ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Actor Yash) ಸದ್ಯ ಬಹು ನಿರೀಕ್ಷಿತ ʼಟಾಕ್ಸಿಕ್ʼ (Toxic) ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ʼಕೆಜಿಎಫ್ʼ ಸರಣಿ ಚಿತ್ರಗಳ ಯಶಸ್ಸಿನ ಬಳಿಕ ಯಶ್ ನಟಿಸುತ್ತಿರುವ ಸಿನಿಮಾ ಇದಾಗಿರುವುದರಿಂದ ಸಹವಾಗಿಯೇ ಕುತೂಹಲ ಗರಿಗೆದರಿದೆ. ಈ ಮಧ್ಯೆ ಅವರು ತಮ್ಮ ಜತೆ ಸದಾ ಇರುವ ಬಾಡಿಗಾರ್ಡ್ ಶ್ರೀನಿವಾಸ್ ಅವರ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಶ್ರೀನಿವಾಸ್ ಈ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ʼʼಇಂದು ನನ್ನ ಹುಟ್ಟುಹಬ್ಬ ಅತ್ಯಂತ ಆನಂದದಿಂದ ಕೂಡಿತ್ತು! ಯಶ್ ಅಣ್ಣ, ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ನನಗೆ ಅನೇಕ ಹಾರೈಕೆಗಳನ್ನು ಹಂಚಿದ್ದಾರೆ. ಇದು ನನ್ನ ಜೀವನದ ಅಮೂಲ್ಯ ದಿನ. ನಿಮ್ಮ ಪ್ರೇಮ ಮತ್ತು ಆಶೀರ್ವಾದಗಳು ನನಗೆ ಅತ್ಯಂತ ಸುಖಕರʼʼ ಎಂದು ಬರೆದುಕೊಂಡಿದ್ದಾರೆ. ಯಶ್ ಅವರ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: Jodi No 1: ಜೋಡಿ ನಂ. 1ನಲ್ಲಿ ಗೆದಿದ್ದು ಯಾರು? ಅದ್ಧೂರಿಯಾಗಿ ನಡೀತು ಗ್ರ್ಯಾಂಡ್ ಫಿನಾಲೆ!