Rajkumar Birth Anniversary: ವರನಟ ಡಾ. ರಾಜ್​ಕುಮಾರ್ ಅವರ ಟಾಪ್‌ 10 ಸಿನಿಮಾಗಳಿವು! - Vistara News

ಸಿನಿಮಾ

Rajkumar Birth Anniversary: ವರನಟ ಡಾ. ರಾಜ್​ಕುಮಾರ್ ಅವರ ಟಾಪ್‌ 10 ಸಿನಿಮಾಗಳಿವು!

Rajkumar Birth Anniversary:  ತಾವು ಮಾಡುವ ಪಾತ್ರಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡಬಾರದು ಅನ್ನೋ ಕಾಳಜಿ ರಾಜ್ ಕುಮಾರ್ ಅವರಿಗೆ ಇತ್ತು. ಹೀಗಾಗಿಯೇ ಸಿನಿಮಾಗಳಲ್ಲಿ ರಾಜ್ ಕುಡಿದಿಲ್ಲ, ಸಿಗರೇಟ್ ಸೇದಿಲ್ಲ, ರೇಪ್ ಸೀನ್, ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸಿಲ್ಲ. ಅದಷ್ಟೇ ಸಂಭಾವನೆ ಕೊಟ್ಟರೂ ನಾನು ಇಂತಹ ಪಾತ್ರಗಳಲ್ಲಿ ನಟಿಸಲ್ಲ ಎಂದು ಅವರು ಕಡ್ಡಿ ಮುರಿದಂತೆ ಹೇಳಿದ್ದರು. ಪಾತ್ರಗಳಿಗೆ ಜೀವ ತುಂಬುವ ರಾಜ್ ಅದಕ್ಕಾಗಿ ಕಠಿಣ ನಿಯಮಗಳನ್ನು ಪಾಲಿಸುತ್ತಿದ್ದರು. ‘ಮಂತ್ರಾಲಯ ಮಹಾತ್ಮೆ’ ಸಿನಿಮಾಕ್ಕಾಗಿ ಅವರು ಬಾಡೂಟವನ್ನೇ ಬಿಟ್ಟಿದ್ದರು.

VISTARANEWS.COM


on

Rajkumar Birth Anniversary TOP 10 Movies
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಂದು ದಿವಂಗತ ಡಾ. ರಾಜ್ ಕುಮಾರ್ (Rajkumar Birth Anniversary) ಅವರ ಜಯಂತ್ಯೋತ್ಸವ. ಕನ್ನಡ (Kannada) ಕಲಾರಸಿಕರ ಹೃದಯ ಸಾಮ್ರಾಟ. ಕನ್ನಡಿಗರಿಗೆಲ್ಲರಿಗೂ ಅವರೊಂದು ಶಕ್ತಿ. ಅವರು ಕನ್ನಡ ಭಾಷೆಯ ಅಸ್ಮಿತೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ನಗಿಸಿ, ಅಳಿಸಿ, ಆಲೋಚನೆಗೆ ಹಚ್ಚಿ, ಛಲ ತುಂಬಿ, ಮಾರ್ಗದರ್ಶನ ನೀಡಿದರು. 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅಪ್ರತಿಮ ಸೂಪರ್‌ಸ್ಟಾರ್. 1954ರಲ್ಲಿ ತೆರೆಕಂಡ ‘ಬೇಡರ ಕಣ್ಣಪ್ಪ’ ಚಿತ್ರದಿಂದ ಮುತ್ತುರಾಜ್ ಕನ್ನಡ ಸಿನಿರಸಿಕರಿಗೆ ಪರಿಚಿತರಾದರು. ಇದೀಗ ರಾಜ್‌ ಅವರ ಟಾಪ್‌ 10 ಸಿನಿಮಾಗಳ ಮಾಹಿತಿ ತಿಳಿಯೋಣ.

ಕಸ್ತೂರಿ ನಿವಾಸ (KASTHURI NIVAAS)

ಕಸ್ತೂರಿ ನಿವಾಸ ಕನ್ನಡದ ಕ್ಲಾಸಿಕ್ ಸಿನಿಮಾಗಳಲ್ಲೊಂದು. ರಾಜ್ಯದ ಹಲವಾರು ಚಿತ್ರಮಂದಿರಗಳಲ್ಲಿ ಚಿತ್ರ 175 ದಿನ ಪೂರೈಸಿದರೆ, 16 ಚಿತ್ರಮಂದಿರಗಳಲ್ಲಿ 100 ವಾರ ಪೂರೈಸಿ ದಾಖಲೆಯನ್ನ ಬರೆಯಿತು. ಕಸ್ತೂರಿ ನಿವಾಸ’ ಚಿತ್ರಕ್ಕೆ ಜಿಕೆ ವೆಂಕಟೇಶ್ ಸಂಗೀತ ನೀಡಿದ್ದರು. ವಿಶೇಷ ಅಂದರೆ ಚಿತ್ರದ ಆರಕ್ಕೆ ಆರು ಹಾಡು ಕೂಡ ಸೂಪರ್ ಹಿಟ್. ಚಿತ್ರದಲ್ಲಿನ ‘ಆಡಿಸಿ ನೋಡು ಬೀಳಿಸಿ ನೋಡು’.. ಹಾಡು ಸಂಗೀತ ಪ್ರಿಯರ ಮೇಲೆ ತನ್ನ ಹಿಡಿತ ಸಾಧಿಸಿದೆ ಅಂದರೆ ಎಂತಹವರಿಗೆ ಆದರೂ ಅದು ಅಚ್ಚರಿಯ ಸಂಗತಿಯೇ ಸರಿ. ದೊರೈ-ಭಗವಾನ್ ನಿರ್ದೇಶನ ಈ ಸಿನಿಮಾಗಿದೆ. ಶಿವಾಜಿ ಗಣೇಶನ್ ತಮಿಳಿನಲ್ಲಿ ಚಿತ್ರವನ್ನ ರಿಮೇಕ್ ಮಾಡಿದರು. ಹಿಂದಿಯಲ್ಲಿ ಸಂಜೀವ್ ಕುಮಾರ್ ಡಾ.ರಾಜ್ ಕುಮಾರ್ ಅವರ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನವನ್ನ ಶಾಂದಾರ್ ಚಿತ್ರದಲ್ಲಿ ಮಾಡಿದರು.

ಬಂಗಾರದ ಮನುಷ್ಯ (1972) (Bangarada Manushya)

ಬಂಗಾರದ ಮನುಷ್ಯ T. K. ರಾಮರಾವ್ ಅವರ ಕಾದಂಬರಿಯನ್ನು ಆಧರಿಸಿದ 1972ರ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಶ್ರೀನಿಧಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿದ್ದಲಿಂಗಯ್ಯ ನಿರ್ದೇಶಿಸಿದ್ದರು. ಈ ಮೊದಲು ಸಿದ್ದಲಿಂಗಯ್ಯ ಅವರು ʻಮೇಯರ್ ಮುತ್ತಣ್ಣʼ ಸಿನಿಮಾಗೂ ನಿರ್ದೇಶಿಸಿದ್ದರು. ರಾಜೀವನಾಗಿ ಡಾ ರಾಜ್‌ಕುಮಾರ್, ಲಕ್ಷ್ಮಿಯಾಗಿ ಭಾರತಿ, ರಾಚುತಪ್ಪನಾಗಿ ಬಾಲಕೃಷ್ಣ, ಶರಾವತಿಯಾಗಿ ಆರತಿ, ಗ್ರಾಮದ ಮುಖಂಡನ ಮಗನಾಗಿ ದ್ವಾರಕೀಶ್ ನಟಿಸಿದ್ದರು. ಆರ್.ಲಕ್ಷ್ಮಣ್ ನಿರ್ಮಾಣ ಇದ್ದರೆ, ಜಿ ಕೆ ವೆಂಕಟೇಶ್ ಸಂಗೀತ ನಿರ್ದೇಶಕರಾಗಿದ್ದರು.

ಬರೋಬ್ಬರಿ 2 ವರ್ಷ ಪ್ರದರ್ಶನ ಕಂಡ ಸಿನಿಮಾ ಇದು. ಡಾ. ರಾಜ್‌ಕುಮಾರ್ ಹಾಗೂ ಭಾರತೀ ವಿಷ್ಣುವರ್ಧನ್ ನಟನೆಯ ಈ ಚಿತ್ರ ಬೆಂಗಳೂರಿನ ಸ್ಟೇಟ್ಸ್ ಥಿಯೇಟರ್‌ನಲ್ಲಿ (ಈಗಿನ ಭೂಮಿಕಾ ಥಿಯೇಟರ್) ಎರಡು ವರ್ಷ, ಮೈಸೂರಿನ ಚಾಮುಂಡೇಶ್ವರಿ ಥಿಯೇಟರ್‌ನಲ್ಲಿ 60 ವಾರಗಳ ಕಾಲ ಪ್ರದರ್ಶನಗೊಂಡಿತ್ತು. ಇನ್ನು ಕೆಲವೆಡೆ 1 ವರ್ಷ, ಮತ್ತೆ ಕೆಲವೆಡೆ 25 ವಾರ ಓಡಿತ್ತು.ಪಟ್ಟಣದಿಂದ ಹಳ್ಳಿ ಸೇರಿ ರಾಜೀವ(ಡಾ. ರಾಜ್‌ಕುಮಾರ್) ಬರಡು ಭೂಮಿಯಲ್ಲಿ ಕೃಷಿ ಮಾಡಿ ಗೆಲ್ಲುವ ಕಥೆ ಅನೇಕರಿಗೆ ಸ್ಫೂರ್ತಿಯಾಗಿತ್ತು.ಅಂದಾಜು 13 ಲಕ್ಷ ರೂಪಾಯಿ ಖರ್ಚು ಮಾಡಿ ಸಿನಿಮಾ ನಿರ್ಮಿಸಲಾಗಿತ್ತು. ಆದರೆ ಹಲವು ಪಟ್ಟು ಸಿನಿಮಾ ಲಾಭ ಮಾಡಿತ್ತು. ಬರೋಬ್ಬರಿ 2.5 ಕೋಟಿ ರೂ. ಗಳಿಕೆ ಕಂಡಿತ್ತು ಎನ್ನುವ ಅಂದಾಜಿದೆ. ಇವತ್ತಿನ ಲೆಕ್ಕದಲ್ಲಿ ಕಲೆಕ್ಷನ್ 100 ಕೋಟಿ ರೂ.ಗೂ ಹೆಚ್ಚು ಎನ್ನಬಹುದು.

ಇದನ್ನೂ ಓದಿ: Jai Sriram Slogan: ಜೈ ಶ್ರೀರಾಮ್‌ ಹೇಳಿದ್ದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ; ಇನ್ನೊಂದು ಘಟನೆ

ಗಂಧದಗುಡಿ ( GANDHADA GUDI)

ಕನ್ನಡ ನಾಡಿನ ಹಚ್ಚ ಹಸಿರು, ವನ್ಯಜೀವಿಗಳ ಲೋಕ, ಅರಣ್ಯ ಸಂರಕ್ಷಣೆಯ ಮಹತ್ವವನ್ನು ಸಾರಿದ ಗಂಧದಗುಡಿ 1973ರ ಸೆಪ್ಟಂಬರ್‌ನಲ್ಲಿ ಬಿಡುಗಡೆಯಾಗಿತ್ತು. ಕನ್ನಡ ಚಿತ್ರರಂಗದಲ್ಲಿ ನಟರಾಗಿ ನಂತರ ನಿರ್ಮಾಪಕರಾಗಿ ಬೆಳೆದವರು ಮೈಸೂರಿನವೇ ಆದ ಎಂ.ಪಿ.ಶಂಕರ್‌. ಅವರಿಗೂ ಕಾಡಿನ ಕುರಿತು ಏನಾದರೂ ಸಿನೆಮಾ ಮಾಡಬೇಕು ಎನ್ನುವ ಬಯಕೆ. ಅದಕ್ಕಾಗಿ 1969ರಲ್ಲಿ ಕಾಡಿನ ರಹಸ್ಯ ಎನ್ನುವ ಚಿತ್ರ ಮಾಡಿದ್ದರು. 1972ರಲ್ಲಿಯೇ ಮೈಸೂರು ಜಿಲ್ಲೆಯ ನಾಗರಹೊಳೆ, ಬಂಡೀಪುರ ಪ್ರದೇಶದಲ್ಲಿ ಶೂಟಿಂಗ್‌. ರಾಜಕುಮಾರ್‌ ಜತೆಗೆ ವಿಷ್ಣುವರ್ಧನ್‌ ಕೂಡ ಇದ್ದರು. ದೊಡ್ಡ ತಾರಾಗಣದ ಚಿತ್ರ. ವಿಜಯ್‌ ನಿರ್ದೇಶನ. ಡಿ.ವಿ.ರಾಜಾರಾಂ ಅವರ ಕ್ಯಾಮರಾ. ರಾಜನ್‌ ನಾಗೇಂದ್ರ ಅವರ ಸಂಗೀತವಿದ್ದ ಚಿತ್ರ.

ಭಕ್ತ ಕುಂಬಾರ

ಹುಣಸೂರು ಕೃಷ್ಣಮೂರ್ತಿ ನಿರ್ದೇಶಿಸಿದ 1974 ರ ಕನ್ನಡ ಚಲನಚಿತ್ರವಾಗಿದೆ. ಚಿತ್ರದಲ್ಲಿ ರಾಜಕುಮಾರ್ ಮತ್ತು ಲೀಲಾವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿ ಕೆ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕರ್ನಾಟಕದಲ್ಲಿ ಅದ್ಭುತ ಯಶಸ್ಸಿನ ನಂತರ ಈ ಚಿತ್ರವನ್ನು ನಂತರ ತೆಲುಗಿನಲ್ಲಿ ವಿ. ಮಧುಸೂಧನ್ ರಾವ್ ಅವರು ʻಚಕ್ರಧಾರಿʼ ಎಂದು ಸಿನಿಮಾ ಮಾಡಿದರು. 1977ರಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ನಟಿಸಿದರು.
ಗೋರಾ ಪಾತ್ರದಲ್ಲಿ ಡಾ ರಾಜ್‌ಕುಮಾರ್, ಗೋರ ಪತ್ನಿಯಾಗಿ ಲೀಲಾವತಿ, ಸಂತ ಜ್ಞಾನದೇವನಾಗಿ ರಾಜಶಂಕರ್,
ಗೋರನ ನೆರೆಯವನಾಗಿ ಬಾಲಕೃಷ್ಣ, ಕೃಷ್ಣನಾಗಿ ವಜ್ರಮುನಿ ಪಾತ್ರ ನಿಭಾಯಿಸಿದ್ದರು.
ನಿರ್ದೇಶಕ: ಹುಣಸೂರು ಕೃಷ್ಣಮೂರ್ತಿ
ನಿರ್ಮಾಪಕ: ಲಕ್ಷ್ಮಿ ಫಿಲ್ಮ್ಸ್ ಕಂಬೈನ್ಸ್
ಸಂಗೀತ ನಿರ್ದೇಶಕ: ಜಿ ಕೆ ವೆಂಕಟೇಶ್

ಮಯೂರ (Mayura)

ಮಯೂರ 975 ರ ಕನ್ನಡ ಐತಿಹಾಸಿಕ ನಾಟಕ ಚಲನಚಿತ್ರವಾಗಿದೆ. ಇಂದಿನ ಆಧುನಿಕ ಕರ್ನಾಟಕ ರಾಜ್ಯವನ್ನು ಆಳುವ ಸಾಮ್ರಾಜ್ಯವಾದ ಕದಂಬ ರಾಜವಂಶದ ರಾಜಕುಮಾರ ಮಯೂರಶರ್ಮಾ ಪಾತ್ರವನ್ನು ನಿರ್ವಹಿಸಿದ್ದರು ರಾಜ್‌. ರಾಜ್‌ಕುಮಾರ್ ಅವರ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲಿ ಇದು ಒಂದಾಗಿದೆ. ಈ ಚಿತ್ರವು ಬ್ರಾಹ್ಮಣ ಯುವಕನಾದ ಮಯೂರನ ಜೀವನವನ್ನು ಚಿತ್ರಿಸುತ್ತದೆ. ಮಯೂರನಾಗಿ ರಾಜಕುಮಾರ್, ಪಲ್ಲವರ ಯುವರಾಜನಾಗಿ ಶ್ರೀನಾಥ್, ರಾಜಕುಮಾರ ವಿಷ್ಣುಗೋಪನಾಗಿ ವಜ್ರಮುನಿ ಪಾತ್ರ ನಿಭಾಯಿಸಿದ್ದರು.
ನಿರ್ದೇಶಕ: ವಿಜಯ್
ನಿರ್ಮಾಪಕ: ಟಿ.ಪಿ. ವೇಣುಗೋಪಾಲ್
ಸಂಗೀತ ನಿರ್ದೇಶಕ: ಜಿ ಕೆ ವೆಂಕಟೇಶ್

ಸನಾದಿ ಅಪ್ಪಣ್ಣ (1977) (sanaadi appanna)

ಸನಾದಿ ಅಪ್ಪಣ್ಣ (ಸನಾದಿ ಅಪ್ಪಣ್ಣ) ವಿಜಯ್ ನಿರ್ದೇಶಿಸಿದ 1977ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ಕೃಷ್ಣಮೂರ್ತಿ ಪುರಾಣಿಕ್ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ‘ಸನಾದಿ ಅಪ್ಪಣ್ಣ’ ಚಿತ್ರವು ಕೃಷ್ಣಮೂರ್ತಿ ಪುರಾಣಿಕ್ ಅವರ ‘ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ’ ಕಾದಂಬರಿಯನ್ನು ಆಧರಿಸಿದ್ದು. ಈ ಕಥೆಯ ಹಂದರ ಬಾಗಲಕೋಟೆಯ ಶಹನಾಯಿ ವಾದಕ ಅಪ್ಪಣ್ಣನವರ ಜೀವನ ವೃತ್ತಾಂತವನ್ನು ಒಳಗೊಂಡಿರುವಂತಹುದು. ವಿಜಯ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನವಿದೆ. ಶಹನಾಯಿ ವಾದಕ ಅಪ್ಪಣ್ಣನ ಪಾತ್ರದಲ್ಲಿ ರಾಜಕುಮಾರ್ ಅವರು ತೆರೆಯನ್ನು ಆವರಿಸಿಕೊಂಡರೆ, ಚಿತ್ರದುದ್ದಕ್ಕೂ ಶಹನಾಯಿಯ ವಾದನವನ್ನು ಹಿನ್ನೆಲೆಯಲ್ಲಿ ಮಾಡಿರುವವರು ಬಿಸ್ಮಿಲ್ಲಾ ಖಾನ್.

ಇದನ್ನೂ ಓದಿ: Actor Rajinikanth: ಲೋಕೇಶ್ ಕನಕರಾಜ್-ರಜನಿ ಸಿನಿಮಾಗೆ ಟಾಲಿವುಡ್‌ ಖ್ಯಾತ ನಟ ಭರ್ಜರಿ ಎಂಟ್ರಿ?

ಪಾತ್ರವರ್ಗ ಮತ್ತು ಸಿಬ್ಬಂದಿ:
ಅಪ್ಪಣ್ಣನಾಗಿ ರಾಜ್‌ಕುಮಾರ್, ಬಸಂತಿಯಾಗಿ ಜಯಪ್ರದಾ, ರಾವ್ ಅಪ್ಪಣ್ಣನ ಮಗನಾಗಿ ಅಶೋಕ್, ಅಪಶ್ರುತಿ ಅಯ್ಯಣ್ಣನಾಗಿ ಬಾಲಕೃಷ್ಣ, ಯುವಕ ಅಶೋಕ್ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್
ನಿರ್ದೇಶಕ: ಎಚ್.ಆರ್.ಭಾರ್ಗವ
ನಿರ್ಮಾಪಕ: ದ್ವಾರಕೀಶ್
ಸಂಗೀತ ನಿರ್ದೇಶಕ: ರಾಜನ್-ನಾಗೇಂದ್ರ

ಬಬ್ರುವಾಹನ (Babruvahana )

ಬಬ್ರುವಾಹನ 1977 ರಲ್ಲಿ ಬಿಡುಗಡೆಯಾದ ಪೌರಾಣಿಕ ಕನ್ನಡ ಚಲನಚಿತ್ರ. ಮೇಕಿಂಗ್ ಮತ್ತು ಸಂಗೀತಕ್ಕೆ ಹೆಸರುವಾಸಿಯಾದ ಸಿನಿಮಾ. ರಾಜ್‌ಕುಮಾರ್ ಅವರೇ ಹಾಡಿರುವ ‘ಈ ಸಮಯ ಆನಂದಮಯ’, ‘ಆರಾಧಿಸುವೆ ಮದನಾರಿ’ ಮತ್ತು ‘ಬರಸಿಡಿಲು ಬಡಿದನಾಥೆ’ ನಂತಹ ಕೆಲವು ಹಾಡುಗಳು ಸಖತ್‌ ಹಿಟ್‌ ಕಂಡವು. ಅರ್ಜುನ ಮತ್ತು ಮಗ ಬಬ್ರುವಾಹನ ಪಾತ್ರದಲ್ಲಿ ರಾಜ್‌ಕುಮಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಿ ಸರೋಜಾದೇವಿ ಚಿತ್ರಾಂಗದೆಯಾಗಿ ಕಾಣಿಸಿಕೊಂಡಿದ್ದರು. ಹುಣಸೂರು ಕೃಷ್ಣಮೂರ್ತಿ ಅವರ ನಿರ್ದೇಶನ ಮತ್ತು ಚಿತ್ರಕಥೆಯನ್ನು ಒಳಗೊಂಡಿರುವ ಈ ಚಿತ್ರವನ್ನು ಕೆಸಿಎನ್ ಚಂದ್ರಶೇಖರ್ ನಿರ್ಮಿಸಿದ್ದಾರೆ.

ಪಾತ್ರವರ್ಗ ಮತ್ತು ಸಿಬ್ಬಂದಿ:
ರಾಜಕುಮಾರ್, ಬಿ.ಸರೋಜಾದೇವಿ, ಕಾಂಚನಾ, ಜಯಮಾಲಾ, ವಜ್ರಮುನಿ, ರಾಮಕೃಷ್ಣ, ತೂಗುದೀಪ ಶ್ರೀನಿವಾಸ್.
ನಿರ್ದೇಶಕ: ಹುಣಸೂರು ಕೃಷ್ಣ ಮೂರ್ತಿ
ನಿರ್ಮಾಪಕ: ರಾಜಕಮಲ್ ಆರ್ಟ್ಸ್
ಸಂಗೀತ ನಿರ್ದೇಶಕ: ಟಿ.ಜಿ. ಲಿಂಗಪ್ಪ

ಕವಿರತ್ನ ಕಾಳಿದಾಸ (1983)

ಕವಿರತ್ನ ಕಾಳಿದಾಸ 1983ರ ಕನ್ನಡ ಐತಿಹಾಸಿಕ ಚಲನಚಿತ್ರ. 4 ನೇ ಶತಮಾನದ ಶಾಸ್ತ್ರೀಯ ಸಂಸ್ಕೃತ ಬರಹಗಾರ ಕಾಳಿದಾಸನ ಜೀವನವನ್ನು ಆಧರಿಸಿದೆ. ತ್ತು. ಈ ಚಿತ್ರವನ್ನು ರೇಣುಕಾ ಶರ್ಮಾ ಬರೆದು ನಿರ್ದೇಶಿಸಿದ್ದಾರೆ. ವಿ ಎಸ್ ಗೋವಿಂದ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾಜ್‌ಕುಮಾರ್ ಅವರು ಕಾಳಿದಾಸನ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಜಯಪ್ರದಾ ಅವರು ವಿದ್ಯಾಧರೆಯಾಗಿ ಮತ್ತು ಶ್ರೀನಿವಾಸ ಮೂರ್ತಿ ರಾಜ ಭೋಜ ಪಾತ್ರದಲ್ಲಿ ನಟಿಸಿದ್ದರು. ‘ವಜ್ರೇಶ್ವರಿ ಕಂಬೈನ್ಸ್’ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ವಿತರಿಸಿದ್ದರು.

ಪಾತ್ರವರ್ಗ ಮತ್ತು ಸಿಬ್ಬಂದಿ: ಕಾಳಿದಾಸನಾಗಿ ರಾಜ್‌ಕುಮಾರ್, ವಿಧ್ಯಾಧಾರೆಯಾಗಿ ಜಯಪ್ರದ, ರಾಜ ಭೋಜನಾಗಿ ಶ್ರೀನಿವಾಸ ಮೂರ್ತಿ. ನಿರ್ದೇಶಕರು: ರೇಣುಕಾ ಶರ್ಮಾ ನಿರ್ಮಾಪಕ: ವಿ ಎಸ್ ಗೋವಿಂದ ಸಂಗೀತ ನಿರ್ದೇಶಕ: ಎಂ.ರಂಗರಾವ್

ಜೀವನ ಚೈತ್ರ (1992) (Jeevana Chaitra)

ಜೀವನ ಚೈತ್ರ 1992ರಲ್ಲಿ ಬಿಡುಗಡೆಯಾದ ಸಿನಿಮಾ. ದೊರೈ- ಭಗವಾನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಚಿತ್ರದಲ್ಲಿ ಸಾಮಾಜಿಕ ಕಳಕಳಿಯ ಸಂದೇಶವಿದೆ. ಮದ್ಯಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ ರಾಜ್‌ಕುಮಾರ್ ಅಭಿನಯಿಸಿದ್ದಾರೆ. ಮಾಧವಿ ಈ ಚಿತ್ರದ ನಾಯಕಿ. ಇದು ಒಂದು ರೀತಿಯಲ್ಲಿ ಅಣ್ಣಾವ್ರ ಕಂಬ್ಯಾಕ್‌ ಸಿನಿಮಾವೂ ಆಗಿತ್ತು.ಇದು ಕಾದಂಬರಿ ಆಧರಿತ ಸಿನಿಮಾ. ವಿಶಾಲಾಕ್ಷಿ ದಕ್ಷಿಣಾಮೂರ್ತಿಯವರ ಜೀವನಚೈತ್ರ ಕಾದಂಬರಿಯೇ ಸಿನಿಮಾವಾಗಿತ್ತು.

ಪಾತ್ರವರ್ಗ ಮತ್ತು ಸಿಬ್ಬಂದಿ:
ಡಾ ರಾಜಕುಮಾರ್, ಮಾಧವಿ, ಕೆ.ಎಸ್.ಅಶ್ವಥ್, ಪಂಡರಿ ಬಾಯಿ
ನಿರ್ದೇಶಕ: ದೊರೈ – ಭಗವಾನ್
ನಿರ್ಮಾಪಕಿ: ಪಾರ್ವತಮ್ಮ ರಾಜ್‌ಕುಮಾರ್
ಸಂಗೀತ ನಿರ್ದೇಶಕ: ಉಪೇಂದ್ರ ಕುಮಾರ್

ಆಕಸ್ಮಿಕ (1993) Aakasmika

1993 ರ ಕನ್ನಡ ಆಕ್ಷನ್-ಡ್ರಾಮಾ ಚಲನಚಿತ್ರವಾಗಿದ್ದು, ಇದನ್ನು ನಾಗಾಭರಣ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಾಜಕುಮಾರ್, ಗೀತಾ ಮತ್ತು ಮಾಧವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಂಸಲೇಖ ಸಂಗೀತ ಜತೆಗೆ ಸಾಹಿತ್ಯವನ್ನು ಬರೆದಿದ್ದಾರೆ. ʻಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ಕೇಳಿದರೆ ಎಂಥವರಿಗಾದರೂ ಒಮ್ಮೆ ರೋಮಾಂಚನ ಆಗುತ್ತದೆ. ಈ ಹಾಡಿಗೆ ಇರುವ ತಾಕತ್ತು ಅಂಥದ್ದು. ಹಾಡಿನ ಪ್ರತಿ ಸಾಲುಗಳು ಕನ್ನಡ ನಾಡಿನ ಬಗ್ಗೆ ಇರುವುದು ಒಂದು ವಿಶೇಷವಾದರೆ, ರಾಜ್​ಕುಮಾರ್ ಅವರ ಕಂಠದಲ್ಲಿ ಈ ಸಾಂಗ್ ಮೂಡಿ ಬಂದಿದೆ ಅನ್ನೋದು ಮತ್ತೊಂದು ವಿಶೇಷ. ಈ ಸಿನಿಮಾದ ಹಿಟ್‌ ಸಾಂಗ್‌ ಇದು.

ರಾಜ್​ಕುಮಾರ್ ರಿಯಲ್ ಹೀರೊ

ತಾವು ಮಾಡುವ ಪಾತ್ರಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡಬಾರದು ಅನ್ನೋ ಕಾಳಜಿ ರಾಜ್ ಕುಮಾರ್ ಅವರಿಗೆ ಇತ್ತು. ಹೀಗಾಗಿಯೇ ಸಿನಿಮಾಗಳಲ್ಲಿ ರಾಜ್ ಕುಡಿದಿಲ್ಲ, ಸಿಗರೇಟ್ ಸೇದಿಲ್ಲ, ರೇಪ್ ಸೀನ್, ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸಿಲ್ಲ. ಅದಷ್ಟೇ ಸಂಭಾವನೆ ಕೊಟ್ಟರೂ ನಾನು ಇಂತ ಪಾತ್ರಗಳಲ್ಲಿ ನಟಿಸಲ್ಲ ಎಂದು ಅವರು ಕಡ್ಡಿ ಮುರಿದಂತೆ ಹೇಳಿದ್ದರು. ಪಾತ್ರಗಳಿಗೆ ಜೀವ ತುಂಬುವ ರಾಜ್ ಅದಕ್ಕಾಗಿ ಕಠಿಣ ನಿಯಮಗಳನ್ನು ಪಾಲಿಸುತ್ತಿದ್ದರು. ‘ಮಂತ್ರಾಲಯ ಮಹಾತ್ಮೆ’ ಸಿನಿಮಾಕ್ಕಾಗಿ ಅವರು ಬಾಡೂಟವನ್ನೇ ಬಿಟ್ಟಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸಿನಿಮಾ

Family Drama Film Review: ಹೊಸ ಅನುಭವ ನೀಡುವ ಫ್ಯಾಮಿಲಿ ಡ್ರಾಮಾ

Family Drama Film Review: ಕನ್ನಡಕ್ಕೆ ಇದೊಂದು ವಿಶಿಷ್ಟ ರೀತಿಯಾ ಸಿನಿಮಾ. ಚಿತ್ರದಲ್ಲಿ ಕಾಮಿಡಿ ಇದೆ, ಸಸ್ಪೆನ್ಸ್ ಇದೆ, ಹೊಸತಂಡದ ಹೊಸತನ ಹೊಸದಾಗಿಯೇ ಇದೆ. ಚಿತ್ರ ಎಲ್ಲವರ್ಗದಲ್ಲೂ ಅಚ್ಚುಕಟ್ಟಾಗಿ ರೂಪುಗೊಂಡಿದೆ, ಪ್ರೇಕ್ಷಕರ ಮನರಂಜಿಸುತ್ತದೆ. ವೇಗ ಹೆಚ್ಚಿಸಿ ಮೊದಲಾರ್ಧದ ಡ್ರಾಮಾಗೆ ಕೊಂಚ ಕತ್ತರಿ ಹಾಕಬಹುದಿತ್ತು ಅನಿಸುತ್ತದೆ. ಸೆಮಿ ಸೆಮಿ ಹಾಡು ಸಿಕ್ಕಾಬಟ್ಟೆ ಇಷ್ಟ ಆಗುತ್ತದೆ.

VISTARANEWS.COM


on

Family Drama Film Review
Koo

-ಶಿವರಾಜ್ ಡಿ ಎನ್, ಬೆಂಗಳೂರು
ಫ್ಯಾಮಿಲಿ ಸಮೇತ ಕೂತು ನೋಡಬಹುದಾದಂತ ಡಾರ್ಕ್ ಕಾಮಿಡಿ ಸಿನಿಮಾ ‘ಫ್ಯಾಮಿಲಿ ಡ್ರಾಮಾ’. ದಿ ಯಂಗ್ ಮೈಂಡ್ ಮೂವಿ.. ಸಿನಿಮಾ ಅಂದ್ರೆ ಅಲ್ಲೊಂದು ದೊಡ್ಡ ಸ್ಟಾರ್ ಕಾಸ್ಟ್, ಮಾಸ್ ಡೈಲಾಗ್, ರಗಡ್ ಫೈಟ್, ಮೆಲೋಡಿಯಸ್ ಸಾಂಗ್, ಮಿನಿಮಮ್ ಅಂದ್ರೂ ಒಂದ್ ಇಪ್ಪತ್ತೈದ್ ಮೂವತ್ ಕೋಟಿ ಖರ್ಚಾಗಿರ್ಬೇಕು.. ಸಿನಿಮಾ ಅಂದ್ರೇ ಹಾಗಿರ್ಬೇಕು ಹೀಗಿರ್ಬೇಕು ಎನ್ನುವ ಚೌಕಟ್ಟಿನೊಳಗಿನ ಪ್ರೇಕ್ಷಕರಿಗೆ ಈ ಸಿನಿಮಾ ಕಷ್ಟ ಆಗಬಹುದು.! ಇದೆಲ್ಲದರಾಚೆ ನಿಂತು ನೋಡುವ, ನಮ್ಮ ಕನ್ನಡ ಸಿನಿಮಾಗಳಲ್ಲೀ ಇನ್ನೂ ಏನೋ ಬೇಕು ಎಂದು ಹಾತೊರೆಯುವ ಪ್ರೇಕ್ಷಕರಿಗೆ ಇದೊಂದು ಉತ್ತಮ ಸಿನಿಮಾ (Family Drama Film Review) ಅನ್ನಿಸ ಬಹುದು.

ಅಬ್ಬಬ್ಬಬಬ್ಬಾ.. ಇಂತಹ ಗ್ಯಾಂಗ್ ವಾರ್ ಸಿನಿಮಾ.! ಕನ್ನಡ ಸಿನಿಮಾದಲ್ಲಿ ನಾ ಹಿಂದೆಂದೂ ಕಂಡಿಲ್ಲ, ಗುಂಡಿನ ಚಕಮಕಿಯಲ್ಲಿ ಕಾಣುವ ಗನ್ನುಗಳೇ ಪ್ರೇಕ್ಷಕರನ್ನ ದಂಗಾಗಿಸಬಹುದು.! ಸೀದಾ ವಿಷಯಕ್ಕೆ ಬರೋಣ ಎನ್ನುವುದಾದರೇ ಇದೊಂದು ಗ್ಯಾಂಗ್ ವಾರ್ ಕಥೆಯ ಸಿನಿಮಾ ಅಲ್ಲ. ಗ್ಯಾಂಗ್ ವಾರ್ ಒಂದು ಫ್ಯಾಮಿಲಿಯೊಳಗೆ ಹೇಗೆ ನುಸುಳುತ್ತದೆ, ಆ ಮಿಡಲ್ ಕ್ಲಾಸ್ ಫ್ಯಾಮಿಲಿಯೊಳಗೆ ಏನೆಲ್ಲ ಡ್ರಾಮಾ ನೆಡೆಯುತ್ತದೆ ಎನ್ನುವ ಚಿತ್ರಕಥೆಯ ಡಾರ್ಕ್ ಕಾಮಿಡಿ ಸಿನಿಮಾ.

ಯುವ ಪ್ರೇಮಿಗಳ ರೀತಿ ನೀತಿ, ತಂದೆ ತಾಯಿಯ ಕಾಣದ ಕಾಳಜಿ ಜೊತೆಗೆ ಮಿಡಲ್ ಕ್ಲಾಸ್ ಫ್ಯಾಮಿಲಿಯೊಳಗಿನ ಡ್ರಾಮಾ ಇಷ್ಟವಾಗುತ್ತದೆ. ಈ ಕಾಮಿಡಿಯೊಳಗೂ ಸೀರಿಯಸ್ ವಿಷಯ ಏನಿದೆ ಅಂತ ನೋಡೋದಾದ್ರೆ ಹೊಸಬರಾದರೂ ಕಥಾಹಂದರಕ್ಕೆ ಎಳೆತಂದಿರುವ ವಿಷಯ ಹಾಗೂ ಪ್ರಾಮುಖ್ಯತೆಯನ್ನೆ ಕೊಡದೆ ಅದೂ ಕಾಮನ್ ಗುರು ಎನ್ನುವಂತೆ ತೇಲಿಸಿ ಬಿಟ್ಟಿರುವ ಸೂಕ್ಷ್ಮತೆಯೂ ಶಭಾಸ್ ಎನ್ನಿಸಬಹುದು. ಅದು ಹೇಗೆ ಎಂದರೇ ಹೆಣ್ಣೊಂದು ಧಮ್ ಹೊಡೆಯೋದನ್ನ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುವ ಸಮಾಜದಲ್ಲಿ ಇಲ್ಲೊಂದು ಮಿಡಲ್ ಕ್ಲಾಸ್ ಹುಡುಗಿಯರೂ ಉಫ್ ಅಂತಾ ಹೊಗೆ ಬಿಡುವುದನ್ನ ಸಾಮನ್ಯವೆಂಬಂತೆ ಬಿಟ್ಟಿರುವುದು. ಇಂದಿನ ಹುಡುಗರ ಬಾಯಲ್ಲಿ ಸರ್ವೇ ಸಾಮಾನ್ಯವಾಗಿ ಬರುವ ದುಡ್ಡಿದ್ದರೇ ಮಾತ್ರ ಹುಡುಗಿಯ ನಮ್ಮ ಜೊತೆಗಿರ್ತಾರೆ ಎನ್ನುವ ಲಾಜಿಕ್ ಸ್ಕ್ರಾಚ್ ಮಾಡಿರೋದು ಕೂಡ ಒಳ್ಳೆಯ ವಿಷಯವೆ. ಚಿತ್ರ ಎಲ್ಲವರ್ಗದಲ್ಲೂ ಅಚ್ಚುಕಟ್ಟಾಗಿ ರೂಪುಗೊಂಡಿದೆ, ಪ್ರೇಕ್ಷಕರನ್ನ ಮನರಂಜಿಸುತ್ತದೆ, ವೇಗ ಹೆಚ್ಚಿಸಿ ಮೊದಲಾರ್ದದ ಡ್ರಾಮಾಗೆ ಕೊಂಚ ಕತ್ತರಿ ಹಾಕ ಬಹುದಿತ್ತು ಅನಿಸುತ್ತದೆ. ಸೆಮಿ ಸೆಮಿ ಹಾಡು ಸಿಕ್ಕಾಬಟ್ಟೆ ಇಷ್ಟ ಆಗತ್ತೆ.

ಕೆಲ ದೃಶ್ಯದ ಕಲರ್ ಗ್ರೇಡಿಂಗ್ ವಿಶೇಷವಾಗಿದೆ. ಸಿಂಧೂ ಶ್ರೀನಿವಾಸ ಮೂರ್ತಿ, ಪೂರ್ಣಚಂದ್ರ ಮೈಸೂರು, ಅಭಯ್, ಅನನ್ಯಾ ಅಮರ್, ರೇಖಾ ಕೂಡ್ಲಿಗಿ, ವಿರೀಶ್ ಕೆ ಮಂಜುನಾಥ್, ಮಹದೇವ್ ಹಡಪದ್‌,ಆಶಿತ್, ಸಿರಿ ರವಿಕುಮಾರ್ ಸೇರಿದಂತೆ ಎಲ್ಲ ಕಲಾವಿದರ ಅಭಿನವೂ ಅತ್ಯುತ್ತಮವಾಗಿದೆ. ಅಭಯ ಹಾಗು ಅಮ್ಮನ ಪಾತ್ರ ,ಡಾನ್ ಪ್ರಕಾಶ, ವಿಷ್ಣು ಸೇರಿದಂತೆ ಟೋಬಿ, ಸಿಗರೇಟ್ ಹುಡುಗಿಯರು, ಅನಾಲಿಸಿಸ್ ಮಾಡಿ ಐಡಿಯಾ ಕೊಡುವ ಚೋಟು ಸೇರಿಂದಂತೆ ಚೇತನ್ ಅಮಯ್ಯ್ ಅವರ ವಿಶಿಷ್ಟ ಸಂಗೀತವೂ ಗಮನ ಸೆಳೆಯುತ್ತದೆ. ದಬ್ಬುಗುಡಿ ಮುರಳಿಕೃಷ್ಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು. ಆಕರ್ಶ್ ಹೆಚ್ ಪಿ ಆಕ್ಷನ್ ಕಟ್ ಹೇಳಿದ್ದಾರೆ. ಆಶಿಶ್ ಹುಳಕೊಂಡ್ ಸಂಕಲನ ಹಾಗೂ ಸಿದ್ದಾರ್ಥ್ ಸುನೀಲ್ ಛಾಯಾಗ್ರಹಣವಿದೆ.

ಇದನ್ನೂ ಓದಿ: Family Drama Trailer: ʻಡೇರ್ ಡೆವಿಲ್ ಮುಸ್ತಾಫ’ ತಂಡದಿಂದ ವಿಭಿನ್ನ ಸಿನಿಮಾ!

ಕನ್ನಡಕ್ಕೆ ಇದೊಂದು ವಿಶಿಷ್ಟ ರೀತಿಯಾ ಸಿನಿಮಾ, ಚಿತ್ರದಲ್ಲಿ ಕಾಮಿಡಿ ಇದೆ, ಸಸ್ಪೆನ್ಸ್ ಇದೆ, ಹೊಸತಂಡದ ಹೊಸತನ ಹೊಸದಾಗೆ ಇದೆ, ಅದೇನಿದಿಯಪ್ಪಅಂತ ಹೊಸತು ಅನ್ನೋದನ್ನ ತಪ್ಪದೇ ಚಿತ್ರಮಂದಿರಕ್ಕೆ ಬೇಟಿಕೊಟ್ಟು ನೋಡಿ ಚಿತ್ರ ನಿಮ್ಮನು ರಂಜಿಸೋದು ಖಂಡಿತ.

Continue Reading

ಕರ್ನಾಟಕ

Martin Movie: ವಿಎಫ್‌ಎಕ್ಸ್‌ಗೆ 50 ಲಕ್ಷ ಕಮಿಷನ್‌ ಆರೋಪ; ʻಮಾರ್ಟಿನ್‌ʼ ನಿರ್ದೇಶಕ ಎ.ಪಿ. ಅರ್ಜುನ್‌ಗೆ ಸಂಕಷ್ಟ!

Martin Movie: ಧ್ರುವ ಸರ್ಜಾ ಅಭಿನಯದ ʻಮಾರ್ಟಿನ್‌ʼ ಸಿನಿಮಾ ಶೂಟಿಂಗ್‌ ಆರಂಭವಾಗಿ ಮೂರು ವರ್ಷವಾದರೂ ಮುಗಿಯುವುದು ನಾನಾ ಕಾರಣಕ್ಕೆ ತಡವಾಗುತ್ತಲೇ ಬಂದಿದೆ. ಇದೀಗ ಚಿತ್ರದ ವಿಎಫ್‌ಎಕ್ಸ್‌ಗಾಗಿ ನಿರ್ದೇಶಕ ಎ.ಪಿ. ಅರ್ಜುನ್‌ 50 ಲಕ್ಷ ರೂ. ಕಮಿಷನ್‌ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

VISTARANEWS.COM


on

Martin Movie
Koo

ಬೆಂಗಳೂರು: ಧ್ರುವ ಸರ್ಜಾ (Dhruva Sarja) ಅಭಿನಯದ ʻಮಾರ್ಟಿನ್‌ʼ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ನಡುವೆ ಚಿತ್ರ ನಿರ್ದೇಶಕ ಎ.ಪಿ. ಅರ್ಜುನ್‌ಗೆ ಸಂಕಷ್ಟ ಎದುರಾಗಿದೆ. ಚಿತ್ರದ ವಿಎಫ್‌ಎಕ್ಸ್‌ಗಾಗಿ ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈ. ಲಿಮಿಟೆಡ್ ಕಂಪನಿಗೆ ನಿರ್ಮಾಪಕ ನೀಡಿದ್ದ 2.5 ಕೋಟಿ ರೂ.ಗಳಲ್ಲಿ ನಿರ್ದೇಶಕ ಎ.ಪಿ. ಅರ್ಜುನ್‌ 50 ಲಕ್ಷ ರೂ. ಕಮಿಷನ್‌ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ನಿರ್ದೇಶಕನ ಬಂಧನ ಸಾಧ್ಯತೆ ಇದೆ ಎಂಬ ಮಾತುಗಳು ಚಂದನವನದ ಅಂಗಳದಲ್ಲಿ ಕೇಳಿಬರುತ್ತಿವೆ.

ಅಕ್ಟೋಬರ್ 11ರಂದು 5 ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರಕ್ಕೆ ಧ್ರುವ ಸರ್ಜಾ ಅವರ ಸೋದರ ಮಾವ ಅರ್ಜುನ್‌ ಸರ್ಜಾ ಕತೆ ಕೊಟ್ಟು, ʻಮಾರ್ಟಿನ್‌ʼಗೆ ಬೆಂಬಲವಾಗಿ ನಿಂತಿದ್ದಾರೆ. ನಿರ್ಮಾಪಕ ಉದಯ್‌ ಮೆಹ್ತಾ ಸಾಕಷ್ಟು ಹಣ ಸುರಿದಿದ್ದಾರೆ. ಮೂರು ವರ್ಷವಾದರೂ ಸಿನಿಮಾ ನಾನಾ ಕಾರಣಕ್ಕೆ ತಡವಾಗುತ್ತಲೇ ಬಂತು. ಆ ಕಾರಣಗಳಲ್ಲಿ ಚಿತ್ರದ ವಿಎಫ್‌ಎಕ್ಸ್‌ ಕೆಲಸ ಕೂಡ ಒಂದು. ನಿರ್ಮಾಪಕ ಉದಯ್ ಮೆಹ್ತಾ ನಿರ್ದೇಶಕರ ಸೂಚನೆ ಮೇರೆಗೆ ಈ ಚಿತ್ರದ ವಿಎಫ್ಎಕ್ಸ್​ನ ಜವಾಬ್ಧಾರಿಗಳನ್ನೆಲ್ಲ ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈ. ಲಿಮಿಟೆಡ್ ಸಂಸ್ಥೆಗೆ ವಹಿಸಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ.

ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈ. ಲಿಮಿಟೆಡ್ ನ ಸತ್ಯ ರೆಡ್ಡಿ ಮತ್ತು ಸುನಿಲ್ ಕೇಳಿದಾಗೆಲ್ಲ ನಿರ್ಮಾಪಕ ಉದಯ್ ಮೆಹ್ತಾ ದುಡ್ಡು ಕೊಡುತ್ತಲೇ ಬಂದಿದ್ದರು. ಎರಡೂವರೆ ಕೋಟಿ ಹಣವನ್ನು ಈ ಸತ್ಯ ರೆಡ್ಡಿ ಮತ್ತು ಸುನಿಲ್ ಎಂಬುವರ ಮೇಲೆ ಸುರಿದರೂ ಕೆಲಸ ಮಾತ್ರ ಆಗಲಿಲ್ಲ. ಇತ್ತೀಚೆಗೆ ಹಣದ ವ್ಯವಹಾರದ ದಾಖಲೆ ಸಮೇತ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಮೆಟ್ಟಿಲೇರಿದ್ದ ನಿರ್ಮಾಪಕ ಉದಯ್ ಮೆಹ್ತಾ, ವಂಚಕರಾದ ಸತ್ಯ ರೆಡ್ಡಿ ಮತ್ತು ಸುನಿಲ್ ವಿರುದ್ದ ದೂರು ಸಲ್ಲಿಸಿದ್ದರು. ಆದರೆ, ಇದೀಗ ವಿಚಾರಣೆ ವೇಳೆ ನಿರ್ದೇಶಕ ಅರ್ಜುನ್‌ಗೆ ಕಮಿಷನ್ ನೀಡಿರುವುದಾಗಿ ಆರೋಪಿ ಸುನಿಲ್ ರೆಡ್ಡಿ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Samantha Ruth Prabhu: ಆ.1ಕ್ಕೆ ‘ಸಿಟಾಡೆಲ್’ ಬಿಗ್‌ ಅಪ್‌ಡೇಟ್‌ : ಸಮಂತಾ ಫ್ಯಾನ್ಸ್‌ಗೆ ಸಿಗಲಿದೆ ಗುಡ್‌ ನ್ಯೂಸ್‌!

ಉದಯ್ ಮೆಹ್ತಾ ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಸದ್ಯಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಲೆಮರೆಸಿಕೊಂಡಿದ್ದ ಸತ್ಯ ರೆಡ್ಡಿಯನ್ನು ಬಂಧಿಸಿದ್ದರು. ಆದರೆ, ವಿಎಫ್‌ಎಕ್ಸ್ ಕೆಲಸವನ್ನು ತಮಗೆ ನೀಡಲು ನೀಡಲು ಅರ್ಜುನ್ ನಮ್ಮಿಬ್ಬರಿಂದ 50 ಲಕ್ಷ ರೂ. ಕಮಿಷನ್ ಪಡೆದಿದ್ದಾರೆ ಎಂದು ಸುನಿಲ್ ಆರೋಪಿಸಿದ್ದಾರೆ. ಇನ್ನು ಅಕ್ಟೋಬರ್ 11ಕ್ಕೆ ವಿಶ್ವದಾದ್ಯಂತ ‘ಮಾರ್ಟಿನ್’ ಬಿಡುಗಡೆಗೆ ತಯಾರಿ ನಡೆದಿದ್ದು, ನಟ ಧ್ರುವ ಸರ್ಜಾ ಡಬ್ಬಿಂಗ್ ಮಾಡುವಾಗಲೂ ನಿರ್ದೇಶಕ ಅರ್ಜುನ್ ಗೈರಾಗಿದ್ದರು. ಈ ಹಿಂದೆಯೂ ಮಾರ್ಟಿನ್ ಚಿತ್ರತಂಡದಲ್ಲಿ ಮನಸ್ತಾಪಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ನಿರ್ಮಾಪಕ ಉದಯ್ ಮೆಹ್ತಾ ಹಾಗೂ ನಿರ್ದೇಶಕ ಎ.ಪಿ. ಅರ್ಜುನ್ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ ಎನ್ನಲಾಗಿದೆ.

ದರ್ಶನ್ ನಾಯಕನಾಗಿ ನಟಿಸಿದ ಐರಾವತ ಚಿತ್ರದ ಮೇಕಿಂಗ್ ಸೇರಿ ಅರ್ಜುನ್ ವಿರುದ್ಧ ಈ ಹಿಂದೆ ಇದೇ ರೀತಿಯ ಆರೋಪಗಳು ಕೇಳಿಬಂದಿತ್ತು. ಅರ್ಜುನ್ ಮತ್ತು ನಿರ್ಮಾಪಕ ಸಂದೇಶ್ ನಾಗರಾಜ್ ಮತ್ತು ದರ್ಶನ್ ನಡುವೆ ಭಿನ್ನಾಭಿಪ್ರಾಯದ ವದಂತಿಗಳು ಕೇಳಿಬಂದಿದ್ದವು.

ಇದನ್ನೂ ಓದಿ | Kannada New Movie: “ಪೌಡರ್” ತಂಡದಿಂದ ಹೊರ ಬಿತ್ತು ಹೊಸ ಹಾಡು; “ಪರಪಂಚವೇ ಘಮ ಘಮ”!

ಉದಯ್ ಮೆಹ್ತಾ, 2.5 ಕೋಟಿ ಲಾಸ್ ಆಗಿದ್ದಷ್ಟೇ ಅಲ್ಲದೇ ಸಿನಿಮಾ 6 ತಿಂಗಳಿಗೂ ಹೆಚ್ಚು ಕಾಲ ತಡವಾಗಿದೆ ಎಂದಿದ್ದರು. ಇಷ್ಟಾದರೂ ಇದೀಗ ಸಿನಿಮಾ ಅಕ್ಟೋಬರ್ 11ಕ್ಕೆ ಮಿಂಚಲು ರೆಡಿಯಾಗಿದೆ. ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Continue Reading

ಸ್ಯಾಂಡಲ್ ವುಡ್

Kannada New Movie: “ಪೌಡರ್” ತಂಡದಿಂದ ಹೊರ ಬಿತ್ತು ಹೊಸ ಹಾಡು; “ಪರಪಂಚವೇ ಘಮ ಘಮ”!

Kannada New Movie: ಖ್ಯಾತ ಜನಪದ ಗಾಯಕ, ಬ್ಲಾಕ್ ಬಸ್ಟರ್ ಗೀತೆಗಳಾದ “ಟಗರು ಬಂತು ಟಗರು”, “ಸೂರಿ ಅಣ್ಣಾ” ಖ್ಯಾತಿಯ ಆಂಟೋನಿ ದಾಸನ್ ಈ ಹಾಡಿಗೆ ದನಿಯಾಗಿರುವುದು ವಿಶೇಷ ಸಂಗತಿ. ಮಾಸ್ ಗೀತೆಗಳಿಗೆ ಹೆಸರುವಾಸಿಯಾದ ಆಂಟೋನಿ ಮೊದಲ ಬಾರಿಗೆ “ಪೌಡರ್” ಚಿತ್ರದ ಈ ಲಯ ಪ್ರಧಾನ ಗೀತೆಗೆ ದನಿಯಾಗಿರುವುದು ಸಿನಿ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.

VISTARANEWS.COM


on

Kannada New Movie Parapancha Gama Gama Powder song out
Koo

ಬೆಂಗಳೂರು: ಬಹು ನಿರೀಕ್ಷಿತ ಹಾಸ್ಯ ಚಿತ್ರ “ಪೌಡರ್” (Kannada New Movie) ತನ್ನ ಎರಡನೇ ಗೀತೆಯಾದ “ಪರಪಂಚ ಘಮ ಘಮ” ಅನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದೆ. ಮೊದಲನೇ ಗೀತೆಯಾದ”ಮಿಷನ್ ಘಮ ಘಮ” ತನ್ನ ವಿಭಿನ್ನ ಟ್ಯೂನ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ “ಪರಪಂಚ ಘಮ ಘಮ” ಅದೇ ರೀತಿಯ ಛಾಪನ್ನು ಮೂಡಿಸಲು ಸಜ್ಜಾಗಿದೆ.

ಖ್ಯಾತ ಜನಪದ ಗಾಯಕ, ಬ್ಲಾಕ್ ಬಸ್ಟರ್ ಗೀತೆಗಳಾದ “ಟಗರು ಬಂತು ಟಗರು”, “ಸೂರಿ ಅಣ್ಣಾ” ಖ್ಯಾತಿಯ ಆಂಟೋನಿ ದಾಸನ್ ಈ ಹಾಡಿಗೆ ದನಿಯಾಗಿರುವುದು ವಿಶೇಷ ಸಂಗತಿ. ಮಾಸ್ ಗೀತೆಗಳಿಗೆ ಹೆಸರುವಾಸಿಯಾದ ಆಂಟೋನಿ ಮೊದಲ ಬಾರಿಗೆ “ಪೌಡರ್” ಚಿತ್ರದ ಈ ಲಯ ಪ್ರಧಾನ ಗೀತೆಗೆ ದನಿಯಾಗಿರುವುದು ಸಿನಿ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.

ಪೌಡರ್” ಒಂದು ಹಾಸ್ಯಭರಿತ ಚಿತ್ರವಾಗಿದೆ.ಇಬ್ಬರು ಯುವಕರು ಒಂದು ನಿಗೂಢವಾದ “ಪೌಡರ್” ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ “ಪೌಡರ್”. ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಹುವುದೇ? “ಪೌಡರ್” ಹಿಂದಿನ “ಪವರ್” ಅವರಿಗೆ ತಿಳಿಯುವುದೇ? ಇದುವೇ ಕಥೆಯ ಸಾರಾಂಶ.

ಇದನ್ನೂ ಓದಿ: Kannada New Movie: ʼಜೀನಿಯಸ್ ಮುತ್ತʼನಿಗೆ ಸಾಥ್ ನೀಡಿದ ʼಚಿನ್ನಾರಿ ಮುತ್ತʼ; ಆಗಸ್ಟ್‌ನಲ್ಲಿ ಸಿನಿಮಾ ರಿಲೀಸ್‌

ಜನಾರ್ದನ್ ಚಿಕ್ಕಣ್ಣ ನಿರ್ದೇಶನದ “ಪೌಡರ್” ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿರುತ್ತಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದು, ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ.ಸ್ಟೂಡಿಯೋಸ್‌ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್.ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ. ಈ ಚಿತ್ರವು ಇದೇ ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

Continue Reading

ಸಿನಿಮಾ

Samantha Ruth Prabhu: ಆ.1ಕ್ಕೆ ‘ಸಿಟಾಡೆಲ್’ ಬಿಗ್‌ ಅಪ್‌ಡೇಟ್‌ : ಸಮಂತಾ ಫ್ಯಾನ್ಸ್‌ಗೆ ಸಿಗಲಿದೆ ಗುಡ್‌ ನ್ಯೂಸ್‌!

Samantha Ruth Prabhu: ‘ಸಿಟಾಡೆಲ್: ಹನಿ ಬನ್ನಿ’ ಟ್ರೈಲರ್ ಆಗಸ್ಟ್ 1 ರಂದು ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಮೂಲಗಳ ಪ್ರಕಾರ, ಪ್ರೈಮ್ ವಿಡಿಯೋ ವರುಣ್ ಮತ್ತು ಸಮಂತಾ ‘ಸಿಟಾಡೆಲ್: ಹನಿ ಬನ್ನಿ’ ನ ಪ್ರೀಮಿಯರ್ ದಿನಾಂಕವನ್ನು ಘೋಷಿಸಲಿದ್ದಾರೆ.

VISTARANEWS.COM


on

Samantha Ruth Prabhu Citadel Honey Bunny Varun Dhawan
Koo

ಬೆಂಗಳೂರು: ಟಾಲಿವುಡ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ‘ಸಿಟಾಡೆಲ್: ಹನಿ ಬನಿ’ ಎಂಬ ಹಿಂದಿ ವೆಬ್ ಸೀರಿಸ್​ ಮೂಲಕ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ. ನಿರ್ದೇಶಕ ಜೋಡಿಯಾದ ರಾಜ್ ಮತ್ತು ಡಿಕೆ ಆ್ಯಕ್ಷನ್​ ಕಟ್​ ಹೇಳಿರುವ ಈ ಸರಣಿಯಲ್ಲಿ ಬಾಲಿವುಡ್ ನಟ ವರುಣ್ ಧವನ್ ನಟಿಸಿದ್ದು, ವೆಬ್ ಸರಣಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಆಗಸ್ಟ್‌ 1ರಂದು ಸಿರೀಸ್‌ ಅಪ್‌ಡೇಟ್‌ವನ್ನು ಹಂಚಿಕೊಳ್ಳಲಿದೆ ಚಿತ್ರತಂಡ.

ನಿರ್ದೇಶಕ ರಾಜ್ ಮತ್ತು ಡಿಕೆ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ಹೆಚ್ಚು ಏನನ್ನೂ ಬಹಿರಂಗಪಡಿಸಲಾಗಿಲ್ಲ ಆದರೆ ಇದು ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ. ‘ಸಿಟಾಡೆಲ್: ಹನಿ ಬನ್ನಿ’ ಟ್ರೈಲರ್ ಆಗಸ್ಟ್ 1 ರಂದು ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಮೂಲಗಳ ಪ್ರಕಾರ, ಪ್ರೈಮ್ ವಿಡಿಯೋ ವರುಣ್ ಮತ್ತು ಸಮಂತಾ ‘ಸಿಟಾಡೆಲ್: ಹನಿ ಬನ್ನಿ’ ನ ಪ್ರೀಮಿಯರ್ ದಿನಾಂಕವನ್ನು ಘೋಷಿಸಲಿದ್ದಾರೆ.

‘ಸಿಟಾಡೆಲ್: ಹನಿ ಬನಿ’

ಸಿಟಾಡೆಲ್ (Citadel) ಯೂನಿವರ್ಸ್‌ನ ಭಾರತೀಯ ಅಧ್ಯಾಯದಲ್ಲಿ ವರುಣ್ ಧವನ್ ಹಾಗೂ ಸಮಂತಾ (Samantha Ruth Prabhu) ನಾಯಕ, ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ʻಸಿಟಾಡೆಲ್’ ಇಂಗ್ಲಿಷ್ ವರ್ಷನ್ ಈಗಾಗಲೇ ಅಮೆಜಾನ್ ಪ್ರೈಂನಲ್ಲಿ ಸದ್ದು ಮಾಡುತ್ತಿದ್ದು, ಇದರಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಹಾಗೂ ರಿಚರ್ಡ್ ನಡುವೆ ಕಿಸ್ಸಿಂಗ್ ಹಾಗೂ ಹಾಟ್‌ ದೃಶ್ಯಗಳಿವೆ. ಈಗ ಇದೇ ಟೈಟಲ್‌ ಇಟ್ಟು ಭಾರತದಲ್ಲೂ ವೆಬ್ ಸೀರಿಸ್ ರೆಡಿಯಾಗುತ್ತಿದೆ. ಇದೀಗ ಪ್ರಿಯಾಂಕಾ-ರಿಚರ್ಡ್ ನಡುವಿನ ರೊಮ್ಯಾಂಟಿಕ್ ದೃಶ್ಯಗಳಂತೆ, ಸಮಂತಾ-ವರುಣ್ ಧವನ್ ನಡುವೆ ಇರುತ್ತದೆ ಎಂಬ ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ.

ಬೋಲ್ಡ್‌ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಸಮಂತಾ?

‘ಫ್ಯಾಮಿಲಿ ಮ್ಯಾನ್ 2’ ವೆಬ್‌ ಸೀರಿಸ್‌ನಲ್ಲಿ ಸಮಂತಾ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಫ್ಯಾಮಿಲಿ ಮ್ಯಾನ್‌ ಸಿರೀಸ್‌ ಬರುವ ಸಮಯದಲ್ಲಿ ಸಮಂತಾ ಅವರು ನಾಗಚೈತನ್ಯ ಅವರಿಗೆ ವಿಚ್ಛೇದನ ನೀಡಿರಲಿಲ್ಲ. ಆದರೆ ಸಿರೀಸ್‌ನಲ್ಲಿ ಸಮಂತಾ ನಟಿಸಿರುವ ದೃಶ್ಯಗಳೇ ಇಬ್ಬರನ್ನು ಬೇರೆ ಮಾಡಿದ್ದು ಎನ್ನುವ ಸುದ್ದಿ ವೈರಲ್‌ ಆಗಿತ್ತು. ‘ಫ್ಯಾಮಿಲಿ ಮ್ಯಾನ್ 2’ ಸೀರಿಸ್ ನಿರ್ದೇಶಿಸಿದ್ದ ರಾಜ್ ಮತ್ತು ಡಿಕೆ ‘ಸಿಟಾಡೆಲ್‌’ ಭಾರತೀಯ ವರ್ಷನ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಸೀರಿಸ್‌ನಲ್ಲಿ ಸಮಂತಾ, ಪ್ರಿಯಾಂಕಾ ಚೋಪ್ರಾರಂತೆ ಹಾಟ್‌ ದೃಶ್ಯಗಳನ್ನು ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Kannada New Movie: ʼಜೀನಿಯಸ್ ಮುತ್ತʼನಿಗೆ ಸಾಥ್ ನೀಡಿದ ʼಚಿನ್ನಾರಿ ಮುತ್ತʼ; ಆಗಸ್ಟ್‌ನಲ್ಲಿ ಸಿನಿಮಾ ರಿಲೀಸ್‌

ಇದು ರಿಮೇಕ್ ಅಲ್ಲ

ಸಮಂತಾ ಹಾಗೂ ವರುಣ್ ಧವನ್ ನಡುವೆ ಕಿಸ್ಸಿಂಗ್ ದೃಶ್ಯಗಳು ಇರುತ್ತವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ಸಮಂತಾ ‘ಸಿಟಾಡೆಲ್’ ರಿಮೇಕ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಕಿಸ್ಸಿಂಗ್ ಹಾಗೂ ಬೆಡ್ ರೂಮ್ ದೃಶ್ಯಗಳು ಇರುತ್ತವೆಯೇ? ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಇದೆ.

ಸಮಂತಾ ಮತ್ತು ವರುಣ್ ಅವರಲ್ಲದೆ, ಕೇ ಕೇ ಮೆನನ್, ಸಿಮ್ರಾನ್, ಸೋಹಮ್ ಮಜುಂದಾರ್, ಶಿವಂಕಿತ್ ಪರಿಹಾರ್, ಕಶ್ವಿ ಮಜ್ಮುಂದರ್, ಸಾಕಿಬ್ ಸಲೀಮ್ ಮತ್ತು ಸಿಕಂದರ್ ಖೇರ್ ಸಹ ಈ ಸಿರೀಸ್‌ನಲ್ಲಿ ನಟಿಸಿದ್ದಾರೆ.

Continue Reading
Advertisement
puneeth kerehalli dog meat
ಕ್ರೈಂ10 mins ago

Dog Meat: ನಾಯಿ ಮಾಂಸದ ಗಲಾಟೆ, ಪುನೀತ್‌ ಕೆರೆಹಳ್ಳಿ ಪೊಲೀಸ್‌ ಠಾಣೆಯಲ್ಲೇ ತೀವ್ರ ಅಸ್ವಸ್ಥ

Family Drama Film Review
ಸಿನಿಮಾ23 mins ago

Family Drama Film Review: ಹೊಸ ಅನುಭವ ನೀಡುವ ಫ್ಯಾಮಿಲಿ ಡ್ರಾಮಾ

Michel Phelps ರಾಜಮಾರ್ಗ ಅಂಕಣ
ಅಂಕಣ47 mins ago

ರಾಜಮಾರ್ಗ ಅಂಕಣ: 28 ಒಲಿಂಪಿಕ್ ಪದಕಗಳ ವಿಶ್ವದಾಖಲೆ- ಮೈಕೆಲ್ ಫೆಲ್ಪ್ಸ್

Aadhaar Update
ವಾಣಿಜ್ಯ1 hour ago

Aadhaar Update: ಹೊಸ ನಿಯಮ ಪ್ರಕಾರ ಆಧಾರ್ ವಿಳಾಸ ನವೀಕರಣಕ್ಕೆ ಯಾವ ದಾಖಲೆ ಬಳಸಬಹುದು?

Health Tips Kannada
ಆರೋಗ್ಯ1 hour ago

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Vastu Tips
ಧಾರ್ಮಿಕ2 hours ago

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Remedies For Fatty Liver
ಆರೋಗ್ಯ2 hours ago

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Shravan Month 2024
ಧಾರ್ಮಿಕ2 hours ago

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

karnataka Weather Forecast
ಮಳೆ2 hours ago

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

dina bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರಿಗೆ ಮಾತೇ ಮೃತ್ಯು, ಮೌನಕ್ಕೆ ಶರಣಾಗಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ13 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ14 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ15 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ16 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌