಿಡ್ಜ್ ಬಳಿ ಮೂರು ರೌಂಡ್ ಗಾಡಿಯಲ್ಲಿ ಸುತ್ತಿದ್ರು. ಬೇರೆ ಎಲ್ಲಾದ್ರೂ ಬಿಸಾಡಬಹುದಾ ನೋಡಿದ್ರು. ಕೊನೆಗೆ ದಾರಿ ಕಾಣದೆ ಮೋರಿಗೆ ಶವ ಹಾಕಿ ಎಸ್ಕೇಪ್ ಆದರು. ಅಲ್ಲಿ ಆದ ಎಡವಟ್ಟಿನಿಂದ ಶವ ಪತ್ತೆಯಾಗಿ ಆರೋಪಿಗಳು ಸಿಕ್ಕಿಬಿದ್ದರು.

ಗಿರಿನಗರದ ಮೂವರು ಬಳಿಕ ತಾವೇ ಕೊಲೆ ಮಾಡಿದ್ದೇವೆ ಎಂದು ಒಪ್ಪಿ ಶರಣಾದರು. ಹಣದ ವಿಚಾರವಾಗಿ ಕೊಲೆ ಮಾಡಿರುವುದಾಗಿ ಒಪ್ಪಿಗೆ ಕೂಡ ಸೂಚಿಸಿದರು. ಪೊಲೀಸರು ತಮ್ಮದೇ ಸ್ಟೈಲ್‌ನಲ್ಲಿ ವಿಚಾರಿಸಿದಾಗ ಅಸಲಿ ವಿಚಾರ ಬಯಲಿಗೆ ಬಂತು.

ಇದನ್ನೂ ಓದಿ: ‌Actor Darshan: ದರ್ಶನ್‌ ಗ್ಯಾಂಗ್‌ನಿಂದ ಪೊಲೀಸರು ವಶಪಡಿಸಿಕೊಂಡದ್ದೇನು?

ಸಾಕ್ಷ್ಯ ನಾಶ, ಹಣ ಹಂಚಿ ಎಲ್ಲವನ್ನೂ ಡಿಸ್ಪೋಸ್..!

ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿ ಮರ್ಡರ್‌ ಮಾಡಲಾಗಿತ್ತು. ಇಲ್ಲಿನ‌ ಸಾಕ್ಷ್ಯಗಳೇ ದರ್ಶನ್ ಅರೆಸ್ಟ್‌ ಮಾಡಲು ಸಹಾಯವಾಗಿದ್ದು. ಘಟನಾ ಸ್ಥಳದಲ್ಲಿ ದರ್ಶನ್ ಇದ್ದರು ಎನ್ನುವುದೇ ಮುಖ್ಯ ಅಂಶ. ಆದರೆ ಹತ್ಯೆಯಾದ ಸಂದರ್ಭದಲ್ಲಿ ತಾನಿದ್ದ ಬಗ್ಗೆ ಹೇಳ್ಬಾರ್ದು ಎಂದು ಶೆಡ್ ಸಿಬ್ಬಂದಿಗೆ ಹಣದ ಆಮೀಷ ಒಡ್ಡಿದ್ದರು ದರ್ಶನ್‌. ಈ ಬಗ್ಗೆ ಪೊಲೀಸರ ಮುಂದೆ ಶೆಡ್ ಮಾಲೀಕ ಜಯಣ್ಣ ಹೇಳಿಕೆ ನೀಡಿದ್ದಾರೆ.

ಗಣ್ಯ ವ್ಯಕ್ತಿಗಳ ಸಂಪರ್ಕ, ಸರ್ಕಾರಕ್ಕೆ ಒತ್ತಡ ಹಾಕಿಸುವ ಯತ್ನ..

ರಾಜಕೀಯ ಹಂತದಲ್ಲೂ ಕೇಸ್‌ನಿಂದ ತಪ್ಪಿಸಿಕೊಳ್ಳೋಕೆ ದರ್ಶನ್ ಪ್ಲಾನ್ ಮಾಡಿದ್ದರು.ಗಣ್ಯ ವ್ಯಕ್ತಿಗಳ ಸಂಪರ್ಕ ಮಾಡಿ ಮನವಿ ಕೂಡ ಮಾಡಿದ್ದರು. ಕೇಸ್‌ನಲ್ಲಿ ಅರೆಸ್ಟ್ ಮಾಡದಂತೆ ಹೇಳಲು ಒತ್ತಡ ಹಾಕಿದ್ದರು. ಆದರೆ ಮರ್ಡರ್ ಕೇಸ್ ಹಿನ್ನೆಲೆಯಲ್ಲಿ ಗಣ್ಯ ವ್ಯಕ್ತಿಗಳು ಸೈಲೆಂಟ್‌ ಆಗಿದ್ದಾರೆ. ಹೀಗೆ ಹಂತ ಹಂತದಲ್ಲಿಯೂ ತಾನು ತಪ್ಪಿಸಿಕೊಳ್ಳೋಕೆ ದರ್ಶನ್‌ ಪ್ಲಾನ್ ಮಾಡಿದ್ದು ತನಿಖೆ ವೇಳೆ ಗೊತ್ತಾಗಿದೆ.

ನಟಿ ಪವಿತ್ರಾ ಗೌಡ (Pavithra Gowda) ಜೈಲು ಪಾಲಾಗಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಪವಿತ್ರಾ ಗೌಡ ಅವರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್​ ಮಾಡಲಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿಯ ಭೀಕರ ಹತ್ಯೆಯಲ್ಲಿ ಪವಿತ್ರಾ ಗೌಡ ಎ1, ದರ್ಶನ್​ ಎ2 ಆಗಿದ್ದಾರೆ. ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿ ಆಗಿದ್ದು, ಜೂನ್​ 20 ಅವರ ಪೊಲೀಸ್​​ ಕಸ್ಟಡಿ ಅಂತ್ಯವಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ ಸರಿಯಾಗಿ ಊಟ, ನಿದ್ರೆ ಮಾಡದೆ ಚಡಪಡಿಸಿದ್ದರು ಎನ್ನಲಾಗಿದೆ.

Exit mobile version