Site icon Vistara News

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Sudeep's birthday location shift

ಬೆಂಗಳೂರು: ನಟ ಕಿಚ್ಚ ಸುದೀಪ್ (Kichcha Sudeepa) ಶನಿವಾರ ತುರ್ತು ಸುದ್ದಿಗೋಷ್ಠಿ ನಡೆಸಿದರು. ಸೆಪ್ಟೆಂಬರ್‌ 2ಕ್ಕೆ ಸುದೀಪ್‌ ಹುಟ್ಟುಹಬ್ಬ ಹಿನ್ನೆಲೆ ಆಚರಣೆ ಕುರಿತು ಮಾಹಿತಿ ಹಂಚಿಕೊಂಡರು. ಈ ಬಾರಿ ಜೆಸಿ ನಗರದ ಮನೆಯಲ್ಲಿ ಸೆಲೆಬ್ರೆಷನ್‌ ಇರುವುದಿಲ್ಲ. ಬದಲಿಗೆ ಜಯನಗರದಲ್ಲಿ ನಡೆಸುವುದಾಗಿ ತಿಳಿಸಿದ್ದರು. ಸಾಮಾನ್ಯವಾಗಿ ಹುಟ್ಟುಹುಬ್ಬ ಅಂದರೆ ಮನೆ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ. ಕಳೆದ ಬಾರಿ 25,000ಕ್ಕೂ ಹೆಚ್ಚು ಮಂದಿ ಮನೆ ಬಳಿ ಬಂದು ಗೊಂದಲ ಆಗಿತ್ತು.

ಜೆಪಿ ನಗರದಲ್ಲಿ ನಮ್ಮ ತಂದೆ ಕಟ್ಟಿದ ಮನೆಯಲ್ಲೇ ಪ್ರತಿ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೆ. ಈ ಬಾರಿ ಹುಟ್ಟುಹಬ್ಬವನ್ನು ಬೇರೆ ಕಡೆ ಮಾಡಲು ನಿರ್ಧರಿಸಿದ್ದಾನೆ. ಯಾರಿಗೂ ತೊಂದರೆ ಆಗದಂತೆ ಈ ಬಾರಿ ಜಯನಗರದ ಎಂಇಎಸ್ ಗ್ರೌಂಡ್‌ನಲ್ಲಿ ನಡೆಯಲಿದೆ. ಲಿಮಿಟೆಡ್ ಸಮಯದಲ್ಲಿ ಫ್ಯಾನ್ಸ್‌ಗಳ ಭೇಟಿ ಆಗಬೇಕಿದೆ. ಬೆಳಗ್ಗೆ 10 ಗಂಟೆಯಿಂದ 12ಗಂಟೆವರೆಗೂ ಮಾತ್ರ ಫ್ಯಾನ್ಸ್‌ನ ಭೇಟಿ ಆಗುವ ಅವಕಾಶ ನೀಡಲಾಗಿದೆ ಎಂದು ಸುದೀಪ್‌ ತಿಳಿಸಿದರು.

ನನ್ನ ಬರ್ತ್ ಡೇ ದಿನವೇ ಸಿನಿಮಾಗಳು ಅನೌನ್ಸ್ ಮಾಡುತ್ತಿವಿ. ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎಂಬ ಆಸೆ ನನಗೂ ಇದೆ. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದರು. ಸೆ.27ಕ್ಕೆ ಮ್ಯಾಕ್ಸ್ ಎಂದು ಸುದ್ದಿ ಹರಿದಾಡಿತ್ತು. ಅವತ್ತೇ ಬರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್‌ ಇದು ಸುಳ್ಳೆಂದು ಹೇಳಲು ಸಾಧ್ಯವಿಲ್ಲ. ಸದ್ಯದಲ್ಲೇ ಎಲ್ಲದಕ್ಕೂ ಉತ್ತರ ಕೊಡುತ್ತಿನಿ ಎಂದರು. ಇನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದು, ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಬಿಲ್ಲಾ ರಂಗ ಬಾಷಾ ಸ್ಕೇಲ್ ಸಿನಿಮಾ ಹೀಗಾಗಿ ತಯಾರಿ ಮಾಡಿಕೊಳ್ಳಬೇಕು. 3-4 ಸಿನಿಮಾಗೆ ಡೇಟ್ಸ್ ಕೊಟ್ಟಿದ್ದೀನಿ. ಬಿಲ್ಲಾ ರಂಗ 2025ಕ್ಕೆ ರಿಲೀಸ್ ಮಾಡಲು ಪ್ಲಾನ್ ಇದೆ. ಇದರ ಜತೆ ರಾಜ ವೀರ ಮದಕರಿ ಪ್ರಾಜೆಕ್ಟ್ ಕುರಿತು ಹೇಳಿಕೆ ಕೊಟ್ಟಿರುವ ಸುದೀಪ್ ಸದ್ಯಕ್ಕೆ ನಾನು 4 ರಿಂದ 5ಪ್ರಾಜೆಕ್ಟ್‌ಗಳಿಗೆ ಲಾಕ್ ಆಗಿದ್ದೀನಿ ಎಂದು ಹೇಳುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಇದನ್ನೂ ಓದಿ: Kichcha Sudeepa: ಮತ್ತೆ ಒಂದಾದ ವಿಕ್ರಾಂತ್ ರೋಣ ಜೋಡಿ; ಬಾದ್‌ಷಾ ಕಿಚ್ಚ ಸುದೀಪ್‌ ಬರ್ತ್‌ಡೇ ದಿನವೇ ಅಪ್‌ಡೇಟ್‌

ಬಿಗ್‌ಬಾಸ್‌ 11ಗೆ ಕಿಚ್ಚ ಸುದೀಪ್‌ ಇರೊದಿಲ್ವಾ?

ಹಿಂದಿ ಬಿಗ್ ಬಾಸ್ ಓಟಿಟಿಯಲ್ಲಿ ಸಲ್ಮಾನ್ ಖಾನ್ ಬದಲಿಗೆ ಅನಿಲ್ ಕಪೂರ್ ನಡೆಸಿಕೊಡುತ್ತಿದ್ದಾರೆ. ತಮಿಳಿನ ಬಿಗ್ ಬಾಸ್​ಗೆ ಕಮಲ್ ಹಾಸನ್ ಗುಡ್​ಬೈ ಹೇಳಿದ್ದಾರೆ. ಅದೇ ರೀತಿ ಕನ್ನಡದಲ್ಲೂ ನಿರೂಪಕರನ್ನು ಬದಲಿಸುವ ಆಲೋಚನೆ ವಾಹಿನಿಯವರಿಗೆ ಬಂದಿದೆ ಎಂದು ವರದಿ ಆಗಿತ್ತು. ಈ ಬಾರಿಯ ಕನ್ನಡದ ಬಿಗ್ ಬಾಸ್ ಸೀಸನ್ 11ರ ನಿರೂಪಣೆಯನ್ನು ಸುದೀಪ್ ಮಾಡಲ್ವಾ ಹೀಗೊಂದು ಅನುಮಾನ ಮೂಡಿಬಂದಿತ್ತು. ಸುದೀಪ್ ಈ ಕುರಿತು ಮಾತನಾಡಿ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.

ಈ ಕುರಿತು ಮಾತನಾಡಿದ ಸುದೀಪ್‌, ಕಳೆದ 10 ವರ್ಷದಿಂದ ನಾನು ಬಿಗ್‌ಬಾಸ್‌ಗಾಗಿ ಡೆಡಿಕೇಟ್ ಮಾಡಿದೀನಿ. ನಾನು ಬಿಗ್ ಬಾಸ್ ನಡೆಸಿಕೊಡುವುದು ಎಲ್ಲರಿಗೂ ತಿಳಿದಿದೆ. ಆದರೆ ಹೇಗೆ ನಡೆಸಿಕೊಡುತ್ತಿನಿ, ಎಷ್ಟೊತ್ತು ನಿಂತುಕೊಂಡು ಇರ್ತಿನಿ ಎಂಬುದುಗೊತ್ತಿಲ್ಲ. ಬೆಳಗ್ಗೆ 3:30ಕ್ಕೆ ಪ್ಯಾಕ್ ಅಪ್ ಆದರೆ ಏರ್‌ಪೋರ್ಟ್‌ನಲ್ಲಿ ಕಾದು ಜರ್ನಿ ಮಾಡಿ ಶೋ ನಡೆಸಿಕೊಡುತ್ತಿದೆ. ಇದೆಲ್ಲಾ ಖರ್ಚು ನನ್ನ ಸ್ವಂತದ್ದು, ಬಿಗ್ ಬಾಸ್ ಅವರು ಕೊಡಲ್ಲ. 2 ರಿಂದ 3 ಗಂಟೆ ನಿಂತು ಶೋ ನಡೆಸಿಕೊಡುತ್ತಿದ್ದೆ. ಬಿಗ್ ಬಾಸ್ ಶೋ ಎಂಜಾಯ್ ಮಾಡಿದ್ದೀನಿ. ಆದರೆ ಬಿಗ್ ಬಾಸ್ ಶೋ ನಡೆಸೋಕೆ ಇಂಟರೆಸ್ಟ್ ಇಲ್ಲ ಅನ್ನೋ ಸುದ್ದಿ ಹರಿದಾಡಿದೆ. ನಾನು ವಿಶ್ ಮಾಡಿದ್ದೀನಿ ಶೋ ನಡೆಸಲು ಬೇರೆ ಅವರನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ದರ್ಶನ್‌ ಬಗ್ಗೆ ಏನ್‌ ಅಂದ್ರು ಸುದೀಪ್‌

ಇನ್ನೂ ನಟ ದರ್ಶನ್‌ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗಿರುವ ವಿಷಯ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ದರ್ಶನ್‌ಗೆ ಅಂತಲೇ ಫ್ಯಾನ್ಸ್, ಕುಟುಂಬ ಇದೆ. ನಮ್ಮ ಮಾತು ಯಾರಿಗೂ ನೋವು ಕೊಡಲು ಇಷ್ಟ ಪಡುವುದಿಲ್ಲ. ರಾಜಕೀಯವಾಗಿ ಮಾತಾಡುತ್ತಿದ್ದೀನಿ ಅಂತ ಅಂದುಕೊಳ್ಳಬೇಡಿ. ಈ ದೇಶದಲ್ಲಿ ಇದೀವಿ ಅಂದರೆ ಕಾನೂನಿನ ಮೇಲೆ ನಂಬಿಕೆ ಇರಬೇಕು.

ನಾವು ಮಾತಾಡಿಕೊಂಡು ಇದ್ದಿದ್ದರೆ, ನಾನು ದರ್ಶನ್‌ ಭೇಟಿಗೆ ಹೋಗುತ್ತಿದ್ದೆ. ಆದರೆ ನಾವಿಬ್ಬರೂ ಮಾತೇ ಆಡ್ತಿಲ್ಲ.ಈಗ ದರ್ಶನ್‌ ಭೇಟಿಗೆ ಹೋಗಬೇಕು ಅನಿಸುತ್ತಿಲ್ಲ. ನಾಟಕೀಯವಾಗಿ ಬದುಕೋಕೆ ನನಗೆ ಬರಲ್ಲ. ಕೆಲವೊಮ್ಮೆ ನಾವು ಅಂತರವನ್ನು ಕಾಯ್ದುಕೊಳ್ಳುತ್ತೇವೆ, ಅದರ ಅರ್ಥ ಅವರು ಸರಿಯಿಲ್ಲ, ನಾವು ಸರಿಯಿಲ್ಲ ಅಂತಲ್ಲ.. ನಾವಿಬ್ಬರೂ ಒಟ್ಟಿಗೆ ಸರಿಯಿಲ್ಲ ಅಷ್ಟೇ. ಸೂರ್ಯ ಬೆಳಗ್ಗೆ, ಚಂದ್ರ ರಾತ್ರಿ ಬಂದರೆನೇ ಸರಿ ಎರಡು ಒಟ್ಟಿಗೆ ಸೇರಿದ್ದರೆ ಸಮಸ್ಯೆ ಆಗುತ್ತೆ. ಹಾಗಂತ ವ್ಯಕ್ತಿತ್ವದಲ್ಲಿ ತೊಂದರೆ ಇದೆ ಎಂದು ಹೇಳುತ್ತಿಲ್ಲ. ಆದರೆ ನಮ್ಮಿಬ್ಬರ ವ್ಯಕ್ತಿತ್ವ ವಿಭಿನ್ನವಾಗಿದೆ ಎಂದರು.

ರಾಜ ಎಲ್ಲಿ ಇದ್ದರೂ ಮಹಾರಾಜನೇ

ಸುದೀಪ್ ಎಲ್ಲೆ ಹೋದರೂ ರಾಜಕೀಯಕ್ಕೆ ಬರುತ್ತಾರಾ ನಿಮ್ಮ ನಿಲುವು ಏನು ಎಂಬ ಪ್ರಶ್ನೆ ಸಹಜವಾಗಿ ಎದುರಾಗುತ್ತೆ. ಇದಕ್ಕೂ ರಿಯಾಕ್ಟ್ ಮಾಡಿರುವ ಕಿಚ್ಚ ನಾನು ಎಲ್ಲಿದ್ದರೂ ಮಹಾರಾಜನೇ.. ಎಲ್ಲಾ ಪಕ್ಷದಿಂದ ಆಫರ್ ಬಂದಿದೆ. ಒಂದು ವೇಳೆ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡುವ ಯೋಚನೆ ಬಂದರೆ ಹೇಳುತ್ತೇನೆ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version