Site icon Vistara News

Sonu Srinivas Gowda: ರೀಲ್ಸ್‌ ರಾಣಿ ಸೋನು ಗೌಡರನ್ನು ರಾಕೇಶ್‌ ಅಡಿಗ ಜೈಲಿನಲ್ಲಿ ಭೇಟಿಯಾಗಿದ್ದೇಕೆ?

Sonu Srinivas Gowda in jail Rakesh Adiga met

ಬೆಂಗಳೂರು: ರಾಯಚೂರು ಮೂಲದ ಬಡ ಕುಟುಂಬಕ್ಕೆ ಸೇರಿದ ಏಳು ವರ್ಷದ ಬಾಲಕಿಯನ್ನು ಅಕ್ರಮವಾಗಿ ದತ್ತು (Illegal Adoption) ಪಡೆದ ಆರೋಪದಲ್ಲಿ ಬಂಧನಕ್ಕೆ ಒಳಗಾದ ʻಬಿಗ್‌ ಬಾಸ್‌ʼ ಖ್ಯಾತಿಯ (Bigg Boss fame) ರೀಲ್ಸ್‌ ರಾಣಿ ಸೋನು ಶ್ರೀನಿವಾಸ ಗೌಡಳನ್ನು (Sonu Srinivas Gowda) ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿದೆ. ಜೈಲು ಸೇರಿರುವ ಸೋನು ಶ್ರೀನಿವಾಸ್ ಗೌಡ ಅವರನ್ನು ನಟ ರಾಕೇಶ್ ಅಡಿಗ (Rakesh Adiga) ಭೇಟಿ ಮಾಡಿ ಧೈರ್ಯ ಹೇಳಿದ್ದಾರೆ. ʻದತ್ತು ವಿಚಾರದಲ್ಲಿ ನಾನು ಸುಳ್ಳು ಹೇಳಿದ್ದೇನೆ. ಅದು ಟ್ರೋಲ್ ಮಾಡುವವರಿಗೆ ಕೌಂಟರ್ ಕೊಡುವ ಉದ್ದೇಶವಾಗಿತ್ತು. ಈಗ ನೋಡಿದರೆ ಇಂತಹ ದೊಡ್ಡ ಶಿಕ್ಷೆʼ ಎಂದು ಸೋನು ಹೇಳಿದ್ದಾರೆ ಎಂದು ರಾಕೇಶ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಬಿಗ್‌ ಬಾಸ್‌ ಸೀಸನ್‌ನಲ್ಲಿ ಸೋನು ಗೌಡ ಅವರಿಗೆ ರಾಕೇಶ್‌ ಮೇಲೆ ಪ್ರೀತಿ ಆಗಿತ್ತು. ರಾಕೇಶ್‌ ಜತೆ ಬಿಗ್‌ ಬಾಸ್‌ ಮನೆಯ ಸದಸ್ಯರಲ್ಲಿ ಯಾರಾದರೂ ಕ್ಲೋಸ್‌ ಆದರೆ ಸೋನು ಗೌಡ ಅಸೂಯೆ ಪಟ್ಟುಕೊಳುತ್ತಿದ್ದರು. ರಾಕೇಶ್‌ ಮತ್ತು ಸೋನು ಗೌಡ ಇಬ್ಬರೂ ಸ್ಮೋಕಿಂಗ್ ಕೋಣೆಯಲ್ಲೂ ಒಟ್ಟಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಆದರೆ ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದಾಗ ಜಸ್ಟ್‌ ಫ್ರೆಂಡ್ಸ್‌ ಎಂದು ಹೇಳಿಕೊಂಡಿದ್ದರು. ಆದರೀಗ ರಾಕೇಶ್‌ ಅವರು ಜೈಲು ಸೇರಿದ ಸೋನು ಗೌಡ ಅವರಿಗೆ ಧೈರ್ಯ ಹೇಳಿ ಬಂದಿದ್ದಾರೆ.

ಏನಿದು ಪ್ರಕರಣ?

ವಿಭಿನ್ನ ವರ್ತನೆ ಮತ್ತು ವಿವಾದಗಳಿಂದಲೇ ಗಮನ ಸೆಳೆದ ಸುಂದರಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾಳೆ (Parappana Agrahara Jail)ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಗಿರುವ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ರಾಯಚೂರಿನ ಮುದ್ದಪ್ಪ ಮತ್ತು ರಾಜೇಶ್ವರಿ ದಂಪತಿಯ ಏಳು ವರ್ಷದ ಮಗುವಿನ ಜತೆ ಮುದ್ದಾಟವಾಡುತ್ತಾ, ರೀಲ್ಸ್‌ ಮಾಡುತ್ತಿದ್ದ ಸೋನು ಬಳಿಕ ಮಗುವನ್ನು ತನಗೇ ಕೊಡಬೇಕು ಎಂದು ಹಠ ಹಿಡಿದಿದ್ದಳಂತೆ. 10 ಲಕ್ಷ ರೂ. ಆಮಿಷವನ್ನೂ ಒಡ್ಡಿದ್ದಳಂತೆ. ಆದರೆ ಮನೆಯವರು ಕೊಟ್ಟಿರಲಿಲ್ಲ. ಆದರೆ, ಕಳೆದ ಮಾ. 1ರಂದು ರಾಯಚೂರಿನ ಮಗುವಿನ ಮನೆಗೆ ಹೋಗಿದ್ದ ಸೋನು ಗೌಡ ಮಲಗಿದ್ದ ಮಗುವನ್ನು ಎತ್ತಿಕೊಂಡು ಬಂದಿದ್ದಳೆನ್ನಲಾಗಿದೆ. ಮಗಳು 15 ದಿನ ನನ್ನ ಬಳಿ ಇರಲಿ. ಬಳಿಕ ಕರೆದುಕೊಂಡು ಬರುತ್ತೇನೆ ಎಂದಿದ್ದಳಂತೆ ಸೋನು. ಅಪ್ಪ ಅಮ್ಮ ಬೇಕು ಎಂದಾಗ ಕರೆದುಕೊಂಡು ಬರುತ್ತೇನೆ. ಮಗಳನ್ನು ನೋಡಬೇಕು ಎನಿಸಿದರೆ ನೀವೂ ಬನ್ನಿ ಎಂದಿದ್ದರು ಹೆತ್ತವರು.

ಇದನ್ನೂ ಓದಿ: Sonu Srinivas Gowda : ಮಗು ದತ್ತು ಪ್ರಕರಣ : ರೀಲ್ಸ್‌ ರಾಣಿ ಸೋನು ಗೌಡ ಪರಪ್ಪನ ಅಗ್ರಹಾರ ಜೈಲಿಗೆ

ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಬಂದ ಬಳಿಕ, ನಾನು ಮಗುವನ್ನು ದತ್ತು ತೆಗೆದುಕೊಂಡಿದ್ದೇನೆ ಎಂದು ಸೋನು ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಳು. ಆದರೆ, ಅವಿವಾಹಿತೆಯಾಗಿರುವ ಆಕೆ ಹೇಗೆ ದತ್ತು ಪಡೆದುಕೊಂಡಳು. ಅದಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಪಾಲನೆ ಮಾಡಲಾಗಿದೆಯಾ ಎಂಬ ಬಗ್ಗೆ ವಿಚಾರಿಸಿದಾಗ ಯಾವುದೇ ಕ್ರಮಗಳ ಪಾಲನೆ ಆಗಿಲ್ಲದಿರುವುದು ಪತ್ತೆಯಾಗಿತ್ತು. ಆಗ ಮಕ್ಕಳ ಕಲ್ಯಾಣ ಸಮಿತಿ ದೂರು ನೀಡಿ ಪ್ರಕರಣ ಬೆಳಕಿಗೆ ಬಂದಿತ್ತು. ಜತೆಗೆ ಮಗುವನ್ನು ದತ್ತು ಪಡೆದ ಬಗ್ಗೆ ಸಾಮಾಜಿಕವಾಗಿ ಹೇಳಿಕೊಳ್ಳುವಂತಿಲ್ಲ ಎಂಬ ನಿಯಮದ ಉಲ್ಲಂಘನೆಯಾಗಿದೆ ಎನ್ನುವುದು ಸಾಬೀತಾಗಿತ್ತು.

ಸೋನು ಗೌಡಳನ್ನು ಬಂಧಿಸಿದ ಪೊಲೀಸರು ರಾಯಚೂರಿನ ಆ ಗ್ರಾಮಕ್ಕೆ ಕರೆದೊಯ್ದು ಮಹಜರು ನಡೆಸಿದ್ದರು. ಈ ವೇಳೆ ಗ್ರಾಮಸ್ಥರು ಆಕೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಕಾರಿಗೆ ಕಲ್ಲು ತೂರಾಟ ಕೂಡಾ ನಡೆಸಿದ್ದರು.

ಹೆತ್ತವರು ಹೇಳುವುದೇನು?

ʼʼಪ್ರೀತಿಯಿಂದ ಕರೆದುಕೊಂಡು ಹೋಗುತ್ತೇನೆ ಎಂದಾಗ ಕಳುಹಿಸಿಕೊಟ್ಟಿದ್ದೇವೆ. ಆಕೆಯನ್ನು ಚೆನ್ನಾಗಿ ಓದಿಸಿ ಅವಳ ಕಾಲ ಮೇಲೆ ಅವಳು ನಿಲ್ಲುವಂತೆ ಮಾಡುತ್ತೇನೆ ಎಂದ ಕಾರಣಕ್ಕೆ ಮಗಳನ್ನು ಕಳುಹಿಸಿ ಕೊಡಲು ಮನೆಯವೆರಲ್ಲ ಸಮ್ಮತಿ ಸೂಚಿಸಿದ್ದರು. ಅದು ಬಿಟ್ಟು ಹಣದ ಆಮಿಷ ತೋರಿಸಿಲ್ಲ ಎನ್ನುವುದು ಬಾಲಕಿಯ ಹೆತ್ತವರ ಹೇಳಿಕೆ.

Exit mobile version