ಬೆಂಗಳೂರು: ವಿನಯ್ ರಾಜ್‌ಕುಮಾರ್ ಅಭಿನಯಿಸಿರುವ ʻಒಂದು ಸರಳ ಪ್ರೇಮ ಕಥೆʼ ಸೋಮವಾರ (ಫೆಬ್ರವರಿ 12) ಸೆಲೆಬ್ರಿಟಿ ಶೋ ಏರ್ಪಡಿಸಲಾಗಿತ್ತು. ಬಿಗ್ ಬಾಸ್ ಖ್ಯಾತಿಯ ತನಿಷಾ, ಕಾರ್ತಿಕ್, ಸೇರಿದಂತೆ ಹಲವು ನಟ ನಟಿಯರು ಭಾಗಿಯಾಗಿದ್ದರು. ವಿಶೇಷ ಅಂದರೆ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು (Bellulli Kabab Chandru) ಕೂಡ ಭಾಗಿ ಆಗಿದ್ದರು. ಸಿನಿಮಾ ಮುಗಿದ ಬಳಿಕ ‘ಚೆನ್ನಾಗಿ ಅಲ್ಲಾಡಿಸಿದ್ದೀನಾ’ ಎಂದು ಅವರ ಬಳಿ ಸಿಂಪಲ್ ಸುನಿ ಅಭಿಪ್ರಾಯ ಕೇಳಿದ್ದಾರೆ. ಈ ವಿಡಿಯೊವನ್ನು ಮಾಧ್ಯಮವೊಂದು ಪೋಸ್ಟ್ ಮಾಡಿದೆ.
ಮಾಧ್ಯಮದ ಮುಂದೆ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು. ಚಂದ್ರು ಮಾತನಾಡಿ ‘ತುಂಬ ಚೆನ್ನಾಗಿ ಅಲ್ಲಾಡಿಸಿದ್ದೀರಿ. ಈ ಸಿನಿಮಾದಲ್ಲಿ ಎರಡು ಕ್ಲೈಮ್ಯಾಕ್ಸ್ ಇದೆ. ನಮ್ಮ ರಾಹುಲ್ಲಾ.. ಅಲ್ಲ.. ಸುನಿಲ್ಲಾ ತುಂಬ ಚೆನ್ನಾಗಿ ಮಾಡಿದ್ದಾರೆ. ನನ್ನ ಬೆಳ್ಳುಳ್ಳಿ ಕಬಾಬ್ಗೆ ನೀಡಿದ ಬೆಂಬಲದ ರೀತಿಯೇ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು. ನೋಡ್ತಾ ಇರಬೇಕು, ಒನ್ ಮೋರ್ ಒನ್ ಮೋರ್ ಅಂತಾ ಇರಬೇಕು’ ಎಂದು ಚಂದ್ರು ಹೇಳಿದ್ದಾರೆ.
ಚಂದ್ರು ಅವರು ತಮ್ಮ ಹೋಟೆಲ್‌ನಲ್ಲಿ ಅಡುಗೆ ಮಾಡಿ ಕೆಲ ಯುಟ್ಯೂಬ್ ಚಾನೆಲ್‌ಗಳಿಗೆ ವಿಡಿಯೋ ಶೂಟ್ ಮಾಡಿಕೊಡುತ್ತಾರೆ. ಚಂದ್ರು ಅವರು ಮಾತನಾಡುವ ಶೈಲಿ ವಿಶಿಷ್ಟ. ಇದಕ್ಕೆ ಅದೆಷ್ಟೋ ಫ್ಯಾನ್ಸ್ ಚಂದ್ರುಗೆ ಫಿದಾ ಆಗಿದ್ದಾರೆ. ಪ್ರತಿ ವಿಡಿಯೊ ಕೊನೆಯಲ್ಲಿ ಚಂದ್ರು ಅವರು ಹೇಳುವ ʻಬರ್ತಾ ಇರೋದ್, ತಿಂತಾ ಇರೋದೇʼ ಎನ್ನುವ ಮಾತು ಬಹಳ ಫೇಮಸ್. ʻಬೆಳ್ಳುಳಿ ಕಬಾಬ್ʼ ಡೈಲಾಗ್ ಮೂಲಕ ಚಂದ್ರು (Bellulli Kabab Chandru) ಮತ್ತು ಅವರ ಜೊತೆ ಇರುವ ಹುಡುಗ ರಾವುಲ್ಲಾ ಫೇಮಸ್ ಆಗಿದ್ದಾರೆ.
ಇದನ್ನೂ ಓದಿ: Bellulli Kabab Chandru: ʻರಾವುಲ್ಲಾʼನ ಕಂಡ್ರೆ ಸಾಕು ಹುಡುಗಿಯರು ಬಂದು ಅಲ್ಲಾಡ್ಸಪ್ಪ ಅಂತಾರೆ!
ಬೇಸರ ಹೊರ ಹಾಕಿದ್ದ ಚಂದ್ರು
ಈ ಮೊದಲು ಚಂದ್ರು ಅವರು ಮಾತನಾಡಿ ʻʻನನಗೆ ಈ ಬಗ್ಗೆ ಹೇಳೋಕೆ ಅಸಹ್ಯವಾಗುತ್ತಿದೆ. ಏನಾಗುತ್ತೆ ಅಂದರೆ ರಾವುಲ್ಲಾ ನನಗೆ ಒಳ್ಳೆ ಸಮಯಕ್ಕೆ ಸಿಕ್ಕಿದ, ಸಹಾಯ ಮಾಡಿದ. ಅದನ್ನು ಪ್ರತಿ ಸಲ ನಾನು ಅವನ ಮುಂದೆ ಹೇಳಿದ್ದೀನಿ. ಅವನು ಇನ್ನೂ ಬದುಕಬೇಕು, ಬಾಳಬೇಕು. ಅವನಿಗೆ ಬೇಕಾದರೆ ಹೋಟೆಲ್ ಮಾಡಿಕೊಡ್ತೀನಿ. ಈಗ ನಡೀತಾ ಇರೋದು ನೋಡಿದರೆ, ಚಿಂತೆ ಆಗ್ತಾ ಇದೆ. ಈಗ ಎಲ್ಲಿ ನೋಡಿದರೂ ರಾವುಲ್ಲ ಅಂತಾರೆ. ಹುಡುಗಿಯರು ಬಂದು ರಾವುಲ್ಲ ಅಲ್ಲಾಡ್ಸಪ್ಪ ಅಂತಾರೆ. ಇವೆಲ್ಲ ಹೆಣ್ಮಕ್ಕಳು ಮಾತಾಡುವ ಮಾತಲ್ಲ. ಅದೆಲ್ಲ ನೋಡಿದರೆ ನಮಗೆ ಬೇಜಾರಾಗುತ್ತದೆ’ ಎಂದು ಚಂದ್ರು ಹೇಳಿದ್ದರು.