Actor Yash: ಯಶ್‌-ರಾಧಿಕಾ ವರಮಹಾಲಕ್ಷ್ಮಿ ಹಬ್ಬ ಬಲು ಜೋರು; ರಾಕಿಂಗ್‌ ಸ್ಟಾರ್‌ ಲಾಕೆಟ್ ಮೇಲೆ ಎಲ್ಲರ ಕಣ್ಣು! - Vistara News

ಸ್ಯಾಂಡಲ್ ವುಡ್

Actor Yash: ಯಶ್‌-ರಾಧಿಕಾ ವರಮಹಾಲಕ್ಷ್ಮಿ ಹಬ್ಬ ಬಲು ಜೋರು; ರಾಕಿಂಗ್‌ ಸ್ಟಾರ್‌ ಲಾಕೆಟ್ ಮೇಲೆ ಎಲ್ಲರ ಕಣ್ಣು!

Actor Yash: ಯಶ್‌ ತಮ್ಮ ಮನೆಯಲ್ಲಿ ವರಲಕ್ಷ್ಮಿ ಹಬ್ಬದ ಪೂಜೆಯ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಕೆಲವರ ಕಣ್ಣು ಯಶ್ ಕುತ್ತಿಗೆಯಲ್ಲಿ ಧರಿಸಿರುವ ಚಿನ್ನದ ಸರ ಹಾಗೂ ಲಾಕೆಟ್ ಮೇಲೆ ನೆಟ್ಟಿದೆ. ಹುಲಿ ತಲೆಯ ಲಾಕೆಟ್ ಅನ್ನು ಯಶ್ ಹಾಕಿಕೊಂಡಿದ್ದಾರೆ.

VISTARANEWS.COM


on

Actor Yash wears a tiger locket during varamahalakshmi puja
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಶ್ (Actor Yash) ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ್ದಾರೆ. ಇದೀಗ ಯಶ್‌ ತಮ್ಮ ಮನೆಯಲ್ಲಿ ವರಲಕ್ಷ್ಮಿ ಹಬ್ಬದ ಪೂಜೆಯ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಧಿಕಾ ಸೀರೆಯಲ್ಲಿ ಕಂಗೊಳಿಸಿದರೆ ಯಶ್ ಶರ್ಟ್, ಪಂಚೆ-ಶಲ್ಯ ತೊಟ್ಟು ಮಿಂಚಿದ್ದಾರೆ.

ಇದನ್ನೂ ಓದಿ: Shiva Rajkumar: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸೆಟ್ಟೇರಿತು ಶಿವರಾಜ್ ಕುಮಾರ್ 131ನೇ ಸಿನಿಮಾ!

ಟಾಕ್ಸಿಕ್’ ಚಿತ್ರಕ್ಕಾಗಿ ಯಶ್ ಕಾಣಿಸಿಕೊಂಡಿರುವ ಹೊಸ ಹೇರ್‌ಸ್ಟೈಲ್ ಹೈಲೆಟ್ ಎನಿಸಿಕೊಂಡಿದೆ.

ಇನ್ನು ಐರಾ, ಯಥರ್ವ್ ಕೂಡ ಸಾಥ್ ಕೊಟ್ಟಿದ್ದಾರೆ.

ಕೆಲವರ ಕಣ್ಣು ಯಶ್ ಕುತ್ತಿಗೆಯಲ್ಲಿ ಧರಿಸಿರುವ ಚಿನ್ನದ ಸರ ಹಾಗೂ ಲಾಕೆಟ್ ಮೇಲೆ ನೆಟ್ಟಿದೆ. ಹುಲಿ ತಲೆಯ ಲಾಕೆಟ್ ಅನ್ನು ಯಶ್ ಹಾಕಿಕೊಂಡಿದ್ದಾರೆ.

ಇನ್ನು ಯಶ್ ನಟನೆಯ ‘ಕೆಜಿಎಫ್-2’ ಚಿತ್ರಕ್ಕೆ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 2 ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಕನ್ನಡ ಚಿತ್ರ ಹಾಗೂ ಸಾಹಸ ಸಂಯೋಜನೆಗಾಗಿ ಅನ್ಬುರಿವ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Nagabhushan: ನಾಗಭೂಷಣ್ ಬರ್ತ್‌ಡೇಗೆ ಡಾಲಿ ತಂಡದಿಂದ ಸ್ಪೆಷಲ್ ಗಿಫ್ಟ್‌; ನೋಡಿ ‘ವಿದ್ಯಾಪತಿ’ಯ ಕಿತಾಪತಿ!

Actor Nagabhushan: ಇಕ್ಕಟ್ ಸಿನಿಮಾ ಸೂತ್ರಧಾರರಾದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಟಗರು ಪಲ್ಯ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಧನಂಜಯ್ ಜೊತೆ ಕೈ ಜೋಡಿಸಿದ್ದಾರೆ.

VISTARANEWS.COM


on

Actor Nagabhushan birthday vidhyapathi promo Out
Koo

ಬೆಂಗಳೂರು: ಡಾಲಿ ಪಿಕ್ಚರ್ಸ್ (Actor Nagabhushan) ಕನ್ನಡ ಚಿತ್ರಪ್ರೇಮಿಗಳಿಗೆ ಸದಾಭಿರುಚಿ ಸಿನಿಮಾಗಳನ್ನು ಉಣಬಡಿಸುತ್ತಿದೆ. ಕಳೆದ ವರ್ಷ ಟಗರು ಪಲ್ಯದಂತಹ ಫ್ಯಾಮಿಲಿ ಕಥೆಯನ್ನು ಪ್ರೇಕ್ಷಕರಿಗೆ ನೀಡಿದ್ದ ಈ ಸಂಸ್ಥೆ ಈಗ ʻವಿದ್ಯಾಪತಿʼ ಎಂಬ ಹೊಸ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ವಿದ್ಯಾಪತಿಯ ಮೇಕಿಂಗ್, ಫೋಟೋಗಳು ಈಗಾಗಲೇ ನಿರೀಕ್ಷೆ ಹೆಚ್ಚಿಸಿವೆ. ಇದೀಗ ಚಿತ್ರತಂಡ ವಿದ್ಯಾಪತಿಯ ಕಿತಾಪತಿ ಝಲಕ್ ಬಿಟ್ಟು ಮತ್ತಷ್ಟು ಥ್ರಿಲ್ ಹೆಚ್ಚಿಸಿದೆ.

ವಿದ್ಯಾಪತಿಯಾಗಿ ಟಗರು ಪಲ್ಯ ನಾಯಕ ನಾಗಭೂಷಣ್ ಬಣ್ಣ ಹಚ್ಚಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ವಿದ್ಯಾಪತಿ ಚಿತ್ರದ ಪ್ರೋಮೋ ಅನಾವರಣ ಮಾಡಿದೆ. ಜೇಬು ತುಂಬ ಕಾಸಿರೋನು ಕೊಟ್ಯಾಧಿಪತಿ..ನಿಮ್ಮನ್ನೆಲ್ಲ ಹೊಟ್ಟೆತುಂಬ ನಗಿಸುವವನೇ ನಮ್ಮ ‘ವಿದ್ಯಾಪತಿ’ ಅಂತಾ ಹೀರೋನನ್ನು ಪರಿಚಯಿಸಿದೆ. ಕರಾಟೆ ಕಿಂಗ್ ವೇಷ ತೊಟ್ಟಿರುವ ನಾಗಭೂಷಣ್ ಮಾಡುವ ಕಿತಾಪತಿ ತುಣುಕುವೊಂದನ್ನು ಬಿಡುಗಡೆ ಮಾಡಿದೆ. ಕರಾಟೆ ಕಲಿಯುವ ವೇಳೆ ವಿದ್ಯಾಪತಿ ಮಾಡುವ ಯಡವಟ್ಟು ಪ್ರೇಕ್ಷಕರಿಗೆ ಮುಖದ ಮೇಲೆ ಮಂದಹಾಸ ಮೂಡಿಸುತ್ತದೆ.

ಇಕ್ಕಟ್ ಸಿನಿಮಾ ಸೂತ್ರಧಾರರಾದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಟಗರು ಪಲ್ಯ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಧನಂಜಯ್ ಜೊತೆ ಕೈ ಜೋಡಿಸಿದ್ದಾರೆ.

ಇದನ್ನೂ ಓದಿ: Shiva Rajkumar: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸೆಟ್ಟೇರಿತು ಶಿವರಾಜ್ ಕುಮಾರ್ 131ನೇ ಸಿನಿಮಾ!

ನಾಗಭೂಷಣ್ ಈ ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಈ ಚಿತ್ರದಲ್ಲಿ ನಾಗಭೂಷಣ್ ಗೆ ನಾಯಕಿಯಾಗಿ ಉಪಾಧ್ಯಕ್ಷ ಬ್ಯೂಟಿ ಮಲೈಕಾ ವಸೂಪಾಲ್ ಕಾಣಿಸಿಕೊಳ್ಳಲಿದ್ದಾರೆ. ರಂಗಾಯಣ ರಘು ಕೂಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸದ್ಯ ವಿದ್ಯಾಪತಿ ಶೂಟಿಂಗ್ ಭರದಿಂದ ಸಾಗುತ್ತಿದೆ.

Continue Reading

ಸ್ಯಾಂಡಲ್ ವುಡ್

70th National Film Awards: ಕನ್ನಡಕ್ಕೆ ಸಿಕ್ಕಿದ್ದು ಒಟ್ಟು 7 ಪ್ರಶಸ್ತಿಗಳು; ಜ್ಯೂರಿಗಳನ್ನೇ ಇಂಪ್ರೆಸ್‌ ಮಾಡಿದ ʻಮಧ್ಯಂತರʼ ಕಿರು ಚಿತ್ರ ಬಗ್ಗೆ ನಿಮಗೆಷ್ಟು ಗೊತ್ತು?

70th National Film Awards: ನಾನ್ ಫೀಚರ್ ವಿಭಾಗದಲ್ಲಿ ‘ಮಧ್ಯಂತರ’ ಕಿರುಚಿತ್ರ ಬಹುವಾಗಿ ಗಮನ ಸೆಳೆದಿದೆ. ಪ್ರಶಸ್ತಿ ಘೋಷಿಸಿದ ಜ್ಯೂರಿಗಳು ಸಹ ‘ಮಧ್ಯಂತರ’ ಸಿನಿಮಾವನ್ನು ಬಹುವಾಗಿ ಕೊಂಡಾಡಿದ್ದಾರೆ. ಈ ಸಿನಿಮಾ ವಿಶೇಷತೆ ಏನು ತಿಳಿಯಲು ಮುಂದೆ ಓದಿ..

VISTARANEWS.COM


on

70th National Film Awards ational Award winner Madhyantara Short Movie
Koo

ಬೆಂಗಳೂರು: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (70th National Film Awards) ಘೋಷಣೆಯಾಗಿವೆ. ಫೀಚರ್‌ ಫಿಲ್ಮ್ಸ್‌ ವಿಭಾಗದಲ್ಲಿ ಕನ್ನಡ ಚಿತ್ರರಂಗಕ್ಕೆ ಒಟ್ಟು ನಾಲ್ಕು ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಪ್ರಾದೇಶಿಕ ಚಿತ್ರಗಳ ಪೈಕಿ ‘ಅತ್ಯುತ್ತಮ ಕನ್ನಡ ಸಿನಿಮಾ’ ಪ್ರಶಸ್ತಿ ‘ಕೆಜಿಎಫ್‌ ಚಾಪ್ಟರ್ 2’ ಪಾಲಾಗಿದೆ. ‘ಕೆಜಿಎಫ್ ಚಾಪ್ಟರ್‌ 2’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದವರು ನಿರ್ದೇಶಕ ಪ್ರಶಾಂತ್ ನೀಲ್‌. ಚಿತ್ರವನ್ನ ನಿರ್ಮಿಸಿದವರು ಹೊಂಬಾಳೆ ಫಿಲ್ಮ್ಸ್. ನಾನ್ ಫೀಚರ್ ವಿಭಾಗದಲ್ಲಿ ‘ಮಧ್ಯಂತರ’ ಕಿರುಚಿತ್ರ ಬಹುವಾಗಿ ಗಮನ ಸೆಳೆದಿದೆ. ಪ್ರಶಸ್ತಿ ಘೋಷಿಸಿದ ಜ್ಯೂರಿಗಳು ಸಹ ‘ಮಧ್ಯಂತರ’ ಸಿನಿಮಾವನ್ನು ಬಹುವಾಗಿ ಕೊಂಡಾಡಿದ್ದಾರೆ. ಈ ಸಿನಿಮಾ ವಿಶೇಷತೆ ಏನು ತಿಳಿಯಲು ಮುಂದೆ ಓದಿ..

ಮಧ್ಯಂತರ ಕಿರು ಚಿತ್ರ

ಇದು ಸಿನಿಮಾ ಪ್ರೇಮಿಗಳಿಬ್ಬರ ಕಥೆ. ಬಂಟ್ವಾಳದ ದಿನೇಶ್ ಅವರು ಸ್ವತಃ ಸಿನಿಮಾ ಪ್ರಿಯರು. 27 ವರ್ಷಗಳಿಂದಲೂ ಅವರು ಮನೊರಂಜನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.2022ರ ಮಾರ್ಚ್ ತಿಂಗಳಲ್ಲಿ ‘ಮಧ್ಯಂತರ’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದರು ದಿನೇಶ್ ಶೆಣೈ.ಸಿನಿಮಾದ ನಿರೂಪಣೆ ತಮಾಷೆಯ ಧಾಟಿಯಲ್ಲಿದ್ದರೂ ಗಂಭೀರವಾದ ವಸ್ತು ವಿಷಯ ಒಳಗೊಂಡಿದೆ. ಮುಖ್ಯ ಪಾತ್ರದಲ್ಲಿ ದಾವಣಗೆರೆಯ ವೀರೇಶ್ ಹಾಗೂ ರಂಗಭೂಮಿ ಹಿನ್ನೆಲೆಯ ಅಜಯ್ ನೀನಾಸಂ ನಟಿಸಿದ್ದಾರೆ.

70th National Film Awards : ಕನ್ನಡಿಗರಿಗೆ ಹೆಮ್ಮೆ ತಂದ ರಿಷಭ್​ ಶೆಟ್ಟಿ, ಕೆಜಿಎಫ್​​; ಮಲಯಾಳಂನ ‘ಆಟಂ’ ಅತ್ಯುತ್ತಮ ಸಿನೆಮಾ; ಸಂಪೂರ್ಣ ಲಿಸ್ಟ್‌ ಇಲ್ಲಿದೆಇದನ್ನೂ ಓದಿ:

ಹೋಟೆಲ್ ಸಪ್ಲೈಯರ್​ಗಳಾಗಿ ಕೆಲಸ ಮಾಡುವ ಇಬ್ಬರಿಗೆ ಸಿನಿಮಾ ಅಂದರೆ ಪಂಚ ಪ್ರಾಣ. ಡಾ ರಾಜ್​ಕುಮಾರ್ ಇವರ ಬಲು ಮೆಚ್ಚಿನ ನಟ. ಸಿನಿಮಾ ನೋಡಿ ಬಂದು ಅದನ್ನು ಗೆಳೆಯರ ಬಳಿ ಹೇಳುವುದು ಇವರ ಮೆಚ್ಚಿನ ಅಭ್ಯಾಸ. ಇದೇ ಪ್ರತಿಭೆಯಿಂದ ಇವರು ಸಿನಿಮಾ ನಿರ್ಮಾಣಕ್ಕೂ ಇಳಿಯುತ್ತಾರೆ. ನಿರ್ಮಾಪಕನಿಗೆ ಇವರು ಹೇಳಿದ ಕತೆಯೊಂದು ಒಪ್ಪಿಗೆ ಆಗಿಬಿಡುತ್ತದೆ. ಮುಂದೇನು? ಎಂದು ತಿಳಿಯಲು ಕಿರು ಚಿತ್ರ ನೋಡಬೇಕು.

16 ಎಂಎಂ ಕ್ಯಾಮೆರಾ ನಲ್ಲಿ ಕೊಡಾಕ್ ರೀಲ್ಸ್​ ಬಳಸಿ ಚಿತ್ರೀಕರಣ ಮಾಡಲಾಗಿದೆ. ಬಳಿಕ ಡಿಜಿಟಲ್‌ ಅಲ್ಲಿ ಕನ್ವರ್ಟ್‌ ಮಾಡಲಾಗಿದೆ. 11 ದಿನದಲ್ಲಿ ಸಿನಿಮಾದ ಚಿತ್ರೀಕರಣವನ್ನು ದಿನೇಶ್ ಪೂರ್ತಿ ಮಾಡಿದ್ದಾರೆ.

ಉಳಿದ ಪ್ರಶಸ್ತಿಗಳು

ಅತ್ಯುತ್ತಮ ಆಕ್ಷನ್ ಡೈರೆಕ್ಷನ್ ಪ್ರಶಸ್ತಿ ಅರ್ಥಾತ್ ಬೆಸ್ಟ್ ಸ್ಟಂಟ್ ಕೊರಿಯೋಗ್ರಫಿ ಅವಾರ್ಡ್‌ ಸಹ ‘ಕೆಜಿಎಫ್‌ ಚಾಪ್ಟರ್ 2’ ಸಿನಿಮಾದ ಪಾಲಾಗಿದೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರಕ್ಕೆ Anbariv ಸ್ಟಂಟ್ಸ್‌ ಕೊರಿಯೋಗ್ರಫಿ ಮಾಡಿದ್ದರು. ಇದೀಗ Anbariv ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.ಇನ್ನೂ ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿ ಅವರಿಗೆ ಒಲಿದು ಬಂದಿದೆ. ‘ಕಾಂತಾರ’ ಚಿತ್ರದಲ್ಲಿನ ಆಕ್ಟಿಂಗ್‌ಗಾಗಿ ರಿಷಬ್ ಶೆಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ‘ಭರಪೂರ ಮನರಂಜನೆ ನೀಡುವ ಅತ್ಯುತ್ತಮ ಜನಪ್ರಿಯ ಚಿತ್ರ’ ಪ್ರಶಸ್ತಿ ಸಿಕ್ಕಿದೆ.

ನಾನ್ ಫೀಚರ್‌ ಫಿಲ್ಮ್ಸ್ ವಿಭಾಗದಲ್ಲಿ ಕನ್ನಡ ಚಿತ್ರರಂಗಕ್ಕೆ ಒಟ್ಟು 3 ಪ್ರಶಸ್ತಿಗಳು ಲಭಿಸಿವೆ. ‘ಅತ್ಯುತ್ತಮ ಸಂಕಲನ’ ಪ್ರಶಸ್ತಿಗೆ ‘ಮಧ್ಯಂತರ’ ಚಿತ್ರಕ್ಕಾಗಿ ಸಂಕಲನಕಾರ (ಎಡಿಟರ್) ಸುರೇಶ್ ಅರಸ್‌ ಭಾಜನರಾಗಿದ್ದಾರೆ.ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಚಲನಚಿತ್ರ ಪ್ರಶಸ್ತಿ ಕನ್ನಡದ ‘ರಂಗ ವೈಭೋಗ’ ಚಿತ್ರದ ಪಾಲಾಗಿದೆ. ಈ ಚಿತ್ರವನ್ನ ಸುನೀಲ್ ಪುರಾಣಿಕ್ ನಿರ್ಮಿಸಿ, ನಿರ್ದೇಶಿಸಿದ್ದಾರೆ.

Continue Reading

ಸ್ಯಾಂಡಲ್ ವುಡ್

Kannada New Movie: ಆಗಸ್ಟ್ 19 ರಂದು ʻಲಂಗೋಟಿ ಮ್ಯಾನ್ʼ ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭ; ಡಿ.ಕೆ.ಶಿವಕುಮಾರ್‌ಗೆ ಆಹ್ವಾನ ಕೊಟ್ಟ ಚಿತ್ರತಂಡ!

Kannada New Movie: ಕರ್ನಾಟಕದ ಉಪ ಮುಖ್ಯಮಂತ್ರಿಗಳು ತಮ್ಮ ಕಾರ್ಯದ ಒತ್ತಡದ ನಡುವೆಯೂ ನಮ್ಮನ್ನು ಪ್ರೀತಿಯಿಂದ ಮಾತನಾಡಿಸಿ, ಸಮಾರಂಭಕ್ಕೆ ಬರುತ್ತೇನೆ ಎಂದು ಹೇಳಿರುವುದು. ನಟ ಶರಣ್ ಕೂಡ ನಮ್ಮ ಆತ್ಮೀಯ ಆಹ್ವಾನಕ್ಕೆ ಸ್ಪಂದಿಸಿ ಸಮಾರಂಭಕ್ಕೆ ತಪ್ಪದೇ ಬರುವುದಾಗಿ ಹೇಳಿರುವುದು ನಮ್ಮ ತಂಡಕ್ಕೆ ಸಂತೋಷ ತಂದಿದೆ. ಇಂತಹ ದಿಗ್ಗಜರು ನಮ್ಮ ಆಹ್ವಾನಕ್ಕೆ ತೋರಿದ ಪ್ರೀತಿಗೆ ಮನತುಂಬಿ ಬಂದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

VISTARANEWS.COM


on

Kannada New Movie Langoti man trailer Out d k shivakumar invite
Koo

ಬೆಂಗಳೂರು: ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ (Kannada New Movie) ಹಾಗೂ ಸಂಜೋತ ಭಂಡಾರಿ ಕಥೆ ಬರೆದು ನಿರ್ದೇಶಿಸಿರುವ “ಲಂಗೋಟಿ ಮ್ಯಾನ್” ಚಿತ್ರದ ಟ್ರೈಲರ್‌ ಬಿಡುಗಡೆ ಆಗಸ್ಟ್ 19 ರಂದು ನಡೆಯಲಿದೆ. ಈ ಸಮಾರಂಭಕ್ಕೆ ಸನ್ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಓ.ಮಂಜುನಾಥ್ ಸೌತ್ ಡಿಸಿಸಿ ಪ್ರೆಸಿಡೆಂಟ್ ಬೆಂಗಳೂರು ಹಾಗೂ ನಟ ಶರಣ್ ಅವರನ್ನು ಚಿತ್ರತಂಡ ಆತ್ಮೀಯವಾಗಿ ಆಹ್ವಾನಿಸಿದೆ.

ಹೊಸತಂಡದ ಪ್ರೀತಿಯ ಆಹ್ವಾನವನ್ನು ಒಪ್ಪಿಕೊಂಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಓ.ಮಂಜುನಾಥ್ ಸೌತ್ ಡಿಸಿಸಿ ಪ್ರೆಸಿಡೆಂಟ್ ಹಾಗೂ ನಟ ಶರಣ್ ಅವರು ಸಮಾರಂಭಕ್ಕೆ ಬರುವುದಾಗಿ ಹೇಳಿದ್ದಾರೆ.

ಕರ್ನಾಟಕದ ಉಪ ಮುಖ್ಯಮಂತ್ರಿಗಳು ತಮ್ಮ ಕಾರ್ಯದ ಒತ್ತಡದ ನಡುವೆಯೂ ನಮ್ಮನ್ನು ಪ್ರೀತಿಯಿಂದ ಮಾತನಾಡಿಸಿ, ಸಮಾರಂಭಕ್ಕೆ ಬರುತ್ತೇನೆ ಎಂದು ಹೇಳಿರುವುದು. ನಟ ಶರಣ್ ಕೂಡ ನಮ್ಮ ಆತ್ಮೀಯ ಆಹ್ವಾನಕ್ಕೆ ಸ್ಪಂದಿಸಿ ಸಮಾರಂಭಕ್ಕೆ ತಪ್ಪದೇ ಬರುವುದಾಗಿ ಹೇಳಿರುವುದು ನಮ್ಮ ತಂಡಕ್ಕೆ ಸಂತೋಷ ತಂದಿದೆ. ಇಂತಹ ದಿಗ್ಗಜರು ನಮ್ಮ ಆಹ್ವಾನಕ್ಕೆ ತೋರಿದ ಪ್ರೀತಿಗೆ ಮನತುಂಬಿ ಬಂದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ: Shiva Rajkumar: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸೆಟ್ಟೇರಿತು ಶಿವರಾಜ್ ಕುಮಾರ್ 131ನೇ ಸಿನಿಮಾ!

ಇದನ್ನೂ ಓದಿ: Kannada New Movie: ‘ರಕ್ಕಸಪುರದೋಳ್’ ರಾಜ್ ಬಿ ಶೆಟ್ಟಿ; ರವಿ ಸಾರಂಗ ನಿರ್ದೇಶನದ ಈ ಚಿತ್ರಕ್ಕೆ ರಕ್ಷಿತ-ಪ್ರೇಮ್ ಸಾಥ್

ಆಕಾಶ್ ರಾಂಬೋ, ಧೀರೇಂದ್ರ, ಮಹಾಲಕ್ಷ್ಮಿ, ಹುಲಿ ಕಾರ್ತಿಕ್, ಗಿಲ್ಲಿ ನಟ, ಸಂಹಿತ ವಿನ್ಯ, ಸ್ನೇಹ ಖುಷಿ, ಪವನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

Continue Reading

ಅಂಕಣ

ರಾಜಮಾರ್ಗ ಅಂಕಣ: ಕನ್ನಡ ಚಿತ್ರರಂಗದ ಬಂಗಾರದ ಹುಡುಗ ರಿಶಬ್ ಶೆಟ್ಟಿ

ರಾಜಮಾರ್ಗ ಅಂಕಣ: ರಾಷ್ಟ್ರಪ್ರಶಸ್ತಿಗಳು ಆರಂಭವಾಗಿ 75 ವರ್ಷಗಳಲ್ಲಿ ಕನ್ನಡಕ್ಕೆ ದೊರೆತದ್ದು ಕೇವಲ ನಾಲ್ಕನೆಯ ಪ್ರಶಸ್ತಿ ಇದು! 1975ರಲ್ಲಿ ಚೋಮನ ದುಡಿ ಸಿನೆಮಾದಲ್ಲಿ ಎಂ.ವಿ. ವಾಸುದೇವ್ ರಾವ್, 1986ರಲ್ಲಿ ತಬರನ ಕಥೆ ಸಿನೆಮಾದಲ್ಲಿ ಚಾರುಹಾಸನ್, 2014ರಲ್ಲಿ ನಾನು ಅವನಲ್ಲ, ಅವಳು ಸಿನೆಮಾದಲ್ಲಿ ಸಂಚಾರಿ ವಿಜಯ್ ಈವರೆಗೆ ಅಭಿನಯಕ್ಕಾಗಿ ಪ್ರಶಸ್ತಿಗಳನ್ನು ಗೆದ್ದವರು.

VISTARANEWS.COM


on

ರಾಜಮಾರ್ಗ ಅಂಕಣ kantara Movie
Koo

75 ವರ್ಷಗಳಲ್ಲಿ ಕನ್ನಡಕ್ಕೆ ದೊರಕಿದ ಕೇವಲ ನಾಲ್ಕನೇ ಪ್ರಶಸ್ತಿ ಇದು!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: ಕೋರೋನಾ ಮಹಾಮಾರಿಯಿಂದ ರಾಡಿ ಆಗಿದ್ದ ಕನ್ನಡದ ಮನಸ್ಸುಗಳಿಗೆ 2022ರಲ್ಲಿ ಒಂದು ಬಿಗ್ ಎಕ್ಸೈಟ್‌ಮೆಂಟ್ ಕೊಡುವ ಸಿನೆಮಾ ಆಗಿ ಬಂದದ್ದು ಕಾಂತಾರ! ಆ ಸಿನೆಮಾ (Kantara Movie) ಯಾವ ರೀತಿ ಹಿಟ್ ಆಯ್ತು ಅಂದರೆ ನೋಡಿದವರೇ ಮತ್ತೆ ಮತ್ತೆ ನೋಡಿದರು. ಹೊಂಬಾಳೆ ಫಿಲಂಸ್ (Hombale Films) ಕೇವಲ 16 ಕೋಟಿ ದುಡ್ಡಲ್ಲಿ ನಿರ್ಮಾಣ ಮಾಡಿದ ಈ ಸಿನೆಮಾ 450 ಕೋಟಿ ದುಡಿಯಿತು! ಆರಂಭದಲ್ಲಿ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಆದ ಸಿನೆಮಾ ಒಂದು ವರ್ಷದ ಅವಧಿಯಲ್ಲಿ ತಮಿಳು, ತೆಲುಗು, ಮಲಯಾಳಂ, ತುಳು, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಡಬ್ ಅಥವಾ ರೀಮೇಕ್ ಆಗಿ ಪಾನ್ ಇಂಡಿಯಾ ಹಿಟ್ ಆಯ್ತು. ರಿಷಬ್ ಶೆಟ್ಟಿ (Rishab Shetty) ಪಾನ್ ಇಂಡಿಯಾ ಸ್ಟಾರ್ (Pan India) ಆದರು. ಕನ್ನಡದಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಎರಡನೇ ಸಿನಿಮಾ ಆಗಿ ಕಾಂತಾರ ರಿಜಿಸ್ಟರ್ ಆಯ್ತು. ಅದರಲ್ಲಿ ಮೂಡಿಬಂದಿದ್ದ ಗ್ರಾಮೀಣ ಸೊಗಡಿನ ದೃಶ್ಯಗಳು, ಕರಾವಳಿಯ ಸಂಸ್ಕೃತಿ ಮತ್ತು ದೈವದ ಮೇಲಿನ ನಂಬಿಕೆ, ಸುಂದರವಾದ ಹಾಡುಗಳು ಎಲ್ಲವೂ ಅದ್ಭುತವಾಗಿಯೇ ಇದ್ದವು.

ಆ ಸಿನೆಮಾದ ಮಾಸ್ಟರ್ ಬ್ರೈನ್ ಮತ್ತು ಸ್ಟಾರ್ ಆಕರ್ಷಣೆ ಆಗಿದ್ದರು ರಿಶಭ್! 80% ಸ್ಥಳೀಯ ಕಲಾವಿದರು ಅದ್ಭುತವಾಗಿ ಅಭಿನಯ ಮಾಡಿದ್ದು ಕೂಡ ಸಿನೆಮಾದ ಹೆಚ್ಚುಗಾರಿಕೆ.

75 ವರ್ಷಗಳಲ್ಲಿ ಕನ್ನಡಕ್ಕೆ ಇದು ಕೇವಲ 4ನೆಯ ರಾಷ್ಟ್ರಪ್ರಶಸ್ತಿ!

ಶುಕ್ರವಾರ 70ನೆಯ ಸಿನೆಮಾ ರಾಷ್ಟ್ರಪ್ರಶಸ್ತಿಗಳ ಘೋಷಣೆ ಆಗಿದ್ದು ಕಾಂತಾರ ಸಿನೆಮಾಕ್ಕೆ 2 ಪ್ರಶಸ್ತಿಗಳು ದೊರೆತಿವೆ. ಅದರಲ್ಲಿ ಬೆಲೆ ಕಟ್ಟಲು ಸಾಧ್ಯವೇ ಇಲ್ಲದ್ದು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ! ಏಕೆಂದರೆ ರಾಷ್ಟ್ರಪ್ರಶಸ್ತಿಗಳು ಆರಂಭವಾಗಿ 75 ವರ್ಷಗಳಲ್ಲಿ ಕನ್ನಡಕ್ಕೆ ದೊರೆತದ್ದು ಕೇವಲ ನಾಲ್ಕನೆಯ ಪ್ರಶಸ್ತಿ ಇದು! 1975ರಲ್ಲಿ ಚೋಮನ ದುಡಿ ಸಿನೆಮಾದಲ್ಲಿ ಎಂ.ವಿ. ವಾಸುದೇವ್ ರಾವ್, 1986ರಲ್ಲಿ ತಬರನ ಕಥೆ ಸಿನೆಮಾದಲ್ಲಿ ಚಾರುಹಾಸನ್, 2014ರಲ್ಲಿ ನಾನು ಅವನಲ್ಲ, ಅವಳು ಸಿನೆಮಾದಲ್ಲಿ ಸಂಚಾರಿ ವಿಜಯ್ ಈವರೆಗೆ ಅಭಿನಯಕ್ಕಾಗಿ ಪ್ರಶಸ್ತಿಗಳನ್ನು ಗೆದ್ದವರು. ಕನ್ನಡಕ್ಕೆ ರಿಶಭ್ ಶೆಟ್ಟಿ ಮೂಲಕ ನಾಲ್ಕನೆಯ ರಾಷ್ಟ್ರಪ್ರಶಸ್ತಿಯು ಈ ವಿಭಾಗದಲ್ಲಿ ಬಂದಿದೆ. ಅದರಲ್ಲಿಯೂ ರಿಶಭ್ ಈ ಬಾರಿ ಮಲಯಾಳಂ ಲೆಜೆಂಡ್ ನಟ ಮಮ್ಮುಟ್ಟಿ ಜೊತೆಗೆ ಸ್ಪರ್ಧೆಯಲ್ಲಿ ಇದ್ದರು ಅಂದಾಗ ಪ್ರಶಸ್ತಿಯ ಮೌಲ್ಯವು ಭಾರೀ ಎತ್ತರಕ್ಕೆ ತಲುಪುತ್ತದೆ. ಕಾಂತಾರ ಸಿನೆಮಾ ನೋಡಿದವರು ಆಗಲೇ ಕಾಡಬೆಟ್ಟು ಶಿವನ ಅಭಿನಯಕ್ಕೆ ಫಿದಾ ಆಗಿದ್ದರು. ಅದರಲ್ಲಿಯೂ ಸಿನೆಮಾದ ಕೊನೆಯ 20 ನಿಮಿಷಗಳ ಕ್ಲೈಮ್ಯಾಕ್ಸ್ ಕನ್ನಡಕ್ಕೆ ಹೊಸದಾಗಿತ್ತು. ಅದು ಮೈ ರೋಮಾಂಚನ ಮಾಡುವ ಅಭಿನಯ ಆಗಿತ್ತು. ಅದಕ್ಕೆ ಅರ್ಹವಾಗಿ ರಿಶಭ್ ಶೆಟ್ಟರಿಗೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಅದರಲ್ಲಿ ಕೂಡ ತಾನೇ ನಿರ್ದೇಶಿಸಿ, ಅಭಿನಯ ಮಾಡಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ನಟ ಎನ್ನುವ ಕೀರ್ತಿ ನಮ್ಮ ಕುಂದಾಪುರದ ಹೈದನಿಗೆ ಸಿಕ್ಕಿದೆ. ಇನ್ನೇನು ಬೇಕು?

Rishab Shetty cinema Journey before Kantara
Kantara Movie Massive Set Constructed In Kundapura

ರಿಶಭ್ ಸಾಗಿ ಬಂದ ದಾರಿ ಕೇವಲ ಹೂವಿನದ್ದು ಆಗಿರಲಿಲ್ಲ!

1983ರಲ್ಲಿ ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ರಿಶಭ್ ಶೆಟ್ಟಿ ಅಲ್ಲಿಯೇ ತಮ್ಮ ಬಾಲ್ಯವನ್ನು, ಶಿಕ್ಷಣವನ್ನು ಸಂಭ್ರಮಿಸಿದವರು. ಮುಂದೆ ಪದವಿ ಪಡೆಯಲು ಬೆಂಗಳೂರು ವಿಜಯಾ ಕಾಲೇಜಿಗೆ ಸೇರಿದಾಗ ನಾಟಕ, ಯಕ್ಷಗಾನಗಳ ಸೆಳೆತ ತೀವ್ರವಾಯಿತು. ಹೊಟ್ಟೆಪಾಡಿಗಾಗಿ ನೀರಿನ ಬಾಟಲಿ ವ್ಯಾಪಾರ, ಸಣ್ಣ ಹೋಟೆಲ್, ರಿಯಲ್ ಎಸ್ಟೇಟ್ ಮಾಡಿದರೂ ವ್ಯವಹಾರ ಕೈಗೆ ಹತ್ತಲಿಲ್ಲ. ಸಿನೆಮಾಗಳ ಮೂಲಕವೇ ಅದೃಷ್ಟ ಪರೀಕ್ಷೆ ಮಾಡಬೇಕು ಎಂದು ನಿರ್ಧರಿಸಿ ಆರಂಭದಲ್ಲಿ ಕ್ಲಾಪ್ ಬಾಯ್, ಸ್ಪಾಟ್ ಬಾಯ್, ಸಹಾಯಕ ನಿರ್ದೇಶಕ…..ಹೀಗೆಲ್ಲ ಮುಂದುವರೆದರು. ಸಿನೆಮಾ ನಿರ್ದೇಶನದಲ್ಲಿ ಡಿಪ್ಲೊಮಾ ಪದವಿ ಪಡೆದದ್ದು ಇದೇ ಹಸಿವಿನ ದಿನಗಳಲ್ಲಿ!

ಆಗ ಅವರಿಗೆ ದೊರೆತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಗೆಳೆತನ ಅವರ ಬದುಕಿನ ದಾರಿಯನ್ನೇ ಬದಲಾಯಿಸಿತು. ಈ ಇಬ್ಬರು ಶೆಟ್ಟರು ಸೇರಿ ಕನ್ನಡ ಸಿನೆಮಾಗಳನ್ನು ನೆಕ್ಸ್ಟ್ ಲೆವಲಿಗೆ ತೆಗೆದುಕೊಂಡು ಹೋಗುವ ಕನಸು ಕಂಡರು.

2012, ಸ್ಪ್ಲೆಂಡರ್ ಬೈಕ್, ಗೆಳೆಯರು ಮತ್ತು ತುಫಲಕ್!

ಇಬ್ಬರು ಶೆಟ್ಟರು ತುಂಬಾ ಆಸೆ ಪಟ್ಟು ಮಾಡಿದ ಸಿನೆಮಾ ಅಂದರೆ ಅದು ತುಘಲಕ್. ಅದರ ಮೊದಲ ದಿನ ಸಿನೆಮಾ ಥಿಯೇಟರಗೆ ಬೈಕಲ್ಲಿ ಬಂದು ಗೆಳೆಯರು ಸಿಗರೇಟ್ ಸೇದುತ್ತಾ ಪ್ರೇಕ್ಷಕರನ್ನು ಕಾದು ನಿಂತಿದ್ದರು. ಎಷ್ಟು ಸಿಗರೇಟ್ ಖಾಲಿಯಾದರೂ ಥಿಯೇಟರಿಗೆ ಪ್ರೇಕ್ಷಕರೇ ಬರಲಿಲ್ಲ! ಇದು ರಿಶಭ್ ಅವರ ಓಪನಿಂಗ್ ಇನ್ನಿಂಗ್ಸ್! ಮುಂದೆ ಲೂಸಿಯಾ, ಉಳಿದವರು ಕಂಡಂತೆ, ರಿಕ್ಕಿ ಯಾವುದೂ ಆರ್ಥಿಕವಾಗಿ ಗೆಲ್ಲಿಸಲಿಲ್ಲ. ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿ ಅವರಿಗೆ ಭಾರೀ ಬ್ರೇಕ್ ಕೊಟ್ಟರೂ ದುಡ್ಡು ಮಾಡಲಿಲ್ಲ. ರಿಶಭ್ ಹೀರೋ ಆಗಿ ಅಭಿನಯಿಸಿದ ಬೆಲ್ ಬಾಟಮ್ ಸಿನೆಮಾ ನಿರ್ಮಾಪಕರನ್ನು ಗೆಲ್ಲಿಸಿತ್ತು.

ಕಿಸೆ ಮತ್ತು ಹೊಟ್ಟೆ ಖಾಲಿಯಾದಾಗ ಹೆಚ್ಚು ಕ್ರಿಯೇಟಿವ್ ಯೋಚನೆಗಳು ಬರುತ್ತವೆ ಎನ್ನುತ್ತಾರೆ ರಿಶಭ್! ಎಂತಹ ಬಿಕ್ಕಟ್ಟು ಬಂದಾಗಲೂ ರಿಶಭ್ ಮತ್ತು ರಕ್ಷಿತ್ ಧೈರ್ಯ ಕೆಡಲಿಲ್ಲ ಮತ್ತು ಗೆಳೆತನ ಬಿಡಲಿಲ್ಲ.

Kantara Movie Massive Set Constructed In Kundapura
Kantara Movie Massive Set Constructed In Kundapura

ಕಿರಿಕ್ ಪಾರ್ಟಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ!

ವರ್ಷಾನುಗಟ್ಟಲೆ ಸ್ಕ್ರಿಪ್ಟ್ ಬರೆದು ಆಸ್ತೆಯಿಂದ ಮಾಡಿದ ಸಿನೆಮಾಗಳು ಇವು. ಇಬ್ಬರು ಶೆಟ್ಟರು ಸೇರಿ ಮಾಡಿದ ಇವೆರಡೂ ಸಿನೆಮಾಗಳು ಸಾಂಡಲ್ ವುಡನಲ್ಲಿ ಸುನಾಮಿಯನ್ನೇ ಕ್ರಿಯೇಟ್ ಮಾಡಿದವು. ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳು ಹರಿದು ಬಂದವು. ಹಿಂದಿನ ಸಿನೆಮಾಗಳಲ್ಲಿ ಕೈಕೊಟ್ಟಿದ್ದ ಅದೃಷ್ಟವು ಈಗ ಕೈ ಹಿಡಿಯಿತು.

ಆಗ ಇನ್ನೊಬ್ಬ ಸೃಜನಶೀಲವಾಗಿ ಯೋಚನೆ ಮಾಡುವ ಶೆಟ್ಟರು ಈ ತಂಡವನ್ನು ಸೇರಿಕೊಂಡರು. ಅದು ರಾಜ್ ಬಿ ಶೆಟ್ಟಿ! ಇವರ ಕಾಂಬಿನೇಶನ್ ಕನ್ನಡ ಸಿನೆಮಾ ಉದ್ಯಮವನ್ನು ಭಾರೀ ಎತ್ತರಕ್ಕೆ ತೆಗೆದುಕೊಂಡು ಹೋಯಿತು. ರಿಶಭ್ ಶೆಟ್ಟರಿಗೆ ಲಕ್ ಖುಲಾಯಿಸಿತು. ಇದೀಗ ಅವರ ಪ್ರತಿಭೆಗೆ ನ್ಯಾಶನಲ್ ಅವಾರ್ಡ್ ಕೂಡ ಒಲಿದಿದೆ. ಮುಂದಿನ ಹತ್ತಾರು ವರ್ಷಗಳ ಕಾಲ ಈ ಮೂವರು ಗೆಳೆಯರು ಸಾಂಡಲ್ ವುಡನ್ನು ರೂಲ್ ಮಾಡುವುದು ಖಂಡಿತ. ರಾಷ್ಟ್ರಪ್ರಶಸ್ತಿ ಗೆದ್ದ ರಿಶಭ್ ಶೆಟ್ಟರಿಗೆ ಅಭಿನಂದನೆಗಳು.

ಈ ಬಾರಿ ಕನ್ನಡದ ನಾಲ್ಕು ಸಿನೆಮಾಗಳಿಗೆ ದೊರೆತಿವೆ 7 ರಾಷ್ಟ್ರಪ್ರಶಸ್ತಿಗಳು!

ಕಳೆದ ಒಂದೆರಡು ವರ್ಷಗಳಿಂದ ಪ್ರಖರ ಸೂರ್ಯನಿಗೆ ಮೋಡ ಮುಸುಕಿದ ಹಾಗೆ ಆಗಿದ್ದ ಕನ್ನಡ ಚಿತ್ರರಂಗಕ್ಕೆ ಚೇತೋಹಾರಿ ಸುದ್ದಿ ಇದು. ಬಹಳ ಶ್ರಮದಿಂದ ಜನರ ಮುಂದೆ ಬಂದ ಕೆ ಜಿ ಎಫ್ (ಚಾಪ್ಟರ್ 2) ಚಿತ್ರಕ್ಕೆ ಕೂಡ ಎರಡು ಪ್ರಶಸ್ತಿಗಳು ಬಂದಿವೆ.

ಪ್ರಶಸ್ತಿ ಗೆದ್ದ ಎಲ್ಲ ಸಿನೆಮಾಗಳಿಗೆ ನಮ್ಮ ಅಭಿನಂದನೆ ಇರಲಿ. ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಪದಕವೊಂದೇ ಲಕ್ಷ್ಯ – ಲಕ್ಷ್ಯ ಸೇನ್!

Continue Reading
Advertisement
cm siddaramaiah
ಪ್ರಮುಖ ಸುದ್ದಿ1 min ago

CM Siddaramaiah: ಸಿಎಂಗೆ ಇನ್ನೊಂದು ಶಾಕ್‌, ತಡೆಯಾಜ್ಞೆಗೂ ಕೇವಿಯಟ್

Bridge Collapse
ವೈರಲ್ ನ್ಯೂಸ್20 mins ago

Bridge Collapse: 9 ವರ್ಷಗಳಿಂದ ನಿರ್ಮಾಣವಾಗುತ್ತಿರುವ ಸೇತುವೆ 3ನೇ ಬಾರಿ ಕುಸಿದು ಬಿತ್ತು; ವಿಡಿಯೊ ನೋಡಿ

Manu Bhaker
ಕ್ರೀಡೆ36 mins ago

Manu Bhaker: 3 ತಿಂಗಳ ರಜೆಯಲ್ಲಿ ಭರತನಾಟ್ಯ, ಕುದುರೆ ಸವಾರಿ, ಸ್ಕೇಟಿಂಗ್ ಕಲಿಯಲಿದ್ದಾರೆ ಮನು ಭಾಕರ್

Physical Abuse
ದೇಶ1 hour ago

Physical Abuse: ದೇಶದಲ್ಲಿ ಪ್ರತಿ ಗಂಟೆಗೊಮ್ಮೆ 4 ಮಹಿಳೆಯರ ಮೇಲೆ ಅತ್ಯಾಚಾರ; ಬೆಚ್ಚಿಬೀಳಿಸುವ ಅಂಕಿ-ಅಂಶ ಬಹಿರಂಗ

Actor Nagabhushan birthday vidhyapathi promo Out
ಸ್ಯಾಂಡಲ್ ವುಡ್2 hours ago

Actor Nagabhushan: ನಾಗಭೂಷಣ್ ಬರ್ತ್‌ಡೇಗೆ ಡಾಲಿ ತಂಡದಿಂದ ಸ್ಪೆಷಲ್ ಗಿಫ್ಟ್‌; ನೋಡಿ ‘ವಿದ್ಯಾಪತಿ’ಯ ಕಿತಾಪತಿ!

Vinesh Phogat
ಕ್ರೀಡೆ2 hours ago

Vinesh Phogat: ತವರಿಗೆ ಮರಳಿದ ವಿನೇಶ್​​​ ಫೋಗಟ್​ಗೆ ಭರ್ಜರಿ ಸ್ವಾಗತ; ಅಭಿಮಾನಿಗಳನ್ನು ಕಂಡು ಕಣ್ಣೀರು

Government Employees
ಕರ್ನಾಟಕ2 hours ago

Government Employees: 7ನೇ ವೇತನ ಆಯೋಗ; ಸರ್ಕಾರಿ ನೌಕರರ ಸಂಘದಿಂದ ಇಂದು ಸಿಎಂ, ಡಿಸಿಎಂಗೆ ಸನ್ಮಾನ; Live ಇಲ್ಲಿದೆ

Viral Video
Latest2 hours ago

Viral Video: ಅಣೆಕಟ್ಟಿನ ಅಂಚಿನಲ್ಲಿ ನಿಂತು ಸ್ಟಂಟ್ ಮಾಡಿದ; ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡ!

Crorepati Sweeper
Latest2 hours ago

Crorepati Sweeper: ಕಸ ಗುಡಿಸುವ ಕಾರ್ಮಿಕನ ಬಳಿ ಇತ್ತು ಐಷಾರಾಮಿ ಕಾರುಗಳು, ಕೋಟಿ ಮೌಲ್ಯದ ಆಸ್ತಿ! ಆತ ಸಂಪಾದಿಸಿದ್ದು ಹೇಗೆ?

70th National Film Awards ational Award winner Madhyantara Short Movie
ಸ್ಯಾಂಡಲ್ ವುಡ್3 hours ago

70th National Film Awards: ಕನ್ನಡಕ್ಕೆ ಸಿಕ್ಕಿದ್ದು ಒಟ್ಟು 7 ಪ್ರಶಸ್ತಿಗಳು; ಜ್ಯೂರಿಗಳನ್ನೇ ಇಂಪ್ರೆಸ್‌ ಮಾಡಿದ ʻಮಧ್ಯಂತರʼ ಕಿರು ಚಿತ್ರ ಬಗ್ಗೆ ನಿಮಗೆಷ್ಟು ಗೊತ್ತು?

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌