Kiccha Sudeep: ವ್ಯಂಗ್ಯ ಸಾಕು, ಸ್ಪರ್ಧೆಗಾಗಿ ಅಪ್‌ಡೇಟ್‌ ಕೊಡೋಕೆ ಆಗಲ್ಲ; ಕಿಚ್ಚ ಸುದೀಪ್‌ ಪೋಸ್ಟ್‌! - Vistara News

ಸ್ಯಾಂಡಲ್ ವುಡ್

Kiccha Sudeep: ವ್ಯಂಗ್ಯ ಸಾಕು, ಸ್ಪರ್ಧೆಗಾಗಿ ಅಪ್‌ಡೇಟ್‌ ಕೊಡೋಕೆ ಆಗಲ್ಲ; ಕಿಚ್ಚ ಸುದೀಪ್‌ ಪೋಸ್ಟ್‌!

Kiccha Sudeep: ಫೆಬ್ರವರಿ 23ರಿಂದ ಸಿಸಿಎಲ್‌ 10ನೇ ಸೀಸನ್ ಆರಂಭವಾಗುತ್ತಿದೆ. ಟೂರ್ನಿಯಲ್ಲಿ ಕಿಚ್ಚ ‘ಕರ್ನಾಟಕ ಬುಲ್ಡೊಜರ್ಸ್’ ತಂಡವನ್ನು ಮುನ್ನಡೆಸಲಿದ್ದಾರೆ.ಭಾರತದ ಜನಪ್ರಿಯ ಒಟಿಟಿ ವೇದಿಕೆಯಾಗಿರುವ ಜಿಯೊ ಸಿನಿಮಾ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಜೊತೆಗೆ ಸಹಭಾಗಿತ್ವವನ್ನು ಘೋಷಿಸಿದೆ.

VISTARANEWS.COM


on

Kiccha Sudeep tweet about max update
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʻಮ್ಯಾಕ್ಸ್’ ಸಿನಿಮಾ ಚಿತ್ರೀಕರಣದ ನಡುವೆಯೇ ಕಿಚ್ಚ ಸುದೀಪ್ (Kiccha Sudeep) ಬಿಗ್‌ಬಾಸ್ ಸೀಸನ್ 10 ಶೋ ನಿರೂಪಣೆ ಮಾಡಿದ್ದರು. ಇನ್ನು ಫೆಬ್ರವರಿ 23ರಿಂದ ಸಿಸಿಎಲ್‌ 10ನೇ ಸೀಸನ್ ಆರಂಭವಾಗುತ್ತಿದೆ. ಟೂರ್ನಿಯಲ್ಲಿ ಕಿಚ್ಚ ‘ಕರ್ನಾಟಕ ಬುಲ್ಡೊಜರ್ಸ್’ ತಂಡವನ್ನು ಮುನ್ನಡೆಸಲಿದ್ದಾರೆ. ಆದರೀಗ ಅವರ ಫ್ಯಾನ್ಸ್‌ ಒಂದೇ ಸಮನೆ ಕಿಚ್ಚ ಸುದೀಪ್‌ ಅವರ ಸಿನಿಮಾಗಳ ಅಪ್‌ಡೇಟ್‌ ಕೇಳುತ್ತಲೇ ಇದ್ದಾರೆ. ಅಭಿಮಾನಿಗಳ ಈ ನಿರಂತರ ಪ್ರಶ್ನೆಗಾಗಿ ಇದೀಗ ಕಿಚ್ಚ ಟ್ವೀಟ್‌ ಮೂಲಕ ಫುಲ್‌ ಸ್ಟಾಪ್‌ ಕೊಟ್ಟಿದ್ದಾರೆ.

ಕಿಚ್ಚ ಅವರು ಎಕ್ಸ್‌ನಲ್ಲಿ ʻʻಎಲ್ಲರಿಗೂ ಶುಭೋದಯ. ಅಪ್‌ಡೇಟ್‌ಗಳ ಬಗ್ಗೆ ಬರುತ್ತಿರುವ ಟ್ವೀಟ್‌ಗಳನ್ನು ನೋಡಿ ಖುಷಿಯಾಗುತ್ತದೆ. ಬೇರ ನಟರ ಸಿನಿಮಾಗಳು ಬಿಡುಗಡೆಯಾಗಿದೆಯೆಂದು, ಬೇರೆ ನಟರ ಜತೆ ಸ್ಪರ್ಧಿಸಲೆಂದು ಅಪ್‌ಡೇಟ್ ಕೊಡುವುದಕ್ಕೆ ಸಾಧ್ಯವಿಲ್ಲ. ಚಿತ್ರತಂಡ ಏನಾದರೂ ರಿಲೀಸ್ ಮಾಡಲು ಅಥವಾ ಘೋಷಿಸಲು ಸಿದ್ಧವಿದ್ದಾಗ ಮಾತ್ರ ಅಪ್‌ಡೇಟ್ ಕೊಡಲು ಸಾಧ್ಯ. ನನ್ನ ಕೆಲಸದ ಬಗ್ಗೆ ಫ್ಯಾನ್ಸ್‌ ತೋರಿಸಿದ ಪ್ರೀತಿಗೆ ನಾನು ಆಭಾರಿ. ಆದರೆ ಬಿಗ್‌ಬಾಸ್ ಅಥವಾ ಸಿಸಿಎಲ್‌ ಮೇಲಿನ ವ್ಯಂಗ್ಯ ಸರಿಯಲ್ಲ. ಇದು ಚಿತ್ರದ ಕಡೆಗೆ ಒಬ್ಬರ ಆಸಕ್ತಿ, ಕುತೂಹಲವನ್ನು ಪ್ರದರ್ಶಿಸುವ ಮಾರ್ಗವಲ್ಲ. ‘ಮ್ಯಾಕ್ಸ್’ ಸಿನಿಮಾ ಚೆನ್ನಾಗಿ ರೂಪುಗೊಳುತ್ತಿದೆ. ನಾವು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಫ್ಯಾನ್ಸ್‌ ರಂಜಿಸಲು ಪ್ರಯತ್ನಿಸುತ್ತಿದ್ದೇನೆ. ಮನರಂಜಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆʼʼಎಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Kichcha Sudeep: ವಾಲ್ಮೀಕಿ ಜಾತ್ರೆಗೆ ಈ ಬಾರಿ ನಟ ಕಿಚ್ಚ ಸುದೀಪ್‌ಗೆ ಇಲ್ಲ ಆಹ್ವಾನ

ಕಿಚ್ಚ ಸುದೀಪ್‌ ಟ್ವೀಟ್‌

ಇದೀಗ ಸುದೀಪ್‌ ಅವರ ಎಕ್ಸ್‌ ಕಂಡು ಫ್ಯಾನ್ಸ್‌ ಕೂಡ ʻಇನ್ನೊಂದು ಬಾರಿ ಮ್ಯಾಕ್ಸ್‌ ಅಪ್‌ಡೇಟ್‌ ಕೇಳುವುದಿಲ್ಲʼ ಎಂದು ಕಮೆಂಟ್‌ ಮಾಡಿದ್ದಾರೆ.

‘ಮ್ಯಾಕ್ಸ್’ ಸಿನಿಮಾ ವಿಚಾರಕ್ಕೆ ಬಂದರೆ ದೊಡ್ಡ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ‘ಮಹಾಬಲಿಪುರಂ’ ಭಾರೀ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಿದ್ದಾರೆ. ಫೆಬ್ರವರಿ 23ರಿಂದ ಸಿಸಿಎಲ್‌ 10ನೇ ಸೀಸನ್ ಆರಂಭವಾಗುತ್ತಿದೆ. ಟೂರ್ನಿಯಲ್ಲಿ ಕಿಚ್ಚ ‘ಕರ್ನಾಟಕ ಬುಲ್ಡೊಜರ್ಸ್’ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತದ ಜನಪ್ರಿಯ ಒಟಿಟಿ ವೇದಿಕೆಯಾಗಿರುವ ಜಿಯೊ ಸಿನಿಮಾ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಜೊತೆಗೆ ಸಹಭಾಗಿತ್ವವನ್ನು ಘೋಷಿಸಿದೆ. ಇದರ ಭಾಗವಾಗಿ, ಸೆಲೆಬ್ರಿಟಿ ಕ್ರಿಕೆಟ್ ಲೀಗ್​​ನ ಹತ್ತನೇ ಸೀಸನ್ ಅನ್ನು ಜಿಯೊಸಿನಿಮಾ ಎಕ್ಸ್ಕ್ಲ್ಯೂಸಿವ್ ಆಗಿ ನೇರಪ್ರಸಾರ ಮಾಡಲಿದೆ. ಕ್ರೀಡೆ ಮತ್ತು ಮನರಂಜನೆಗಳನ್ನು ಒಂದುಗೂಡಿಸಿ ಭಾರತದಲ್ಲಿ ರೂಪಿಸಿರುವ ಏಕಮಾತ್ರ ಪ್ರಯತ್ನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಇದಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸಿನಿಮಾ

Cauvery Theatre: ಬೆಂಗಳೂರಿನಲ್ಲಿ ಪ್ರದರ್ಶನ ನಿಲ್ಲಿಸಿದ ʻಕಾವೇರಿʼ ಥಿಯೇಟರ್! ಮುಂದೇನು?

Cauvery Theatre: ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡದ ದಿಗ್ಗಜರ ಸಿನಿಮಾಗಳು ಇದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಸಿಂಗಲ್ ಸ್ಕ್ರೀನ್ ಆಗಿದ್ದರೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಈ ಚಿತ್ರಮಂದಿರದಲ್ಲಿ ಇತ್ತು. ಈ ವರ್ಷ ಜನವರಿ 11ಕ್ಕೆ 50 ವರ್ಷ ಪೂರೈಸಿ, ಗೋಲ್ಡನ್ ಜ್ಯುಬಿಲಿ ಸಂಭ್ರಮಾಚರಣೆಯಲ್ಲಿತ್ತು. ಕಮಲ್ ಹಾಸನ್ ಅವರ ಇಂಡಿಯನ್ (1996) 100 ದಿನ, ಕಾಂತಾರ 50-ದಿನಗಳ ಪ್ರದರ್ಶನ ಕಂಡಿದೆ.

VISTARANEWS.COM


on

Cauvery Theatre bengaluru another single screen close
Koo

ಬೆಂಗಳೂರು: ಒಟಿಟಿ , ಮಲ್ಟಿಪ್ಲೆಕ್ ಇತ್ಯಾದಿ ಕಾರಣಗಳಿಂದ ಇತ್ತೀಚೆಗೆ ಚಿತ್ರಮಂದಿರಗಳು ಮುಚ್ಚುತ್ತಿವೆ. ಕಲೆಕ್ಷನ್ ಕೂಡ ಕಡಿಮೆಯಾಗಿದ್ದು, ಹಲವು ಚಿತ್ರಮಂದಿರಗಳು ಮುಚ್ಚುವ ನಿರ್ಧಾರಕ್ಕೆ ಬಂದಿದೆ. 1974ರ ಜನವರಿ 11ರಂದು ಡಾ. ರಾಜ್‌ಕುಮಾರ್ ನಟನೆಯ ‘ಬಂಗಾರದ ಪಂಜರ’ (Bangarada Panjara) ಸಿನಿಮಾ ಪ್ರದರ್ಶನದ ಮೂಲಕ ʻʻಕಾವೇರಿʼʼ ಚಿತ್ರಮಂದಿರ ಶುರುವಾಗಿತ್ತು. 50 ವರ್ಷದ ಇತಿಹಾಸ ಹೊಂದಿದ್ದ, ಬೆಂಗಳೂರಿನ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಸ್ಯಾಂಕಿ ರಸ್ತೆಯ ʻಕಾವೇರಿʼ ಚಿತ್ರಮಂದಿರ ಈಗ ಶಾಶ್ವತವಾಗಿ ಮುಚ್ಚಿದೆ.

ಚಿತ್ರಮಂದಿರ ನಡೆಸುವುದು ಕಷ್ಟ ಎಂಬ ಕಾರಣಕ್ಕೆ ಮಾಲೀಕರು ಪ್ರದರ್ಶನ ನಿಲ್ಲಿಸಿದ್ದಾರೆ. ಆ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣವಾಗಲಿದೆ ಎನ್ನಲಾಗಿದೆ. ಮೆಜೆಸ್ಟಿಕ್‌ನ ʻಕಪಾಲಿʼ ಚಿತ್ರಮಂದಿರದ ನಂತರ ಅತಿ ಹೆಚ್ಚು ಸಿಟ್ಟಿಂಗ್‌ ವ್ಯವಸ್ಥೆ ಇದ್ದ ಈ ಚಿತ್ರಮಂದಿರ ಆರಂಭವಾಗಿದ್ದಾಗ 1300ರಷ್ಟು ಸೀಟುಗಳ ವ್ಯವಸ್ಥೆ ಇತ್ತು. ಜತೆಗೆ ಮಿನಿ ಬಾಲ್ಕನಿ ಇದ್ದ ಕೆಲವೇ ಚಿತ್ರಮಂದಿರಗಳಲ್ಲಿ ಇದೂ ಒಂದಾಗಿತ್ತು.

ಇದನ್ನೂ ಓದಿ: Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

ಪರಭಾಷೆಯ ಸಿನಿಮಾಗಳು ಪ್ರದರ್ಶನ

ಇಲ್ಲಿ ಕನ್ನಡವೂ ಸೇರಿದಂತೆ ಹಿಂದಿ ಹಾಗೂ ಪರಭಾಷೆಯ ಸಿನಿಮಾಗಳು ಪ್ರದರ್ಶನ ಕಾಣುತ್ತಿದ್ದವು. ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡದ ದಿಗ್ಗಜರ ಸಿನಿಮಾಗಳು ಇದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಸಿಂಗಲ್ ಸ್ಕ್ರೀನ್ ಆಗಿದ್ದರೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಈ ಚಿತ್ರಮಂದಿರದಲ್ಲಿ ಇತ್ತು. ಈ ಚಿತ್ರಮಂದಿರದಲ್ಲಿ ಸಿನಿಮಾದ ಚಿತ್ರೀಕರಣ ಕೂಡ ನಡೆದಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಪರಮಾತ್ಮ’ ಸಿನಿಮಾದ ಆರಂಭಿಕ ಸೀನ್ ಅನ್ನು ಇಲ್ಲಿಯೇ ಶೂಟಿಂಗ್ ಮಾಡಲಾಗಿತ್ತು.

ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲಿನ ವಿಶೇಷತೆಯಾಗಿತ್ತು. ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನ ನಡೆಯುತ್ತಿದ್ದು, ಉತ್ತರ ಬೆಂಗಳೂರಿಗರಿಗೆ ಇದೊಂದು ಸಾಂಸ್ಕೃತಿಕ ಸ್ಥಳವೇ ಆಗಿತ್ತು. ‘ಬಂಗಾರದ ಪಂಜರ, ‘ಶಂಕರಾಭರಣಂ’, ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಸಿನಿಮಾಗಳು ಇಲ್ಲಿ 25 ವಾರ ಪ್ರದರ್ಶನ ಕಂಡಿದ್ದವು. ಈ ವರ್ಷ ಜನವರಿ 11ಕ್ಕೆ 50 ವರ್ಷ ಪೂರೈಸಿ, ಗೋಲ್ಡನ್ ಜ್ಯುಬಿಲಿ ಸಂಭ್ರಮಾಚರಣೆಯಲ್ಲಿತ್ತು. ಕಮಲ್ ಹಾಸನ್ ಅವರ ʼಇಂಡಿಯನ್ʼ (1996) 100 ದಿನ, ʼಕಾಂತಾರʼ 50 ದಿನಗಳ ಪ್ರದರ್ಶನ ಕಂಡಿದೆ. ಮುಂದೆ ಇಲ್ಲಿ ವಾಣಿಜ್ಯ ಕಟ್ಟಡ ತಲೆ ಎತ್ತುವ ಸಾಧ್ಯತೆ ಇದೆ. ಅದರಲ್ಲಿ ಮಲ್ಟಿ ಪ್ಲೆಕ್ಸ್‌ ಚಿತ್ರ ಮಂದಿರ ನಿರ್ಮಾಣ ಆಗುವ ಸಾಧ್ಯತೆಯೂ ಇದೆ.

Continue Reading

ಸ್ಯಾಂಡಲ್ ವುಡ್

Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

Ranjani Raghavan: ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿರುವ ಚಿತ್ರ. ಕನ್ನಡತಿ ಖ್ಯಾತಿಯ ʻರಂಜಿನಿ ರಾಘವನ್ʼ ನಾಯಕಿಯಾಗಿ ಜತೆಯಾಗಿದ್ದಾರೆ. ಈ ಹಿಂದೆ ರಂಗಿತರಂಗ, ʻಕಾಂತಾರʼ ಚಿತ್ರಗಳಲ್ಲಿ ತುಳುನಾಡಿನ ದೈವಾರಾಧನೆಯ ಕಥೆಯಿತ್ತು. ಆ ಎರಡು ಸಿನಿಮಾಗಳ ದೊಡ್ಡ ಮಟ್ಟದ ಗೆಲುವಿನ ಶಕ್ತಿಯೂ ಅದೇ. ಅಂಥಾದ್ದೊಂದು ನೆಲದ ಘಮಲಿನ ಕಥೆಯನ್ನೊಳಗೊಂಡಿರುವ ಚಿತ್ರ `ಸತ್ಯಂ’.

VISTARANEWS.COM


on

Ranjani Raghavan Starrer Sathyam Kannada Movie Gets UA Certificate
Koo

ಬೆಂಗಳೂರು: ಇದುವರೆಗೂ ಭಿನ್ನ ಪಥದ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವವರು ಅಶೋಕ್ ಕಡಬ. ಇದೀಗ ಅವರು ʻಸತ್ಯಂ’ ಚಿತ್ರದ ಮೂಲಕ ವಿಭಿನ್ನ ಕಥೆಯನ್ನು ಹೇಲ ಹೊರಟ್ಟಿದ್ದಾರೆ. ಈ ಹಿಂದೆ ಸತ್ಯಂ ಟೀಸರ್ ಬಿಕಡುಗಡೆಯಾದಾಗಲೇ ಭಾರಿ ವೀಕ್ಷಣೆಗಳು (Ranjani Raghavan) ಸಿಕ್ಕಿ, ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿರುವ ಸತ್ಯಂ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡಿದೆ. ಈ ವಿಚಾರವನ್ನು ನಿರ್ಮಾಪಕರಾದ ಮಹಾಂತೇಶ್ ವಿ.ಕೆ ಹಂಚಿಕೊಂಡಿದ್ದಾರೆ. ʻಯು\ಎʼ ಸರ್ಟಿಫಿಕೇಟ್‌ ಸಿಕ್ಕಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿರುವ ಚಿತ್ರ. ಕನ್ನಡತಿ ಖ್ಯಾತಿಯ ʻರಂಜಿನಿ ರಾಘವನ್ʼ ನಾಯಕಿಯಾಗಿ ಜತೆಯಾಗಿದ್ದಾರೆ. ಈ ಹಿಂದೆ ರಂಗಿತರಂಗ, ʻಕಾಂತಾರʼ ಚಿತ್ರಗಳಲ್ಲಿ ತುಳುನಾಡಿನ ದೈವಾರಾಧನೆಯ ಕಥೆಯಿತ್ತು. ಆ ಎರಡು ಸಿನಿಮಾಗಳ ದೊಡ್ಡ ಮಟ್ಟದ ಗೆಲುವಿನ ಶಕ್ತಿಯೂ ಅದೇ. ಅಂಥಾದ್ದೊಂದು ನೆಲದ ಘಮಲಿನ ಕಥೆಯನ್ನೊಳಗೊಂಡಿರುವ ಚಿತ್ರ `ಸತ್ಯಂ’. ಹಾಗೆಂದ ಮಾತ್ರಕ್ಕೆ ಇದು ಆ ಎರಡು ಸಿನಿಮಾಗಳ ಗೆಲುವಿನ ಪ್ರಭೆಯಲ್ಲಿ ರೂಪುಗೊಂಡಿರುವ ಚಿತ್ರ ಅಂದುಕೊಳ್ಳುವಂತಿಲ್ಲ. ಕಾಂತಾರಕ್ಕೂ ಮುನ್ನವೇ ಸತ್ಯಂ ಕಥೆ ಸಿದ್ಧವಾಗಿತ್ತೆಂಬ ವಿಚಾರವನ್ನು ಖುದ್ದು ನಿರ್ದೇಶಕರು ಖಚಿತಪಡಿಸಿದ್ದಾರೆ. ಇಂಥಾ ಭಿನ್ನ ಕಥಾನಕವನ್ನು ಕಂಡು ಸೆನ್ಸಾರ್ ಅಧಿಕಾರಿಗಳು ಖುಷಿಗೊಂಡಿದ್ದಾರೆ. ಒಂದು ಅತ್ಯಪರೂಪದ ಚಿತ್ರ ನೋಡಿದ ತುಂಬು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: ಕಾಳಿಂಗ ಸರ್ಪವನ್ನು ಈ ಕುಟುಂಬ ಹೇಗೆ ಪೂಜಿಸುತ್ತಿದೆ ನೋಡಿ!

ಸಾಮಾನ್ಯವಾಗಿ, ಸೆನ್ಸಾರ್ ಅಧಿಕಾರಿಗಳು ಅದೆಷ್ಟೋ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಅವರ ಪಾಲಿಗೆ ಅದೊಂದು ಯಾಂತ್ರಿಕ ಕೆಲಸದಂತಾಗಿ ಬಿಡುವ ಸಾಧ್ಯತೆಗಳೇ ಹೆಚ್ಚು. ಅಂಥಾದ್ದರ ನಡುವೆ ಒಂದು ಸಿನಿಮಾ ಎಲ್ಲ ರೀತಿಯಿಂದಲೂ ಹೊಸತನದಿಂದ ಕಂಗೊಳಿಸಿದಾಗ ಅವರಲ್ಲೊಂದು ಖುಷಿ ಮೂಡಿಕೊಳ್ಳುತ್ತೆ. ಹೀಗೆ ಒಟ್ಟಾರೆ ಚಿತ್ರದ ಬಗ್ಗೆ ತುಂಬು ಮೆಚ್ಚುಗೆ ಸೂಚಿಸುತ್ತಲೇ, ಸೆನ್ಸಾರ್ ಮಂಡಳಿ ಕಡೆಯಿಂದ ಸತ್ಯಂಗೆ ಯು\ಎ ಸರ್ಟಿಫಿಕೇಟು ಸಿಕ್ಕಿದೆ. ಅಂದಹಾಗೆ, ಯಾವುದೇ ಕಟ್, ಎಡಿಟ್ ಇಲ್ಲದೆಯೇ ಈ ಸಿನಿಮಾ ಸೆನ್ಸಾರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ.

ಇದುವರೆಗೂ ನಿರ್ದೇಶಕರಾಗಿ ಒಂದಷ್ಟು ಪ್ರಯೋಗಗಳನ್ನು ಮಾಡುತ್ತಾ ಬಂದವರು, ಅದರಲ್ಲಿಯೂ ತಮ್ಮ ತನದ ಮೂಲಕ ಗೆಲುವು ದಾಖಲಿಸಿರುವವರು ಅಶೋಕ್ ಕಡಬ. ಇಂಥಾ ನಿರ್ದೇಶಕರು ಪಕ್ಕಾ ಮಾಸ್ ಕಥನದತ್ತ ಹೊರಳಿದಾಗ ಸಹಜವಾಗಿಯೇ ಕುತೂಹಲ ಮೂಡಿಕೊಳ್ಳುತ್ತೆ. ಅಶೋಕ್ ಕಡಬ ʻಸತ್ಯಂʼ ಎಂಬ ಪಕ್ಕಾ ಮಾಸ್ ಥ್ರಿಲ್ಲರ್ ಕಥಾನಕವನ್ನು ಕೈಗೆತ್ತಿಕೊಂಡಾಗಲೂ ಇಂಥಾದ್ದೇ ಛಳುಕು ಮೂಡಿಕೊಂಡಿತ್ತು. ಅದು ಟೀಸರ್ ಬಿಡುಗಡೆಯಾದಾಕ್ಷಣ ಮತ್ತಷ್ಟು ತೀವ್ರಗೊಂಡಿತ್ತು. ಮಿಲಿಯನ್ನುಗಟ್ಟಲೆ ವೀವ್ಸ್ ಪಡೆದುಕೊಳ್ಳುವ ಮೂಲಕ ಸತ್ಯಂ ಸೃಷ್ಟಿಸಿದ್ದ ಸಂಚಲನ ಸಣ್ಣದ್ದೇನಲ್ಲ.

ವಿಶೇಷವೆಂದರೆ, ಈ ಸಿನಿಮಾದಲ್ಲಿಯೂ ಪಂಜುರ್ಲಿ ದೈವದ ಆರಾಧನೆಯ ಕಥೆಯಿದೆ. ಅದರ ಸುತ್ತ ಮೈನವಿರೇಳಿಸುವ, ಸಲೀಸಾಗಿ ಅಂದಾಜಿಸಲಾಗದ ಕಥನವನ್ನು ಅಶೋಕ್ ಕಡಬ ದೃಷ್ಯವಾಗಿಸಿದ್ದಾರಂತೆ.
ಶ್ರೀ ಮಾತಾ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಮಹಾಂತೇಶ್ ವಿ.ಕೆ ನಿರ್ಮಾಣ ಮಾಡಿರುವ ಸತ್ಯಂ ಕುಟುಂಬ ಸಮೇತರಾಗಿ ನೋಡುವ, ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವ ಗುಣ ಹೊಂದಿರುವ ಚಿತ್ರವಂತೆ.

ವಿಶೇಷವೆಂದರೆ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸತ್ಯಂಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನೆಟೆಕ್ ಸೂರಿ ಛಾಯಾಗ್ರಹಣ, ಸಂತೋಷ್ ಬಾಲರಾಜ್, ರಂಜಿನಿ ರಾಘವನ್, ಸುಮನ್, ಸೈಯಾಜಿ ಶಿಂಧೆ, ಪವಿತ್ರಾ ಲೋಕೇಶ್, ಅವಿನಾಶ್, ವಿನಯಾ ಪ್ರಸಾದ್, ಮುಖ್ಯಮಂತ್ರಿ ಚಂದ್ರು, ಎಂ.ಎನ್ ಲಕ್ಷ್ಮಿದೇವಿ, ಶೃಂಗೇರಿ ರಾಮಣ್ಣ, ತನುಶ್ರೀ, ಎಂ.ಎಸ್ ಉಮೇಶ್, ಬಸವರಾಜ್ ಕಟ್ಟಿ, ಮೀನಾಕ್ಷಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಇದೀಗ ಪೋಸ್ಟ್ ಪ್ರಡಕ್ಷನ್ ಕೆಲಸ ಕಾರ್ಯ ಸಂಪೂರ್ಣವಾಗಿ ಮುಗಿದಿದೆ. ಚುನಾವಣಾ ಭರಾಟೆ, ಐಪಿಎಲ್ ಹಂಗಾಮದ ನಡುವೆ ತಿಂಗಳೊಪ್ಪತ್ತಿನಲ್ಲಿಯೇ ಸತ್ಯಂ ಅನ್ನು ತೆರೆಗಾಣಿಸಲು ಚಿತ್ರ ತಂಡ ತಯಾರಿ ನಡೆಸುತ್ತಿದೆ. ಅತೀ ಶೀಘ್ರದಲ್ಲಿ ಸತ್ಯಂ ಬಿಡುಗಡೆ ದಿನಾಂಕ ಜಾಹೀರಾಗಲಿದೆ.

Continue Reading

ಸಿನಿಮಾ

Kannada New Movie: ಭಾರಿ ಮೊತ್ತಕ್ಕೆ ಸೇಲ್ ಆಯ್ತು ರೂಪೇಶ್ ಶೆಟ್ಟಿ-ಜಾಹ್ನವಿ ಸಿನಿಮಾ ಆಡಿಯೊ ರೈಟ್ಸ್!

Kannada New Movie: ಅಧಿಪತ್ರ ಸಿನಿಮಾದ ಶೂಟಿಂಗ್ ಹಾಗೂ ಮೇಕಿಂಗ್‌ನಿಂದಲೂ ಎಲ್ಲರ ಗಮನ ಸೆಳದಿದೆ . ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ತೆರೆಗೆ ಬರಲು ರೆಡಿಯಾಗುತ್ತಿರುವ ಅಧಿಪತ್ರ ಸಿನಿಮಾದ ಟೀಸರ್ ಬಿಡುಗಡೆಗೆ ತಯಾರಿ ನಡೆದಿದೆ. ಈ ಚಿತ್ರದ ಆಡಿಯೊ ಹಕ್ಕು ಪ್ರತಿಷ್ಠಿತ ಆಡಿಯೊ ಸಂಸ್ಥೆ ಖರೀದಿ ಮಾಡಿದೆ. 2024 ಬಹು ನಿರೀಕ್ಷಿತ ಸಿನಿಮಾ ಸಾಲಿನಲ್ಲಿ ಅಧಿಪತ್ರ ಕೂಡ ಒಂದು.

VISTARANEWS.COM


on

Kannada New Movie Adhipatra audio rights
Koo

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ (Kannada New Movie) ರೂಪೇಶ್ ಶೆಟ್ಟಿ (Roopesh shetty) ನಟನೆಯ‌ ಬಹು ನಿರೀಕ್ಷಿತ ಸಿನಿಮಾ ʻಅಧಿಪತ್ರʼ.(Adhipatra) ಈಗಾಗಲೇ ಮೇಕಿಂಗ್ ಹಾಗೂ ಕಂಟೆಂಟ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಆಡಿಯೊ ಹಕ್ಕು ಪ್ರತಿಷ್ಠಿತ ಆಡಿಯೊ ಸಂಸ್ಥೆ ಲಹರಿ ಖರೀದಿ ಮಾಡಿದೆ. 2024 ಬಹು ನಿರೀಕ್ಷಿತ ಸಿನಿಮಾ ಸಾಲಿನಲ್ಲಿ ಅಧಿಪತ್ರ ಕೂಡ ಒಂದು.

ಮೇ‌ 10ಕ್ಕೆ ಅಧಿಪತ್ರ ಟೀಸರ್

ಅಧಿಪತ್ರ ಸಿನಿಮಾದ ಶೂಟಿಂಗ್ ಹಾಗೂ ಮೇಕಿಂಗ್‌ನಿಂದಲೂ ಎಲ್ಲರ ಗಮನ ಸೆಳದಿದೆ . ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ತೆರೆಗೆ ಬರಲು ರೆಡಿಯಾಗುತ್ತಿರುವ ಅಧಿಪತ್ರ ಸಿನಿಮಾದ ಟೀಸರ್ ಬಿಡುಗಡೆಗೆ ತಯಾರಿ ನಡೆದಿದೆ. ಇದೇ ತಿಂಗಳ 10ರಂದು ಲಹರಿ ಆಡಿಯೋದಲ್ಲಿ ಅಧಿಪತ್ರದ ಮೊದಲ ಝಲಕ್ ಹೊರಬೀಳಲಿದೆ. ರೂಪೇಶ್ ಗೆ ಜೋಡಿಯಾಗಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಸಾಥ್ ಕೊಟ್ಟಿದ್ದಾರೆ.

ತುಳು ಸಿನಿಮಾರಂಗದಲ್ಲಿ ರೂಪೇಶ್ ಶೆಟ್ಟಿಗೆ ಸಾಕಷ್ಟು ಅನುಭವ ಇದೆ. ಸಿನಿಮಾದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಟನಾಗಿ ಮತ್ತು ನಿರ್ದೇಶಕನಾಗಿ ಅವರು ಅಲ್ಲಿ ನೆಲೆ ಕಂಡುಕೊಂಡಿದ್ದಾರೆ. ಬಿಗ್ ಬಾಸ್‌ಗೆ ಕಾಲಿಟ್ಟ ಬಳಿಕ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಬಿಗ್ ಬಾಸ್ ವಿನ್ ಆದ ಬಳಿಕ ಅವರು ತುಳು ಭಾಷೆಯ ‘ಸರ್ಕಸ್’ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದರು. ಆ ಸಿನಿಮಾದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಕನ್ನಡದಲ್ಲಿ ಸ್ವಲ್ಪ ತಡವಾಗಿ ಆದರೂ ಪರವಾಗಿಲ್ಲ, ಒಂದು ಒಳ್ಳೆಯ ಕಥೆಯ ಮೂಲಕ, ಡಿಫರೆಂಟ್ ಆದಂತಹ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಬೇಕು ಎಂಬುದು ರೂಪೇಶ್ ಶೆಟ್ಟಿ ಅವರ ಉದ್ದೇಶ ಆಗಿತ್ತು. ಅದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅವರು ‘ಅಧಿಪತ್ರ’ ಸಿನಿಮಾ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Vijay Deverakonda: ಸಿನಿಮಾಗಳ ಸತತ ಸೋಲಿನ ಬೆನ್ನಲ್ಲೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ ವಿಜಯ್‌ ದೇವರಕೊಂಡ!

ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಜಾಹ್ನವಿ, ಅಲ್ಲಿಂದ ಕಿರುತೆರೆ ರಿಯಾಲಿಟಿ ಶೋಗಳಲ್ಲಿಯೂ ಕಣಕ್ಕಿಳಿದು ಇದೀಗ ನೇರವಾಗಿ ಸಿನಿಮಾ ನಾಯಕಿಯಾಗಿ ಹೊಸ ಇನಿಂಗ್ಸ್‌ ಆರಂಭಿಸಿದ್ದಾರೆ. ರೂಪೇಶ್‌ ಶೆಟ್ಟಿ ಅಧಿಪತ್ರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಇವರು ನಿರ್ದೇಶನ ಮಾಡಿದ ಶಾರ್ಟ್ ಫಿಲಂ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರಶಂಸೆ ಪಡೆದಿತ್ತು ಹಾಗೂ ಕೆಲವು ಜಾಹೀರಾತುಗಳಿಗೆ ನಿರ್ದೇಶನ ಮಾಡಿರುವ ಅನುಭವ ಹೊಂದಿರುವ ಚಯನ್ ಶೆಟ್ಟಿ ʼಅಧಿಪತ್ರʼ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಕೆ ಆರ್ ಸಿನಿ ಕಂಬೈನ್ಸ್ ಬ್ಯಾನರ್ ಬಂಡವಾಳ ಹೂಡುತ್ತಿದ್ದು, ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ.

ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಅಧಿಪತ್ರ ಸಿನಿಮಾವನ್ನು . ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್‌ನಡಿ‌ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮೇ ಗೌಡ ‌ಬಂಡವಾಳ ಹೂಡಿದ್ದು, ಕಾರ್ತಿಕ್ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಸಹ ನಿರ್ಮಾಣದಲ್ಲಿ ಹೆಗಲು ಕೊಟ್ಟಿದ್ದಾರೆ.

Continue Reading

ಸಿನಿಮಾ

Prajwal Revanna Case: ವೈರಲ್ ಆಗುತ್ತಿರುವ 2976 ವಿಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ ಎಂದ ಹರ್ಷಿಕಾ ಪೂಣಚ್ಚ!

Prajwal Revanna Case: ತಮಿಳು ನಟಿ ಕಸ್ತೂರಿ, ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈ ಆರೋಪ ಪ್ರಕರಣದ ಬಗ್ಗೆ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ತೆಲುಗು ನಟಿ, ನಿರೂಪಕ ಪರೋಕ್ಷವಾಗಿ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದರು.ಈ ನಡುವೆ ಪ್ರಜ್ವಲ್‌ ಅವರನ್ನು ಭಾರತಕ್ಕೆ ಬರುವಂತೆ ಜೆಡಿಎಸ್‌ ಮುಖಂಡರು ಮನವೊಲಿಸಿದ್ದು, ಅವರು ಇಂದು (ಭಾನುವಾರ – ಮೇ 5) ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ಗೆ ಆಗಮಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಏರ್‌ಪೋರ್ಟ್‌ ಬಳಿ ಬೀಡು ಬಿಟ್ಟಿರುವ ಎಸ್‌ಐಟಿ ತಂಡವು ಪ್ರಜ್ವಲ್‌ ಆಗಮಿಸುತ್ತಿದ್ದಂತೆ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

VISTARANEWS.COM


on

Prajwal Revanna Case reaction by Harshika Poonacha
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣವು (Hassan Pen Drive Case) ದಿನೇ ದಿನೆ ಜಟಿಲವಾಗುತ್ತಾ ಸಾಗಿದೆ. ಈ ನಡುವೆ ಅವರ ತಂದೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸಿನಿಮಾ ತಾರೆಯರು ಕೂಡ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಎಕ್ಸ್‌ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.”ದುರದೃಷ್ಟವಶಾತ್ ವೈರಲ್ ಆಗುತ್ತಿರುವ 2976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆʼʼಎಂದು ಬರೆದುಕೊಂಡಿದ್ದಾರೆ.

ಹರ್ಷಿಕಾ ಎಕ್ಸ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ʻʻದುರದೃಷ್ಟವಶಾತ್ ವೈರಲ್ ಆಗುತ್ತಿರುವ 2976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ. ಅದನ್ನು ನೋಡುವುದು ನಿಜಕ್ಕೂ ನೋವಿನ ಸಂಗತಿ. ವಿಡಿಯೊಗಳು ಕಾನೂನುಬದ್ಧ ಮತ್ತು ನೈಜವಾಗಿದ್ದರೆ, ಅಂತಹ ಕೃತ್ಯಗಳನ್ನು ಸೃಷ್ಟಿಸಿದವರು ಖಂಡಿತವಾಗಿಯೂ ದೇಶದ ಕಾನೂನಿನ ಪ್ರಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು” ಎಂದು ಹರ್ಷಿಕಾ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Prajwal Revanna Case: ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್‌ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!

ಮತ್ತೊಂದು ಎಕ್ಸ್‌ನಲ್ಲಿ ʻʻಈ ವಿಡಿಯೊಗಳಲ್ಲಿ ಕಾಣಿಸಿಕೊಂಡಿರುವ ಅಸಂಖ್ಯಾತ ಮಹಿಳೆಯರನ್ನು ನೋಡಿ ನೋವಾಗುತ್ತಿದೆ. ಅವರೆಲ್ಲರೂ ಸಭ್ಯ ಮತ್ತು ಸರಳ ಕುಟುಂಬದಿಂದ ಬಂದವರ ಎಂದು ಕಾಣುತ್ತಾರೆ. ಈ ಸಂತ್ರಸ್ತರ ಮುಖಗಳನ್ನು ವಿವಿಧ ಗುಂಪುಗಳು ರಾಜಕೀಯ ಚರ್ಚೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರʼʼಎಂದು ಬರೆದುಕೊಂಡಿದ್ದಾರೆ.

ʻʻಕೊನೆಪಕ್ಷ ಅಲ್ಲಿರುವ ಮಹಿಳೆಯರ ಮುಖವನ್ನು ಬ್ಲರ್‌ ಮಾಡಬಹುದಿತ್ತು. ಭವಿಷ್ಯದಲ್ಲಿ ಅವರು ಸಮಾಜವನ್ನು ಹೇಗೆ ಎದುರಿಸುತ್ತಾರೆ? ಇನ್ನು ಮುಂದೆ ಅವರನ್ನು ಯಾವ ದೃಷಿಯಲ್ಲಿ ಜನ ನೋಡಲಿದ್ದಾರೆ? ಅವರ ಕುಟುಂಬ ಮತ್ತು ಮಕ್ಕಳ ಗತಿ ಏನು? ಎಂದು ಹರ್ಷಿಕಾ ಕಳವಳ ವ್ಯಕ್ತಪಡಿಸಿದ್ದಾರೆ.

ತಮಿಳು ನಟಿ ಕಸ್ತೂರಿ, ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈ ಆರೋಪ ಪ್ರಕರಣದ ಬಗ್ಗೆ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ತೆಲುಗು ನಟಿ, ನಿರೂಪಕ ಪರೋಕ್ಷವಾಗಿ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದರು.

ಈ ನಡುವೆ ಪ್ರಜ್ವಲ್‌ ಅವರನ್ನು ಭಾರತಕ್ಕೆ ಬರುವಂತೆ ಜೆಡಿಎಸ್‌ ಮುಖಂಡರು ಮನವೊಲಿಸಿದ್ದು, ಅವರು ಇಂದು (ಭಾನುವಾರ – ಮೇ 5) ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ಗೆ ಆಗಮಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಏರ್‌ಪೋರ್ಟ್‌ ಬಳಿ ಬೀಡು ಬಿಟ್ಟಿರುವ ಎಸ್‌ಐಟಿ ತಂಡವು ಪ್ರಜ್ವಲ್‌ ಆಗಮಿಸುತ್ತಿದ್ದಂತೆ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: Prajwal Revanna Case: ಹಾಸನ ಸಂಸದರ ನಿವಾಸವನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು

ಇಂದು ಮಧ್ಯಾಹ್ನ ಮೂರು ಗಂಟೆಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಜ್ವಲ್‌ ಯಾವುದೇ ಸಮಯದಲ್ಲಿ ಬೇಕಿದ್ದರೂ ಭಾರತಕ್ಕೆ ಬರಬಹುದು ಎಂಬ ನಿಟ್ಟಿನಲ್ಲಿ ಶನಿವಾರ ರಾತ್ರಿಯಿಂದಲೇ ಏರ್‌ಪೋರ್ಟ್‌ನಲ್ಲಿ ಎಸ್‌ಐಟಿ ಟೀಂ ಬೀಡುಬಿಟ್ಟಿದೆ. ಆದರೆ, ಪ್ರಜ್ವಲ್‌ ರೇವಣ್ಣ ಈವರೆಗೂ ಆಗಮಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗಾಗಿ ಕಾದು ಕಾದು ಅಧಿಕಾರಿಗಳು ಸುಸ್ತಾಗಿದ್ದಾರೆ.

ಆದರೆ, ಈಗಿನ ಮಾಹಿತಿ ಪ್ರಕಾರ, ಪ್ರಜ್ವಲ್‌ ರೇವಣ್ಣ ಅವರು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎನ್ನಲಾಗಿದೆ. ಪ್ರಜ್ವಲ್‌ಗಾಗಿ ಎಸ್ಐಟಿ, ಗುಪ್ತಚರ ತಂಡಗಳು ಕಾದು ಕುಳಿತಿದ್ದು, ವಿದೇಶಿ ವಿಮಾನಗಳ ಪ್ಯಾಸೆಂಜರ್ ಲಿಸ್ಟ್ ಅನ್ನು ಪರಿಶೀಲನೆ ನಡೆಸಲಾಗುತ್ತಿದೆ. ದುಬೈ, ಮಸ್ಕಟ್, ಪ್ರಾಂಕ್ ಫರ್ಟ್ ವಿಮಾನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

Continue Reading
Advertisement
India's T20 World Cup Jersey
ಕ್ರೀಡೆ2 mins ago

India’s T20 World Cup Jersey: ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿಯಲ್ಲಿ ಆಡಲಿದೆ ಭಾರತ; ಜೆರ್ಸಿ ಫೋಟೊ ವೈರಲ್​

Job Alert
ಉದ್ಯೋಗ6 mins ago

Job Alert: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನ 3,712 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ನಾಳೆಯೇ ಕೊನೆಯ ದಿನ

assault case in bengaluru
ಬೆಂಗಳೂರು1 hour ago

Assault Case : ವಿಕೋಪಕ್ಕೆ ತಿರುಗಿದ ಜಗಳ; ಕಪಾಳಮೋಕ್ಷಕ್ಕೆ ವ್ಯಕ್ತಿ ಬಲಿ

Prajwal Revanna Case site inspection by SIT team in HD Revanna Basavanagudi residence
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ಅತ್ಯಾಚಾರ ಕೇಸ್‌; ಎಚ್‌.ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು: ವಕೀಲರ ಅಸಮಾಧಾನ

No Diet Day 2024
ಆರೋಗ್ಯ2 hours ago

No Diet Day 2024: ಇಂದು ಡಯೆಟ್‌ ರಹಿತ ದಿನ ಆಚರಿಸುವುದೇಕೆ?

Pakistan Cricket
ಕ್ರೀಡೆ2 hours ago

Pakistan Cricket: ಟಿ20 ವಿಶ್ವಕಪ್​ ಗೆದ್ದರೆ ಪಾಕ್​ ಆಟಗಾರರಿಗೆ ಸಿಗಲಿದೆ ಭಾರೀ ಬಹುಮಾನ ಮೊತ್ತ

Gold Rate Today
ಕರ್ನಾಟಕ2 hours ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಚಿನ್ನದ ಬೆಲೆ ಇಂದು ಹೀಗಿವೆ; ತುಸುವೇ ಏರಿಕೆ

Puttakkana makkalu sahana dead
ಕಿರುತೆರೆ2 hours ago

Puttakkana Makkalu: ಸಹನಾಳ ಸಾವಿನ ಸುದ್ದಿ ಕೇಳಿ ಮುಗಿಲುಮುಟ್ಟಿತು ಪುಟ್ಟಕ್ಕನ ಆಕ್ರಂದನ

Rekha Jhunjhunwala
ವಾಣಿಜ್ಯ2 hours ago

Rekha Jhunjhunwala: ಷೇರು ಮಾರುಕಟ್ಟೆಯಲ್ಲಿ ರೇಖಾ ಜುಂಜುನ್‌ವಾಲಾಗೆ 805 ಕೋಟಿ ರೂ. ನಷ್ಟ; ಕಾರಣವೇನು?

viral news
ಕ್ರಿಕೆಟ್2 hours ago

Viral News: ಕ್ರಿಕೆಟ್‌ ಆಡುವಾಗ ಖಾಸಗಿ ಭಾಗಕ್ಕೆ ಚೆಂಡು ಬಡಿದು ಬಾಲಕ ದಾರುಣ ಸಾವು; ವಿಡಿಯೊ ಇದೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ12 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ21 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ22 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ23 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌