Site icon Vistara News

Actor Darshan: ಎಲ್ಲ ಖರ್ಚು ನೋಡಿಕೊಳ್ತೇನೆ, ನೀವು ಸರೆಂಡರ್‌ ಆಗಿ ಎಂದಿದ್ದ ದರ್ಶನ್ ತಾನೇ ಪೊಲೀಸ್‌ ಬೋನಿಗೆ ಬಿದ್ದ!

darshan give sopports to arrested people

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renuka Swamy murder case) ಕೊಲೆ ಆರೋಪದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾರೆ ನಟ ದರ್ಶನ್‌. ದರ್ಶನ್ ಹೇಳಿದಂತೆ ನಡೆದುಕೊಂಡಿದ್ದರಿಂದ ಅನೇಕರು ತೊಂದರೆ ಅನುಭವಿಸಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್, ಪವಿತ್ರಾ, ವಿನಯ್, ಪವನ್ ಸೇರಿ ಹಲವರು ಅರೆಸ್ಟ್ ಆಗಿದ್ದಾರೆ. ಈಗಾಗಲೇ ಜೈಲಿನಲ್ಲಿರುವ ಎ7 ಆರೋಪಿ ಅನುಕುಮಾರ್​ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶರಣಾಗುವ ಮುನ್ನ ನಾಲ್ಕು ಆರೋಪಿಗಳು ಎರಡೆರಡು ಬಾರಿ ದರ್ಶನ್ ಜತೆ ಮಾತುಕತೆ ನಡೆಸಿದ್ದರು ಎಂದು ಪೊಲೀಸರು ಈಗ ಮಾಹಿತಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ದರ್ಶನ್‌ ಅವರು ಆರೋಪಿಗಳಿಗೆ ʻಯಾವುದೇ ತೊಂದರೆ ನಿಮಗೆ ಆಗದಂತೆ ನೋಡಕೇಳುತ್ತೇನೆʼʼ ಎಂದು ಭರವಸೆ ಕೂಡ ನೀಡಿದ್ದರಂತೆ.

ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಳಗ್ಗೆ ನಾಲ್ಕು ಆರೋಪಿಗಳು ಪೊಲೀಸರ ಎದುರು ಶರಣಾಗಬೇಕಿತ್ತು. ಆದರೆ ಬೆಳಗ್ಗೆ ಎದ್ದ ಕೂಡಲೇ ಆರೋಪಿಗಳಿಗೆ ಭಯ ಕಾಡ್ತಿತ್ತಂತೆ. ಹೀಗಾಗಿ ಮೈಸೂರಿನಲ್ಲಿರುವ ತಮ್ಮ ಬಾಸ್‌, ಅಂದರೆ ದರ್ಶನ್‌ ಅವರನ್ನು ಭೇಟಿ ಮಾಡಲು ಆರೋಪಿಗಳು ರೆಡಿಯಾಗಿದ್ದರು. ಈ ವೇಳೆ ಪ್ರದೂಶ್ ಕೂಡಲೇ ಆರೋಪಿಗಳನ್ನು ದರ್ಶನ್‌ ಅವರೊಂದಿಗೆ ಭೇಟಿ ಮಾಡಲು ಕರೆದುಕೊಂಡು ಹೋಗಿದ್ದ. ಆಗ ದರ್ಶನ್‌ ಆರೋಪಿಗಳಿಗೆ `ಎಲ್ಲ ಖರ್ಚು ವೆಚ್ಚ ನಾನು ನೋಡಿಕೊಳ್ತೇನೆ. ನಿಮಗೆ ಯಾವುದೇ ತೊಂದರೆ ಆಗಲ್ಲ’ ಎಂದು ಭರವಸೆ ಬೇರೆ ಕೊಟ್ಟಿದ್ದರಂತೆ.

ಇದನ್ನೂ ಓದಿ: Actor Darshan : ಸಂಕಷ್ಟ ನಿವಾರಣೆಗಾಗಿ ದೇವರ ಮೊರೆ ಹೋದ ನಟ ದರ್ಶನ್‌ ಕುಟುಂಬಸ್ಥರು

ಶರಣಾಗುವ ಮುನ್ನ ಎರಡೆರಡು ಬಾರಿ ದರ್ಶನ್ ಜತೆ ಆರೋಪಿಗಳ ಮಾತುಕತೆ!

ರಾತ್ರಿ ಪೊಲೀಸರ ಮುಂದೆ ಶರಣಾಗುತ್ತೇನೆ ಎಂದ ಆರೋಪಿಗಳು ಬೆಳಗ್ಗೆ ಉಲ್ಟಾ ಹೊಡೆದಿದ್ರು. ಪುನಃ ಮತ್ತೆ ದರ್ಶನ್ ಭೇಟಿಗೆ ಮೈಸೂರಿಗೆ ಹೋಗಿದ್ದರು ಆರೋಪಿಗಳು. ದರ್ಶನ್ ಭೇಟಿಯಾಗಿ ವಾಪಸ್ಸು ಬಂದು ಪೊಲೀಸರ ಮುಂದೆ ಶರಣಾಗಿದ್ದಾರೆ. ಪ್ರಕರಣದಲ್ಲಿ ಶರಣಾಗಲು ಭಾನುವಾರವೇ ರಾತ್ರಿ ಆರೋಪಿಗಳು ಮಾತುಕತೆ ನಡೆಸಿದ್ದರು. ಅದರಂತೆ ದರ್ಶನ್‌ಗೆ ಆರೋಪಿಗಳು ಮಾತುಕೊಟ್ಟ ನಂತರ ವಾಪಸ್ಸು ಬೆಂಗಳೂರಿಗೆ ಬಂದು ಸರೆಂಡರ್‌ ಆಗಿದ್ದಾರೆ.

ಇಂದು ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. ಪ್ರಮುಖ ಆರೋಪಿಗಳನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಮುಖ ಆರೋಪಿಗಳಾದ ದರ್ಶನ್, ಪವಿತ್ರಾ, ಪವನ್, ವಿನಯ್, ರಾಘವೇಂದ್ರ, ಪ್ರದೋಶ್ ಮಾತ್ರ ಮತ್ತೆ ಕಸ್ಟಡಿಗೆ ಪಡೆಯಲು ನಿರ್ಧಾರ ಆಗಿದೆ ಎನ್ನಲಾಗಿದೆ. ಕೊಲೆ ಪ್ರಕರಣದಲ್ಲಿ ಈ ಆರೋಪಿಗಳು ಹೆಚ್ಚು ಭಾಗಿಯಾದ ಕಾರಣ ಓಪನ್ ಕೋರ್ಟ್‌ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮತ್ತೆ ಕೆಲವು ದಿನಗಳ ಕಾಲ ವಶಕ್ಕೆ ಪಡೆಯಲು ನಿರ್ಧಾರ ಮಾಡಲಾಗುತ್ತಿದೆ ಎಂದು ಮೂಲ ತಿಳಿಸಿದೆ.

Exit mobile version