Actress Lakshmi: ನಿಮ್ಮ ನಾಯಿಯಂತಿರುತ್ತೇನೆ ಎಂದಿದ್ದಳು ಲಕ್ಷ್ಮೀ: ಮಾಜಿ ಪತಿ ಬಿಚ್ಚಿಟ್ರು ಕರಾಳ ಸತ್ಯ! - Vistara News

ಸ್ಯಾಂಡಲ್ ವುಡ್

Actress Lakshmi: ನಿಮ್ಮ ನಾಯಿಯಂತಿರುತ್ತೇನೆ ಎಂದಿದ್ದಳು ಲಕ್ಷ್ಮೀ: ಮಾಜಿ ಪತಿ ಬಿಚ್ಚಿಟ್ರು ಕರಾಳ ಸತ್ಯ!

Actress Lakshmi: ಮೋಹನ್‌ ಶರ್ಮಾ ಸಂದರ್ಶನವೊಂದರಲ್ಲಿ ನಟಿಯ ಬಗ್ಗೆ ಹಲವಾರು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ʻʻಲಕ್ಷ್ಮೀ ಮದುವೆ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ, ಆಕೆ ಬಳಿಯೇ ಕುಂಕುಮ ಪಡೆದು, ಅವಳ ಹಣೆಗೆ ಹಚ್ಚಿದೆ. ಆ ರಾತ್ರಿಯೇ ನಾವಿಬ್ಬರೂ ಗಂಡ ಹೆಂಡತಿಯಾದೆವುʼʼಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Mohan Sharma with actress lakshmi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹಿರಿಯ ನಟಿ ಲಕ್ಷ್ಮೀ (Actress Lakshmi) ಚಂದನವನದಲ್ಲಿ ಸ್ಟಾರ್‌ ನಟಿಯಾಗಿದ್ದವರು. ನಟನೆ ಜತೆ ಲಕ್ಷ್ಮೀ ಅವರ ವೈಯಕ್ತಿಕ ಬದುಕಿನ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಲಕ್ಷ್ಮೀ ಅವರ ಮಾಜಿ ಪತಿ ಮೋಹನ್‌ ಶರ್ಮಾ (Mohan sharma) ಸಂದರ್ಶನವೊಂದರಲ್ಲಿ ನಟಿಯ ಬಗ್ಗೆ ಹಲವಾರು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ʻʻಲಕ್ಷ್ಮೀ ಮದುವೆ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ, ಆಕೆ ಬಳಿಯೇ ಕುಂಕುಮ ಪಡೆದು, ಅವಳ ಹಣೆಗೆ ಹಚ್ಚಿದೆ. ಆ ರಾತ್ರಿಯೇ ನಾವಿಬ್ಬರೂ ಗಂಡ ಹೆಂಡತಿಯಾದೆವು ಎಂದು ಹೇಳಿಕೊಂಡಿದ್ದಾರೆ.

ನಟಿ ಲಕ್ಷ್ಮೀ ಸೌತ್‌ ಸಿನಿಮಾಗಳ ಜತಗೆ ಬಾಲಿವುಡ್‌ನಲ್ಲೂ ಲಕ್ಷ್ಮೀ ಮಿಂಚಿದ್ದಾರೆ. ಲಕ್ಷ್ಮೀ ಅವರ ಮದುವೆಯಿಂದ ವಿಚ್ಛೇದನದವರೆಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಮೋಹನ್‌ ಶರ್ಮಾ. ನಟಿ ಲಕ್ಷ್ಮೀ ಅವರು ಮೋಹನ್‌ ಶರ್ಮಾ ಜತೆಗೂ ನಟಿಸಿದ್ದಾರೆ. 1975ರಲ್ಲಿ ಇಬ್ಬರೂ ಮದುವೆಯಾಗಿ 1980ರಲ್ಲಿ ಡಿವೋರ್ಸ್‌ ಪಡೆದರು. ಇದಾದ ಬಳಿಕ ಲಕ್ಷ್ಮೀ ಅವರು ನಿರ್ದೇಶಕ ಶಿವಚಂದ್ರನ್ ಅವರನ್ನು ಮದುವೆಯಾದರು.

ನಿಮ್ಮ ನಾಯಿಯಂತಿರುತ್ತೇನೆ!

ಶೂಟಿಂಗ್‌ ಸಮಯದಲ್ಲಿ ಲಕ್ಷ್ಮೀ ಹಾಗೂ ಮೋಹನ್‌ ಶರ್ಮಾ ಭೇಟಿಯಾದರು. ಆಗ ಮೋಹನ್‌ ಶರ್ಮಾ ಅವರ ಕುಟುಂಬ ಮುಂಬೈನಲ್ಲಿ ನೆಲೆಸಿತ್ತು. ಸಿನಿಮಾ ಶೂಟಿಂಗ್‌ ಸಲುವಾಗಿ ಚೆನ್ನೈಗೆ ಆಗಾಗ ಬಂದು ಹೋಗುತ್ತಿದ್ದರು. ಒಂದು ದಿನ ಮೋಹನ್‌ ಶರ್ಮಾ ಅವರು ಮುಂಬೈನಲ್ಲಿದ್ದಾಗ, ನಟಿ ಲಕ್ಷ್ಮೀ ಮೋಹನ್‌ ಶರ್ಮಾಗೆ ಕರೆ ಮಾಡಿ, ಜಾಹೀರಾತಿನ ನಿಮಿತ್ತ ಮುಂಬೈನಲ್ಲಿದ್ದೇನೆ, ಭೇಟಿಯಾಗಿ ಎಂದಿದ್ದರು. ಆ ಬಳಿಕ ಶಾಪಿಂಗ್‌ ಮಾಡಿಸಿ ಎಂದು ಮೋಹನ್‌ ಬಳಿ ಕೇಳಿದ್ದರಂತೆ ಲಕ್ಷ್ಮೀ. ಅದರಂತೆ ಮೋಹನ್‌ ಕೂಡ ನಟಿ ಹೇಳಿದ್ದ ಕಡೆಯಲ್ಲ ತಿರುಗಿಸಿ ಕೇಳಿದ್ದೆಲ್ಲ ಕೊಡಿಸಿದ್ದರಂತೆ. ಇದಾದ ಮೇಲೆ ಸ್ವತಃ ಲಕ್ಷ್ಮೀ ಅವರು ಮೋಹನ್‌ ಅವರ ಬಳಿ ʻʻನನಗೆ ನೀವೆಂದರೆ ತುಂಬ ಇಷ್ಟ. ನಿಮ್ಮ ಜೀವನದಲ್ಲಿ ನನಗೂ ಅವಕಾಶ ನೀಡಿದರೆ, ನಿಮ್ಮ ನಾಯಿಯಂತೆ ಇರುತ್ತೇನೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Kannada New Movie: ‘ಬ್ಲಿಂಕ್’ಗೆ ಬಹುಪರಾಕ್ ಎಂದ ಪ್ರೇಕ್ಷಕರು: ಸಿನಿಮಾಗೆ ಶಿವಣ್ಣ ಸಾಥ್‌!

ಈ ಬಗ್ಗೆ ಮೋಹನ್‌ ಮಾತನಾಡಿ ʻʻನನಗೆ ಲಕ್ಷ್ಮೀ ಈ ರೀತಿ ಹೇಳುವಾಗ ಒಂದು ಕ್ಷಣ ಶಾಕ್‌ ಆದೆ. ಏನು ಹೇಳಬೇಕೆಂದು ತೋಚಿಲ್ಲ. ಅದೆ ಬೇರೆ ಮೊದಲ ಬಾರಿಗೆ ಒಂದು ಹುಡುಗಿ ನನ್ನ ಬಳಿ ಬಂದು ಪ್ರೇಮ ನಿವೇದನೆ ಮಾಡಿದ್ದು. ಮರು ದಿನ ಕರೆ ಮಾಡಿ ರೂಮಿಗೆ ಬಾ ಎಂದರು. ಅಲ್ಲಿ ಏನು ನಡೆಯಬಹುದು ಎಂದು ನಾನು ಊಹಿಸಿದ್ದೆ. ನೇರವಾಗಿ ಹೊಟೇಲ್‌ಗೆ ಹೋದೆ. ನಾವಿಬ್ಬರೂ ಮದುವೆಯಾಗೋಣವೇ? ಎಂದಳು. ಸದ್ಯಕ್ಕೆ ನನಗೆ ಆ ಯೋಚನೆ ಇಲ್ಲ ಎಂದೆ. ಲಕ್ಷ್ಮೀ ಮದುವೆ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ, ಆಕೆ ಬಳಿಯೇ ಕುಂಕುಮ ಪಡೆದು, ಅವಳ ಹಣೆಗೆ ಹಚ್ಚಿದೆ. ಆ ರಾತ್ರಿಯೇ ನಾವಿಬ್ಬರೂ ಗಂಡ ಹೆಂಡತಿಯಾದೆವುʼʼಎಂದು ಹೇಳಿಕೊಂಡಿದ್ದಾರೆ.

ಇದಾದ ಬಳಿಕ ತಮ್ಮ ವೃತ್ತಿ ಜೀವನದಲ್ಲಿ ನಾವು ಬ್ಯುಸಿಯಾದೆವು. ಆಗ ಐಶ್ವರ್ಯಾಗೆ ಒಂದು ವರೆ ವರ್ಷ. ಮಗುವನ್ನು ನೋಡಿಕೊಳ್ಳುವ ಜವಬ್ದಾರಿ ಬಂತು. ಕಾರಣಾಂತರಗಳಿಂದ ಸಂಬಂಧ ಮುಂದುವರಿಯಲಿಲ್ಲʼʼಎಂದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Kannada New Movie: `ಕುಂಟೆಬಿಲ್ಲೆ’ ಸಿನಿಮಾದ ಮುಹೂರ್ತ: ಶುಭಕೋರಿದ ಗಣ್ಯರು

Kannada New Movie: ಪೋಷಕ ಪಾತ್ರಗಳಲ್ಲಿ ಕಿಶೋರ್, ಪವಿತ್ರಾ ಲೋಕೇಶ್, ಶಂಕರ್ ಅಶ್ವಥ್, ಚಂದ್ರಪ್ರಭ ಮೊದಲಾದವರು ನಟಿಸಲಿದ್ದಾರೆ.
ʻನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಆಟ ʻಕುಂಟೆಬಿಲ್ಲೆ‌ʼ. ಅದೇ ಟೈಟಲ್ ಇಟ್ಟುಕೊಂಡು ಪ್ರೀತಿ, ನೋವು, ಕಾಮ ಎಲ್ಲವನ್ನೂ ಕಟ್ಟಿಕೊಡಲಿದ್ದೇವೆʼ ಎಂದು ನಿರ್ದೇಶಕ ಸಿದ್ದೇಗೌಡ ತಿಳಿಸಿದರು. ಹತ್ತಕ್ಕೂ ಹೆಚ್ಚು ಚಿತ್ರ ಮಾಡಿರುವ ಮೇಘ ಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Kannada New Movie meghashri starrer kuntebille goes on floor
Koo

ಬೆಂಗಳೂರು: ಈ ಮೊದಲು `ದಕ್ಷ ಯಜ್ಞ’, ತರ್ಲೆ ವಿಲೇಜ್’, ಋತುಮತಿ ಚಿತ್ರಗಳನ್ನು (Kannada New Movie) ನಿರ್ದೇಶನ ಮಾಡಿದ್ದ ಸಿದ್ದೇಗೌಡ ಜಿ.ಬಿ‌.ಎಸ್. ಅವರು `ಕುಂಟೆಬಿಲ್ಲೆ’ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಯುವ ನಟ ಯದು ಮೊದಲ ಬಾರಿಗೆ ನಾಯಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ‌. ಹತ್ತಕ್ಕೂ ಹೆಚ್ಚು (kuntebille goes on floor) ಚಿತ್ರ ಮಾಡಿರುವ ಮೇಘ ಶ್ರೀ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಪೋಷಕ ಪಾತ್ರಗಳಲ್ಲಿ ಕಿಶೋರ್, ಪವಿತ್ರಾ ಲೋಕೇಶ್, ಶಂಕರ್ ಅಶ್ವಥ್, ಚಂದ್ರಪ್ರಭ ಮೊದಲಾದವರು ನಟಿಸಲಿದ್ದಾರೆ.
ʻನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಆಟ ʻಕುಂಟೆಬಿಲ್ಲೆ‌ʼ. ಅದೇ ಟೈಟಲ್ ಇಟ್ಟುಕೊಂಡು ಪ್ರೀತಿ, ನೋವು, ಕಾಮ ಎಲ್ಲವನ್ನೂ ಕಟ್ಟಿಕೊಡಲಿದ್ದೇವೆʼ ಎಂದು ನಿರ್ದೇಶಕ ಸಿದ್ದೇಗೌಡ ತಿಳಿಸಿದರು. ನಿರ್ಮಾಪಕ ಎಸ್.ಬಿ. ಶಿವು ಮಾತನಾಡಿ, ʻಜೀವಿತ ಕ್ರಿಯೇಷನ್‌ನಿಂದ ಒಳ್ಳೆಯ ಸಿನಿಮಾ ಮಾಡಿದ್ದೇವೆ. ಯದು ಹೊಸ ಪ್ರತಿಭೆ ಆಗಿದ್ದು ಅವರನ್ನೇ ನಾಯಕರನ್ನಾಗಿ ಮಾಡಿಕೊಂಡಿದ್ದೇವೆʼ ಎಂದರು. ಮತ್ತೊಬ್ಬ ನಿರ್ಮಾಪಕ ಕುಮಾರ್ ಗೌಡ ಮಾತನಾಡಿ,
ʻನಿರ್ಮಾಣ ಕ್ಷೇತ್ರ ನನಗೆ ಹೊಸದು. 30 ವರ್ಷದ ಹಿಂದೆ ನಾನೊಬ್ಬ ಕಲಾವಿದ ಆಗಬೇಕು ಎಂದು ಬೆಂಗಳೂರಿಗೆ ಹೋಗಿದ್ದವನು‌. ಆದರೆ ಅದು ಸಾಧ್ಯವಾಗಿರಲಿಲ್ಲ‌. ಈಗ ಅದನ್ನು ನನ್ನ ಮಗನ ಮೂಲಕ ಈಡೇರಿಸಿಕೊಳ್ಳುತ್ತಿದ್ದೇನೆ. ನನ್ನ ಮಗನಿಗೆ ರಂಗಭೂಮಿ ಕಡೆಗೆ ಆಸಕ್ತಿ ಇತ್ತು . ಇದೀಗ ವಿದ್ಯಾಭ್ಯಾಸ ಮುಗಿಸಿ ನಟನೆ ಕಡೆಗೆ ಬರುತ್ತಿದ್ದಾನೆ. ಈಗ ನಾನೇ ಮುಂದೆ ನಿಂತು ನಿರ್ದೇಶಕ ಸಿದ್ದೇಗೌಡ ಅವರ ಗರಡಿಗೆ ಬಿಟ್ಟಿದ್ದೇವೆ. ನನ್ನ ಮಗನಿಗೆ ಹೊಂದುವಂತ ಒಳ್ಳೆಯ ಕತೆ ಇದೆ. ಸಿನಿಮಾ ಚೆನ್ನಾಗಿ ಮೂಡಿಬರಲಿದೆʼ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು‌.

ಇದನ್ನೂ ಓದಿ: Kannada New Movie: ಮನರಂಜನೆಯ ರಸದೌತಣ ಬಡಿಸಲು ಬಂದ ʻಮೂರನೇ ಕೃಷ್ಣಪ್ಪʼ: ಟ್ರೈಲರ್‌ ಔಟ್‌!

ಮೇಘಶ್ರೀ ಮಾತಿಗಿಳಿದು, ʻʻಟೈಟಲ್ ನಷ್ಟೇ ಸ್ಕ್ರಿಪ್ಟ್ ಕೂಡ ಚೆನ್ನಾಗಿದೆ. ಕನ್ನಡದಲ್ಲಿ ಈ ರೀತಿಯ ಸ್ಟೋರಿ ಕೇಳಿರಲಿಲ್ಲ. ಒಳ್ಳೆಯ ತಂಡ ಸಿಕ್ಕಿದ್ದು, ನಾನು ಹಳ್ಳಿಯೊಂದರ ಶ್ರೀಮಂತ ಕುಟುಂಬದ ಹುಡುಗಿಯ ಪಾತ್ರ ಮಾಡಲಿದ್ದೇನೆ ಎಂದರು.
ನಾಯಕ ಯದು ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಟ್ಟಿದ್ದಾರೆ‌. ಆ ನಿಟ್ಟಿನಲ್ಲಿ ಪಾತ್ರ ಮಾಡುವೆʼʼ ಎಂದರು.

ಹಿರಿಯ ನಟ ಶಂಕರ್ ಅಶ್ವಥ್ ಮಾತನಾಡಿ, ʻʻಅಕ್ಷಯ ತೃತೀಯ ದಿನದಂದು ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ‌. ಅದೇ ರೀತಿ ಈ ಚಿತ್ರಕ್ಕೂ ಒಳ್ಳೆಯದಾಗಲಿ. ನನ್ನದು ನಾಯಕಿಯ ತಂದೆ ಪಾತ್ರ‌. ಒಂದು ಗ್ರಾಮೀಣ ಆಟ ಜೀವನದಲ್ಲಿ ಎಷ್ಟು ಮುಖ್ಯ ಆಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದಾರೆ‌. ವಿಭಿನ್ನ ಮತ್ತು ಕುತೂಹಲಕಾರಿ ಚಿತ್ರ ಇದಾಗಿರಲಿದೆʼʼ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಸಂಭಾಷಣೆ ಬರೆದಿರುವ ಮಧು ಮಾತನಾಡಿ ʻʻನಾನು ಪ್ರತಿ ಸಿನಿಮಾಗೆ ಬರೆಯುವಾಗಲೂ ಹೊಸದಾಗಿಯೇ ಬರೆಯುತ್ತೇನೆ. ಈ ಚಿತ್ರದ ಕಥೆ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಸಂಭಾಷಣೆ ಬರೆದಿದ್ದೇನೆ. ಹಳ್ಳಿಯ ನೈಜ ಘಟನೆಗಳು ಇಲ್ಲಿ ಇವೆʼʼ ಎಂದು ತಿಳಿಸಿದರು. ಒಂದು ಗ್ರಾಮೀಣ ಆಟ ಜೀವನದಲ್ಲಿ ಎಷ್ಟು ಮುಖ್ಯ ಆಗುತ್ತದೆ ಎನ್ನುವುದು ಚಿತ್ರದಲ್ಲಿ ಇರಲಿದೆ ಎನ್ನಲಾಗಿದೆ. ವಿಭಿನ್ನ ಮತ್ತು ಕುತೂಹಲಕಾರಿ ಚಿತ್ರ ಇದಾಗಿರಲಿದೆ ಎನ್ನುವ ವಿಶ್ವಾಸ ಚಿತ್ರತಂಡದ್ದು.

Continue Reading

ಸ್ಯಾಂಡಲ್ ವುಡ್

Brinda Acharya: ‘ಸಾವಿರ ಗುಂಗಲಿ’ ಒಲವಿನ ಸವಾರಿ ಹೊರಟ ಬೃಂದಾ ಆಚಾರ್ಯ-ಭರತ್ ಬೋಪಣ್ಣ!

Brinda Acharya: ಸಾಹಿತ್ಯ, ಸಂಗೀತ, ಪರಿಕಲ್ಪನೆ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರುವ `ಸಾವಿರ ಗುಂಗಲ್ಲಿ’ ಆಲ್ಬಂ ಸಾಂಗ್ ಈಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ. ಇತ್ತೀಚಿನ ದಿನಮಾನದಲ್ಲಿ ಸಿನಿಮಾಗಳಾಚೆಗೆ ಹಾಡುಗಳು ರೂಪುಗೊಳ್ಳೋದೇ ಅಪರೂಪ. ಇಂಥಾ ಹೊತ್ತಲ್ಲಿ `ಸಾವಿರ ಗುಂಗಲ್ಲಿ’ ಎಂಬ ಆಲ್ಬಂ ಸಾಂಗ್ ತನ್ನ ನವಿರು ಶೈಲಿಯೊಂದಿಗೆ ಕೇಳುಗರನ್ನೆಲ್ಲ ಸೋಕುತ್ತಿದೆ.

VISTARANEWS.COM


on

Brinda Acharya Saavira Gungali Video Song Out
Koo

ಬೆಂಗಳೂರು: ನಿಂತ ನಿಲುವಿನಲ್ಲೇ ಆವರಿಸಿಕೊಳ್ಳಬಲ್ಲ ಹಾಡೊಂದಕ್ಕಾಗಿ ಅನುಕ್ಷಣವೂ ಹಾತೊರೆಯುವ ದೊಡ್ಡದೊಂದು ಸಂಗೀತ ಪ್ರೇಮಿಗಳ ದಂಡು ನಮ್ಮ ನಡುವಲ್ಲಿದೆ. ಯಾವ ಸುಳಿವೂ ಕೊಡದೆ ಚೆಂದದ್ದೊಂದು ಹಾಡು ಅಚಾನಕ್ಕಾಗಿ ಕಿವಿ ಸೋಕಿದರೆ ಅವರಿಗೆಲ್ಲ ಅಕ್ಷರಶಃ ರೋಮಾಂಚನ. ಬೃಂದಾ ಆಚಾರ್ಯ (Brinda Acharya) ಮತ್ತು ಭರತ್ ಬೋಪಣ್ಣ (Bharath Bopanna) ನಟಿಸಿರುವ ಆಲ್ಬಂ ಸಾಂಗ್`ಸಾವಿರ ಗುಂಗಲ್ಲಿ’ ಈಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ.

ಸಾಹಿತ್ಯ, ಸಂಗೀತ, ಪರಿಕಲ್ಪನೆ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರುವ `ಸಾವಿರ ಗುಂಗಲ್ಲಿ’ ಆಲ್ಬಂ ಸಾಂಗ್ ಈಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ. ಇತ್ತೀಚಿನ ದಿನಮಾನದಲ್ಲಿ ಸಿನಿಮಾಗಳಾಚೆಗೆ ಹಾಡುಗಳು ರೂಪುಗೊಳ್ಳೋದೇ ಅಪರೂಪ. ಇಂಥಾ ಹೊತ್ತಲ್ಲಿ `ಸಾವಿರ ಗುಂಗಲ್ಲಿ’ ಎಂಬ ಆಲ್ಬಂ ಸಾಂಗ್ ತನ್ನ ನವಿರು ಶೈಲಿಯೊಂದಿಗೆ ಕೇಳುಗರನ್ನೆಲ್ಲ ಸೋಕುತ್ತಿದೆ. ಮತ್ತಷ್ಟು ಮನಸುಗಳನ್ನು ಆವರಿಸಿಕೊಳ್ಳುತ್ತಾ ಮುಂದುವರಿಯುತ್ತಿದೆ. ಅಂದಹಾಗೆ, ಕೃಷ್ಣ ನಂಜುಂಡಯ್ಯನವರ ಪರಿಕಲ್ಪನೆ, ನಿರ್ದೇಶನದಲ್ಲಿ ಮೂಡಿ ಬಂದಿದೆ. ಬೃಂದಾ ಆಚಾರ್ಯ, ಭರತ್ ಬೋಪಣ್ಣ, ಮಯೂರ್ ಸಾಗರ್, ಕೃತಿಕಾ ಗೌಡ, ಮಾನಿನಿ ಪಿ ರಾವ್ ಮುಂತಾದವರು ಸದರಿ ಆಲ್ಬಂ ಹಾಡಿನ ಭಾಗವಾಗಿದ್ದಾರೆ.

ಇದನ್ನೂ ಓದಿ: Dolly Dhananjay:  ಡಾಲಿ ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ನಾಳೆ ಬಿಡುಗಡೆ

ಹಾಡಿನ ಪ್ರಧಾನ ಆಕರ್ಷಣೆಯಾಗಿ ಬೃಂದಾ ಆಚಾರ್ಯ ಕಾಣಿಸುತ್ತಾರೆ. ಹಾಡಿನ ನೆರಳಲ್ಲಿ ಕಥೆಯೊಂದು ಸರಿಯುವಂತೆ ಭಾಸವಾಗುವ ಈ ಆಲ್ಬಂ ಸಾಂಗ್, ಕೇಳುಗರನ್ನೆಲ್ಲ ಒಂದೇ ಸಲಕ್ಕೆ ಸೆಳೆಯುವಂತಿದೆ. ವಿಶೇಷವೆಂದರೆ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಿರುವ ಪ್ರಮೋದ್ ಮರವಂತೆ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅದು ಪೃಥ್ವಿ ಭಟ್ ಧ್ವನಿಯಲ್ಲಿ ಮೂಡಿ ಬಂದಿದೆ. ಛಾಯಾಗ್ರಹಣ ಸೇರಿದಂತೆ ಎಲ್ಲದರಲ್ಲಿಯೂ ಈ ಹಾಡು ಅದ್ದೂರಿಯಾಗಿ, ಅರ್ಥವತ್ತಾಗಿ ಮೂಡಿ ಬಂದಿದೆ. ಹೆಚ್ಚಿನ ವೀಕ್ಷಣೆ ಪಡೆಯುತ್ತಾ ಮುಂದುವರೆಯುತ್ತಿರುವ ಸದರಿ ಆಲ್ಬಂ ಸಾಂಗಿನ ಸವಾರಿಯೀಗ ಟ್ರೆಂಡಿಂಗಿನತ್ತ ಮುಖ ಮಾಡಿದೆ. ಆ ಮೂಲಕ ಇದರ ಹಿಂದಿರುವ ಕನಸು, ಶ್ರಮ, ಶ್ರದ್ಧೆಗಳೆಲ್ಲವೂ ಸಾರ್ಥಕವಾದಂತಾಗಿದೆ.

ಬೃಂದಾ ಆಚಾರ್ಯ ಇದೀಗ ಹಲವಾರು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ಅದರ ನಡುವೆಯೂ ಇಂಥಾದ್ದೊಂದು ನವಿರು ಹಾಡಿಗೆ ಜೀವ ತುಂಬುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೀರಿಯಲ್ ಜಗತ್ತಿನಿಂದ ಬಂದು, ಇದೀಗ ನಾಯಕನಾಗಿ ನೆಲೆಗಾಣುತ್ತಿರುವ ಭರತ್ ಬೋಪಣ್ಣ ಕೂಡಾ ಅಷ್ಟೇ ಚೆಂದಗೆ ನಟಿಸಿದ್ದಾರೆ.

ಜೋಯ್ ಕಾಸ್ಟಾ ಸಂಗೀತ ನಿರ್ದೇಶನ, ಎನ್.ಕೆ ರಾಜ್ ಛಾಯಾಗ್ರಹಣ, ತಮಿಳರಸನ್ ಎಂ. ಸಂಕಲನ, ಅನಿಲ್ ಸಹ ನಿರ್ದೇಶನ ಇದೆ.

Continue Reading

ಕರ್ನಾಟಕ

Chetan Chandra: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಹಲ್ಲೆ; ರಕ್ತ ಬರುವಂತೆ ಥಳಿತ

Chetan Chandra: ಬೆಂಗಳೂರಿನ ಕಗ್ಗಲಿಪುರದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ನಟ ಚೇತನ್ ಚಂದ್ರ ಅವರನ್ನು ಅಡ್ಡಗಟ್ಟಿ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ.

VISTARANEWS.COM


on

Chetan Chandra
Koo

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಅವರ ಮೇಲೆ ಹಲ್ಲೆ ಮಾಡಿರುವ ಘಟನೆ (Chetan Chandra) ನಗರದ ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ನಡೆದಿದೆ. ಪಿಯುಸಿ, ರಾಜಧಾನಿ, ಜರಾಸಂಧ, ಪ್ರಭುತ್ವ ಚಿತ್ರಗಳ ಮೂಲಕ ಖ್ಯಾತವಾಗಿರುವ ನಟನ ಮೇಲೆ ಭಾನುವಾರ ಹಲ್ಲೆ ನಡೆದಿದೆ.

ಕಾರಿನಲ್ಲಿದ್ದ ನಟ ಚೇತನ್ ಚಂದ್ರ ಅವರನ್ನು ರಕ್ತ ಬರುವಂತೆ ಥಳಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ ಚೇತನ್ ಚಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ನಟನ ಮೇಲೆ 20ಕ್ಕೂ ಹೆಚ್ಚು ಮಂದಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಪೈಕಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಟ ಚೇತನ್‌ ಚಂದ್ರ ಅವರಿಗೆ ಕಗ್ಗಲಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ | Ram Charan: ಚುನಾವಣಾ ಪ್ರಚಾರದ ವೇಳೆ ರಾಮ್ ಚರಣ್ ಶರ್ಟ್‌ ಹರಿದ ಫ್ಯಾನ್ಸ್‌: ಅಲ್ಲು ಸುತ್ತ ಜನವೋ ಜನ!

ಭಾನುವಾರ ಅಮ್ಮಂದಿರ ದಿನವಾಗಿದ್ದರಿಂದ ನಟ ಚೇತನ್ ಚಂದ್ರ ಅವರು ದೇವಸ್ಥಾನಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೈಕ್‌ನಲ್ಲಿ ಬಂದ ಕೆಲ ಕಿಡಿಗೇಡಿಗಳು ಕಾರಿಗೆ ಅಡ್ಡ ಹಾಕಿ, ದುಡ್ಡು ಕೀಳಲು ಮುಂದಾಗಿದ್ದಾರೆ. ಹಣ ಕೊಡೋದಿಲ್ಲ ಎಂದಿದ್ದಕ್ಕೆ ಗಲಾಟೆ ಮಾಡಿ, ನಟ ಚೇತನ್ ಚಂದ್ರ ಅವರ ಮುಖಕ್ಕೆ ರಕ್ತ ಬರುವ ಹಾಗೆ ಕಿಡಿಗೇಡಿಗಳು ಹೊಡೆದಿದ್ದಾರೆ.

ಅಮ್ಮನ ನೆನೆದಾಗ ಮಗುವಾಗುವೆ ಎಂದ ಜಗ್ಗೇಶ್‌: ದುನಿಯಾ ವಿಜಯ್‌ ಭಾವುಕ ಪೋಸ್ಟ್‌!

Mother's Day 2024 Duniya Vijay jaggesh Post Viral

ಬೆಂಗಳೂರು: ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ..? ಭೂಮಿಗೆ ಬಂದ (Mother’s Day 2024) ಮೊದಲನೆ ಕಂದನ ಅಳುವ ದನಿಯಿಂದ ʼಈ ಸಾಲುಗಳು ಯಾವಾಗಲೂ ನಮ್ಮನ್ನ ಬಿಡದೇ ಕಾಡುತ್ತವೆ. ʼಅಮ್ಮʼ ಅನ್ನೋ ಶಬ್ದಕ್ಕೆ ಅರ್ಥ ನಿಡುವುದು ಕೂಸೇ ಆದ್ರೂ ಆ ಕೂಸಿಗೆ ರೆಕ್ಕೆ ಕಟ್ಟಿ ಹಾರೋ ಹಾಗೇ ಮಾಡೋಳು ತಾಯಿ. ಪ್ರತಿವರ್ಷ ಮೇ ತಿಂಗಳ 2ನೇ ಭಾನುವಾರ ಮದರ್ಸ್ ಡೇ. ತಾಯಂದಿರ ದಿನದ ಹಿನ್ನೆಲೆಯಲ್ಲಿ ಜಗ್ಗೇಶ್, ದುನಿಯಾ ವಿಜಯ್ ಸೇರಿದಂತೆ ಹಲವರು ತಮ್ಮ ತಾಯಿಯನ್ನು ಸ್ಮರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ನವರಸ ನಾಯಕ ಜಗ್ಗೇಶ್‌ ಅವರು ಇನ್‌ಸ್ಟಾದಲ್ಲಿ ಅಮ್ಮನ ತೊಡೆ ಮೇಲೆ ಮಲಗಿರುವ ಫೋಟೊ ಜತೆಗೆ ಹೀಗೆ ಬರೆದಿದ್ದಾರೆ. ಧನ್ಯವಾದ ಜೀ ಕನ್ನಡ. ನನ್ನ ಪ್ರೀತಿಯ ಅಮ್ಮನ ಈ ರೀತಿ ನೆನೆಯುವಂತ ಕಾಣಿಕೆಗಾಗಿ.
ನಾನು ಇಂದು 61 ವರ್ಷವಾದರು ಅಮ್ಮನ ನೆನೆದಾಗ ಮಗುವಾಗುವೆ. ಅಂತಹ ಶಕ್ತಿಯಿದೆ ಅಮ್ಮನ ಎರಡಕ್ಷರಕ್ಕೆ.
ಕಾರುಣ್ಯ ಸೆಲೆಯ ಓ ಅಮ್ಮಂದಿರೆ…ನೀವುಗಳು ಇರಬೇಕು ಶಾಶ್ವತ. ದೃವನಕ್ಷತ್ರದಂತೆ..! ಮರೆಯಾಗದೆ ಮಕ್ಕಳ ಮುಂದೆ..ʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral News: ಇಂತಹ ಅಮ್ಮಂದಿರೂ ಇರ್ತಾರಾ? ಈ ಶಾಕಿಂಗ್‌ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ

ದುನಿಯಾ ವಿಜಯ್‌ ಅವರು ಅಮ್ಮನ ಜತೆ ಇರುವ ಫೋಟೊ ಶೇರ್‌ ಮಾಡಿ ʻʻಈ ಉಸಿರು ಕೊಟ್ಟ ನಿನಗೆ
ನನ್ನ ಉಸಿರಿರೊವರೆಗೂ. ಪ್ರತಿ ದಿನ ಆಚರಣೆಯೇ ಅಮ್ಮʼʼ ಎಂದು ಬರೆದುಕೊಂಡಿದ್ದಾರೆ.

ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ದುನಿಯಾ ವಿಜಯ್‌ ಅಮ್ಮ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು. ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ ಹಾಗೂ ತಾಯಿ ನಾರಾಯಣಮ್ಮ ಅವರಿಗೆ ಕೋವಿಡ್ 19 ಪಾಸಿಟಿವ್ ಕಂಡುಬಂದಿತ್ತು. ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿ, ತಂದೆ-ತಾಯಿಯನ್ನು ದುನಿಯಾ ವಿಜಯ್ ಆರೈಕೆ ಮಾಡಿದ್ದರು. ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು. 3 ವರ್ಷಗಳ ಹಿಂದೆ ನಟ ದುನಿಯಾ ವಿಜಯ್ ನಾರಾಯಣಮ್ಮ ನಿಧನರಾದರು.

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ (Manvita Kamath) ಅವರ ತಾಯಿ ಸುಜಾತಾ ಕಾಮತ್‌ ಕಿಡ್ನಿ ವೈಫಲ್ಯದಿಂದಾಗಿ ಕೊನೆಯುಸಿರೆಳೆದಿದ್ದರು. ಈ ದಿನ ನಟಿ ತಮ್ಮ ತಾಯಿಯನ್ನು ನೆನಪಿಸಿಕೊಂಡು, ಮಿಸ್‌ ಯೂ ಅಮ್ಮ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ (Duniya Vijay) ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ವಿಶೇಷ ಅಂದರೆ ಈ ಸಿನಿಮಾ ಮೂಲಕ ದುನಿಯಾ ವಿಜಯ್‌ ಅವರ ಮಗಳು ಮೋನಿಕಾ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಕಾಟೇರ’ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೋನಿಕಾ ಈಗ ಹೆಸರು ಬದಲಾಯಿಸಿಕೊಂಡಿದ್ದಾರೆ. ಸಿನಿಮಾಗಾಗಿ ರಿತಾನ್ಯಾ ಎಂದು ಹೆಸರು ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ | Kannada New Movie: ಮನರಂಜನೆಯ ರಸದೌತಣ ಬಡಿಸಲು ಬಂದ ʻಮೂರನೇ ಕೃಷ್ಣಪ್ಪʼ: ಟ್ರೈಲರ್‌ ಔಟ್‌!

ಸದ್ಯಕ್ಕೆ ಪ್ರೊಡಕ್ಷನ್ ನಂ 2. ಟೈಟಲ್ ಮೂಲಕ ಸಿನಿಮಾ ಚಿತ್ರೀಕರಣ ಚಾಲನೆ ದೊರೆತಿದೆ. ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಇದ್ದಾರೆ. ಕೋಲಾರ ಸುತ್ತಮುತ್ತ ಸಿನಿಮಾದ ಕಥೆ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನೈಜ್ಯ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ.

Continue Reading

ಕ್ರಿಕೆಟ್

Queen’s Premier League: ಕಿರುತೆರೆ ,ಹಿರಿತೆರೆ ಹೆಣ್ಮಕ್ಕಳಿಗಾಗಿ ಶುರುವಾಯ್ತು ಕ್ವೀನ್ಸ್‌ ಪ್ರೀಮಿಯರ್ ಲೀಗ್!

Queen’s Premier League: ಈ‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನ್ನಡ ಸಿನಿಮಾ, ಸೀರಿಯಲ್, ಆಂಕರ್ಸ್, ಮಾಡೆಲ್ ಭಾಗವಹಿಸಲು ವೇದಿಕೆ‌ ಕಲ್ಪಿಸಿಕೊಡಲಾಗಿದೆ. ಅದರ ಭಾಗವಾಗಿ QPLನ ಲೋಗೋ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂಎನ್ ಸುರೇಶ್, ಉದ್ಯಮಿ ಪೂರ್ವಂಕರ್ ಸಿಇಒ ಮಲ್ಲಣ್ಣ, ಅಂತಾರಾಷ್ಟ್ರೀಯ ಕ್ರೀಡಾಪಟು ವೃಂದಾ ದಿನೇಶ್, ಮಹಿಳಾ ಕ್ರಿಕೆಟರ್ ಗಳಾದ ಪುಷ್ಪ ಕುಮಾರಿ, ಪ್ರತ್ಯುಷ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

VISTARANEWS.COM


on

Queen's Premier League start
Koo

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವಾರು ಕ್ರಿಕೆಟ್ ಪಂದ್ಯಾವಳಿಗಳಿವೆ. ಸಿಸಿಎಲ್, ಕೆಸಿಸಿ, ಟಿಪಿಎಲ್ ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ರಿಕೆಟ್ ಟೂರ್ನಮೆಂಟ್ ಗಳಿವೆ. ಆದರೆ ಕಿರುತೆರೆ ಹಾಗೂ ಹಿರಿತೆರೆ ಮಹಿಳೆಯರಿಗಾಗಿ ಯಾವುದೇ ಕ್ರಿಕೆಟ್ ಪಂದ್ಯಾವಳಿಗಳಿಲ್ಲ. ಹೀಗಾಗಿ ಕ್ರಿಯೇಟಿವ್ ಫ್ರೆಂಡ್ಸ್ ಕಂಪನಿ ʻಕ್ವೀನ್ಸ್‌ ಪ್ರೀಮಿಯರ್ ಲೀಗ್ʼ (Queen’s Premier League) ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದೆ.

ಈ‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನ್ನಡ ಸಿನಿಮಾ, ಸೀರಿಯಲ್, ಆಂಕರ್ಸ್, ಮಾಡೆಲ್ ಭಾಗವಹಿಸಲು ವೇದಿಕೆ‌ ಕಲ್ಪಿಸಿಕೊಡಲಾಗಿದೆ. ಅದರ ಭಾಗವಾಗಿ QPLನ ಲೋಗೋ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂಎನ್ ಸುರೇಶ್, ಉದ್ಯಮಿ ಪೂರ್ವಂಕರ್ ಸಿಇಒ ಮಲ್ಲಣ್ಣ, ಅಂತಾರಾಷ್ಟ್ರೀಯ ಕ್ರೀಡಾಪಟು ವೃಂದಾ ದಿನೇಶ್, ಮಹಿಳಾ ಕ್ರಿಕೆಟರ್ ಗಳಾದ ಪುಷ್ಪ ಕುಮಾರಿ, ಪ್ರತ್ಯುಷ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಲೋಗೊ ಬಿಡುಗಡೆ ಮಾಡಿದ ಪುಷ್ಪಕುಮಾರಿ, ʻʻಕ್ರಿಕೆಟ್ ಹುಡುಗರಿಗೆ ಮಾತ್ರ ಎನ್ನುವ ಕಾಲವಿತ್ತು. ಆದರೆ ನಾವು ಅಂದು ಛಲ ಬಿಡದೆ ಆಡಿದ್ದೇವೆ. ಮಹಿಳೆಯರಿಗಾಗಿ ಈ ರೀತಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಖುಷಿʼʼ ಎಂದರು.

ಇದನ್ನೂ ಓದಿ: Dolly Dhananjay:  ಡಾಲಿ ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ನಾಳೆ ಬಿಡುಗಡೆ

ನಟ ಹಾಗೂ QPL ಮೆಂಟರ್ ಆಗಿರುವ ಪ್ರಮೋದ್ ಶೆಟ್ಟಿ ಮಾತನಾಡಿ, ʻʻಜೂನ್ ತಿಂಗಳಲ್ಲಿ QPL ಪಂದ್ಯಾವಳಿ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಕಲಾವಿದರ ಜತೆಗೆ ಆಂಕರ್ಸ್, ಮಾಡೆಲ್‌ಗೆ ಇಲ್ಲಿ ಕ್ರಿಕೆಟ್ ಆಡಲು ಅವಕಾಶವಿದೆ. ಇವರನ್ನು ನೋಡಿಕೊಂಡು ಹೊಸ ಜನರೇಷನ್ ಕ್ರಿಕೆಟ್ ಆಡಲು ಪ್ರೇರಣೆಯಾಗಲಿ. ಈ ಪಂದ್ಯಾವಳಿ ನಾವು ಮಾಡುತ್ತಿಲ್ಲ.‌ಇದರಿಂದ ಬಂದ ದುಡ್ಡನ್ನು ನನ್ನ ತಂಡ ರಂಗಸೌರಭಕ್ಕೆ‌ ಮೀಸಲು ಇಡಲಾಗುತ್ತದೆ. ಶಾಲಾ ಕಾಲೇಜು ಮಟ್ಟದಿಂದಲೇ ಹಲವು ಪ್ರತಿಭೆಗಳನ್ನು ರಂಗಭೂಮಿಗೆ ಕರೆತಂದು ನಟನೆಯನ್ನು ಕಲಿಸುವ ಕೆಲಸವನ್ನು ರಂಗಸೌರಭ ಮಾಡುತ್ತಿದೆ. ಹೀಗಾಗಿ QPL ನಿಂದ ಬಂದ ಲಾಭವನ್ನು ಇಲ್ಲಿಗೆ ನೀಡಲಾಗುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲು ಹೆಚ್ಚು ನಟಿಮಣಿರು ಹೆಚ್ಚಾಗಿ ಕೈ ಜೋಡಿಸಬೇಕುʼʼ ಎಂದರು.

ನಟಿ ಭವ್ಯಾ ಗೌಡ ಮಾತನಾಡಿ, ʻʻಈ ಕಾನ್ಸೆಪ್ಟ್ ನನ್ನ ಮೈಂಡ್ ನಲ್ಲಿ ತುಂಬಾ ತಿಂಗಳಿನಿಂದ ಇತ್ತು. ಆರ್ ಸಿಬಿ ಹುಡುಗಿರು ಯಾವಾಗ ಕಪ್ ಎತ್ತಿದರೋ ಆಗ ನಮ್ಮ ಜೋಶ್ ಜಾಸ್ತಿಯಾಯ್ತು. ಹೆಣ್ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋದನ್ನು ತೋರಿಸಲು ಶುರು ಮಾಡಿದ್ದೇವೆ. ಈ ಕ್ರಿಕೆಟ್ ಪಂದ್ಯಾವಳಿಯನ್ನೂ ಒಂದೊಳ್ಳೆ ಉದ್ದೇಶ ಇಟ್ಟಿಕೊಂಡು ಮಾಡುತ್ತಿದ್ದೇವೆ. ಹೆಣ್ಮಕ್ಕಳಿಗೆ ಬ್ಯಾಟು ಬಾಲ್ ಹಿಡಿದು ಫೀಲ್ಡ್ ಗೆ ಇಳಿಯುತ್ತಿದ್ದೇವೆ. ಗಂಡು ಮಕ್ಕಳು ಚಿಯರ್ ಅಪ್ ಮಾಡಲು ರೆಡಿಯಾಗಿʼʼ ಎಂದರು.

ಕನ್ನಡ ಸಿನಿಮಾ ಪ್ರೇಮಿಗಳನ್ನು ರಂಜಿಸುವ ಕ್ವೀನ್ಸ್ ಗಳ ಮನರಂಜನೆಗಾಗಿ ಹಾಗೂ ಒಂದೊಳ್ಳೆ ಉದ್ದೇಶ ಇಟ್ಟುಕೊಂಡು ಈ ಪಂದ್ಯಾವಳಿ ನಡೆಸಲಾಗುತ್ತಿದೆ. ರಂಗಪ್ರತಿಭೆಗಳನ್ನು ಸಜ್ಜುಗೊಳಿಸುವ ರಂಗಸೌರಭಕ್ಕೆ QPL ಲಾಭವನ್ನು ನೀಡಲಾಗುತ್ತದೆ.

ʻಕ್ವೀನ್ಸ್‌ ಪ್ರೀಮಿಯರ್ ಲೀಗ್ʼ ಆಯೋಜಕರ ಬಳಗದಲ್ಲಿ ಮಹೇಶ್ ಕುಮಾರ್, ಪ್ರಮೋದ್ ಶೆಟ್ಟಿ, ಭವ್ಯ ಗೌಡ, ಸಾತ್ವಿಕ್, ಸಂತೋಷ್, ಚೇತನ್, ಸಚಿನ್ ಹಾಗೂ ಪ್ರೇಮ್ ಇದ್ದಾರೆ. ಸದ್ಯ QPL ಲೋಗೋ ಲಾಂಚ್ ಕಾರ್ಯಕ್ರಮ ನಡೆದಿದ್ದು, ಮುಂದಿನ ದಿನಗಳಲ್ಲಿ auction, ಜೆರ್ಸಿ ಲಾಂಚ್, ಟ್ರೋಫಿ ಬಿಡುಗಡೆ ಮಾಡಲಾಗುತ್ತದೆ.

Continue Reading
Advertisement
karnataka politics eknath shinde
ಪ್ರಮುಖ ಸುದ್ದಿ18 mins ago

Karnataka Politics: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ? ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಮಹತ್ವದ ಸುಳಿವು!

Vijayapura news Drowned in water
ವಿಜಯಪುರ19 mins ago

Vijayapura News: ನಾಪತ್ತೆಯಾಗಿದ್ದ ಮೂವರು ಮಕ್ಕಳು ಚರಂಡಿ ಶುದ್ಧೀಕರಣ ಕೇಂದ್ರಕ್ಕೆ ಬಿದ್ದು ಸಾವು

Road Accident between Bolero and bike Couple dies on the spot
ಕಲಬುರಗಿ28 mins ago

Road Accident: ಬುಲೇರೋ – ಬೈಕ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಆಳಂದದ ದಂಪತಿ ಸಾವು

Arvind Kejriwal
ದೇಶ38 mins ago

Arvind Kejriwal: ಕೇಜ್ರಿವಾಲ್‌ಗೆ ಮತ್ತೊಂದು ರಿಲೀಫ್‌; ಸಿಎಂ ಸ್ಥಾನ ವಜಾಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ

Assault case Cubbon park
ಬೆಂಗಳೂರು44 mins ago

Cubbon park: ಕಬ್ಬನ್‌ ಪಾರ್ಕ್‌ನಲ್ಲಿ ಯುವಕನನ್ನು ಅಟ್ಟಾಡಿಸಿ ಚಪ್ಪಲಿಯಿಂದ ಹೊಡೆದ ಮಹಿಳೆಯರು!

A Manju and Naveen Gowda
ಕ್ರೈಂ56 mins ago

Prajwal Revanna Case: ಪೆನ್‌ ಡ್ರೈವ್‌ ಹಂಚಿಕೆ ಆರೋಪ ಮಾಡಿದ್ದ ನವೀನ್‌ ಗೌಡ ಮೇಲೆ ಶಾಸಕ ಮಂಜು ದೂರು

Viral Video
ದೇಶ1 hour ago

Viral Video: ಸಾಲಿನಲ್ಲಿ ಬನ್ನಿ ಅಂದಿದ್ದೇ ತಪ್ಪಾಯ್ತಾ? ಮತದಾರನಿಗೆ MLA ಕಪಾಳಮೋಕ್ಷ

POK Explainer in Kannada
ರಾಜಕೀಯ1 hour ago

POK Explainer in Kannada: ಪಾಕ್ ಆಕ್ರಮಿತ ಕಾಶ್ಮೀರ ಕುರಿತ 15 ಕುತೂಹಲಕಾರಿ ಸಂಗತಿಗಳು

Vijay Surya changes his name on mothers day
ಕಿರುತೆರೆ1 hour ago

Vijay Surya: ತಾಯಂದಿರ ದಿನ ತನ್ನ ಹೆಸರನ್ನೇ ಬದಲಿಸಿಕೊಂಡ ʻಅಗ್ನಿಸಾಕ್ಷಿ’ ನಟ! ಹೊಸ ಹೆಸರೇನು?

gold rate today 34
ಚಿನ್ನದ ದರ2 hours ago

Gold Rate Today: ಬಂಗಾರದ ಬೆಲೆಯಲ್ಲಿ ಇಳಿಕೆ; ರಾಜ್ಯ ಮಾರುಕಟ್ಟೆಯಲ್ಲಿ ಚಿನ್ನ- ಬೆಳ್ಳಿ ದರಗಳು ಹೀಗಿವೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ8 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ9 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ20 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ21 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ21 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ1 day ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು2 days ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

ಟ್ರೆಂಡಿಂಗ್‌