ಬೆಂಗಳೂರು: ಹಿರಿಯ ನಟಿ ಲಕ್ಷ್ಮೀ (Actress Lakshmi) ಚಂದನವನದಲ್ಲಿ ಸ್ಟಾರ್ ನಟಿಯಾಗಿದ್ದವರು. ನಟನೆ ಜತೆ ಲಕ್ಷ್ಮೀ ಅವರ ವೈಯಕ್ತಿಕ ಬದುಕಿನ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಲಕ್ಷ್ಮೀ ಅವರ ಮಾಜಿ ಪತಿ ಮೋಹನ್ ಶರ್ಮಾ (Mohan sharma) ಸಂದರ್ಶನವೊಂದರಲ್ಲಿ ನಟಿಯ ಬಗ್ಗೆ ಹಲವಾರು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ʻʻಲಕ್ಷ್ಮೀ ಮದುವೆ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ, ಆಕೆ ಬಳಿಯೇ ಕುಂಕುಮ ಪಡೆದು, ಅವಳ ಹಣೆಗೆ ಹಚ್ಚಿದೆ. ಆ ರಾತ್ರಿಯೇ ನಾವಿಬ್ಬರೂ ಗಂಡ ಹೆಂಡತಿಯಾದೆವು ಎಂದು ಹೇಳಿಕೊಂಡಿದ್ದಾರೆ.
ನಟಿ ಲಕ್ಷ್ಮೀ ಸೌತ್ ಸಿನಿಮಾಗಳ ಜತಗೆ ಬಾಲಿವುಡ್‌ನಲ್ಲೂ ಲಕ್ಷ್ಮೀ ಮಿಂಚಿದ್ದಾರೆ. ಲಕ್ಷ್ಮೀ ಅವರ ಮದುವೆಯಿಂದ ವಿಚ್ಛೇದನದವರೆಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಮೋಹನ್ ಶರ್ಮಾ. ನಟಿ ಲಕ್ಷ್ಮೀ ಅವರು ಮೋಹನ್ ಶರ್ಮಾ ಜತೆಗೂ ನಟಿಸಿದ್ದಾರೆ. 1975ರಲ್ಲಿ ಇಬ್ಬರೂ ಮದುವೆಯಾಗಿ 1980ರಲ್ಲಿ ಡಿವೋರ್ಸ್ ಪಡೆದರು. ಇದಾದ ಬಳಿಕ ಲಕ್ಷ್ಮೀ ಅವರು ನಿರ್ದೇಶಕ ಶಿವಚಂದ್ರನ್ ಅವರನ್ನು ಮದುವೆಯಾದರು.
ನಿಮ್ಮ ನಾಯಿಯಂತಿರುತ್ತೇನೆ!
ಶೂಟಿಂಗ್ ಸಮಯದಲ್ಲಿ ಲಕ್ಷ್ಮೀ ಹಾಗೂ ಮೋಹನ್ ಶರ್ಮಾ ಭೇಟಿಯಾದರು. ಆಗ ಮೋಹನ್ ಶರ್ಮಾ ಅವರ ಕುಟುಂಬ ಮುಂಬೈನಲ್ಲಿ ನೆಲೆಸಿತ್ತು. ಸಿನಿಮಾ ಶೂಟಿಂಗ್ ಸಲುವಾಗಿ ಚೆನ್ನೈಗೆ ಆಗಾಗ ಬಂದು ಹೋಗುತ್ತಿದ್ದರು. ಒಂದು ದಿನ ಮೋಹನ್ ಶರ್ಮಾ ಅವರು ಮುಂಬೈನಲ್ಲಿದ್ದಾಗ, ನಟಿ ಲಕ್ಷ್ಮೀ ಮೋಹನ್ ಶರ್ಮಾಗೆ ಕರೆ ಮಾಡಿ, ಜಾಹೀರಾತಿನ ನಿಮಿತ್ತ ಮುಂಬೈನಲ್ಲಿದ್ದೇನೆ, ಭೇಟಿಯಾಗಿ ಎಂದಿದ್ದರು. ಆ ಬಳಿಕ ಶಾಪಿಂಗ್ ಮಾಡಿಸಿ ಎಂದು ಮೋಹನ್ ಬಳಿ ಕೇಳಿದ್ದರಂತೆ ಲಕ್ಷ್ಮೀ. ಅದರಂತೆ ಮೋಹನ್ ಕೂಡ ನಟಿ ಹೇಳಿದ್ದ ಕಡೆಯಲ್ಲ ತಿರುಗಿಸಿ ಕೇಳಿದ್ದೆಲ್ಲ ಕೊಡಿಸಿದ್ದರಂತೆ. ಇದಾದ ಮೇಲೆ ಸ್ವತಃ ಲಕ್ಷ್ಮೀ ಅವರು ಮೋಹನ್ ಅವರ ಬಳಿ ʻʻನನಗೆ ನೀವೆಂದರೆ ತುಂಬ ಇಷ್ಟ. ನಿಮ್ಮ ಜೀವನದಲ್ಲಿ ನನಗೂ ಅವಕಾಶ ನೀಡಿದರೆ, ನಿಮ್ಮ ನಾಯಿಯಂತೆ ಇರುತ್ತೇನೆʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Kannada New Movie: ‘ಬ್ಲಿಂಕ್’ಗೆ ಬಹುಪರಾಕ್ ಎಂದ ಪ್ರೇಕ್ಷಕರು: ಸಿನಿಮಾಗೆ ಶಿವಣ್ಣ ಸಾಥ್!
ಈ ಬಗ್ಗೆ ಮೋಹನ್ ಮಾತನಾಡಿ ʻʻನನಗೆ ಲಕ್ಷ್ಮೀ ಈ ರೀತಿ ಹೇಳುವಾಗ ಒಂದು ಕ್ಷಣ ಶಾಕ್ ಆದೆ. ಏನು ಹೇಳಬೇಕೆಂದು ತೋಚಿಲ್ಲ. ಅದೆ ಬೇರೆ ಮೊದಲ ಬಾರಿಗೆ ಒಂದು ಹುಡುಗಿ ನನ್ನ ಬಳಿ ಬಂದು ಪ್ರೇಮ ನಿವೇದನೆ ಮಾಡಿದ್ದು. ಮರು ದಿನ ಕರೆ ಮಾಡಿ ರೂಮಿಗೆ ಬಾ ಎಂದರು. ಅಲ್ಲಿ ಏನು ನಡೆಯಬಹುದು ಎಂದು ನಾನು ಊಹಿಸಿದ್ದೆ. ನೇರವಾಗಿ ಹೊಟೇಲ್‌ಗೆ ಹೋದೆ. ನಾವಿಬ್ಬರೂ ಮದುವೆಯಾಗೋಣವೇ? ಎಂದಳು. ಸದ್ಯಕ್ಕೆ ನನಗೆ ಆ ಯೋಚನೆ ಇಲ್ಲ ಎಂದೆ. ಲಕ್ಷ್ಮೀ ಮದುವೆ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ, ಆಕೆ ಬಳಿಯೇ ಕುಂಕುಮ ಪಡೆದು, ಅವಳ ಹಣೆಗೆ ಹಚ್ಚಿದೆ. ಆ ರಾತ್ರಿಯೇ ನಾವಿಬ್ಬರೂ ಗಂಡ ಹೆಂಡತಿಯಾದೆವುʼʼಎಂದು ಹೇಳಿಕೊಂಡಿದ್ದಾರೆ.
ಇದಾದ ಬಳಿಕ ತಮ್ಮ ವೃತ್ತಿ ಜೀವನದಲ್ಲಿ ನಾವು ಬ್ಯುಸಿಯಾದೆವು. ಆಗ ಐಶ್ವರ್ಯಾಗೆ ಒಂದು ವರೆ ವರ್ಷ. ಮಗುವನ್ನು ನೋಡಿಕೊಳ್ಳುವ ಜವಬ್ದಾರಿ ಬಂತು. ಕಾರಣಾಂತರಗಳಿಂದ ಸಂಬಂಧ ಮುಂದುವರಿಯಲಿಲ್ಲʼʼಎಂದಿದ್ದಾರೆ.