Site icon Vistara News

Geeta Shivarajkumar: ರಾಜ್‌ಕುಮಾರ್‌ಗೆ ರಾಜಕೀಯ ಇಷ್ಟವಿರಲಿಲ್ಲ, ಆದರೆ…; ಪತ್ನಿಯ ಸ್ಪರ್ಧೆಗೆ ಶಿವಣ್ಣ ವಿವರಣೆ

Geeta Shivarajkumar press meet for election

ಬೆಂಗಳೂರು: ನಟ ಶಿವ ರಾಜ್​ಕುಮಾರ್ ಅವರ ಪತ್ನಿ ಗೀತಾ ಶಿವ ರಾಜ್​ಕುಮಾರ್ (Geeta Shivarajkumar) ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ನಿರ್ಮಾಪಕರ ಸಂಘ ಗೀತಾ ಅವರಿಗೆ ಬೆಂಬಲ ನೀಡಿದೆ. ಸೋಮವಾರ ಮಧ್ಯಾಹ್ನ ನಟ ಶಿವರಾಜ್​ಕುಮಾರ್​ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆದಿದೆ. ಸುದ್ದಿಗೋಷ್ಠಿಯಲ್ಲಿ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಮಧುಬಂಗಾರಪ್ಪ, ಚಿನ್ನೆಗೌಡ್ರು, ಉಮೇಶ್ ಬಣಕರ್, ಸಾ ರಾ ಗೋವಿಂದ್, ಎನ್ ಎಂ ಸುರೇಶ್ ಭಾಗಿಯಾಗಿದ್ದರು. ಈ ವೇಳೆ ಶಿವರಾಜ್‌ಕುಮಾರ್‌ ಅವರು ʻಗೀತಾ ಗೆದ್ದೇ ಗೆಲ್ತಾಳೆ. ನಾನು ಅವರ ಪರ ಯಾವಾಗಲೂ ಇದ್ದೆ ಇರ್ತೇನೆʼʼ ಎಂದು ಹೇಳಿದರು.

ಶಿವರಾಜ್‌ಕುಮಾರ್‌ ಮಾತನಾಡಿ ʻʻಡಾ. ರಾಜ್ ಕುಮಾರ್ ಅವರ ಮಾತಿನಂತೆ ಚಿತ್ರರಂಗ ಅಂದರೆ ಒಂದು ಕುಟುಂಬ. ನನ್ನ ಪತ್ನಿ ಗೆಲುವಿಗಾಗಿ ನಿಮ್ಮ ಸಹಕಾರ ನನಗೆ ಖುಷಿ ಕೊಟ್ಟಿದೆ. ರಾಜಕೀಯದಲ್ಲಿ ಅನುಭವ ಇದ್ದರೆ ಸಾಲದು. ನಂಬಿಕೆ, ಆತ್ಮ ವಿಶ್ವಾಸ ಕೂಡ ಬೇಕು. ಡಾ. ರಾಜ್ ಕುಮಾರ್ ಅವರಿಗೆ ರಾಜಕೀಯ ಇಷ್ಟ ಇರಲಿಲ್ಲ. ಆದರೆ ರಾಜಕೀಯ ಮಾಡುವವರಿಗೆ ಯಾವತ್ತೂ ಬೇಡ ಅನ್ನಲಿಲ್ಲ. ಹಾಗಾಗಿಯೇ ನಾನು ಬಂಗಾರಪ್ಪ ಅವರ ಮಗಳನ್ನು ಮದುವೆಯಾದೆ. ನಮ್ಮಲ್ಲಿ ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಬೇಕು. ಗೀತ ಗೆದ್ದೇ ಗೆಲ್ತಾಳೆ. ನಾನು ಅವರ ಪರ ಯಾವಾಗಲೂ ಇದ್ದೇ ಇರ್ತೇನೆʼʼ ಎಂದರು.

ಇದನ್ನೂ ಓದಿ: Karnataka Election 2023: ನಾಳೆ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಗೀತಾ ಶಿವರಾಜಕುಮಾರ್

ಗೀತಾ ಮಾತನಾಡಿ ʻʻನನ್ನ ಪರವಾಗಿ ನಿಂತ ನಿರ್ಮಾಪಕರಿಗೆ ಧನ್ಯವಾದ. ನಾನು ರಾಜಕೀಯದಲ್ಲಿ ಮೊದಲು ಸೋತೆ. ರಾಜಕೀಯದಲ್ಲಿ ಸೋಲು ಗೆಲುವಿಗೆ ನಾನು ಹೆದರುವುದಿಲ್ಲ. ಬಾರಿ ನಾನು ಚುನಾವಣೆಯಲ್ಲಿ ಗೆದ್ದೇ ಗೆಲ್ತೇನೆʼʼ ಎಂದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ ʻʻನನಗೆ ಚಿತ್ರರಂಗದ ಮೇಲೆ ಬಹಳ ಗೌರವವಿದೆ. ಇಂದು ನಿರ್ಮಾಪಕರು ನಮ್ಮ ಅಕ್ಕನ ಪರವಾಗಿ ನಿಂತಿದ್ದಾರೆ. 2014ರಲ್ಲಿ ಬೇರೆ ಪಕ್ಷದಲ್ಲಿ ಇದ್ದೇವು. ಆಗ ಸೋಲಾಯ್ತು. ಚುನಾವಣೆಯಲ್ಲಿ ನಾನು ಈವರೆಗೆ ನಾನು 6 ಬಾರಿ ಸೋತಿದ್ದೇನೆ. ಮಧು ಬಂಗಾರಪ್ಪ ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆ, ರಾಜಕೀಯದಲ್ಲಿ ಅಲ್ಲ. ಆದೇ ರೀತಿ ಈ ಬಾರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆದ್ದೇ ಗೆಲ್ಲಿಸುತ್ತೇನೆ. ಶಿವಣ್ಣ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದಾರೆ. ಶಿವಮೊಗ್ಗದಲ್ಲಿ ಬಂಗಾರಪ್ಪ ಅವರ ಬಳಿಕ ಗೀತಾ ಶಿವರಾಜ್ ಕುಮಾರ್ ನಾಯಕಿಯಾಗಿ ಬರಬೇಕು. ಗೀತಾ ಅವರು ಗೆದ್ದ ನಂತರ ಶಿವಮೊಗ್ಗಕ್ಕೆ ಮಾತ್ರ ಅಲ್ಲ, ಚಿತ್ರರಂಗಕ್ಕೆ ಸಾಕಷ್ಟು ಅನುಕೂಲ ಮಾಡೇ ಮಾಡ್ತಾರೆʼʼ ಎಂದರು.

Exit mobile version