Site icon Vistara News

Karataka Damanaka: ಬೆಳ್ಳುಳ್ಳಿ ಕಬಾಬ್ VS ಭಟ್ರು ಮಿರ್ಚಿ: ಇಬ್ಬರಲ್ಲಿ ಅಣ್ಣ ಯಾರು? ತಮ್ಮ ಯಾರು? ಅನೌನ್ಸ್‌ ಮಾಡೇ ಬಿಟ್ರು ರಾಕ್‌ಲೈನ್‌!

Karataka Damanaka Belluli Kabab vs Bhatru Mirchi Rockline Venkatesh

ಬೆಂಗಳೂರು: ʻಬೆಳ್ಳುಳ್ಳಿ ಕಬಾಬ್ʼ​ ಖ್ಯಾತಿಯ ಚಂದ್ರು (Karataka Damanaka) ಅವರ ಹವಾ ಇನ್ನೂ ನಿಂತಿಲ್ಲ. ಸ್ವಲ್ಪ ದಿನಗಳಿಂದ ʻಬೆಳ್ಳುಳ್ಳಿ ಕಬಾಬ್​ ಚಂದ್ರುʼ ಹಾಗೂ ಯೋಗರಾಜ್‌ ಭಟ್‌ ಅವರ ಕುರಿತಾದ ಮೀಮ್‌ಗಳು ವೈರಲ್‌ ಆಗುತ್ತಿವೆ. ಚಂದ್ರು ನೋಡಲು ಸಿನಿಮಾ ನಿರ್ದೇಶಕ ಯೋಗರಾಜ ಭಟ್ರನ್ನು ಹೋಲುತ್ತಾರೆ. ಇದೇ ಕಾರಣಕ್ಕೆ ಕೆಲ ಮೀಮ್ ಪೇಜ್‌ಗಳಲ್ಲಿ ಇಬ್ಬರ ಫೋಟೊಗಳನ್ನು ಕೊಲಾಜ್ ಮಾಡಿ ಅಣ್ಣ-ತಮ್ಮ ಎಂದು ಬರೆಯಲಾಗುತ್ತಿದೆ. ಈಗ ಇದೇ ಕಾರಣ ಇಟ್ಟುಕೊಂಡು ಭಟ್ರು ತಮ್ಮ ಮುಂದಿನ ಕರಟಕ-ದಮನಕʼ ಸಿನಿ ಪ್ರಚಾರಕ್ಕೆ ಚಂದ್ರು ಜತೆ ಕೈ ಜೋಡಿಸಿದ್ದಾರೆ. ಇದೀಗ ಇವರಿಬ್ಬರಲ್ಲಿ ಅಣ್ಣ ತಮ್ಮ ಯಾರೆಂಬುದನ್ನು ಸ್ಪೆಷಲ್‌ ವ್ಯಕ್ತಿಯೊಬ್ಬರು ರಿವೀಲ್‌ ಮಾಡಿದ್ದಾರೆ. ಮಾತ್ರವಲ್ಲ ಯೋಗರಾಜ್‌ ಭಟ್ರು ಬಿಸಿ ಬಿಸಿ ಮಿರ್ಚಿ ಮಾಡಿದ್ದರೆ, ಚಂದ್ರು ಅವರು ಗರಿ ಗರಿಯಾದ ಬೆಳ್ಳುಳ್ಳಿ ಕಬಾಬ್‌ ಮಾಡಿ, ಸ್ಪೆಷ್ಟಲ್‌ ಗೆಸ್ಟ್‌ಗೆ ಉಣಬಡಿಸಿದ್ದಾರೆ.

ಕೆಲವು ದಿನಗಳಿಂದ ಟ್ರೋಲ್‌ ಹಾಗೂ ಮೀಮ್‌ ಪೇಜ್‌ಗಳಲ್ಲಿ ಯೋಗರಾಜ್‌ ಭಟ್‌ ಹಾಗೂ ಚಂದ್ರು ಅವರನ್ನು ಕೊಲಾಜ್ ಮಾಡಿ ಅಣ್ಣ-ತಮ್ಮ ಎಂದು ಬರೆಯಲಾಗುತ್ತಿದೆ. ‘ಒಬ್ರು ಸಿನಿಮಾ ಭಟ್ರು, ಇನ್ನೊಬ್ರು ಅಡುಗೆ ಭಟ್ರು, ಒಬ್ರು ಗಾಳಿಪಟ, ಇನ್ನೊಬ್ರು ಚಟ ಪಟʼ ಎಂದು ಪೋಸ್ಟ್ ಆಗಿದ್ದ ಮೀಮ್ ಫೋಟೊ ಸಖತ್ ವೈರಲ್ ಆಗಿತ್ತು. ಇದಾದ ಮೇಲೆ ಇದೀಗ ಯೋಗರಾಜ್‌ ಭಟ್‌ ಅವರು ಚಂದ್ರು ಅವರ ಜತೆ ಕೈ ಜೋಡಿಸಿದ್ದಾರೆ. ತಮ್ಮ ಮುಂದಿನ ಕರಟಕ-ದಮನಕ ಸಿನಿ ಪ್ರಚಾರಕ್ಕೆ ಚಂದ್ರು ಅವರನ್ನು ಬಳಸಿಕೊಂಡಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ ಇಬ್ಬರೂ ಸೇರಿ ಒಂದು ನಾನ್‌ವೆಜ್ ರೆಸಿಪಿ ವಿಡಿಯೋ ಮಾಡಿದ್ದಾರೆ. ಇದಕ್ಕೂ ಮುಂಚೆ ಈ ಬಗ್ಗೆ ಪ್ರೋಮೊ ಕೂಡ ಔಟ್‌ ಆಗಿತ್ತು. ಅಣ್ಣ ಯಾರು ತಮ್ಮ ಯಾರು ? ಎಂಬ ಪಂಚಾಯ್ತಿಗೆ ದೊಡ್ಡವರು ಬರ್ತಾರೆ ಎಂದು ಭಟ್ರು ಈ ಹಿಂದೆ ಅನೌನ್ಸ್‌ ಮಾಡಿದ್ದರು. ಅದರಂತೆ ಈಗ ರಾಕ್‌ಲೈನ್‌ ವೆಂಕಟೇಶ್‌ ಅವರು ಬಂದಿದ್ದಾರೆ.

ಇದನ್ನೂ ಓದಿ: Bellulli Kabab Chandru: ಒಂದಾಗೇ ಬಿಟ್ರು ಭಟ್ರು-ಬೆಳ್ಳುಳ್ಳಿ ಕಬಾಬ್ ಚಂದ್ರು: ಇದರಲ್ಲಿ ಅಣ್ಣ ಯಾರು? ತಮ್ಮ ಯಾರು?

ವಿಡಿಯೊದಲ್ಲಿ ಏನಿದೆ?

ವಿಡಿಯೊದಲ್ಲಿ ರಾಕ್‌ಲೈನ್‌ ವೆಂಕಟೇಶ್‌ ಎಂಟ್ರಿ ಕೊಡುತ್ತಲೇ ಮಾರ್ಚ್‌ 8, ʻಕರಟಕ ದಮಕನಕʼ ಶಿವರಾತ್ರಿ ದಿನ ರಿಲೀಸ್‌ ಎಂದು ಪದೇಪದೇ ಹೇಳುತ್ತಾರೆ. ಇತ್ತ ಯೋಗರಾಜ್‌ ಭಟ್ರು ಹಾಗೂ ಚಂದ್ರು ಗ್ರ್ಯಾಂಡ್‌ ವೆಲಕಮ್‌ ಮಾಡಿ, ರೆಸಿಪಿ ಮಾಡಿ ಕೊಡುತ್ತಾರೆ. ಯೋಗರಾಜ್‌ ಅವರು ಬಿಸಿ ಬಿಸಿ ಮಿರ್ಚಿ ಮಾಡಿ ಕೊಟ್ಟರೆ, ಚಂದ್ರು ಅವರು ಬೆಳ್ಳುಳ್ಳಿ ಕಬಾಬ್‌ ಮಾಡಿ ಕೊಟ್ಟರು. ಇನ್ನು ರಾಕ್‌ಲೈನ್‌ ವೆಂಕಟೇಶ್‌ ಕೂಡ ಎರಡೂ ರೆಸಿಪಿಗಳನ್ನು ಚಪ್ಪರಿಸಿಕೊಂಡು ತಿಂದಿದ್ದಾರೆ. ಇದಾದ ಮೇಲೆ ಜನರಿಗಿರುವ ಯಕ್ಷ ಪ್ರಶ್ನೆ ಯೋಗರಾಜ್‌ ಹಾಗೂ ಚಂದ್ರು ಇಬ್ಬರಲ್ಲಿ ಅಣ್ಣ ತಮ್ಮ ಯಾರೆಂಬುದು?. ಕೊನೆಗೂ ರಾಕ್‌ಲೈನ್‌ ವೆಂಕಟೇಶ್‌ ಈ ಬಗ್ಗೆ ರಿವೀಲ್‌ ಮಾಡಿದರು.

ರಾಕ್‌ಲೈನ್‌ ಮಾತನಾಡಿ ʻʻನೋಡಿ ಜತೆಯಲ್ಲಿ ಹುಟ್ಟಿದ್ರೇನೆ ಅಣ್ಣ ತಮ್ಮ ಅಲ್ಲ. ನಿಮ್ಮಬ್ಬರಿನ್ನು ಅಣ್ಣ ತಮ್ಮ ಅಂದಿರುವವರು ಜನರೇ. ಅವರ ಆಶೀರ್ವಾದ, ನಿಮ್ಮಿಬ್ಬರ ಮೇಲೆ ಇದೆ. ಇನ್ನು ಈ ಪ್ರೀತಿ ಹೀಗೆ ಇರಬೇಕು. ʻಕರಟಕʼ ನಮ್ಮ ನಾನ್‌ ವೆಜಿಟೇರಿಯನ್‌ ಚಂದ್ರು. ಹೊಟೇಲ್‌ ಚೆನ್ನಾಗಿ ನಡೆಸಿ ಹಿಟ್‌ ಆಗಲಿ. ಭಟ್ರು ನೀವು ʻದಮನಕʼ ವೆಜಿಟೇರಿಯನ್‌ ಇಟ್ಟುಕೊಂಡು ಸೂಪರ್‌ ಡೂಪರ್‌ ಆಗಿʼʼ ಎಂದು ಹಾರೈಸಿದರು.

ರಕ್ತ ಸಂಬಂಧಕ್ಕಿಂತ ರಸ್ತೆ ಸಂಬಂಧ ತುಂಬ ದೊಡ್ಡದು

ʻದಿನಾ ಹೊಟ್ಟೆ ಹಸಿಯುತ್ತೇ ಅನ್ನೋ ಕೋಪಕ್ಕೆ ಅದ್‌ ಯಾರೋ ಹೋಟೆಲ್‌ ಓಪನ್‌ ಮಾಡಿದ್ರಂತೆ! ಹಂಗ್‌ ಆಯಿತು ನಮ್ಮಿಬ್ಬರ ಕಥೆ. ಒಟ್‌ನಲ್ಲಿ ʻರಕ್ತ ಸಂಬಂಧಕ್ಕಿಂತ ರಸ್ತೆ ಸಂಬಂಧ ತುಂಬ ದೊಡ್ಡದುʼ. ಜೈ ಅಣ್ಣ ತಮ್ಮ..! ಜೈ ಕರಟಕ ದಮನಕʼ ಎಂದು ಕೊನೆಯಲ್ಲಿ ಯೋಗರಾಜ್‌ ಭಟ್‌ ಧ್ವನಿ ನೀಡಿ ಸಂದೇಶ ನೀಡಿದ್ದಾರೆ.

ʻರಾವುಲ್ಲʼ ಕೂಡ ವಿಡಿಯೊದಲ್ಲಿ ಅಭಿನಯಿಸಿದ್ದಾರ. ಈ ಪೂರ್ಣ ವಿಡಿಯೊ ರಾಕ್‌ಲೈನ್‌ ಎಂಟರ್‌ಟೈನ್‌ಮೆಂಟ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಪೋಸ್ಟ್‌ ಆಗಿದೆ. ಈ ತಮಾಷೆಯ ವಿಡಿಯೊಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಕರಟಕ ದಮನಕ + ಬೆಳ್ಳುಳ್ಳಿ ಕಬಾಬ್’ ಅಣ್ಣತಮ್ಮಂದಿರ ಕಹಾನಿಗೆ ಬೊಂಬಾಟ್‌ ಎಂದಿದ್ದಾರೆ ಫ್ಯಾನ್ಸ್‌.

ಇದನ್ನೂ ಓದಿ: Bellulli Kabab Chandru: `ರಾಹುಲ್ಲಾ ಅಲ್ಲ.. ಸುನಿಲ್ಲಾ’ ತುಂಬ ಚೆನ್ನಾಗಿ ಸಿನಿಮಾ ಮಾಡಿದ್ದಾರೆ ಎಂದ ಬೆಳ್ಳುಳ್ಳಿ ಕಬಾಬ್​ ಚಂದ್ರು!

ಮಾರ್ಚ್ 8ಕ್ಕೆ ಸಿನಿಮಾ ತೆರೆಗೆ

ಯೋಗರಾಜ್‌ ಭಟ್ ನಿರ್ದೇಶನದ ‘ಕರಟಕ ದಮನಕ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಮಾರ್ಚ್ 8ಕ್ಕೆ ಸಿನಿಮಾ ತೆರೆಗೆ ಬರಲಿದೆ.. ʻಕರಟಕ ದಮನಕʼ ಎಂದರೆ ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಎಚ್ಚರಿಕೆ’ ಎಂದು ಫೋಸ್ಟ್ ಮಾಡಿದ್ದಾರೆ. ಹಲವು ದಿನಗಳಿಂದ ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರು ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ.ವಿ ಹರಿಕೃಷ್ಣ ಸಂಗೀತ ಸಂಯೋಜನೆಯ 7 ಹಾಡುಗಳು ಚಿತ್ರದಲ್ಲಿದೆ. ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಾಹಕರು. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಾಯಕಿಯರು. ಮುಖ್ಯ ಮಂತ್ರಿ ಚಂದ್ರು ಹಾಗೂ ತನಿಕೆಲ್ಲ ಭರಣಿ ಅವರಂತಹ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Exit mobile version