Site icon Vistara News

Pavithra Gowda: ದಚ್ಚುನ ಪ್ರೀತಿಯಿಂದ ʻಸುಬ್ಬʼ ಅಂತ ಕರೀತಾ ಇದ್ರಂತೆ ಪವಿತ್ರಾ!

Pavithra Gowda called darshan as subba nickname

ಬೆಂಗಳೂರು: ಈಗಾಗಲೇ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ (Pavithra Gowda) ಹಾಗೂ ದರ್ಶನ್‌ ಇಬ್ಬರೂ (Actor Darshan) ಪರಪ್ಪನ ಅಗ್ರಹಾರದಲ್ಲಿ 14 ದಿನ ನ್ಯಾಯಾಂಗ ಬಂಧನಲ್ಲಿದ್ದಾರೆ. ಇದಕ್ಕೂ ಮುಂಚೆ ಪವಿತ್ರಾ ಗೌಡ ಆಗಾಗ ದರ್ಶನ್‌ ಜತೆಗಿರುವ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇದ್ದರು. ದಚ್ಚು ಪತ್ನಿ ವಿಜಯಲಕ್ಷ್ಮಿ ಜತೆ ಸೋಷಿಯಲ್‌ ಮೀಡಿಯಾ ಮೂಲಕ ವಾರ್‌ ನಡೆಸುತ್ತಿದ್ದರು. ಇದೀಗ ಮತ್ತೆ ಪವಿತ್ರಾ ಹಾಗೂ ದರ್ಶನ್‌ ಅವರ ವೈಯಕ್ತಿಕ ವಿಚಾರ ಹೊರ ಬಿದ್ದಿದೆ. ಪವಿತ್ರಾ ಅವರು ದರ್ಶನ್‌ ಅವರಿಗೆ ಕ್ಯೂಟ್‌ ಆಗಿರುವ ಒಂದು ನಿಕ್‌ನೆಮ್ ಬೇರೆ ಇಟ್ಟಿದ್ದಾರಂತೆ. ಪ್ರೀತಿಯಿಂದ ದಚ್ಚುನನ್ನು ʻಸುಬ್ಬʼ ಎಂದು ಕರೆಯತ್ತಿದ್ದರಂತೆ. ಹಾಗಾದ್ರೆ ಈ ಹೆಸರು ಹೇಗೆ ರಿವೀಲ್‌ ಆಯ್ತು ಎಂಬ ವಿಚಾರ ತಿಳಿದುಕೊಳ್ಳಲು ಮುಂದೆ ಓದಿ!

ಅಭಿಮಾನಿಗಳಿಗೆ ದರ್ಶನ್‌ ʻಡಿ ಬಾಸ್ʼ ಆದ್ರೆ, ಪವಿತ್ರಾಗೆ ʻಸುಬ್ಬʼ ಆಗಿದ್ದರು. ದರ್ಶನ್‌ ಬರ್ತ್‌ಡೇಯ ಹೊಸ ಫೋಟೊವೊಂದು ವೈರಲ್‌ ಆಗುತ್ತಿದೆ. ಅದರಲ್ಲಿ ʻಸುಬ್ಬʼ ಎಂದು ಬರೆದಿದೆ. ಹೀಗಾಗಿ ಪವಿತ್ರಾ ಅವರು ದರ್ಶನ್‌ ಅವರನ್ನು ʻಸುಬ್ಬʼ ಎಂದು ಕರೆಯುತ್ತಿರುವುದು ಕೇಕ್‌ ಮೂಲಕ ರಿವೀಲ್‌ ಆಗಿದೆ. ಈಗಾಗಲೇ ಪವಿತ್ರ ಹಾಗೂ ದರ್ಶನ್ ಆತ್ಮಿಯತೆ ಬಗ್ಗೆ ಹಲವು ಸ್ಟೋರಿಗಳು ಹೊರ ಬಿದ್ದಿವೆ. ಇದೀಗ ಈ ನಿಕ್‌ ನೇಮ್‌ ವೈರಲ್‌ ಆಗುತ್ತಿದ್ದಂತೆ ʻಸುಬ್ಬ ಸುಬ್ಬಿʼ ಅಂದರ್ ಎಂದು ನೆಟ್ಟಿಗರು ಟ್ರೋಲ್‌ ಮಾಡಲು ಶುರು ಮಾಡಿದ್ದಾರೆ.

ಇದನ್ನೂ ಓದಿ: Pavithra Gowda: ಜೈಲಿಗೆ ಪವಿತ್ರಾ ಪೋಷಕರು ಭೇಟಿ; ಕ್ಯಾಮೆರಾ ಕಂಡು ವೈಲೆಂಟ್ ಆದ ಪವಿತ್ರಾ ಗೌಡ ತಮ್ಮ!

ಈ ಪವಿತ್ರಾ ಗೌಡ ಯಾರು?

ಕಾಲೇಜು ದಿನಗಳಲ್ಲೇ ಬಣ್ಣದ ಜಗತ್ತಿನ ಕ್ರೇಜ್‌ ಹತ್ತಿಸಿಕೊಂಡು ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಿಂಚಿದ್ದರು ಪವಿತ್ರಾ. ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಸಿಎ ಪದವಿ ಮುಗಿಸಿ ಮಾಡ್‌ಲಿಂಗ್‌ ಕ್ಷೇತ್ರಕ್ಕೆ ಬಂದರು. ಬೆಂಗಳೂರಿನಲ್ಲಿ ನಡೆದ ಮೂರು ಫ್ಯಾಷನ್ ಶೋಗಳಲ್ಲಿ ಮೂರು ಬಾರಿ ಶೋ ಟಾಪರ್ ಪಟ್ಟ ಗಿಟ್ಟಿಸಿಕೊಂಡವರು ಪವಿತ್ರಾ. ಇವರು ಮೂಲತಃ ಬೆಂಗಳೂರಿನ ಜೆ ಪಿ ನಗರದವರು. ಭೂಗತ ದೊರೆ ಎಂದು ಗುರುತಿಸಿಕೊಂಡಿದ್ದ ಎಂ.ಪಿ ಜಯರಾಜ್ ಮಗ ನಾಯಕನಾಗಿದ್ದ ಸಿನಿಮಾದಲ್ಲಿ ಪವಿತ್ರಾ ನಾಯಕಿಯಾಗಿ ಕಂಗೊಳಿಸಿದ್ದರು. ಇದಾದ ಬಳಿಕ ಕೆಲವು ಸಿನಿಮಾಗಳಲ್ಲಿ ನಾಯಕಿಯಾದರು.

ಜಗ್ಗು ದಾದಾʼಗೆ ಲಿಂಕ್‌ ಆದ ಬೆಡಗಿ!

ʼಜಗ್ಗುದಾದಾʼ ಸಿನಿಮಾ ಮೂಲಕ ದರ್ಶನ್‌ಗೆ ಪರಿಚಯವಾದವರು ಈ ಪವಿತ್ರಾ. ಹೀಗೆ ಶುರುವಾದ ಸ್ನೇಹ ಆ ನಂತರ ಪ್ರೇಮಕ್ಕೆ ತಿರುಗಲು ಹೆಚ್ಚೇನು ಸಮಯ ಬೇಕಾಗಲಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ 2016ರಲ್ಲಿ ʼಜಗ್ಗುದಾದಾʼ ತೆರೆಗೆ ಬಂದ ಬೆನ್ನಲ್ಲಿಯೇ, 2017ರಲ್ಲಿ ʻತಾರಕ್ʼ ಚಿತ್ರದ ಬಿಡುಗಡೆಯ ಸಮಯದಲ್ಲಿ ಪವಿತ್ರಾ ಗೌಡ ತನ್ನ ಪ್ರಿಯಕರ ದರ್ಶನ್ ಜೊತೆ ಅತ್ಯಾಪ್ತವಾದ ಫೋಟೊವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಸಂಜಯ್ ಸಿಂಗ್‌ಗೆ ಡಿವೋರ್ಸ್‌ ಕೊಟ್ಟ ಪವಿತ್ರಾ

ದರ್ಶನ್‌ ಬಲೆಗೆ ಬೀಳುವ ಮುಂಚೆ ಪವಿತ್ರಾ ಅವರು ಸಂಜಯ್ ಸಿಂಗ್ ಎಂಬುವರನ್ನು ಮದುವೆಯಾಗಿದ್ದರು. ಆದರೆ ಈಗ ಸಂಜಯ್‌ ಜತೆ ಪವಿತ್ರಾ ಜತೆಗಿಲ್ಲ. ಡಿವೋರ್ಸ್‌ ಆಗಿದೆ. 12 ವರ್ಷಗಳ ಹಿಂದೆ ಬೆಂಗಳೂರು ತೊರೆದು ಹುಟ್ಟೂರು ಉತ್ತರ ಪ್ರದೇಶದಲ್ಲಿ ಸ್ವಂತ ಶಾಲೆ ನಡೆಸುತ್ತಿದ್ದಾರೆ ಸಂಜಯ್ ಸಿಂಗ್.

Exit mobile version