Ba Ma Harish: ಕರ್ನಾಟಕ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಆಸ್ಪತ್ರೆಗೆ ದಾಖಲು - Vistara News

ಸ್ಯಾಂಡಲ್ ವುಡ್

Ba Ma Harish: ಕರ್ನಾಟಕ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಆಸ್ಪತ್ರೆಗೆ ದಾಖಲು

Ba Ma Harish: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಅವರು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಭಾಮಾ ಹರೀಶ್ ಅವರಿಗೆ ಹಾರ್ಟ್ ಬೀಟ್ ಹೆಚ್ಚಾದ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ (Jayadeva Hospital) ದಾಖಲಿಸಲಾಗಿದೆ.

VISTARANEWS.COM


on

Bha ma Harish admitted to hospital
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ನಿರ್ಮಾಪಕ ಭಾಮಾ ಹರೀಶ್ (Ba Ma Harish) ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪುತ್ರ ಉಲ್ಲಾಸ್ ಮಾಹಿತಿ ನೀಡಿದ್ದಾರೆ. ಭಾಮಾ ಹರೀಶ್‌ ಅವರಿಗೆ ನಿನ್ನೆ (ಮಾ.27) ದಿಢೀರ್ ಆಗಿ ಹೃದಯ ಬಡಿತದಲ್ಲಿ ಏರುಪೇರು ಆಗಿತ್ತು. ಹಾರ್ಟ್ ಬೀಟ್ ಹೆಚ್ಚಾದ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ (Jayadeva Hospital) ದಾಖಲಿಸಲಾಗಿದೆ. ಇಂದು ವೈದ್ಯರು ಅಂಜಿಯೋಗ್ರಾಮ್ (angiogram) ಮಾಡಲಿದ್ದಾರೆ. ಬಳಿಕ ಆರೋಗ್ಯದ ಬಗ್ಗೆ ಅಪ್‌ಡೇಟ್‌ ನೀಡಲಾಗುವುದು ಎಂದು ಭಾಮಾ ಹರೀಶ್ ಪುತ್ರ ಉಲ್ಲಾಸ್ ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಅವರು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ದರ್ಶನ್ ಅಭಿನಯದ ‘ಮೆಜೆಸ್ಟಿಕ್’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಈ ಹಿಂದೆ ಫಿಲ್ಮ್ ಚೇಂಬರ್‌ ಚುನಾವಣೆಗೆ. ಭಾಮಾ ಹರೀಶ್ ಹಾಗೂ ಸಾರಾ ಗೋವಿಂದು ನಡುವೆ ಪೈಪೋಟಿ ಇತ್ತು. ಹಿರಿಯ ನಟಿ ಜಯಮಾಲಾ, ಹಿರಿಯ ನಿರ್ದೇಶಕ ಎಸ್‌ ವಿ ರಾಜೇಂದ್ರ ಸಿಂಗ್ ಬಾಬು, ಸುಂದರ್ ರಾಜ್, ಪ್ರಮಿಳಾ ಜೋಷಾಯ್ ಸೇರಿದಂತೆ ಹಲವು ಮಂದಿ ಚಿತ್ರರಂಗದ ಗಣ್ಯರು ಬೆಂಬಲ ಸೂಚಿಸಿದ್ದರು. ಅದರಂತೆ ಭಾ ಮಾ ಹರೀಶ್ ಹೆಚ್ಚು ಮತಗಳನ್ನು ಪಡೆದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ: Ramayana Movie: ರಾಮಾಯಣದಲ್ಲಿ ಯಶ್‌ ಪತ್ನಿಯ ಪಾತ್ರಕ್ಕೆ ʻದಂಗಲ್‌ʼ ಸಿನಿಮಾ ನಟಿ!

ನಿರ್ಮಾಪಕ ಎನ್​ ಎಂ ಸುರೇಶ್ ಸದ್ಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಹಾಲಿ ಅಧ್ಯಕ್ಷರಾಗಿರುವ ಭಾಮಾ ಹರೀಶ್ ಅವರ ಸಹೋದರ ಭಾಮಾ ಗಿರೀಶ್ ಅವರು ನಿರ್ಮಾಪಕರ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸ್ಯಾಂಡಲ್ ವುಡ್

Rakshit Shetty: ʻರಿಚರ್ಡ್​ ಆಂಟನಿʼಯಲ್ಲಿ ಕರಾವಳಿ ಕಲಾವಿದರಿಗೆ ಮೊದಲ ಆದ್ಯತೆ ಅಂದ್ರಾ ರಕ್ಷಿತ್‌ ಶೆಟ್ಟಿ?

Rakshit Shetty: ಮೂಲಗಳ ಪ್ರಕಾರ ರಿಚರ್ಡ್‌ ಆಂಟನಿ ಸಿನಿಮಾದ ಪ್ರಿ ಪ್ರೊಡಕ್ಷನ್‌ ಕೆಲಸಗಳು ಆರಂಭಗೊಂಡಿವೆ. ರಕ್ಷಿತ್ ಶೆಟ್ಟಿಯವರು ಈಗಾಗಲೇ ಉಡುಪಿಗೆ ಶಿಫ್ಟ್‌ ಆಗಿದ್ದಾರೆ. ಅವರ ಟೀಂ ಕೂಡ ಶೀಘ್ರವೇ ಉಡುಪಿಗೆ ಬರಲಿದೆ. ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ವರದಿ ಪ್ರಕಾರ ಈ ಸಿನಿಮಾದಲ್ಲಿ ಕರಾವಳಿಯ ಕಲಾವಿದರು ಮಾತ್ರ ಮುಖ್ಯವಾಗಿ ನಟಿಸಲಿದ್ದಾರಂತೆ.

VISTARANEWS.COM


on

Rakshit Shetty Richard Anthony Pre Production
Koo

ಬೆಂಗಳೂರು: ರಕ್ಷಿತ್ ಶೆಟ್ಟಿ ( Rakshit Shetty) ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಪಾರ್ಟ್ ʻಎʼ ಹಾಗೂ ʻಬಿʼ ಕಳೆದ ವರ್ಷ ರಿಲೀಸ್ ಆಗಿತ್ತು. ಇದೀಗ ʻರಿಚರ್ಡ್​ ಆಂಟನಿʼ (Richard Anthony) ಹಾಗೂ ‘ಪುಣ್ಯಕೋಟಿ ಸಿನಿಮಾಗಳನ್ನು ರಕ್ಷಿತ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ವರದಿ ಪ್ರಕಾರ ಈ ಸಿನಿಮಾದಲ್ಲಿ ಕರಾವಳಿಯ ಕಲಾವಿದರು ಮಾತ್ರ ಮುಖ್ಯವಾಗಿ ನಟಿಸಲಿದ್ದಾರಂತೆ. ಜತೆಗೆ 2025ರ ವೇಳೆಗೆ ಸಿನಿಮಾ ತೆರೆಗೆ ಬರಲಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ರಿಚರ್ಡ್‌ ಆಂಟನಿ ಸಿನಿಮಾದ ಪ್ರಿ ಪ್ರೊಡಕ್ಷನ್‌ ಕೆಲಸಗಳು ಆರಂಭಗೊಂಡಿವೆ. ರಕ್ಷಿತ್ ಶೆಟ್ಟಿಯವರು ಈಗಾಗಲೇ ಉಡುಪಿಗೆ ಶಿಫ್ಟ್‌ ಆಗಿದ್ದಾರೆ. ಅವರ ಟೀಂ ಕೂಡ ಶೀಘ್ರವೇ ಉಡುಪಿಗೆ ಬರಲಿದೆ. ಮೇ 1ರಿಂದ ಸಿನಿಮಾದ ಪ್ರೀ ಪ್ರೊಡಕ್ಷನ್‌ ಕಾರ್ಯಗಳು ನೇರವೇರಲಿದೆಯಂತೆ. ಶೇ. 50ರಷ್ಟು ಸಿನಿಮಾ ಕರಾವಳಿಯಲ್ಲಿಯೇ ಶೂಟಿಂಗ್‌ ನಡಯಲಿದ್ದು, ಕೆಲವು ಸೀಕ್ವೆನ್ಸ್‌ಗಳು ಗೋಕರ್ಣ, ಕೇರಳದಲ್ಲಿ ಶೂಟ್‌ ಆಗಬಹುದು ಎನ್ನಲಾಗಿದೆ.

ಇದನ್ನೂ ಓದಿ: Rakshit Shetty: ಕಿರುತೆರೆಗೂ ಲಗ್ಗೆ ಇಟ್ಟ ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿʼ ಚಿತ್ರ; ಎಲ್ಲಿ, ಯಾವಾಗ ಪ್ರಸಾರ?

ರಕ್ಷಿತ್ ಶೆಟ್ಟಿ ಅವರು ಈ ಸಿನಿಮಾಗಾಗಿ ಮುಖ್ಯವಾಗಿ ಕರಾವಳಿ ಕಲಾವಿದರನ್ನೇ ಆಯ್ಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ಉಡುಪಿ ಭಾಷೆಯೇ ಪ್ರಮುಖ ಹೈಲೈಟ್‌ ಆಗಿದ್ದು, ಬೇರೆಯವರು ಮಾತನಾಡಿದರೆ ಅನುಕರಣೆಯಂತಾಗುತ್ತದೆ. ಹೀಗಾಗಿ ಉಡುಪಿ ಭಾಷೆ ಬರುವವರಿಗೆ ಮಾತ್ರ ಮೊದಲ ಆದ್ಯತೆ ನೀಡುತ್ತಿದ್ದಾರೆ ಎನ್ನಲಾಗಿದೆ. 2025ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಪಾರ್ಟ್ ʻಎʼ ಹಾಗೂ ʻಬಿʼ ಕಳೆದ ವರ್ಷ ರಿಲೀಸ್ ಆಗಿತ್ತು. ಇದೀಗ ರಿಚರ್ಡ್​ ಆಂಟನಿ ಹಾಗೂ ‘ಪುಣ್ಯಕೋಟಿ ಸಿನಿಮಾಗಳನ್ನು ರಕ್ಷಿತ್‌ ನಿರ್ದೇಶನ ಮಾಡುತ್ತಿದ್ದಾರೆ. ನನ್ನ ಮುಂದಿನ ಎರಡು ಸಿನಿಮಾಗಳಿಗೆ (ʻರಿಚರ್ಡ್​ ಆಂಟನಿ’ ಹಾಗೂ ‘ಪುಣ್ಯಕೋಟಿ’) ಪರಶುರಾಮ ಹಾಗೂ ಆತನ ಕೊಡಲಿಯೇ ಸ್ಫೂರ್ತಿ. ಈ ಕಥೆ ಜತೆ ಹೀಗಾಗಲೇ 4 ವರ್ಷ ಕಳೆದಿದ್ದೇನೆ. ಇನ್ನೂ ನಾಲ್ಕು ವರ್ಷ ಕಳೆಯೋದು ಇದೆ ಅನಿಸುತ್ತಿದೆ ಎಂದು ರಕ್ಷಿತ್ ಶೆಟ್ಟಿ ಈ ಹಿಂದೆ ಹೇಳಿಕೊಂಡಿದ್ದರು.

ರಿಚರ್ಡ್‌ ಆಂಟನಿ ಜತೆಗೆ ರಕ್ಷಿತ್‌ ಶೆಟ್ಟಿ ಹಲವು ಯೋಜನೆಗಳನ್ನು ಹೊಂದಿದ್ದಾರೆ. ಈ ಬಗ್ಗೆ ಈ ಹಿಂದೆ ಅವರು ಟ್ವೀಟ್‌ ಹಂಚಿಕೊಂಡಿದ್ದರು. ʻʻಸಪ್ತ ಸಾಗರದಾಚೆ ಎಲ್ಲೋ ನಂತರ ನನ್ನ ಲೈನ್ ಅಪ್‌ಗಳು ಸಾಕಷ್ಟು ಸ್ಪಷ್ಟವಾಗಿವೆ. ಅಂದರೆ ರಿಚರ್ಡ್​ ಆಂಟನಿ, ಪುಣ್ಯ ಕೋಟಿ 1 (PK 1), ಪುಣ್ಯ ಕೋಟಿ 2 (PK 2), (RA), PK 1 ಮತ್ತು 2,ಮಿಡ್ನೈಟ್ ಟು ಮೋಕ್ಷ (M2M) ಇವುಗಳು ನನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುವ ನಾಲ್ಕು ಚಲನಚಿತ್ರಗಳಾಗಿವೆ. ಆದರೆ ಕಿರಿಕ್‌ ಪಾರ್ಟಿ 2 (KP2) ಗಾಗಿ ನಾನು ವಿಭಿನ್ನ ಯೋಜನೆಗಳನ್ನು ಹೊಂದಿದ್ದೇನೆʼʼ ಎಂದಿದ್ದರು.

Continue Reading

ಸ್ಯಾಂಡಲ್ ವುಡ್

Lok Sabha Election 2024: ಮತ ಹಾಕದವರನ್ನು ಮತ ಪಟ್ಟಿಯಿಂದ ತೆಗೆದುಹಾಕಬೇಕು: ಅನಂತ್ ನಾಗ್ ಸಲಹೆಗೆ ಏನಂತೀರಿ?

ರಾಜ್ಯದಲ್ಲಿ ಈ ಬಾರಿ ದಾಖಲೆಯ ಮತದಾನವಾಗಲಿದೆಯೇ ಎಂಬುವುದು ಕುತೂಹಲ ಮೂಡಿಸಿದೆ. ಈಗಾಗಲೇ ಅನಂತ್‌ ನಾಗ್‌, ಶಿವಣ್ಣ ಮತದಾನ ಹಾಕಲು ಬಂದಿದ್ದಾರೆ. ಅಶ್ವಥ್ ನಗರದ ಪುಟ್ಟಯ್ಯ ಕಾಂಪೌಂಡ್ ಅಂಗನವಾಡಿ ಕೇಂದ್ರದಲ್ಲಿ ಅನಂತ್‌ನಾಗ್‌ ಅವರು ಮತ ಚಲಾಯಿಸಿದರು. ಕಳೆದ ಐದು ಚುನಾವಣೆಗಳಿಂದ ಇದರ ಬಗ್ಗೆಯೇ ಚರ್ಚೆ ಆಗುತ್ತಲೇ ಇದೆ. ಯಾರು ನಿರಂತರವಾಗಿ ಮತ ಹಾಕುವುದಿಲ್ಲವೋ ಅವರನ್ನ ಮತಪಟ್ಟಿಯಿಂದಲೇ ತೆಗೆದುಹಾಕಿ ಎನದರು.

VISTARANEWS.COM


on

Lok Sabha Election 2024 Anant Nag outrage against non-voters
Koo

ಬೆಂಗಳೂರು: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ (Lok Sabha Election 2024) ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆವರೆಗೆ ಶೇ. 50.93 ಮತದಾನ ದಾಖಲಾಗಿದೆ. ಮತದಾನ ಮುಕ್ತಾಯಕ್ಕೆ ಇನ್ನು ಎರಡು ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ರಾಜ್ಯದಲ್ಲಿ ಈ ಬಾರಿ ದಾಖಲೆಯ ಮತದಾನವಾಗಲಿದೆಯೇ ಎಂಬುವುದು ಕುತೂಹಲ ಮೂಡಿಸಿದೆ. ಈಗಾಗಲೇ ಅನಂತ್‌ ನಾಗ್‌, ಶಿವಣ್ಣ ಮತದಾನ ಹಾಕಲು ಬಂದಿದ್ದಾರೆ. ಅಶ್ವಥ್ ನಗರದ ಪುಟ್ಟಯ್ಯ ಕಾಂಪೌಂಡ್ ಅಂಗನವಾಡಿ ಕೇಂದ್ರದಲ್ಲಿ ಅನಂತ್‌ನಾಗ್‌ ಅವರು ಮತ ಚಲಾಯಿಸಿದರು.

ಮತಹಾಕದವರ ವಿರುದ್ಧ ಹಿರಿಯ ನಟ ಅನಂತ್ ನಾಗ್ ಅವರು ಆಕ್ರೋಶ ಹೊರ ಹಾಕಿದರು. ಅನಂತ್‌ ನಾಗ್‌ ಮಾತನಾಡಿ ʻಮತದಾನ ಮಾಡದವರನ್ನ ಮತಪಟ್ಟಿಯಿಂದ ತೆಗೆದುಹಾಕಿ. ಕಳೆದ ಐದು ಚುನಾವಣೆಗಳಿಂದ ಇದರ ಬಗ್ಗೆಯೇ ಚರ್ಚೆ ಆಗುತ್ತಲೇ ಇದೆ. ಯಾರು ನಿರಂತರವಾಗಿ ಮತ ಹಾಕುವುದಿಲ್ಲವೋ ಅವರನ್ನ ಮತಪಟ್ಟಿಯಿಂದಲೇ ತೆಗೆದುಹಾಕಿ. ಅಲ್ಲಿ ಯೋಧರು ದೇಶಕ್ಕಾಗಿ ಪ್ರಾಣ ಕೊಡುತ್ತಿದ್ದಾರೆ. ಇವರು ಮನೆಯಿಂದ ಹೊರಬಂದು ಒಂದು ಓಟ್ ಮಾಡೋಕಾಗಲ್ವ? ಸ್ವಾತಂತ್ರ್ಯ ಬಂದು 75 ವರ್ಷ ಆಯ್ತು. ಇನ್ನೂ ಎಂಥಹ ಜಾಗೃತಿ ಬೇಕು?. ಇಲ್ಲಿ ಯುವಕರು, ಹಿರಿಯರು ಎನ್ನುವ ಪ್ರಶ್ನೆ ಇಲ್ಲ. ಎಲ್ಲರನ್ನೂ ಒಂದೇ ತರಹ ನೋಡಿ. 75 ವರ್ಷಗಲ್ಲಿ ಆಗದ ಕೆಲಸ ಮುಂದೆ ಬರುವ ಸರ್ಕಾರ ಮಾಡಬೇಕುʼʼಎಂದರು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸಿಗರಿಗೆ ಚೊಂಬು ಹಿಡಿದು ಅಭ್ಯಾಸವಾಗಿದೆ: ಜೋಶಿ ಗೇಲಿ

ಬೆಂಗಳೂರಿನ ಮೂರು ಕ್ಷೇತ್ರಗಳು ಹೊರತುಪಡಿಸಿದರೆ ಉಳಿದ ಹನ್ನೊಂದು ಕ್ಷೇತ್ರಗಳಲ್ಲಿ ಶರವೇಗದ ಮತದಾನ ನಡೆಯುತ್ತಿದ್ದು, ಬೆಳಗ್ಗೆಯಿಂದಲೂ ಮತಗಟ್ಟೆ ಕಡೆ ಉತ್ಸಾಹದಿಂದ ಮತದಾರರು ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್‌ಗಳಲ್ಲಿ ಇರೋ ಜನರಿಂದ ಈ ಬಾರಿ ದಾಖಲೆ ಮತದಾನವಾಗಿದೆ. ಡಾಲರ್ಸ್ ಕಾಲೋನಿ, ಸದಾಶಿವನಗರ ಹಾಗೂ ಆರ್‌ಆರ್ ನಗರ, ಆನೇಕಲ್‌ ಬೂತ್ನಲ್ಲಿ 3 ಗಂಟೆವರೆಗೂ ಶೇಕಡಾ ಶೇ.65 ಮತದಾನ ದಾಖಲಾಗಿದೆ.

ಚುನಾವಣೆ ಆಯೋಗದ ಮಾಹಿತಿ ಪ್ರಕಾರ, ಮಧ್ಯಾಹ್ನ 3 ಗಂಟೆ ವೇಳಗೆ ಶೇ.50.93ರಷ್ಟು ಮತದಾನ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.58.76ರಷ್ಟು ಮತದಾನ ದಾಖಲಾಗಿದ್ದು, ಇದೇ ಜಿಲ್ಲೆಯಲ್ಲಿ ಹೆಚ್ಚು ಮತದಾನ ದಾಖಲಾಗಿದೆ. ಬೆಂಗಳೂರು ಕೇಂದ್ರದಲ್ಲಿ ಶೇ.40.10ರಷ್ಟು ಮತದಾನ ನಡೆದಿದ್ದು, ಅತಿ ಕಡಿಮೆ ಮತದಾನ ದಾಖಲಾದ ಜಿಲ್ಲೆ ಎನಿಸಿದೆ. ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರಿನಲ್ಲೂ ಹೆಚ್ಚಿನ ಜನ ಮತದಾನ ಮಾಡಿದ್ದಾರೆ.

Continue Reading

ಸ್ಯಾಂಡಲ್ ವುಡ್

Raj B Shetty: ದುನಿಯಾ ವಿಜಯ್‌ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರಂತೆ ರಾಜ್ ಬಿ ಶೆಟ್ಟಿ!

Raj B Shetty: ಸದ್ಯಕ್ಕೆ ಪ್ರೊಡಕ್ಷನ್ ನಂ 2. ಟೈಟಲ್ ಮೂಲಕ ಸಿನಿಮಾ ಚಿತ್ರೀಕರಣ ಚಾಲನೆ ದೊರೆತಿದೆ. ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಇದ್ದಾರೆ. ಕೋಲಾರ ಸುತ್ತಮುತ್ತ ಸಿನಿಮಾದ ಕಥೆ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನೈಜ್ಯ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ.

VISTARANEWS.COM


on

Raj B Shetty entry in duniya Vijay Movie
Koo

ಬೆಂಗಳೂರು: ನಟ ರಾಜ್‌ ಬಿ ಶೆಟ್ಟಿ (Raj B Shetty) ಅವರ `ಟೋಬಿ’ ಸಿನಿಮಾ ಬಿಡುಗಡೆಯಾಗಿ, ಅಷ್ಟೇನೂ ಕಲೆಕ್ಷನ್‌ ಮಾಡಿರಲಿಲ್ಲ. ಅಷ್ಟೋತ್ತಿಗಾಗಲೇ ರಾಜ್‌ ಅವರು ಮಲಯಾಳಂ ಸಿನಿಮಾದಲ್ಲಿ ಬ್ಯುಸಿಯಾದರು. ಮೊದಲ ಮಾಲಿವುಡ್ ಸಿನಿಮಾ ‘ರುಧೀರಂ’ ಶೂಟಿಂಗ್ ಕೂಡ ಮುಗಿದು ರಿಲೀಸ್‌ಗೂ ರೆಡಿಯಾಗಿದೆ. ಮಲಯಾಳಂ ಸ್ಟಾರ್ ಮಮ್ಮುಟ್ಟಿ ಹೊಸ ಸಿನಿಮಾ ‘ಟರ್ಬೊ’ದಲ್ಲಿ ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ’45’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ದುನಿಯಾ ವಿಜಯ್ (Duniya Vijay) ಜತೆ ಸೇರಿ ಒಂದು ಚಿತ್ರದಲ್ಲಿ ನಟಿಸುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ದುನಿಯಾ ವಿಜಯ್ 29ನೇ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿತ್ತು. ಆ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ಪ್ರೊಡಕ್ಷನ್ ನಂ 2. ಟೈಟಲ್ ಮೂಲಕ ಸಿನಿಮಾ ಚಿತ್ರೀಕರಣ ಚಾಲನೆ ದೊರೆತಿದೆ. ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಇದ್ದಾರೆ. ಕೋಲಾರ ಸುತ್ತಮುತ್ತ ಸಿನಿಮಾದ ಕಥೆ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನೈಜ್ಯ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ. ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರು ಬರೆದಿರುವ ‘ಚೋಮನ ದುಡಿ’ ಕಾದಂಬರಿ ಪ್ರೇರಿತ ಸಿನಿಮಾ ಎನ್ನಲಾಗಿದೆ. ಜಡೇಶ ಹಂಪಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಡೇಶ್‍ ಹಂಪಿ ಅವರಿಗೆ ನಿರ್ದೇಶನದಲ್ಲಿ ಅನುಭವ ಇದೆ. ‘ರಾಜಹಂಸ’, ‘ಜಂಟಲ್‍ಮ್ಯಾನ್‍’, ‘ಗುರು ಶಿಷ್ಯರು’ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ದುನಿಯಾ ವಿಜಯ್ ಮುಂದಿನ ಸಿನಿಮಾಗೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Raj B Shetty: ಒಟಿಟಿಯಲ್ಲಿ ಅಬ್ಬರಿಸಲಿದೆ ʻಟೋಬಿʼ!

ರಾಜ್‌ ಬಿ ಶೆಟ್ಟಿ ಅವರು ʼಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಮಮ್ಮುಟ್ಟಿ ಹೊಸ ಸಿನಿಮಾ ‘ಟರ್ಬೊ’ದಲ್ಲಿ ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ʻಟರ್ಬೊ’ ಸಿನಿಮಾ ನಿರ್ದೇಶಕ ವೈಶಾಖ್ ಜತೆ ಇದು ಮೂರನೇ ಬಾರಿ ಮಮ್ಮುಟ್ಟಿ ಜತೆ ಕೈ ಜೋಡಿಸುತ್ತಿದ್ದಾರೆ. ಪೊಕ್ಕಿರಿ ರಾಜ ಮತ್ತು ಮಧುರ ರಾಜ ಸಿನಿಮಾಗಳ ಬಳಿಕ ಮಮ್ಮುಟ್ಟಿಯವರ ಮೂರನೇ ಚಿತ್ರವಾಗಿದೆ. ಚಲನಚಿತ್ರ ನಿರ್ಮಾಪಕ ಮಿಧುನ್ ಮ್ಯಾನುಯೆಲ್ ಥಾಮಸ್ ಬರೆದ ಚಿತ್ರಕಥೆಯನ್ನು ಈ ಸಿನಿಮಾ ಆಧರಿಸಿದೆ. ಟರ್ಬೊದಲ್ಲಿ ತೆಲುಗು ನಟ ಸುನಿಲ್ ಕೂಡ ಕಾಣಿಸಿಕೊಂಡಿದ್ದಾರೆ.

Continue Reading

Lok Sabha Election 2024

Lok Sabha Election 2024: ಬುದ್ಧಿ ಇರೋರು ವೋಟ್‌ ಹಾಕ್ತಿದ್ದಾರೆ ಎಂದ ಕಿಚ್ಚ! ಉಳಿದ ತಾರೆಗಳು ಹೇಳಿದ್ದೇನು?

Lok Sabha Election 2024: ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವಂತೆ ಪ್ರಕಾಶ್ ರಾಜ್ ಮನವಿ ಮಾಡಿದರು. ಈ ಬಾರಿ ಡಾಲಿ ಧನಂಜಯ್‌ ಅವರು ಹಳ್ಳಿ ಸ್ಟೈಲ್‌ನಲ್ಲಿ ಬಂದು ವೋಟ್‌ ಮಾಡಿದರು. ನಟ ಸುದೀಪ್‌ ಅವರು ಮಗಳ ಜತೆ ಬೆಂಗಳೂರಿನಲ್ಲಿ ಮತದಾನ ಮಾಡಿದ್ದಾರೆ. ದೇಶದ ಮೇಲೆ ಪ್ರೀತಿ ಇರುವವರು ವೋಟ್‌ ಹಾಕುತ್ತಿದ್ದಾರೆ, ಮಿಕ್ಕವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ ಎಂದರು ಸುದೀಪ್‌.

VISTARANEWS.COM


on

Lok Sabha Election 2024 sandalwood celebrities reaction
Koo

ಬೆಂಗಳೂರು:  ಲೋಕಸಭಾ ಚುನಾವಣೆಯ (Lok Sabha Election 2024) ಎರಡನೇ ಹಂತದ ಮತದಾನ ಇಂದು (ಏಪ್ರಿಲ್ 26) ನಡೆಯುತ್ತಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವಂತೆ ಪ್ರಕಾಶ್ ರಾಜ್ ಮನವಿ ಮಾಡಿದರು. ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಕೂಡ ʻನಿಮಗೆ ಯಾರು ಒಳ್ಳೆಯವರು ಅನಿಸುತ್ತದೆಯೋ ಅವರಿಗೆ ವೋಟ್ ಮಾಡಿʼ ಎಂದು ಮಾಧ್ಯಮದ ಜತೆ ಮಾತನಾಡಿದರು. ಅಶ್ವಿನಿ ಪುನೀತ್, ಡಾಲಿ ಧನಂಜಯ್, ಸಪ್ತಮಿ ಗೌಡ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಸೇರಿ ಅನೇಕ ಸೆಲೆಬ್ರಿಟಿಗಳು ವೋಟ್ ಮಾಡಿದ್ದಾರೆ. 

ನಟ ಸುದೀಪ್‌ ಅವರು ಮಗಳ ಜತೆ ಬೆಂಗಳೂರಿನಲ್ಲಿ ಮತದಾನ ಮಾಡಿದ್ದಾರೆ. ಈ ವೇಳೆ ನಟ ಮಾಧ್ಯಮದ ಜತೆ ಮಾತನಾಡಿ ʻʻತಲೆ ಇರುವವರು, ಬುದ್ಧಿ ಇರುವವರು, ದೇಶದ ಮೇಲೆ ಪ್ರೀತಿ ಇರುವವರು ವೋಟ್‌ ಹಾಕುತ್ತಿದ್ದಾರೆ, ಮಿಕ್ಕವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ಯಾರು ವೋಟ್‌ ಹಾಕಲು ಬರುತ್ತ ಇಲ್ಲವೋ ಅವರ ಬಗ್ಗೆ ತುಂಬ ತೆಲೆ ಕೆಡಿಸಿಕೊಳ್ಳುವುದನ್ನು ಬಿಡೋಣʼʼಎಂದರು.

ಇದನ್ನೂ ಓದಿ: Lok Sabha Election 2024: ಹಳ್ಳಿ ಸ್ಟೈಲ್‌ನಲ್ಲಿ ಬಂದು ಮತ ಹಾಕಿದ ಡಾಲಿ! ವೋಟ್ ಮಾಡಿದ ಸೆಲೆಬ್ರಿಟಿಗಳಿವರು!

ನಟ ಉಪೇಂದ್ರ ಮಾತನಾಡಿ ʻʻವೋಟ್‌ ಮಾಡಲು ತುಂಬ ಜನ ಬರುತ್ತ ಇದ್ದಾರೆ. ಎಲ್ಲರಿಗೂ ಮಹತ್ವ ಗೊತ್ತಿದೆ. ಖಂಡತ ಎಲ್ಲರೂ ಬರ್ತಾರೆ. ಯುವಕರು ಬಂದು ವೋಟ್‌ ಮಾಡಿ. ಪ್ರಜೆಗಳು ವಿಚಾರ ಮಾಡಿ ಮತ ಹಾಕಿʼʼಎಂದರು.

ಈ ಬಾರಿ ಡಾಲಿ ಧನಂಜಯ್‌ ಅವರು ಹಳ್ಳಿ ಸ್ಟೈಲ್‌ನಲ್ಲಿ ಬಂದು ವೋಟ್‌ ಮಾಡಿದರು. ಈ ವೇಳೆ ವಿಸ್ತಾರ ಜತೆಗೆ ಮಾತನಾಡಿ ʻʻಮತದಾನ ಪರ್ಸಂಟೇಜ್‌ ಜಾಸ್ತಿ ಆಗಬೇಕು. ನಾವು ಮತ ಚಲಾಯಿಸಬೇಕು. ಯುವಕರಿಗೆ ಹೇಳೋದು ಏನಂದರೆ ಯೋಚನೆ ಮಾಡಿ ಮತ ಹಾಕಿ. ನೋಡೋದು, ಕೇಳೋದು ಯಾವತ್ತೂ ಸತ್ಯ ಇರುವುದಿಲ್ಲ. ನಮ್ಮ ಭವಿಷ್ಯಕ್ಕೆ ಏನು ಬೇಕು ಎಂದು ಅರಿತು ವೋಟ್‌ ಮಾಡಬೇಕು. ನಮ್ಮ ಮತ ಖಂಡಿತ ಒಳ್ಳೆಯ ನಾಯಕರಿಗೆ ಆಗರುತ್ತೆʼʼಎಂದರು.

ಮತದಾನದ ಬಳಿಕ ನಟಿ ತಾರಾ ಮಾತನಾಡಿ ʻಇವತ್ತು ರಾಷ್ಟ್ರ ಕಟ್ಟುವ ಸಮಯ. ಇಲ್ಲಿ ನಮ್ಮ ನೆಚ್ಚಿನ ನಾಯಕನ್ನು ಆರಿಸುವ ಸಮಯ. ವೋಟ್‌ ಮಾಡುವ ಸಂಭ್ರಮ ನೋಡಿ ಖುಷಿ ಆಗುತ್ತದೆ. ತುಂಬ ಯುವಕರು ವೋಟ್‌ ಮಾಡುತ್ತಿದ್ದಾರೆ. ದೇಶದ ಪ್ರಜೆಯಾಗಿ ವೋಟ್‌ ಮಾಡುವುದು ತುಂಬ ಮುಖ್ಯ. ಎಲ್ಲ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮಗಿಂತ ಹೆಚ್ಚಾಗಿ ನೀವು ಮನೆ ಮನೆಗೆ ತಲುಪಿ ಮತದಾನದ ಅರಿವು ಮೂಡಿಸಿದ್ದೀರಿʼʼ ಎಂದರು.

ನಟ ಯಶ್ ಮಾತನಾಡಿ ʻʻಮತ ಹಾಕೋದು ನಮ್ಮೆಲ್ಲರ ಕರ್ತವ್ಯ. ಅದು ನಮ್ಮ ಹಕ್ಕು. ದೇಶಕ್ಕಾಗಿ ಮತ ಚಲಾವಣೆ ಮಾಡಬೇಕು. ನಿಮ್ಮ ನಿರ್ಧಾರಗಳಿಂದ ಕಲಿಯುವುದಕ್ಕೆ ಅವಕಾಶ ಸಿಗಲಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಪ್ರಾಯ ಮುಖ್ಯ. ಸಮಯ ಕಳೆದಂತೆ ಮತದಾನ ಹೆಚ್ಚಾಗಬಹುದು. ಅಭಿವೃದ್ಧಿ ಅನ್ನೋದು ಮುಖ್ಯ. ದೇಶಕ್ಕೆ ಈಗ ಒಳ್ಳೆಯ ಅವಕಾಶ ಇದೆ. ಒಳ್ಳೆಯ ಸಮಯʼʼಎಂದು ಹೇಳಿದರು.

ನಟ ಸೃಜನ್ ಲೋಕೇಶ್ ಮಾತನಾಡಿ ʻʻಮತ ಹಾಕಿರುವುದು ಖುಷಿ ಕೊಟ್ಟಿದೆ. ಒತ್ತಾಯದಿಂದ ಯಾರು ಮತದಾನ ಮಾಡಬಾರದು. ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ಅದು ನಮ್ಮ ಮೂಲ ಹಕ್ಕುʼʼಎಂದರು.

ಮತದಾನ ಮಾಡಿದ ಬಳಿಕ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮಾತನಾಡಿ ʻʻಮತದಾನ ನಮ್ಮಲ್ಲೆರ ಹಕ್ಕು. ಯೋಚನೆ ಮಾಡಿ ಮತದಾನ ಮಾಡಿ. ದೇಶದ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಮತದಾನ ಮಾಡಿ ಅಂತ ಹೇಳುತ್ತೇನೆ. ಬಂದು ಮತ ಹಾಕಿ ಎಲ್ಲಿಗಾದರೂ ಹೋಗಿ. ಯಾಕೆಂದರೆ ಮತಕ್ಕೆ ತುಂಬಾ ಬೆಲೆ ಇದೆʼʼಎಂದರು.

ನಟಿ ಅಮೂಲ್ಯ ಪತಿ ಜಗದೀಶ್ ಮಾತನಾಡಿ ʻʻವೋಟ್ ಮಾಡಿದ್ದೇವೆ,ಇದು ಎಲ್ಲರ ಹಕ್ಕು. ಈ ಬಾರೀ ತುಂಬಾ ಜನ ವೋಟ್ ಮಾಡ್ತಿದ್ದಾರೆ. ಹೆಚ್ಚು ಜನರು ವೋಟಿಂಗ್‌ಗೆ ಬಂದಿರೋದು ಖುಷಿಯಾಯ್ತು. ಎಲ್ಲರೂ ತಪ್ಪದೇ ಮತದಾನ ಮಾಡಬೇಕುʼʼಎಂದರು.

ಈಗಾಗಲೇ ಡಿಂಪಲ್‌ ಕ್ಷೀನ್‌ ರಚಿತಾ ರಾಮ್‌, ನಿರಂಜನ್‌ ದೇಶಪಾಂಡೆ, ದರ್ಶನ್‌, ವಿಜಯ್‌ ರಾಘವೇಂದ್ರ ಸೇರಿದಂತೆ ಸ್ಟಾರ್ಸ್‌ಗಳು ಮತಚಲಾಯಿಸಿದ್ದಾರೆ.

Continue Reading
Advertisement
mamata banerjee helicopter
ಪ್ರಮುಖ ಸುದ್ದಿ2 mins ago

Mamata Banerjee: ಹೆಲಿಕಾಪ್ಟರ್‌ ಏರುವಾಗ ಬಿದ್ದ ಮಮತಾ ಬ್ಯಾನರ್ಜಿ, ಗಾಯ

ದೇಶ19 mins ago

Self harming: ಮದುವೆಯಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಬೇಸರಗೊಂಡ ಪತಿ ಆತ್ಮಹತ್ಯೆ

mobile blast woman death
ಕ್ರೈಂ48 mins ago

Mobile Blast: ಬೈಕ್‌ ಚಲಾಯಿಸುತ್ತಿದ್ದಾಗ ಮೊಬೈಲ್‌ ಸ್ಫೋಟ, ಡಿವೈಡರ್‌ಗೆ ಗುದ್ದಿ ಮಹಿಳೆ ಸಾವು

Randeep Surjewala
ಕರ್ನಾಟಕ1 hour ago

Randeep Surjewala: ಕನ್ನಡಿಗರ ತೆರಿಗೆ ಹಣದಲ್ಲಿ ಸುರ್ಜೇವಾಲಾ ಟ್ರಿಪ್;‌ ಕೆರಳಿ ಕೆಂಡವಾದ ಬಿಜೆಪಿ!

Murder case in dharwad
ಕ್ರೈಂ1 hour ago

Murder case: ಹೆಂಡ್ತಿ ಮೇಲೆ ಸಂಶಯ; ಕುಡಿದು ಬಂದು ಕೊಡಲಿಯಿಂದ ಕೊಚ್ಚಿ ಕೊಂದ

miss universe Buenos Aires
ವಿದೇಶ1 hour ago

Miss Universe Buenos Aires: ಈಕೆ ಬ್ಯೂನಸ್‌ ಐರಿಸ್‌ ವಿಶ್ವ ಸುಂದರಿ; ಇವಳ ವಯಸ್ಸು ನೀವೇ ಊಹಿಸಿ!

Gurucharan Singh Taarak Mehta Ka Ooltah Chashmah actor missing
ಕಿರುತೆರೆ2 hours ago

Gurucharan Singh: ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಖ್ಯಾತಿಯ ನಟ ನಿಗೂಢ ನಾಪತ್ತೆ

snake bite
ಬೆಂಗಳೂರು ಗ್ರಾಮಾಂತರ2 hours ago

Snake Bite: ತೋಟದ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕಚ್ಚಿದ ಹಾವು; ಕ್ಷಣಾರ್ಧದಲ್ಲೆ ಹಾರಿಹೋಯ್ತು ಪ್ರಾಣ

MDH, Everest Spices
ದೇಶ2 hours ago

MDH, Everest Spices: ಭಾರತದ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಕೆಮಿಕಲ್‌ ಪತ್ತೆ

Neha Murder Case neha And fayas
ಹುಬ್ಬಳ್ಳಿ2 hours ago

Neha Murder case : ನ್ಯಾಯಾಧೀಶರ ಎದುರೆ ನೇಹಾ ಕೊಲೆ ಆರೋಪಿ ಫಯಾಜ್‌ನ DNA ಮಾದರಿ ಸಂಗ್ರಹ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

road Accident in kolar evm
ಕೋಲಾರ3 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ10 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ1 day ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

ಟ್ರೆಂಡಿಂಗ್‌