Site icon Vistara News

Rajkumar Birth Anniversary: ಆತ್ಮಹತ್ಯೆಗೆ ಯತ್ನಿಸಿ ಅಡ್ಮಿಟ್‌ ಆದಾಗ ಅಣ್ಣಾವ್ರು ಆಶೀರ್ವಾದ ಮಾಡಿದ್ದರೆಂದ ಜಗ್ಗೇಶ್‌!

Rajkumar Birth Anniversary ​​Jaggesh said that Rajkumar blessed him when he was admitted due to suicide attempt

ಬೆಂಗಳೂರು: ಡಾ. ರಾಜ್​ಕುಮಾರ್ ಅವರ ಜನ್ಮದಿನ (Rajkumar Birth Anniversary) ಹಿನ್ನೆಲೆಯಲ್ಲಿ ನವರಸ ನಾಯಕ ಜಗ್ಗೇಶ್ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದ್ದಾರೆ. ಡಾ. ರಾಜ್​ಕುಮಾರ್ (Dr Rajkumar) ಹಾಗೂ ಜಗ್ಗೇಶ್ ಕುಟುಂಬದ ನಡುವೆ ಒಳ್ಳೆಯ ಬಾಂಧವ್ಯ ಇದೆ. ಅದೇ ರೀತಿ ಪುನೀತ್‌ ಜತೆಗೂ ಇದೆ. ಈ ಸಂದರ್ಭದಲ್ಲಿ ಜಗ್ಗೇಶ್‌ ಅವರು ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡರು.

‘ತರ್ಲೆ ನನ್ಮಗ’ ಸಿನಿಮಾ ಮೂಲಕ ಜಗ್ಗೇಶ್‌ ಖ್ಯಾತಿ ಗಳಿಸಿದ್ದರು. 1994ರ ಸಮಯದಲ್ಲಿ ಅವರ ಸಿನಿಮಾಗಳು ಫ್ಲಾಪ್ ಆದವು. ಇದರಿಂದ ಬೇಸರಗೊಂಡ ಜಗ್ಗೇಶ್ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು. ಆ ವೇಳೆ ಅವರಿಗೆ ಆತ್ಮಸ್ಥೈರ್ಯ ತುಂಬಿದ್ದು ಅಣ್ಣಾವ್ರು ಎಂದು ಹೇಳಿಕೊಂಡರು.

ಜಗ್ಗೇಶ್‌ ಮಾತನಾಡಿ ʻʻನಮ್ಮ ತಂದೆ ಹಾಗೂ ರಾಜ್ ಕುಮಾರ್ ಅವರ ಮೂಗು ಸೇಮ್ ಇದೆ. ನನಗೆ ರಾಜಣ್ಣ ಅಂದ್ರೆ ಪಂಚ ಪ್ರಾಣ. ನಾನು ಅವರಲ್ಲಿ ಕಂಡಿದ್ದು ಏನಂದ್ರೆ ತಂದೆಯ ವಾತ್ಸಲ್ಯ. ನಾನು ಹೊಸದಾಗಿ ಮನೆ ಕಟ್ಟಿದೀನಿ ಬರ್ಬೇಕು ಅಂದಾಗ, ಸುಮಾರು 11 ಗಂಟೆಗೆ ಬಂದು ಆಶೀರ್ವದಿಸಿದ್ರು. ಮಧ್ಯಾಹ್ನ 3 ಗಂಟೆವರೆಗೂ ಕೂತು ಮಾತನಾಡಿದ್ರು. ಅನೇಕ ನೆನಪುಗಳು, ಒಡನಾಟ ಇವೆʼ ಎಂದರು.

ಇದನ್ನೂ ಓದಿ: Rajkumar Birth Anniversary: ವರನಟ ಡಾ. ರಾಜ್​ಕುಮಾರ್ ಅವರ ಟಾಪ್‌ 10 ಸಿನಿಮಾಗಳಿವು!

ʻʻ94ನೇ ಇಸವಿಯಲ್ಲಿ ನನ್ನ ಸಿನಿಮಾಗಳು ಫ್ಲಾಪ್ ಆದ ಸಮಯದಲ್ಲಿ ನಾನು ಆತ್ಮಹತ್ಯೆ ಪ್ರಯತ್ನ ಮಾಡಿದ್ದೆ. ಮಣಿಪಾಲ್ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ರು. ಅಣ್ಣಾವ್ರು ಬಂದು ತಲೆ ಮೇಲೆ ಕೈ ಇಟ್ಟು ಒಳ್ಳೇದು ಆಗ್ಲಿ ಎಂದು ಆಶೀರ್ವಾದ ಮಾಡಿದ್ದರು. ಯಾವುದೇ ಕಾರಣಕ್ಕೂ ಅತಿಯಾದ ಆಸೆ ಬೇಡ. ಜಗತ್ತನ್ನು ಮೆಚ್ಚಿಸಿ ಬದುಕೋಕೆ ಹೋಗ್ಬಾರ್ದು ಎಂದು ನನಗೆ ದೊಡ್ಡ ಮಾನಸಿಕ ಧೈರ್ಯ ಕೊಟ್ಟಿದ್ದು ರಾಜ್ ಕುಮಾರ್. ಅಣ್ಣಾವ್ರ ಆಶೀರ್ವಾದದಿಂದ ನನ್ನ ಸಿನಿಮಾಗಳು ಹಿಟ್ ಆದವು. ರಾಜ್ ಕುಮಾರ್ ಅವರ ಕಡೆಯ ಜರ್ನಿಯಲ್ಲಿ ನಾನಿದ್ದೆ. ಅವರ ಮೃತದೇಹದ ಜತೆಗೆ ನಾನು ಇಡೀ ದಿನ ಇದ್ದೆʼʼ ಎಂದರು.

ಇದನ್ನೂ ಓದಿ: PM Narendra Modi: “ಅಮೆರಿಕಕ್ಕೆ ಮೋದಿಯಂಥ ನಾಯಕ ಬೇಕು” ಜೆಪಿ ಮೋರ್ಗನ್‌ ಸಂಸ್ಥೆ ಸಿಇಒ ಜೇಮಿ ಶ್ಲಾಘನೆ

ಈಗಾಗಲೇ ದೊಡ್ಮನೆ ಕುಟುಂಬ ರಾಜ್ ಕುಮಾರ್ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಬದುಕಿದ್ದಾಗ ನೇತ್ರದಾನದ ಮೂಲಕ ಜಾಗೃತಿ ಮೂಡಿಸಿದ್ದ ರಾಜ್‌ಕುಮಾರ್‌, ತಮ್ಮ ನಿಧನದ ಬಳಿಕ ಕಣ್ಣುಗಳನ್ನು ದಾನ ಮಾಡಿದ್ದರು. ಈಗ ಪ್ರತಿ ವರ್ಷದಂತೆ, ಸಮಾಧಿ ಬಳಿ ನೇತ್ರದಾನ ನೋಂದಣಿ, ರಕ್ತದಾನ, ಅನ್ನದಾನದ ಕಾರ್ಯಗಳು ನಡೆಯಲಿವೆ. ಪುಣ್ಯಭೂಮಿಗೆ ಬರುವ ಅಭಿಮಾನಿಗಳಿಗೆ ಅಭಿಮಾನಿಗಳಿಂದಲೇ ಅನ್ನದಾನ ನೆರವೇರಲಿದೆ. ಅಷ್ಟೇ ಅಲ್ಲ ಬೆಂಗಳೂರಿನ ಪ್ರತಿ ಗಲ್ಲಿ ಗಲ್ಲಿಗಳಲ್ಲಿರುವ ಡಾ. ರಾಜ್‌ ಪ್ರತಿಮೆಗಳಿಗೂ ಇಂದು ವಿಶೇಷ ಅಲಂಕಾರ ಆಗುತ್ತಿದೆ. ಜತೆಗೆ ಅನ್ನ ಸಂತರ್ಪಣೆಯಂಥ ಕಾರ್ಯಕ್ರಮಗಳು ನಡೆಯಲಿವೆ.

Exit mobile version