ಬೆಂಗಳೂರು: ʻಮ್ಯಾಕ್ಸ್’ ಸಿನಿಮಾ ಚಿತ್ರೀಕರಣದ ನಡುವೆಯೇ ಕಿಚ್ಚ ಸುದೀಪ್ (Kiccha Sudeep) ಬಿಗ್‌ಬಾಸ್ ಸೀಸನ್ 10 ಶೋ ನಿರೂಪಣೆ ಮಾಡಿದ್ದರು. ಇನ್ನು ಫೆಬ್ರವರಿ 23ರಿಂದ ಸಿಸಿಎಲ್ 10ನೇ ಸೀಸನ್ ಆರಂಭವಾಗುತ್ತಿದೆ. ಟೂರ್ನಿಯಲ್ಲಿ ಕಿಚ್ಚ ‘ಕರ್ನಾಟಕ ಬುಲ್ಡೊಜರ್ಸ್’ ತಂಡವನ್ನು ಮುನ್ನಡೆಸಲಿದ್ದಾರೆ. ಆದರೀಗ ಅವರ ಫ್ಯಾನ್ಸ್ ಒಂದೇ ಸಮನೆ ಕಿಚ್ಚ ಸುದೀಪ್ ಅವರ ಸಿನಿಮಾಗಳ ಅಪ್‌ಡೇಟ್ ಕೇಳುತ್ತಲೇ ಇದ್ದಾರೆ. ಅಭಿಮಾನಿಗಳ ಈ ನಿರಂತರ ಪ್ರಶ್ನೆಗಾಗಿ ಇದೀಗ ಕಿಚ್ಚ ಟ್ವೀಟ್ ಮೂಲಕ ಫುಲ್ ಸ್ಟಾಪ್ ಕೊಟ್ಟಿದ್ದಾರೆ.
ಕಿಚ್ಚ ಅವರು ಎಕ್ಸ್‌ನಲ್ಲಿ ʻʻಎಲ್ಲರಿಗೂ ಶುಭೋದಯ. ಅಪ್‌ಡೇಟ್‌ಗಳ ಬಗ್ಗೆ ಬರುತ್ತಿರುವ ಟ್ವೀಟ್‌ಗಳನ್ನು ನೋಡಿ ಖುಷಿಯಾಗುತ್ತದೆ. ಬೇರ ನಟರ ಸಿನಿಮಾಗಳು ಬಿಡುಗಡೆಯಾಗಿದೆಯೆಂದು, ಬೇರೆ ನಟರ ಜತೆ ಸ್ಪರ್ಧಿಸಲೆಂದು ಅಪ್‌ಡೇಟ್ ಕೊಡುವುದಕ್ಕೆ ಸಾಧ್ಯವಿಲ್ಲ. ಚಿತ್ರತಂಡ ಏನಾದರೂ ರಿಲೀಸ್ ಮಾಡಲು ಅಥವಾ ಘೋಷಿಸಲು ಸಿದ್ಧವಿದ್ದಾಗ ಮಾತ್ರ ಅಪ್‌ಡೇಟ್ ಕೊಡಲು ಸಾಧ್ಯ. ನನ್ನ ಕೆಲಸದ ಬಗ್ಗೆ ಫ್ಯಾನ್ಸ್ ತೋರಿಸಿದ ಪ್ರೀತಿಗೆ ನಾನು ಆಭಾರಿ. ಆದರೆ ಬಿಗ್‌ಬಾಸ್ ಅಥವಾ ಸಿಸಿಎಲ್ ಮೇಲಿನ ವ್ಯಂಗ್ಯ ಸರಿಯಲ್ಲ. ಇದು ಚಿತ್ರದ ಕಡೆಗೆ ಒಬ್ಬರ ಆಸಕ್ತಿ, ಕುತೂಹಲವನ್ನು ಪ್ರದರ್ಶಿಸುವ ಮಾರ್ಗವಲ್ಲ. ‘ಮ್ಯಾಕ್ಸ್’ ಸಿನಿಮಾ ಚೆನ್ನಾಗಿ ರೂಪುಗೊಳುತ್ತಿದೆ. ನಾವು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಫ್ಯಾನ್ಸ್ ರಂಜಿಸಲು ಪ್ರಯತ್ನಿಸುತ್ತಿದ್ದೇನೆ. ಮನರಂಜಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆʼʼಎಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Kichcha Sudeep: ವಾಲ್ಮೀಕಿ ಜಾತ್ರೆಗೆ ಈ ಬಾರಿ ನಟ ಕಿಚ್ಚ ಸುದೀಪ್‌ಗೆ ಇಲ್ಲ ಆಹ್ವಾನ
ಕಿಚ್ಚ ಸುದೀಪ್ ಟ್ವೀಟ್
Mornnn wishes to alll you friends with a biggg hug 🤗♥️#MaxTheMovie pic.twitter.com/SfU11hbW9X
— Kichcha Sudeepa (@KicchaSudeep) February 8, 2024
ಇದೀಗ ಸುದೀಪ್ ಅವರ ಎಕ್ಸ್ ಕಂಡು ಫ್ಯಾನ್ಸ್ ಕೂಡ ʻಇನ್ನೊಂದು ಬಾರಿ ಮ್ಯಾಕ್ಸ್ ಅಪ್‌ಡೇಟ್ ಕೇಳುವುದಿಲ್ಲʼ ಎಂದು ಕಮೆಂಟ್ ಮಾಡಿದ್ದಾರೆ.
‘ಮ್ಯಾಕ್ಸ್’ ಸಿನಿಮಾ ವಿಚಾರಕ್ಕೆ ಬಂದರೆ ದೊಡ್ಡ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ‘ಮಹಾಬಲಿಪುರಂ’ ಭಾರೀ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಿದ್ದಾರೆ. ಫೆಬ್ರವರಿ 23ರಿಂದ ಸಿಸಿಎಲ್ 10ನೇ ಸೀಸನ್ ಆರಂಭವಾಗುತ್ತಿದೆ. ಟೂರ್ನಿಯಲ್ಲಿ ಕಿಚ್ಚ ‘ಕರ್ನಾಟಕ ಬುಲ್ಡೊಜರ್ಸ್’ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತದ ಜನಪ್ರಿಯ ಒಟಿಟಿ ವೇದಿಕೆಯಾಗಿರುವ ಜಿಯೊ ಸಿನಿಮಾ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಜೊತೆಗೆ ಸಹಭಾಗಿತ್ವವನ್ನು ಘೋಷಿಸಿದೆ. ಇದರ ಭಾಗವಾಗಿ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಹತ್ತನೇ ಸೀಸನ್ ಅನ್ನು ಜಿಯೊಸಿನಿಮಾ ಎಕ್ಸ್ಕ್ಲ್ಯೂಸಿವ್ ಆಗಿ ನೇರಪ್ರಸಾರ ಮಾಡಲಿದೆ. ಕ್ರೀಡೆ ಮತ್ತು ಮನರಂಜನೆಗಳನ್ನು ಒಂದುಗೂಡಿಸಿ ಭಾರತದಲ್ಲಿ ರೂಪಿಸಿರುವ ಏಕಮಾತ್ರ ಪ್ರಯತ್ನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಇದಾಗಿದೆ.