Site icon Vistara News

Actress Ramya : ಮೋಹಕ ತಾರೆ ನಟಿ ರಮ್ಯಾಗೆ ಕೂಡಿ ಬಂತಾ ಕಂಕಣ ಭಾಗ್ಯ? ನವೆಂಬರ್‌ನಲ್ಲಿ ಮದುವೆ ಫಿಕ್ಸಾ!

Actress Ramya

ನಟಿ ರಮ್ಯಾಗೆ (Actress Ramya) ಹೋದಲ್ಲೆಲ್ಲ ಎದುರಾಗುವ ಮೊದಲ ಪ್ರಶ್ನೆ ಮದುವೆ ಯಾವಾಗ ಎನ್ನುವುದು.

ಹಿಂದೊಮ್ಮೆ ಮಂಡ್ಯದಲ್ಲೂ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ ಕೂಡಲೇ, ʻʻದಯವಿಟ್ಟು ನಂಗೊಬ್ಬ ಹುಡುಗನ್ನ ಹುಡುಕಿಕೊಡಿ ಪ್ಲೀಸ್‌ʼʼ ಎಂದಿದ್ದರು. ʻನಾನು ಗೌಡ್ರು ತಾನೇ.. ನಂಗೊಬ್ಬ ಒಳ್ಳೆಯ ಗೌಡ್ರ ಹುಡುಗನ್ನ ಹುಡುಕಿ ಪ್ಲೀಸ್‌. ನನಗೂ ನೋಡಿ ನೋಡಿ ಸಾಕಾಗಿದೆ ಹುಡುಕಿ ನೀವೆʼʼ ಎಂದಿದ್ದರು.

ಇದೀಗ 42 ವಯಸ್ಸಿಗೆ ರಮ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಂತಿದೆ. ನವೆಂಬರ್ ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಮೋಹಕತಾರೆ ರಮ್ಯಾ ಉದ್ಯಮಿಯೊಬ್ಬರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಇಷ್ಟರಲ್ಲೇ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆ. ವರ ಚೌದ್ರಿ ಫ್ಯಾಮಿಲಿ ಎಂಬುದು ದಟ್ಟವಾಗಿ ಕೇಳಿ ಬರುತ್ತಿದೆ. ಇನ್ನೂ ಈ ಕುರಿತು ನಟಿ ರಮ್ಯಾ ಅವರಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

ಗುಲಾಬಿಗಳ ಜತೆ ಮೋಹಕ ತಾರೆ

ಮೋಹಕತಾರೆ ರಮ್ಯಾ (Actress Ramya) ಅವರು ಸುಂದರವಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಗುಲಾಬಿ ಬಣ್ಣದ ಗುಲಾಬಿಗಳ ಸೌಂದರ್ಯವನ್ನು ಸವಿಯುವುದು ಕಾಣಬಹುದು.
ʻʻ2 ದಶಕ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಈಗಲೂ ತನ್ನ ಜೀವನದ ಸಾಮ್ರಾಜ್ಯಕ್ಕೆ ತಾನೆ ರಾಣಿ , ಲವ್ ಯೂ ರಾಣಿʼʼ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.
ಈ ಫೋಟೊ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ನೂರಾರು ಮಂದಿ ಇದಕ್ಕೆ ಕಮೆಂಟ್​ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಫೋಟೊಗಳ ಜತೆ ರಮ್ಯಾ ಅವರು ಒಂದು ಚಂದದ ಕವನ ಹಂಚಿಕೊಂಡಿದ್ದಾರೆ. ಈ ಕವನದಲ್ಲಿ ದೇವರು ಮತ್ತು ಜೀವನದ ಬಗ್ಗೆ ಹೇಳಲಾಗಿದೆ.
ಗಾರ್ಡನ್ ಏರಿಯಾದಲ್ಲಿ ವೈಟ್ ಶರ್ಟ್ ಧರಿಸಿ ನಿಂತಿದ್ದ ನಟಿ ಗುಲಾಬಿಗಳಿಗೆ ದೂರದಿಂದಲೇ ಕಿಸ್ ಮಾಡಿದ್ದಾರೆ.

Exit mobile version