Site icon Vistara News

Rakshit Shetty: ರಕ್ಷಿತ್‌ ಶೆಟ್ಟಿ ವಿಶೇಷ ಮನವಿಗೆ ಪ್ರತಿಕ್ರಿಯೆ ಕೊಟ್ಟ ರಾಮಲಲ್ಲಾ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್!

rakshit shettys request to sculptor arun yogiraj after seeing ayodhya ram lalla

ಬೆಂಗಳೂರು: ಜನವರಿ 22ರಂದು ಲೋಕಾರ್ಪಣೆಗೊಂಡ ಅಯೋಧ್ಯೆ ರಾಮಮಂದಿರಕ್ಕೆ ಬಾಲಿವುಡ್‌ ನಟರು ಸೇರದಂತೆ ಯಶ್‌, ರಿಷಬ್‌ ಅವರಿಗೂ ಆಹ್ವಾನವಿದ್ದಿತ್ತು. ರಿಷಬ್ ಭಾಗಿ ಆಗಿದ್ದರು. ಯಶ್ ಕಾರಣಾಂತರಗಳಿಂದ ಹೋಗಿರಲಿಲ್ಲ. ಆದರೀಗ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ (Rakshit Shetty) ಅವರು ಅಯೋಧ್ಯೆ ರಾಮಲಲ್ಲಾನ ದರ್ಶನ ಮಾಡಿ ಬಂದಿದ್ದಾರೆ. ಜತೆಗೆ ಇನ್‌ಸ್ಟಾದಲ್ಲಿ ಶ್ರೀರಾಮ ಮೂರ್ತಿಯ ದರ್ಶನ ಪಡೆದ ಬಗ್ಗೆ ಬರೆದುಕೊಂಡಿದ್ದಾರೆ. ಮಾತ್ರವಲ್ಲ ವಿಗ್ರಹ ಕೆತ್ತನೆ ಮಾಡಿದ ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್ ಬಳಿ ಸಿಂಪಲ್ ಸ್ಟಾರ್ ವಿಶೇಷ ಮನವಿ ಮಾಡಿದ್ದಾರೆ.

ರಕ್ಷಿತ್‌ ಶೆಟ್ಟಿ ಪೋಸ್ಟ್‌ನಲ್ಲಿ ʻʻಪ್ರಾಣ ಪ್ರತಿಷ್ಠೆಯ ದಿನದಿಂದಲೂ ರಾಮಲಲ್ಲಾನನ್ನು ನೇರವಾಗಿ ನೋಡುವ ಹಂಬಲ. ಅವನ ಕಣ್ಣುಗಳು ಎಷ್ಟು ನೈಜವಾಗಿದೆ ಎಂಬುದನ್ನು ನೋಡಲು ನಾನು ಅನೇಕ ಫೋಟೊಗಳನ್ನು ತುಂಬ ಸಲ ಜೂಮ್ ಮಾಡಿದ್ದೇನೆ. ಇಂದು ನಾನು ಶ್ರೀರಾಮನನ್ನು ದೂರದಿಂದ ನೋಡಿದೆ. ನಾನು ಸುಮಾರು ಅರ್ಧ ಗಂಟೆಯವರೆಗೆ ಅವನ ಮುಂದೆ ಕುಳಿತು ಆರಾಧಿಸಿದೆ. ನನ್ನ ಜೀವನದಲ್ಲಿ ಯಾವ ವಿಗ್ರಹದ ಮುಂದೆಯೂ ಈ ರೀತಿ ಕೂತಿಲ್ಲ. ನಾನು ಸಾಮಾನ್ಯವಾಗಿ ಎಲ್ಲಾ ವಿಗ್ರಹಗಳ ಕೆಲಸವನ್ನು ಮೆಚ್ಚುತ್ತೇನೆ. ಆದರೆ ಇದು ವಿಭಿನ್ನವಾಗಿದೆ. ನಾನು ಅವರ ದೈವಿಕ ಕೆಲಸವನ್ನು ನೋಡಿದಾಗ, ಒಂದು ದಿನ ನಾನು ಅವರನ್ನು ಭೇಟಿ ಮಾಡಲು ಮತ್ತು ನಮ್ಮ ಆರಾಧ್ಯ ರಾಮನನ್ನು ಕೆತ್ತಿದ ಅವರ ಅನುಭವದ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಜೈ ಸಿಯಾ ರಾಮ್, ಜೈ ಶ್ರೀ ರಾಮ್”ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Ram Mandir: ರಾಮಲಲ್ಲಾ ಮೂರ್ತಿ ಕೆತ್ತನೆಗೆ ನನಗೆ ಆಹ್ವಾನವೇ ಇರಲಿಲ್ಲ! ಶಿಲ್ಪಿ ಅರುಣ್‌ ಯೋಗಿರಾಜ್‌ ಮನದಾಳದ ಮಾತು

ಇದಕ್ಕೆ ಪ್ರತಿಕ್ರಿಯಿಸಿರುವ ಶಿಲ್ಲಿ ಅರುಣ್ ಯೋಗಿರಾಜ್ “ಕಲಾವಿದನಿಗೆ ಎಂದಿಗೂ ಮತ್ತೊಬ್ಬ ಕಲಾವಿದನನ್ನು ಭೇಟಿ ಮಾಡುವುದು ಖುಷಿ ತರುವ ಸಂಗತಿ. ನಿಮ್ಮಂತಹ ಸೃಜನಶೀಲ ವ್ಯಕ್ತಿಯನ್ನು ಭೇಟಿ ಮಾಡಿ ಸ್ಫೂರ್ತಿ ಪಡೆದುಕೊಳ್ಳುವ ಅವಕಾಶಕ್ಕಾಗಿ ನಾನು ಕೂಡ ಎದುರು ನೋಡುತ್ತಿದ್ದೇನೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ರಕ್ಷಿತ್‌ ಅವರು ತಮ್ಮ ಪೋಸ್ಟ್‌ನಲ್ಲಿ ʻʻಲಾಕ್‌ಡೌನ್ ಸಮಯದಲ್ಲಿ, 504 ಚಂದ್ರನ ಪರಿಭ್ರಮಣೆಯನ್ನು ಲೆಕ್ಕಹಾಕಿ ಇಟ್ಟಿದ್ದೆ. ಆದರೆ, ದಿನಕಳೆದಂತೆ, ನಾನು ಆ ದಿನಾಂಕವನ್ನು ಸಂಪೂರ್ಣವಾಗಿ ಮರೆತಿದ್ದೆ. ಅದಾದ ಬಳಿಕ ಕಾಕತಾಳೀಯವೆಂಬಂತೆ, ಅದೇ ದಿನ ನಾನು ಕೃಷ್ಣ ಪಕ್ಷ ದಶಮಿಯಂದು ಪ್ರಯಾಗ್‌ರಾಜ್‌ನಲ್ಲಿದ್ದೆ. ವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಾ ಕಾಶಿಗೆ ಭೇಟಿ ನೀಡಿದ್ದೆ. ಮರುದಿನ, ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಉತ್ಸವ ಮೂರ್ತಿಯ ಮುಂದೆ ಕೂತು ನನ್ನ ಭವಿಷ್ಯದ ಪ್ರಾಜೆಕ್ಟ್‌ಗಳ ಬಗ್ಗೆ ಸಂಕಲ್ಪ ಮಾಡಿದೆ. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ಸುಂದರ ಪ್ರವಾಸದಲ್ಲಿ ನನ್ನ ಜೊತೆಗಿದ್ದ ನನ್ನ ಸಹೋದರ ರಂಜಿತ್, ಸೋದರ ಸಂಬಂಧಿ ಶ್ರೀನಿಶ್ ಮತ್ತು ನನ್ನ ಸ್ನೇಹಿತರಾದ ಸಂದೇಶ್ ಅಣ್ಣ ಮತ್ತು ದೇವಿ ಚರಣ್ ಕಾವಾ ಅವರಿಗೂ ಧನ್ಯವಾದಗಳು. ಇದು ನಿಜವಾಗಿಯೂ ವಿಶೇಷ ಕ್ಷಣ. ಜೈ ಆಂಜನೇಯ… ಜೈ ಶ್ರೀ ರಾಮ್” ಎಂದು ಬರೆದುಕೊಂಡಿದ್ದಾರೆ.

Exit mobile version