ಬೆಂಗಳೂರು: ಕರ್ನಾಟಕ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ನಿರ್ಮಾಪಕ ಭಾಮಾ ಹರೀಶ್ (Ba Ma Harish) ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪುತ್ರ ಉಲ್ಲಾಸ್ ಮಾಹಿತಿ ನೀಡಿದ್ದಾರೆ. ಭಾಮಾ ಹರೀಶ್ ಅವರಿಗೆ ನಿನ್ನೆ (ಮಾ.27) ದಿಢೀರ್ ಆಗಿ ಹೃದಯ ಬಡಿತದಲ್ಲಿ ಏರುಪೇರು ಆಗಿತ್ತು. ಹಾರ್ಟ್ ಬೀಟ್ ಹೆಚ್ಚಾದ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ (Jayadeva Hospital) ದಾಖಲಿಸಲಾಗಿದೆ. ಇಂದು ವೈದ್ಯರು ಅಂಜಿಯೋಗ್ರಾಮ್ (angiogram) ಮಾಡಲಿದ್ದಾರೆ. ಬಳಿಕ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಲಾಗುವುದು ಎಂದು ಭಾಮಾ ಹರೀಶ್ ಪುತ್ರ ಉಲ್ಲಾಸ್ ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಅವರು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ದರ್ಶನ್ ಅಭಿನಯದ ‘ಮೆಜೆಸ್ಟಿಕ್’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಈ ಹಿಂದೆ ಫಿಲ್ಮ್ ಚೇಂಬರ್ ಚುನಾವಣೆಗೆ. ಭಾಮಾ ಹರೀಶ್ ಹಾಗೂ ಸಾರಾ ಗೋವಿಂದು ನಡುವೆ ಪೈಪೋಟಿ ಇತ್ತು. ಹಿರಿಯ ನಟಿ ಜಯಮಾಲಾ, ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಸುಂದರ್ ರಾಜ್, ಪ್ರಮಿಳಾ ಜೋಷಾಯ್ ಸೇರಿದಂತೆ ಹಲವು ಮಂದಿ ಚಿತ್ರರಂಗದ ಗಣ್ಯರು ಬೆಂಬಲ ಸೂಚಿಸಿದ್ದರು. ಅದರಂತೆ ಭಾ ಮಾ ಹರೀಶ್ ಹೆಚ್ಚು ಮತಗಳನ್ನು ಪಡೆದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ: Ramayana Movie: ರಾಮಾಯಣದಲ್ಲಿ ಯಶ್ ಪತ್ನಿಯ ಪಾತ್ರಕ್ಕೆ ʻದಂಗಲ್ʼ ಸಿನಿಮಾ ನಟಿ!
ನಿರ್ಮಾಪಕ ಎನ್ ಎಂ ಸುರೇಶ್ ಸದ್ಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಹಾಲಿ ಅಧ್ಯಕ್ಷರಾಗಿರುವ ಭಾಮಾ ಹರೀಶ್ ಅವರ ಸಹೋದರ ಭಾಮಾ ಗಿರೀಶ್ ಅವರು ನಿರ್ಮಾಪಕರ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.