ಚಲನಚಿತ್ರಗಳಲ್ಲಿ ಕೆಲಸ ಮಾಡುವುದಕ್ಕಿಂತ ಮೊದಲು ಜಾಹೀರಾತು (Ad films) ಮತ್ತು ಹಿಂದಿ ಮ್ಯೂಸಿಕ್ ವಿಡಿಯೋ ಆಲ್ಬಂಗಳ ನಟನೆಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
2000ದಲ್ಲಿ ತೆರೆಕಂಡ ತೆಲುಗು ಚಿತ್ರ Yuvakuduದಲ್ಲಿ ಸಿಂಧು ಪಾತ್ರದೊಂದಿಗೆ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು.
2001ರಲ್ಲಿ ದಳಪತಿ ವಿಜಯ್ ನಟನೆಯ Badri ಚಿತ್ರದಲ್ಲಿ ನಟಿಸುವುದರ ಮೂಲಕ ಕಾಲಿವುಡ್‌ಗೆ ಪ್ರವೇಶ ಮಾಡಿದರು.
2001ರ “ಖುಷಿ” ಚಿತ್ರದಲ್ಲಿ ಪವನ್ ಕಲ್ಯಾಣ್ ಜತೆ ಮಧುಮಿತಾ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿ, ಭೂಮಿಕಾ ಚಾವ್ಲಾ ಅವರಿಗೆ Best Actress ಪ್ರಶಸ್ತಿ ತಂದುಕೊಟ್ಟಿದೆ.
2003ರಲ್ಲಿ ಸಲ್ಮಾನ್ ಖಾನ್ ನಟನೆಯ Tere Naam ಚಿತ್ರದೊಂದಿಗೆ ಬಾಲಿವುಡ್ಗೆ ಎಂಟ್ರಿ ನೀಡಿದರು. ಈ ಚಿತ್ರದಲ್ಲಿ ನಿರ್ಜರಾ ಭಾರದ್ವಾಜ್ ಪಾತ್ರಕ್ಕಾಗಿ ಇವರಿಗೆ Best Female Debut ಪ್ರಶಸ್ತಿ ದೊರೆತಿದೆ.
2007ರಲ್ಲಿ ಭರತ್ ಠಾಕೂರ್ ಜತೆ ವಿವಾಹವಾದರು. ಇವರಿಗೆ ಯಶ್ ಎಂಬ ಮಗನಿದ್ದಾನೆ.
2012ರ ಚಿತ್ರ Godfatherನಲ್ಲಿ ಅತಿಥಿ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ ಭೂಮಿಕಾ, 2015ರ Luv U Alia ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ತಮ್ಮ ಮುಂಬರಲಿರುವ ಚಿತ್ರ Kannai Nambathey ಮೇಲೆ ಬಹು ನಿರೀಕ್ಷೆ ಇರಿಸಿಕೊಂಡಿದ್ದಾರೆ.
ಇದನ್ನೂ ಓದಿ| ಜನುಮದಿನದ ಶುಭಾಶಯ ರಣದೀಪ್ ಹೂಡಾ