Bellulli Kabab Chandru: `ರಾಹುಲ್ಲಾ ಅಲ್ಲ.. ಸುನಿಲ್ಲಾ' ತುಂಬ ಚೆನ್ನಾಗಿ ಸಿನಿಮಾ ಮಾಡಿದ್ದಾರೆ ಎಂದ ಬೆಳ್ಳುಳ್ಳಿ ಕಬಾಬ್​ ಚಂದ್ರು! - Vistara News

ಸ್ಯಾಂಡಲ್ ವುಡ್

Bellulli Kabab Chandru: `ರಾಹುಲ್ಲಾ ಅಲ್ಲ.. ಸುನಿಲ್ಲಾ’ ತುಂಬ ಚೆನ್ನಾಗಿ ಸಿನಿಮಾ ಮಾಡಿದ್ದಾರೆ ಎಂದ ಬೆಳ್ಳುಳ್ಳಿ ಕಬಾಬ್​ ಚಂದ್ರು!

ವಿಶೇಷ ಅಂದರೆ ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ಚಂದ್ರು (Bellulli Kabab Chandru) ಕೂಡ ಭಾಗಿ ಆಗಿದ್ದರು. ಸಿನಿಮಾ ಮುಗಿದ ಬಳಿಕ ‘ಚೆನ್ನಾಗಿ ಅಲ್ಲಾಡಿಸಿದ್ದೀನಾ’ ಎಂದು ಅವರ ಬಳಿ ಸಿಂಪಲ್ ಸುನಿ ಅಭಿಪ್ರಾಯ ಕೇಳಿದ್ದಾರೆ. ಈ ವಿಡಿಯೊವನ್ನು ಮಾಧ್ಯಮವೊಂದು ಪೋಸ್ಟ್‌ ಮಾಡಿದೆ.

VISTARANEWS.COM


on

Bellulli Kabab Chandru with sunil
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿನಯ್‌ ರಾಜ್‌ಕುಮಾರ್‌ ಅಭಿನಯಿಸಿರುವ ʻಒಂದು ಸರಳ ಪ್ರೇಮ ಕಥೆʼ ಸೋಮವಾರ (ಫೆಬ್ರವರಿ 12) ಸೆಲೆಬ್ರಿಟಿ ಶೋ ಏರ್ಪಡಿಸಲಾಗಿತ್ತು. ಬಿಗ್‌ ಬಾಸ್‌ ಖ್ಯಾತಿಯ ತನಿಷಾ, ಕಾರ್ತಿಕ್‌, ಸೇರಿದಂತೆ ಹಲವು ನಟ ನಟಿಯರು ಭಾಗಿಯಾಗಿದ್ದರು. ವಿಶೇಷ ಅಂದರೆ ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ಚಂದ್ರು (Bellulli Kabab Chandru) ಕೂಡ ಭಾಗಿ ಆಗಿದ್ದರು. ಸಿನಿಮಾ ಮುಗಿದ ಬಳಿಕ ‘ಚೆನ್ನಾಗಿ ಅಲ್ಲಾಡಿಸಿದ್ದೀನಾ’ ಎಂದು ಅವರ ಬಳಿ ಸಿಂಪಲ್ ಸುನಿ ಅಭಿಪ್ರಾಯ ಕೇಳಿದ್ದಾರೆ. ಈ ವಿಡಿಯೊವನ್ನು ಮಾಧ್ಯಮವೊಂದು ಪೋಸ್ಟ್‌ ಮಾಡಿದೆ.

ಮಾಧ್ಯಮದ ಮುಂದೆ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ ಬೆಳ್ಳುಳ್ಳಿ ಕಬಾಬ್​ ಖ್ಯಾತಿಯ ಚಂದ್ರು. ಚಂದ್ರು ಮಾತನಾಡಿ ‘ತುಂಬ ಚೆನ್ನಾಗಿ ಅಲ್ಲಾಡಿಸಿದ್ದೀರಿ. ಈ ಸಿನಿಮಾದಲ್ಲಿ ಎರಡು ಕ್ಲೈಮ್ಯಾಕ್ಸ್​ ಇದೆ. ನಮ್ಮ ರಾಹುಲ್ಲಾ.. ಅಲ್ಲ.. ಸುನಿಲ್ಲಾ ತುಂಬ ಚೆನ್ನಾಗಿ ಮಾಡಿದ್ದಾರೆ. ನನ್ನ ಬೆಳ್ಳುಳ್ಳಿ ಕಬಾಬ್​ಗೆ ನೀಡಿದ ಬೆಂಬಲದ ರೀತಿಯೇ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು. ನೋಡ್ತಾ ಇರಬೇಕು, ಒನ್​ ಮೋರ್​ ಒನ್​ ಮೋರ್‌ ಅಂತಾ ಇರಬೇಕು’ ಎಂದು ಚಂದ್ರು ಹೇಳಿದ್ದಾರೆ.

ಚಂದ್ರು ಅವರು ತಮ್ಮ ಹೋಟೆಲ್‌ನಲ್ಲಿ ಅಡುಗೆ ಮಾಡಿ ಕೆಲ ಯುಟ್ಯೂಬ್ ಚಾನೆಲ್‌ಗಳಿಗೆ ವಿಡಿಯೋ ಶೂಟ್ ಮಾಡಿಕೊಡುತ್ತಾರೆ. ಚಂದ್ರು ಅವರು ಮಾತನಾಡುವ ಶೈಲಿ ವಿಶಿಷ್ಟ. ಇದಕ್ಕೆ ಅದೆಷ್ಟೋ ಫ್ಯಾನ್ಸ್‌ ಚಂದ್ರುಗೆ ಫಿದಾ ಆಗಿದ್ದಾರೆ. ಪ್ರತಿ ವಿಡಿಯೊ ಕೊನೆಯಲ್ಲಿ ಚಂದ್ರು ಅವರು ಹೇಳುವ ʻಬರ್ತಾ ಇರೋದ್‌, ತಿಂತಾ ಇರೋದೇʼ ಎನ್ನುವ ಮಾತು ಬಹಳ ಫೇಮಸ್‌. ʻಬೆಳ್ಳುಳಿ ಕಬಾಬ್‌ʼ ಡೈಲಾಗ್‌ ಮೂಲಕ ಚಂದ್ರು (Bellulli Kabab Chandru) ಮತ್ತು ಅವರ ಜೊತೆ ಇರುವ ಹುಡುಗ ರಾವುಲ್ಲಾ ಫೇಮಸ್​ ಆಗಿದ್ದಾರೆ.

ಇದನ್ನೂ ಓದಿ: Bellulli Kabab Chandru: ʻರಾವುಲ್ಲಾʼನ ಕಂಡ್ರೆ ಸಾಕು ಹುಡುಗಿಯರು ಬಂದು ಅಲ್ಲಾಡ್ಸಪ್ಪ ಅಂತಾರೆ!

ಬೇಸರ ಹೊರ ಹಾಕಿದ್ದ ಚಂದ್ರು

ಈ ಮೊದಲು ಚಂದ್ರು ಅವರು ಮಾತನಾಡಿ ʻʻನನಗೆ ಈ ಬಗ್ಗೆ ಹೇಳೋಕೆ ಅಸಹ್ಯವಾಗುತ್ತಿದೆ. ಏನಾಗುತ್ತೆ ಅಂದರೆ ರಾವುಲ್ಲಾ ನನಗೆ ಒಳ್ಳೆ ಸಮಯಕ್ಕೆ ಸಿಕ್ಕಿದ, ಸಹಾಯ ಮಾಡಿದ. ಅದನ್ನು ಪ್ರತಿ ಸಲ ನಾನು ಅವನ ಮುಂದೆ ಹೇಳಿದ್ದೀನಿ. ಅವನು ಇನ್ನೂ ಬದುಕಬೇಕು, ಬಾಳಬೇಕು. ಅವನಿಗೆ ಬೇಕಾದರೆ ಹೋಟೆಲ್‌ ಮಾಡಿಕೊಡ್ತೀನಿ. ಈಗ ನಡೀತಾ ಇರೋದು ನೋಡಿದರೆ, ಚಿಂತೆ ಆಗ್ತಾ ಇದೆ. ಈಗ ಎಲ್ಲಿ ನೋಡಿದರೂ ರಾವುಲ್ಲ ಅಂತಾರೆ. ಹುಡುಗಿಯರು ಬಂದು ರಾವುಲ್ಲ ಅಲ್ಲಾಡ್ಸಪ್ಪ ಅಂತಾರೆ. ಇವೆಲ್ಲ ಹೆಣ್ಮಕ್ಕಳು ಮಾತಾಡುವ ಮಾತಲ್ಲ. ಅದೆಲ್ಲ ನೋಡಿದರೆ ನಮಗೆ ಬೇಜಾರಾಗುತ್ತದೆ’ ಎಂದು ಚಂದ್ರು ಹೇಳಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

The Rulers: ಅಂಬೇಡ್ಕರ್ ಹೆಸರಲ್ಲಿ ಸಿನಿಮಾ ಮಾಡಿದ್ದಕ್ಕೆ` ರೌಡಿ ಶೀಟರ್ʼ ಪಟ್ಟ ಕೊಡ್ತಾ ಕಾಂಗ್ರೆಸ್ ಸರ್ಕಾರ? ನಟ ಹೇಳಿದ್ದೇನು?

The Rulers: Power of Constitution: ದಿ ರೂಲರ್ಸ್ಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನ ಬರೆದಿರುವುದು ಕೋಲಾರದ ಡಾ. ಕೆ.ಎಮ್ ಸಂದೇಶ್. ಡಾ. ಬಿ.ಆರ್ ಅಂಬೇಡ್ಕರ್ ತತ್ವ ಸಿದ್ದಾಂತವನ್ನು ಮೈಗೂಡಿಸಿಕೊಂಡು, ವರ್ಷಗಳಿಂದ ಸಾಮಾಜಿಕ ಸಮಾನತೆಗಾಗಿ 350ಕ್ಕೂ ಹೆಚ್ಚು ಹೋರಾಟಗಳನ್ನ ಮಾಡಿ ಗೆದ್ದಿರೋ, 350ಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳನ್ನ ಮಾಡಿರೋ ಇವರು ತಮ್ಮ ಬದುಕಿನಲ್ಲೇ ನಡೆದ ಘಟನೆಗಳನ್ನಿಟ್ಟುಕೊಂಡು ಕಮರ್ಷಿಯಲ್ಲಾಗಿ ಸಿನಿಮಾ ಮಾಡಿದ್ದಾರೆ.

VISTARANEWS.COM


on

Congress government notice to The Rulers: Power of Constitution hero
Koo

ಬೆಂಗಳೂರು: ʻದ ರೂಲರ್ಸ್ʼ Power of Constitution (The Rulers: Power of Constitution) ಇದು ಸ್ಯಾಂಡಲ್ ವುಡ್ (Sandalwood Movie) ಅಂಗಳದಲ್ಲಿ ಸದ್ದಿಲ್ಲದೇ ಸಿದ್ಧವಾಗಿರುವ ಹೊಸ ಸಿನಿಮಾ. ಕಾಲಿವುಡ್‌ನ ಖ್ಯಾತ ನಿರ್ದೇಶಕ, ಪೊಲ್ಲಾದವನ್‌, ಅಸುರನ್‌, ವಿಸಾರಣೈ ಚಿತ್ರಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ ವೆಟ್ರಿಮಾರನ್ (Director Vetrimaran) ಗರಡಿಯಲ್ಲಿ ನುರಿತ ಕನ್ನಡದ ಹುಡುಗರು ಕಟ್ಟಿದ ಸೂಕ್ಷ್ಮ ಸಂವೇದನೆಗಳ (Sensitive Movie) ಸಿನಿಮಾ (The Rulers Movie). ಸಂವಿಧಾನದ ಶಕ್ತಿಯನ್ನು ತೋರುವ ಚಲನಚಿತ್ರ ʻದ ರೂಲರ್ಸ್ʼ ಸಿನಿ ತಂಡ ಈಗ ತೊಂದರೆಯಲ್ಲಿದೆ. ಮೊದಲ ಭಾರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ವಿಜೃಂಭಣೆಯಿಂದ ತೋರಿಸುವ ಪ್ರಯತ್ನ ಮಾಡಿರುವ ʻರೂಲರ್ಸ್ʼ ಚಿತ್ರದ ನಾಯಕ ನಟ ಸಂದೇಶ್ ಅವರ ಮೇಲೆ ಕಾಂಗ್ರೆಸ್ ಸರ್ಕಾರ ನೋಟಿಸ್‌ ಜಾರಿ ಮಾಡಿದೆ. ಈ ಬಗ್ಗೆ ನಟ ಸಂದೇಶ್ ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.

ವೆಟ್ರಿಮಾರನ್‌ ಅವರ ತಂಡದಲ್ಲಿ ಕೆಲಸ ಮಾಡಿದ್ದ ಹುಡುಗರೆಲ್ಲಾ ಸೇರಿ ಚೊಚ್ಚಲ ಕನ್ನಡ ಸಿನಿಮಾ ಮಾಡಿದ್ದಾರೆ. ʻದ ರೂಲರ್ಸ್ʼ ಟೈಟಲ್‌ಗೆ Power of Constitution ಅನ್ನೋ ಅಡಿ ಬರಹವಿದೆ. ಹೊಸ ವರ್ಷದ ಮೊದಲ ದಿನ ದ ರೂಲರ್ಸ್ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು, ಅದು ಸಾಕಷ್ಟು ಸೌಂಡ್‌ ಮಾಡಿತ್ತು. ಕೋಲಾರ ಜಿಲ್ಲೆಯಲ್ಲಿ ನಡೆದಿರುವ, ನಡೆಯುತ್ತಿರುವ ಘಟನಾವಳಿಗಳನ್ನಾಧರಿಸಿ ಮಾಡಿರುವ ಕಥೆ. ಸಂವಿಧಾನವೊಂದು ನೀಡುವ ಆಸರೆ ಮತ್ತು ಶಕ್ತಿ ಎಂಥಹದ್ದು, ಅದು ಭಾರತೀಯ ಪ್ರಜ್ಞೆಗೆ ಕೊಟ್ಟಿರೋ ಶಕ್ತಿ ಎಂಥಹದ್ದು ಅನ್ನೋ ವಿಚಾರವನ್ನ ಮೂಲವಾಗಿಸಿಕೊಂಡು ದ ರೂಲರ್ಸ್ ಚಿತ್ರವನ್ನ ಮಾಡಲಾಗಿದೆ.

ಇದನ್ನೂ ಓದಿ: Anupama Parameswaran: ಅನುಪಮಾ ಪರಮೇಶ್ವರನ್ ಹೊಸ ಸಿನಿಮಾ ಅನೌನ್ಸ್‌: ನಟಿಯ ಲುಕ್‌ಗೆ ಫ್ಯಾನ್ಸ್‌ ಫಿದಾ!

ತೊಂದರೆಯಲ್ಲಿ ಚಿತ್ರತಂಡ

ತಂಡ ಸದ್ಯ ತೊಂದರೆಯಲ್ಲಿದೆ. ಕನ್ನಡ ಸಿನಿಮಾ ರಂಗದಲ್ಲಿ ಮೊದಲ ಭಾರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ವಿಜೃಂಭಣೆಯಿಂದ ತೋರಿಸುವ ಪ್ರಯತ್ನ ಮಾಡಿರುವದ ʻದ ರೂಲರ್ಸ್ʼ ಚಿತ್ರದ ನಾಯಕ ನಟ ಸಂದೇಶ್ ಅವರ ಮೇಲೆ ಕಾಂಗ್ರೆಸ್ ಸರ್ಕಾರ ನೋಟಿಸ್‌ ಜಾರಿ ಮಾಡಿದೆ ಎಂದು ಚಿತ್ರತಂಡ ಆರೋಪಿಸಿದೆ. ಸಂದೇಶ್ ಈ ಬಗ್ಗೆ ಮಾತನಾಡಿ ʻʻನನ್ನ ಜನರ ಪರವಾಗಿ 341 ಯಶಸ್ವಿ ಹೋರಾಟಗಳು, 151 ಅಂತರ್ಜಾತೀಯ ವಿವಾಹಗಳನ್ನು ಮಾಡಿ, ಹಲವು ಮಕ್ಕಳಿಗೆ ವಿಧ್ಯಾಭ್ಯಾಸ, ನೂರಾರು ಗುಡಿಸಲು ವಾಸಿಗಳಿಗೆ ಮನೆ ನಿರ್ಮಿಸಿಕೊಟ್ಟಿದ್ದು, ಸಾವಿರ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಿಕೊಟ್ಟಿದ್ದೇನೆ. ನನ್ನ ಜನರ ಪರ ಹೋರಾಟ ಮಾಡುವ ಸಂದರ್ಭಗಳಲ್ಲಿ ನನ್ನ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ನ್ಯಾಯಲಯದಲ್ಲಿ ಪ್ರಕರಣಗಳಲ್ಲಿ ನಮಗೆ ಜಯ ಸಿಕ್ಕಿದೆ. ಇಲ್ಲಿಯ ತನಕ ನಮ್ಮ‌ ಜನರ ಪರವಾಗಿ ಹೋರಾಟ ಮಾಡಿದ್ದೇನೆ ಹೊರೆತು ಯಾವತ್ತು ಜನರಿಗೆ ತೊಂದರೆ ಕೊಟ್ಟಿಲ್ಲ. ಇತ್ತಿಚಿಗೆ ಒಂದು ವರ್ಷದಿಂದ ನನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿ ಅಡಿಯಲ್ಲಿ ಚಲನಚಿತ್ರ ಮೂಡಿ ಬಂದಿದ್ದು, ನಮ್ಮ ಸಿನಿಮಾ ಆಡಿಯೋ ಕಾರ್ಯಕ್ರಮ ಮಾರ್ಚ್ 17 ರಂದು ಮಾಡಿದೆವು. , ಇದನ್ನು ನೋಡಿ ಕೋಪಿಸಿಕೊಂಡ ಮನುವಾದಿಗಳು ಮಾರ್ಚ್ 25ರಂದ ನನಗೆ ನೋಟಿಸ್ ಸಹ ಜಾರಿ ಮಾಡಿ, ರೌಡಿ ಪಟ್ಟ ಕೊಟ್ಟಿದ್ದಾರೆ. ಅದು ಕೂಡ ನಮ್ಮ ಸರ್ಕಾರದಿಂದಲೇ ಹೀಗೆ ಮಾಡಿರುವುದು ಮನಸ್ಸಿಗೆ ನೋವುಂಟು ಮಾಡಿದೆʼʼ ಎಂದು ವಿಡಿಯೊ ಶೇರ್‌ ಮಾಡಿಕೊಂಡಿದ್ದಾರೆ.

ಸಿನಿಮಾದಲ್ಲಿ ಏನಿದೆ?

ಈ ಸಿನಿಮಾದಲ್ಲಿ ಇಲ್ಲಿ ಮೇಲೂ ಕೀಳು ಅನ್ನುವ ಸಮುದಾಯಗಳ ಸಂಘರ್ಷದಲ್ಲಿ ಮರೆಯಾದ ಮಾನವೀಯತೆಯನ್ನು ಒಂದು ಕಡೆ ಬಿಂಬಿಸಿದರೆ, ಮತ್ತೊಂದು ಕಡೆ ಸಂವಿಧಾನ ಕೊಟ್ಟಿರುವ ಸಮಾನತೆಯ ಹಕ್ಕನ್ನು ಪ್ರತಿಪಾದಿಸುವ, ಅದರ ಶಕ್ತಿಯನ್ನು ಪ್ರದರ್ಶಿಸುವ ಮತ್ತೊಂದು ಮಜಲನ್ನು ಅನಾವರಣಗೊಳಿಸಿದ್ದಾರಂತೆ.

ದಿ ರೂಲರ್ಸ್ಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನ ಬರೆದಿರುವುದು ಕೋಲಾರದ ಡಾ. ಕೆ.ಎಮ್ ಸಂದೇಶ್. ಡಾ. ಬಿ.ಆರ್ ಅಂಬೇಡ್ಕರ್ ತತ್ವ ಸಿದ್ದಾಂತವನ್ನು ಮೈಗೂಡಿಸಿಕೊಂಡು, ವರ್ಷಗಳಿಂದ ಸಾಮಾಜಿಕ ಸಮಾನತೆಗಾಗಿ 350ಕ್ಕೂ ಹೆಚ್ಚು ಹೋರಾಟಗಳನ್ನ ಮಾಡಿ ಗೆದ್ದಿರೋ, 350ಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳನ್ನು ಮಾಡಿರೋ ಇವರು ತಮ್ಮ ಬದುಕಿನಲ್ಲೇ ನಡೆದ ಘಟನೆಗಳನ್ನಿಟ್ಟುಕೊಂಡು ಕಮರ್ಷಿಯಲ್ಲಾಗಿ ಸಿನಿಮಾ ಮಾಡಿದ್ದಾರೆ.

ಇದನ್ನೂ ಓದಿ: Pavitra Naresh: ಪವಿತ್ರಾ ಲೋಕೇಶ್-ನರೇಶ್ ಪ್ರೇಮ ಕಹಾನಿ ಶುರುವಾಗಿದ್ದು ಹೇಗೆ? ’ಮತ್ತೆ ಮದುವೆ’ ಟ್ರೈಲರ್‌ ಔಟ್‌!

ಎಂ.ಎನ್.ಎಂ ಮೂವೀಸ್ ಬ್ಯಾನರ್ ನಡಿಯಲ್ಲಿ ಅಶ್ವಥ್ ಬಳಗೆರೆ ನಿರ್ಮಾಣದಲ್ಲಿ, ಉದಯ್ ಭಾಸ್ಕರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕರುಣ್ ಕೆ.ಜಿ.ಎಫ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ನವ ಪ್ರತಿಭೆ ವಿಶಾಲ್, ರಿತಿಕಾ ಗೌಡ, ಕೆ.ಜಿ.ಎಫ್‌ನ ಪಠಾಣ್ ಖ್ಯಾತಿಯ ಪುನೀತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಖುದ್ದು ಸಂದೇಶ್ ತಮ್ಮ ನೈಜ ಪಾತ್ರವನ್ನ ತಾವೇ ಮಾಡಿದ್ದಾರೆ.

ಸದ್ಯ ಎ2 ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಟೀಸರ್‌ ರಿಲೀಸ್‌ ಆಗಿತ್ತು. ಸೂಕ್ಷ್ಮ ವಿಚಾರವನ್ನು ನೇರವಾಗಿ ಹೇಳೋ ಪ್ರಯತ್ನ ಮಾಡಿರುವ ದ ರೂಲರ್ಸ್ ಚಿತ್ರ ವಿಶಿಷ್ಟವಾಗಿ ಪ್ರೇಕ್ಷಕರನ್ನ ಸೆಳೆಯುತ್ತಿದ್ದು, ಸಾಮಾಜಿಕವಾಗಿಯೂ ಸದ್ದು ಮಾಡುವ ಸೂಚನೆ ಕೊಡುತ್ತಿದೆ.

Continue Reading

ಸ್ಯಾಂಡಲ್ ವುಡ್

Rakshit Shetty: ʻರಿಚರ್ಡ್​ ಆಂಟನಿʼಯಲ್ಲಿ ಕರಾವಳಿ ಕಲಾವಿದರಿಗೆ ಮೊದಲ ಆದ್ಯತೆ ಅಂದ್ರಾ ರಕ್ಷಿತ್‌ ಶೆಟ್ಟಿ?

Rakshit Shetty: ಮೂಲಗಳ ಪ್ರಕಾರ ರಿಚರ್ಡ್‌ ಆಂಟನಿ ಸಿನಿಮಾದ ಪ್ರಿ ಪ್ರೊಡಕ್ಷನ್‌ ಕೆಲಸಗಳು ಆರಂಭಗೊಂಡಿವೆ. ರಕ್ಷಿತ್ ಶೆಟ್ಟಿಯವರು ಈಗಾಗಲೇ ಉಡುಪಿಗೆ ಶಿಫ್ಟ್‌ ಆಗಿದ್ದಾರೆ. ಅವರ ಟೀಂ ಕೂಡ ಶೀಘ್ರವೇ ಉಡುಪಿಗೆ ಬರಲಿದೆ. ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ವರದಿ ಪ್ರಕಾರ ಈ ಸಿನಿಮಾದಲ್ಲಿ ಕರಾವಳಿಯ ಕಲಾವಿದರು ಮಾತ್ರ ಮುಖ್ಯವಾಗಿ ನಟಿಸಲಿದ್ದಾರಂತೆ.

VISTARANEWS.COM


on

Rakshit Shetty Richard Anthony Pre Production
Koo

ಬೆಂಗಳೂರು: ರಕ್ಷಿತ್ ಶೆಟ್ಟಿ ( Rakshit Shetty) ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಪಾರ್ಟ್ ʻಎʼ ಹಾಗೂ ʻಬಿʼ ಕಳೆದ ವರ್ಷ ರಿಲೀಸ್ ಆಗಿತ್ತು. ಇದೀಗ ʻರಿಚರ್ಡ್​ ಆಂಟನಿʼ (Richard Anthony) ಹಾಗೂ ‘ಪುಣ್ಯಕೋಟಿ ಸಿನಿಮಾಗಳನ್ನು ರಕ್ಷಿತ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ವರದಿ ಪ್ರಕಾರ ಈ ಸಿನಿಮಾದಲ್ಲಿ ಕರಾವಳಿಯ ಕಲಾವಿದರು ಮಾತ್ರ ಮುಖ್ಯವಾಗಿ ನಟಿಸಲಿದ್ದಾರಂತೆ. ಜತೆಗೆ 2025ರ ವೇಳೆಗೆ ಸಿನಿಮಾ ತೆರೆಗೆ ಬರಲಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ರಿಚರ್ಡ್‌ ಆಂಟನಿ ಸಿನಿಮಾದ ಪ್ರಿ ಪ್ರೊಡಕ್ಷನ್‌ ಕೆಲಸಗಳು ಆರಂಭಗೊಂಡಿವೆ. ರಕ್ಷಿತ್ ಶೆಟ್ಟಿಯವರು ಈಗಾಗಲೇ ಉಡುಪಿಗೆ ಶಿಫ್ಟ್‌ ಆಗಿದ್ದಾರೆ. ಅವರ ಟೀಂ ಕೂಡ ಶೀಘ್ರವೇ ಉಡುಪಿಗೆ ಬರಲಿದೆ. ಮೇ 1ರಿಂದ ಸಿನಿಮಾದ ಪ್ರೀ ಪ್ರೊಡಕ್ಷನ್‌ ಕಾರ್ಯಗಳು ನೇರವೇರಲಿದೆಯಂತೆ. ಶೇ. 50ರಷ್ಟು ಸಿನಿಮಾ ಕರಾವಳಿಯಲ್ಲಿಯೇ ಶೂಟಿಂಗ್‌ ನಡಯಲಿದ್ದು, ಕೆಲವು ಸೀಕ್ವೆನ್ಸ್‌ಗಳು ಗೋಕರ್ಣ, ಕೇರಳದಲ್ಲಿ ಶೂಟ್‌ ಆಗಬಹುದು ಎನ್ನಲಾಗಿದೆ.

ಇದನ್ನೂ ಓದಿ: Rakshit Shetty: ಕಿರುತೆರೆಗೂ ಲಗ್ಗೆ ಇಟ್ಟ ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿʼ ಚಿತ್ರ; ಎಲ್ಲಿ, ಯಾವಾಗ ಪ್ರಸಾರ?

ರಕ್ಷಿತ್ ಶೆಟ್ಟಿ ಅವರು ಈ ಸಿನಿಮಾಗಾಗಿ ಮುಖ್ಯವಾಗಿ ಕರಾವಳಿ ಕಲಾವಿದರನ್ನೇ ಆಯ್ಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ಉಡುಪಿ ಭಾಷೆಯೇ ಪ್ರಮುಖ ಹೈಲೈಟ್‌ ಆಗಿದ್ದು, ಬೇರೆಯವರು ಮಾತನಾಡಿದರೆ ಅನುಕರಣೆಯಂತಾಗುತ್ತದೆ. ಹೀಗಾಗಿ ಉಡುಪಿ ಭಾಷೆ ಬರುವವರಿಗೆ ಮಾತ್ರ ಮೊದಲ ಆದ್ಯತೆ ನೀಡುತ್ತಿದ್ದಾರೆ ಎನ್ನಲಾಗಿದೆ. 2025ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಪಾರ್ಟ್ ʻಎʼ ಹಾಗೂ ʻಬಿʼ ಕಳೆದ ವರ್ಷ ರಿಲೀಸ್ ಆಗಿತ್ತು. ಇದೀಗ ರಿಚರ್ಡ್​ ಆಂಟನಿ ಹಾಗೂ ‘ಪುಣ್ಯಕೋಟಿ ಸಿನಿಮಾಗಳನ್ನು ರಕ್ಷಿತ್‌ ನಿರ್ದೇಶನ ಮಾಡುತ್ತಿದ್ದಾರೆ. ನನ್ನ ಮುಂದಿನ ಎರಡು ಸಿನಿಮಾಗಳಿಗೆ (ʻರಿಚರ್ಡ್​ ಆಂಟನಿ’ ಹಾಗೂ ‘ಪುಣ್ಯಕೋಟಿ’) ಪರಶುರಾಮ ಹಾಗೂ ಆತನ ಕೊಡಲಿಯೇ ಸ್ಫೂರ್ತಿ. ಈ ಕಥೆ ಜತೆ ಹೀಗಾಗಲೇ 4 ವರ್ಷ ಕಳೆದಿದ್ದೇನೆ. ಇನ್ನೂ ನಾಲ್ಕು ವರ್ಷ ಕಳೆಯೋದು ಇದೆ ಅನಿಸುತ್ತಿದೆ ಎಂದು ರಕ್ಷಿತ್ ಶೆಟ್ಟಿ ಈ ಹಿಂದೆ ಹೇಳಿಕೊಂಡಿದ್ದರು.

ರಿಚರ್ಡ್‌ ಆಂಟನಿ ಜತೆಗೆ ರಕ್ಷಿತ್‌ ಶೆಟ್ಟಿ ಹಲವು ಯೋಜನೆಗಳನ್ನು ಹೊಂದಿದ್ದಾರೆ. ಈ ಬಗ್ಗೆ ಈ ಹಿಂದೆ ಅವರು ಟ್ವೀಟ್‌ ಹಂಚಿಕೊಂಡಿದ್ದರು. ʻʻಸಪ್ತ ಸಾಗರದಾಚೆ ಎಲ್ಲೋ ನಂತರ ನನ್ನ ಲೈನ್ ಅಪ್‌ಗಳು ಸಾಕಷ್ಟು ಸ್ಪಷ್ಟವಾಗಿವೆ. ಅಂದರೆ ರಿಚರ್ಡ್​ ಆಂಟನಿ, ಪುಣ್ಯ ಕೋಟಿ 1 (PK 1), ಪುಣ್ಯ ಕೋಟಿ 2 (PK 2), (RA), PK 1 ಮತ್ತು 2,ಮಿಡ್ನೈಟ್ ಟು ಮೋಕ್ಷ (M2M) ಇವುಗಳು ನನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುವ ನಾಲ್ಕು ಚಲನಚಿತ್ರಗಳಾಗಿವೆ. ಆದರೆ ಕಿರಿಕ್‌ ಪಾರ್ಟಿ 2 (KP2) ಗಾಗಿ ನಾನು ವಿಭಿನ್ನ ಯೋಜನೆಗಳನ್ನು ಹೊಂದಿದ್ದೇನೆʼʼ ಎಂದಿದ್ದರು.

Continue Reading

ಸ್ಯಾಂಡಲ್ ವುಡ್

Lok Sabha Election 2024: ಮತ ಹಾಕದವರನ್ನು ಮತ ಪಟ್ಟಿಯಿಂದ ತೆಗೆದುಹಾಕಬೇಕು: ಅನಂತ್ ನಾಗ್ ಸಲಹೆಗೆ ಏನಂತೀರಿ?

ರಾಜ್ಯದಲ್ಲಿ ಈ ಬಾರಿ ದಾಖಲೆಯ ಮತದಾನವಾಗಲಿದೆಯೇ ಎಂಬುವುದು ಕುತೂಹಲ ಮೂಡಿಸಿದೆ. ಈಗಾಗಲೇ ಅನಂತ್‌ ನಾಗ್‌, ಶಿವಣ್ಣ ಮತದಾನ ಹಾಕಲು ಬಂದಿದ್ದಾರೆ. ಅಶ್ವಥ್ ನಗರದ ಪುಟ್ಟಯ್ಯ ಕಾಂಪೌಂಡ್ ಅಂಗನವಾಡಿ ಕೇಂದ್ರದಲ್ಲಿ ಅನಂತ್‌ನಾಗ್‌ ಅವರು ಮತ ಚಲಾಯಿಸಿದರು. ಕಳೆದ ಐದು ಚುನಾವಣೆಗಳಿಂದ ಇದರ ಬಗ್ಗೆಯೇ ಚರ್ಚೆ ಆಗುತ್ತಲೇ ಇದೆ. ಯಾರು ನಿರಂತರವಾಗಿ ಮತ ಹಾಕುವುದಿಲ್ಲವೋ ಅವರನ್ನ ಮತಪಟ್ಟಿಯಿಂದಲೇ ತೆಗೆದುಹಾಕಿ ಎನದರು.

VISTARANEWS.COM


on

Lok Sabha Election 2024 Anant Nag outrage against non-voters
Koo

ಬೆಂಗಳೂರು: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ (Lok Sabha Election 2024) ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆವರೆಗೆ ಶೇ. 50.93 ಮತದಾನ ದಾಖಲಾಗಿದೆ. ಮತದಾನ ಮುಕ್ತಾಯಕ್ಕೆ ಇನ್ನು ಎರಡು ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ರಾಜ್ಯದಲ್ಲಿ ಈ ಬಾರಿ ದಾಖಲೆಯ ಮತದಾನವಾಗಲಿದೆಯೇ ಎಂಬುವುದು ಕುತೂಹಲ ಮೂಡಿಸಿದೆ. ಈಗಾಗಲೇ ಅನಂತ್‌ ನಾಗ್‌, ಶಿವಣ್ಣ ಮತದಾನ ಹಾಕಲು ಬಂದಿದ್ದಾರೆ. ಅಶ್ವಥ್ ನಗರದ ಪುಟ್ಟಯ್ಯ ಕಾಂಪೌಂಡ್ ಅಂಗನವಾಡಿ ಕೇಂದ್ರದಲ್ಲಿ ಅನಂತ್‌ನಾಗ್‌ ಅವರು ಮತ ಚಲಾಯಿಸಿದರು.

ಮತಹಾಕದವರ ವಿರುದ್ಧ ಹಿರಿಯ ನಟ ಅನಂತ್ ನಾಗ್ ಅವರು ಆಕ್ರೋಶ ಹೊರ ಹಾಕಿದರು. ಅನಂತ್‌ ನಾಗ್‌ ಮಾತನಾಡಿ ʻಮತದಾನ ಮಾಡದವರನ್ನ ಮತಪಟ್ಟಿಯಿಂದ ತೆಗೆದುಹಾಕಿ. ಕಳೆದ ಐದು ಚುನಾವಣೆಗಳಿಂದ ಇದರ ಬಗ್ಗೆಯೇ ಚರ್ಚೆ ಆಗುತ್ತಲೇ ಇದೆ. ಯಾರು ನಿರಂತರವಾಗಿ ಮತ ಹಾಕುವುದಿಲ್ಲವೋ ಅವರನ್ನ ಮತಪಟ್ಟಿಯಿಂದಲೇ ತೆಗೆದುಹಾಕಿ. ಅಲ್ಲಿ ಯೋಧರು ದೇಶಕ್ಕಾಗಿ ಪ್ರಾಣ ಕೊಡುತ್ತಿದ್ದಾರೆ. ಇವರು ಮನೆಯಿಂದ ಹೊರಬಂದು ಒಂದು ಓಟ್ ಮಾಡೋಕಾಗಲ್ವ? ಸ್ವಾತಂತ್ರ್ಯ ಬಂದು 75 ವರ್ಷ ಆಯ್ತು. ಇನ್ನೂ ಎಂಥಹ ಜಾಗೃತಿ ಬೇಕು?. ಇಲ್ಲಿ ಯುವಕರು, ಹಿರಿಯರು ಎನ್ನುವ ಪ್ರಶ್ನೆ ಇಲ್ಲ. ಎಲ್ಲರನ್ನೂ ಒಂದೇ ತರಹ ನೋಡಿ. 75 ವರ್ಷಗಲ್ಲಿ ಆಗದ ಕೆಲಸ ಮುಂದೆ ಬರುವ ಸರ್ಕಾರ ಮಾಡಬೇಕುʼʼಎಂದರು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸಿಗರಿಗೆ ಚೊಂಬು ಹಿಡಿದು ಅಭ್ಯಾಸವಾಗಿದೆ: ಜೋಶಿ ಗೇಲಿ

ಬೆಂಗಳೂರಿನ ಮೂರು ಕ್ಷೇತ್ರಗಳು ಹೊರತುಪಡಿಸಿದರೆ ಉಳಿದ ಹನ್ನೊಂದು ಕ್ಷೇತ್ರಗಳಲ್ಲಿ ಶರವೇಗದ ಮತದಾನ ನಡೆಯುತ್ತಿದ್ದು, ಬೆಳಗ್ಗೆಯಿಂದಲೂ ಮತಗಟ್ಟೆ ಕಡೆ ಉತ್ಸಾಹದಿಂದ ಮತದಾರರು ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್‌ಗಳಲ್ಲಿ ಇರೋ ಜನರಿಂದ ಈ ಬಾರಿ ದಾಖಲೆ ಮತದಾನವಾಗಿದೆ. ಡಾಲರ್ಸ್ ಕಾಲೋನಿ, ಸದಾಶಿವನಗರ ಹಾಗೂ ಆರ್‌ಆರ್ ನಗರ, ಆನೇಕಲ್‌ ಬೂತ್ನಲ್ಲಿ 3 ಗಂಟೆವರೆಗೂ ಶೇಕಡಾ ಶೇ.65 ಮತದಾನ ದಾಖಲಾಗಿದೆ.

ಚುನಾವಣೆ ಆಯೋಗದ ಮಾಹಿತಿ ಪ್ರಕಾರ, ಮಧ್ಯಾಹ್ನ 3 ಗಂಟೆ ವೇಳಗೆ ಶೇ.50.93ರಷ್ಟು ಮತದಾನ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.58.76ರಷ್ಟು ಮತದಾನ ದಾಖಲಾಗಿದ್ದು, ಇದೇ ಜಿಲ್ಲೆಯಲ್ಲಿ ಹೆಚ್ಚು ಮತದಾನ ದಾಖಲಾಗಿದೆ. ಬೆಂಗಳೂರು ಕೇಂದ್ರದಲ್ಲಿ ಶೇ.40.10ರಷ್ಟು ಮತದಾನ ನಡೆದಿದ್ದು, ಅತಿ ಕಡಿಮೆ ಮತದಾನ ದಾಖಲಾದ ಜಿಲ್ಲೆ ಎನಿಸಿದೆ. ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರಿನಲ್ಲೂ ಹೆಚ್ಚಿನ ಜನ ಮತದಾನ ಮಾಡಿದ್ದಾರೆ.

Continue Reading

ಸ್ಯಾಂಡಲ್ ವುಡ್

Raj B Shetty: ದುನಿಯಾ ವಿಜಯ್‌ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರಂತೆ ರಾಜ್ ಬಿ ಶೆಟ್ಟಿ!

Raj B Shetty: ಸದ್ಯಕ್ಕೆ ಪ್ರೊಡಕ್ಷನ್ ನಂ 2. ಟೈಟಲ್ ಮೂಲಕ ಸಿನಿಮಾ ಚಿತ್ರೀಕರಣ ಚಾಲನೆ ದೊರೆತಿದೆ. ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಇದ್ದಾರೆ. ಕೋಲಾರ ಸುತ್ತಮುತ್ತ ಸಿನಿಮಾದ ಕಥೆ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನೈಜ್ಯ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ.

VISTARANEWS.COM


on

Raj B Shetty entry in duniya Vijay Movie
Koo

ಬೆಂಗಳೂರು: ನಟ ರಾಜ್‌ ಬಿ ಶೆಟ್ಟಿ (Raj B Shetty) ಅವರ `ಟೋಬಿ’ ಸಿನಿಮಾ ಬಿಡುಗಡೆಯಾಗಿ, ಅಷ್ಟೇನೂ ಕಲೆಕ್ಷನ್‌ ಮಾಡಿರಲಿಲ್ಲ. ಅಷ್ಟೋತ್ತಿಗಾಗಲೇ ರಾಜ್‌ ಅವರು ಮಲಯಾಳಂ ಸಿನಿಮಾದಲ್ಲಿ ಬ್ಯುಸಿಯಾದರು. ಮೊದಲ ಮಾಲಿವುಡ್ ಸಿನಿಮಾ ‘ರುಧೀರಂ’ ಶೂಟಿಂಗ್ ಕೂಡ ಮುಗಿದು ರಿಲೀಸ್‌ಗೂ ರೆಡಿಯಾಗಿದೆ. ಮಲಯಾಳಂ ಸ್ಟಾರ್ ಮಮ್ಮುಟ್ಟಿ ಹೊಸ ಸಿನಿಮಾ ‘ಟರ್ಬೊ’ದಲ್ಲಿ ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ’45’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ದುನಿಯಾ ವಿಜಯ್ (Duniya Vijay) ಜತೆ ಸೇರಿ ಒಂದು ಚಿತ್ರದಲ್ಲಿ ನಟಿಸುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ದುನಿಯಾ ವಿಜಯ್ 29ನೇ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿತ್ತು. ಆ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ಪ್ರೊಡಕ್ಷನ್ ನಂ 2. ಟೈಟಲ್ ಮೂಲಕ ಸಿನಿಮಾ ಚಿತ್ರೀಕರಣ ಚಾಲನೆ ದೊರೆತಿದೆ. ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಇದ್ದಾರೆ. ಕೋಲಾರ ಸುತ್ತಮುತ್ತ ಸಿನಿಮಾದ ಕಥೆ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನೈಜ್ಯ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ. ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರು ಬರೆದಿರುವ ‘ಚೋಮನ ದುಡಿ’ ಕಾದಂಬರಿ ಪ್ರೇರಿತ ಸಿನಿಮಾ ಎನ್ನಲಾಗಿದೆ. ಜಡೇಶ ಹಂಪಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಡೇಶ್‍ ಹಂಪಿ ಅವರಿಗೆ ನಿರ್ದೇಶನದಲ್ಲಿ ಅನುಭವ ಇದೆ. ‘ರಾಜಹಂಸ’, ‘ಜಂಟಲ್‍ಮ್ಯಾನ್‍’, ‘ಗುರು ಶಿಷ್ಯರು’ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ದುನಿಯಾ ವಿಜಯ್ ಮುಂದಿನ ಸಿನಿಮಾಗೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Raj B Shetty: ಒಟಿಟಿಯಲ್ಲಿ ಅಬ್ಬರಿಸಲಿದೆ ʻಟೋಬಿʼ!

ರಾಜ್‌ ಬಿ ಶೆಟ್ಟಿ ಅವರು ʼಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಮಮ್ಮುಟ್ಟಿ ಹೊಸ ಸಿನಿಮಾ ‘ಟರ್ಬೊ’ದಲ್ಲಿ ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ʻಟರ್ಬೊ’ ಸಿನಿಮಾ ನಿರ್ದೇಶಕ ವೈಶಾಖ್ ಜತೆ ಇದು ಮೂರನೇ ಬಾರಿ ಮಮ್ಮುಟ್ಟಿ ಜತೆ ಕೈ ಜೋಡಿಸುತ್ತಿದ್ದಾರೆ. ಪೊಕ್ಕಿರಿ ರಾಜ ಮತ್ತು ಮಧುರ ರಾಜ ಸಿನಿಮಾಗಳ ಬಳಿಕ ಮಮ್ಮುಟ್ಟಿಯವರ ಮೂರನೇ ಚಿತ್ರವಾಗಿದೆ. ಚಲನಚಿತ್ರ ನಿರ್ಮಾಪಕ ಮಿಧುನ್ ಮ್ಯಾನುಯೆಲ್ ಥಾಮಸ್ ಬರೆದ ಚಿತ್ರಕಥೆಯನ್ನು ಈ ಸಿನಿಮಾ ಆಧರಿಸಿದೆ. ಟರ್ಬೊದಲ್ಲಿ ತೆಲುಗು ನಟ ಸುನಿಲ್ ಕೂಡ ಕಾಣಿಸಿಕೊಂಡಿದ್ದಾರೆ.

Continue Reading
Advertisement
Air Force Chopper
ದೇಶ7 mins ago

Air Force Chopper: ಉತ್ತರಾಖಂಡದಲ್ಲಿ ಕಾಡಿನ ಬೆಂಕಿ ನಂದಿಸಲು ವಾಯು ಪಡೆಯ ಹೆಲಿಕಾಪ್ಟರ್‌ ಬಳಕೆ

TCS World 10K
ಬೆಂಗಳೂರು10 mins ago

TCS World 10K : ನಾಳೆ ಬೆಂಗಳೂರಿನಲ್ಲಿ ವಿಶ್ವ ವಿಖ್ಯಾತಿಯ ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಾಥಾನ್​

Lok Sabha Election 2024 special kit for the polling staff
ಉತ್ತರ ಕನ್ನಡ15 mins ago

Lok Sabha Election 2024: ಲೋಕಸಭಾ ಚುನಾವಣೆ ಸಿಬ್ಬಂದಿಗೆ ತಯಾರಾಗಿದೆ ವಿಶೇಷ ಕಿಟ್

virat kohli
ಪ್ರಮುಖ ಸುದ್ದಿ50 mins ago

Virat Kohli : ಅಭ್ಯಾಸದ ಮಧ್ಯೆ ಮೊಬೈಲ್​ನಲ್ಲೇ ಡೆಲ್ಲಿ ವರ್ಸಸ್​​ ಮುಂಬೈ ಮ್ಯಾಚ್ ನೋಡಿದ ಕೊಹ್ಲಿ

MDH, Everest Spices
ವಿದೇಶ58 mins ago

MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಮಾಹಿತಿ ಸಂಗ್ರಹಕ್ಕೆ ಮುಂದಾದ ಅಮೆರಿಕ

Zameer Ahmed Khan‌
ಕರ್ನಾಟಕ1 hour ago

Zameer Ahmed Khan‌: ಸಚಿವ ಜಮೀರ್ ಅಹ್ಮದ್ ರೋಷಾವೇಶದ ಭಾಷಣಕ್ಕೆ ಗಾಜು ಪೀಸ್‌ ಪೀಸ್; ಇಲ್ಲಿದೆ ವಿಡಿಯೊ

Medical Negligence
ಕ್ರೈಂ1 hour ago

Medical Negligence: ಆಸ್ಪತ್ರೆ ನಿರ್ಲಕ್ಷ್ಯದಿಂದ ಬಾಲಕ ಸಾವು: 10 ಲಕ್ಷ ರೂ. ಪರಿಹಾರ ಘೋಷಿಸಿದ ಕೋರ್ಟ್​​

IPL 2024
ಕ್ರೀಡೆ2 hours ago

IPL 2024 : ದೊಡ್ಡ ಮೊತ್ತದ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿಗೆ 10 ರನ್ ಜಯ

Viral News
ವೈರಲ್ ನ್ಯೂಸ್2 hours ago

Viral News: ಅಪ್ರಾಪ್ತ ಹಿಂದು ಹುಡುಗಿಗೆ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದ ಮುಸ್ಲಿಂ ಯುವಕನಿಗೆ ಬಿತ್ತು ಗೂಸಾ

Assault Case
ಕರ್ನಾಟಕ2 hours ago

Assault Case: ಬೆಂಗಳೂರಲ್ಲಿ ಟೀ ಶಾಪ್ ಯುವಕನ ಮೇಲೆ ಹಲ್ಲೆ ಮಾಡಿದ ಮುಸ್ಲಿಂ ಯುವಕರು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 20245 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ10 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ17 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌