ಯಶ್ (Actor Yash) ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ್ದಾರೆ. ಇದೀಗ ಯಶ್ ತಮ್ಮ ಮನೆಯಲ್ಲಿ ವರಲಕ್ಷ್ಮಿ ಹಬ್ಬದ ಪೂಜೆಯ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Shiva Rajkumar: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸೆಟ್ಟೇರಿತು ಶಿವರಾಜ್ ಕುಮಾರ್ 131ನೇ ಸಿನಿಮಾ!
ಟಾಕ್ಸಿಕ್’ ಚಿತ್ರಕ್ಕಾಗಿ ಯಶ್ ಕಾಣಿಸಿಕೊಂಡಿರುವ ಹೊಸ ಹೇರ್‌ಸ್ಟೈಲ್ ಹೈಲೆಟ್ ಎನಿಸಿಕೊಂಡಿದೆ.
ಇನ್ನು ಐರಾ, ಯಥರ್ವ್ ಕೂಡ ಸಾಥ್ ಕೊಟ್ಟಿದ್ದಾರೆ.
ಕೆಲವರ ಕಣ್ಣು ಯಶ್ ಕುತ್ತಿಗೆಯಲ್ಲಿ ಧರಿಸಿರುವ ಚಿನ್ನದ ಸರ ಹಾಗೂ ಲಾಕೆಟ್ ಮೇಲೆ ನೆಟ್ಟಿದೆ. ಹುಲಿ ತಲೆಯ ಲಾಕೆಟ್ ಅನ್ನು ಯಶ್ ಹಾಕಿಕೊಂಡಿದ್ದಾರೆ.
ಇನ್ನು ಯಶ್ ನಟನೆಯ ‘ಕೆಜಿಎಫ್-2’ ಚಿತ್ರಕ್ಕೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 2 ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಕನ್ನಡ ಚಿತ್ರ ಹಾಗೂ ಸಾಹಸ ಸಂಯೋಜನೆಗಾಗಿ ಅನ್ಬುರಿವ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.