ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಹಾಗೂ (Pavithra Gowda) ಇನ್ನು ಕೆಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಪವಿತ್ರಾ ಗೌಡಗೆ ವಿಚಾರಣಾಧೀನ ಕೈದಿ ನಂಬರ್‌ವನ್ನು ಜೈಲಾಧಿಕಾರಿಗಳು ನೀಡಿದ್ದಾರೆ. ಪವಿತ್ರಾ ಗೌಡ ವಿಚಾರಣಾಧೀನ(UTP)ಕೈದಿ ನಂಬರ್ 6024 ಆಗಿದೆ. ಪವಿತ್ರಾ ಗೌಡ ಭೇಟಿಗೆ ಅವರ ಪೋಷಕರು ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡು ಪವಿತ್ರಾ ಗೌಡ ತಮ್ಮ ಗರಂ ಆದರು. ಕೊಲೆ ಕೇಸಲ್ಲಿ ಜೈಲು ಸೇರಿರುವ ಅಕ್ಕ ಸೈಲೆಂಟ್ ಆದರೆ ತಮ್ಮ ಫುಲ್ ವೈಲೆಂಟ್ ಆಗಿದ್ದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿಯಾಗಿರುವ ಪವಿತ್ರಾ ಅವರು ಮಹಿಳಾ ವಿಭಾಗದ ಡಿ ಬ್ಯಾರಕ್ ನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಸರಿಯಾಗಿ ಊಟ ಮಾಡದೇ, ರಾತ್ರಿಯಲ್ಲಿ ನಿದ್ರೆ ಕೂಡ ಮಾಡದೆ ಚಡಪಡಿಸುತ್ತಿದ್ದಾರೆ. ಮಧ್ಯಾಹ್ನ ಚಪಾತಿ, ಅನ್ನ ಸಾಂಬಾರ್ ಮಜ್ಜಿಗೆ ಸವಿದಿದ್ದಾರೆ ಪವಿತ್ರಾ ಗೌಡ. ಮಾಹಿತಿ ಪ್ರಕಾರ ಜೈಲಿನಲ್ಲಿ ಪವಿತ್ರಾ ಹೆಚ್ಚು ಯಾರ ಜತೆಗೂ ಮಾತನಾಡದೇ ಮೌನಕ್ಕೆ ಶರಣರಾಗಿದ್ದಾರೆ. ಜೈಲಿನ ಸಿಬ್ಬಂದಿ ಬಳಿಯು ಅಷ್ಟಕ್ಕಷ್ಟೆ ಮಾತಾಡುತ್ತಿದ್ದಾರೆ. ಕೊಟ್ಟ ಊಟವನ್ನು ಕಾಟಾಚಾರಕ್ಕೆ ಸೇವಿಸುತ್ತಿರುವುದಾಗಿ ತಿಳಿದು ಬಂದಿದೆ. ಅರ್ಧಂಬರ್ಧ ಊಟವನ್ನು ಸೇವಿಸಿ ತಟ್ಟೆಯಲ್ಲಿ ಊಟವನ್ನ ಪವಿತ್ರಾ ಹಾಗೆ ಬಿಡುತ್ತಿದ್ದಾರೆ.
ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್ ಡೇಟ್ ಅನೌನ್ಸ್ ಮಾಡಿದ ದುನಿಯಾ ವಿಜಯ್; ಸ್ಟಾರ್ ಹಿರೋ ಸಿನಿಮಾ ಜತೆ ಕ್ಲ್ಯಾಶ್?
ಇನ್ನು ಪರಪ್ಪನ ಅಗ್ರಹಾರಕ್ಕೆ ಪವಿತ್ರಾ ಗೌಡ ಭೇಟಿಗೆ ಪೋಷಕರು ಆಗಮಿಸಿದ್ದರು. ಪವಿತ್ರಾ ಗೌಡ ತಂದೆ, ತಾಯಿ, ತಮ್ಮ ಮತ್ತು ಚಿಕ್ಕಮ್ಮ ಬಂದಿದ್ದರು. ಈ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡು ಪವಿತ್ರಾ ಗೌಡ ತಮ್ಮ ಗರಂ ಆಗಿದ್ದರು. ʻʻನಿಮ್ಗೆ ಮಾಡೋದಿಕ್ಕೆ ಕೆಲ್ಸ ಇಲ್ವಾʼʼ ಎಂದು ಪವಿತ್ರಾ ಗೌಡ ತಮ್ಮ ಧಿಮಾಕು ಬೇರೆ ಹಾಕಿದ್ದಾರೆ. ಕೊಲೆ ಕೇಸ್ ನಲ್ಲಿ ಅಕ್ಕ ಜೈಲು ಸೇರಿದ್ರು ತಮ್ಮನ ಧಿಮಾಕು ಮಾತ್ರ ಇಳಿಯಲಿಲ್ಲ . ಅಕ್ಕನ ಭೇಟಿಗೆ ಹೋಗುವಾಗ ಮಾಧ್ಯಮದವರ ಮೇಲೆ ತಮ್ಮನ ಪೌರುಷ ಪ್ರದರ್ಶನ ಕಂಡು ಬಂತು.
ಹೈಪೈಯಾಗಿ ಲೈಫ್ ಲೀಡ್ ಮಾಡಿದ್ದ ಪವಿತ್ರಾ ಗೌಡ ಜೈಲು ಹಕ್ಕಿಯಾಗಿ ಸೆರೆವಾಸದಲ್ಲಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಎದ್ದಿರುವ ಅವರು ಸಿಬ್ಬಂದಿ ನೀಡಿದ ಕಾಫಿ ಕುಡಿದಿದ್ದಾರೆ. ಮಹಿಳಾ ವಿಭಾಗದ ಕೊಠಡಿಯಲ್ಲಿ ಪವಿತ್ರಾ ಮೌನಕ್ಕೆ ಶರಣಾಗಿದ್ದಾರೆ.ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವ್ ,ರವಿ ಕಾರ್ತಿಕ್ ಜೈಲುಪಾಲಾಗಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಡಿ ಗ್ಯಾಂಗ್ ಒಂದು ದಿನ ಕಾಲ ಕಳೆದಿದೆ.