Rakshit Shetty: ರಕ್ಷಿತ್‌ ಶೆಟ್ಟಿ ವಿಶೇಷ ಮನವಿಗೆ ಪ್ರತಿಕ್ರಿಯೆ ಕೊಟ್ಟ ರಾಮಲಲ್ಲಾ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್! - Vistara News

ಸ್ಯಾಂಡಲ್ ವುಡ್

Rakshit Shetty: ರಕ್ಷಿತ್‌ ಶೆಟ್ಟಿ ವಿಶೇಷ ಮನವಿಗೆ ಪ್ರತಿಕ್ರಿಯೆ ಕೊಟ್ಟ ರಾಮಲಲ್ಲಾ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್!

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ (Rakshit Shetty) ಅವರು ಅಯೋಧ್ಯೆ ರಾಮಲಲ್ಲಾನ ದರ್ಶನ ಮಾಡಿ ಬಂದಿದ್ದಾರೆ. ಜತೆಗೆ ಇನ್‌ಸ್ಟಾದಲ್ಲಿ ಶ್ರೀರಾಮ ಮೂರ್ತಿಯ ದರ್ಶನ ಪಡೆದ ಬಗ್ಗೆ ಬರೆದುಕೊಂಡಿದ್ದಾರೆ. ಮಾತ್ರವಲ್ಲ ವಿಗ್ರಹ ಕೆತ್ತನೆ ಮಾಡಿದ ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್ ಬಳಿ ಸಿಂಪಲ್ ಸ್ಟಾರ್ ವಿಶೇಷ ಮನವಿ ಮಾಡಿದ್ದಾರೆ.

VISTARANEWS.COM


on

rakshit shettys request to sculptor arun yogiraj after seeing ayodhya ram lalla
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಜನವರಿ 22ರಂದು ಲೋಕಾರ್ಪಣೆಗೊಂಡ ಅಯೋಧ್ಯೆ ರಾಮಮಂದಿರಕ್ಕೆ ಬಾಲಿವುಡ್‌ ನಟರು ಸೇರದಂತೆ ಯಶ್‌, ರಿಷಬ್‌ ಅವರಿಗೂ ಆಹ್ವಾನವಿದ್ದಿತ್ತು. ರಿಷಬ್ ಭಾಗಿ ಆಗಿದ್ದರು. ಯಶ್ ಕಾರಣಾಂತರಗಳಿಂದ ಹೋಗಿರಲಿಲ್ಲ. ಆದರೀಗ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ (Rakshit Shetty) ಅವರು ಅಯೋಧ್ಯೆ ರಾಮಲಲ್ಲಾನ ದರ್ಶನ ಮಾಡಿ ಬಂದಿದ್ದಾರೆ. ಜತೆಗೆ ಇನ್‌ಸ್ಟಾದಲ್ಲಿ ಶ್ರೀರಾಮ ಮೂರ್ತಿಯ ದರ್ಶನ ಪಡೆದ ಬಗ್ಗೆ ಬರೆದುಕೊಂಡಿದ್ದಾರೆ. ಮಾತ್ರವಲ್ಲ ವಿಗ್ರಹ ಕೆತ್ತನೆ ಮಾಡಿದ ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್ ಬಳಿ ಸಿಂಪಲ್ ಸ್ಟಾರ್ ವಿಶೇಷ ಮನವಿ ಮಾಡಿದ್ದಾರೆ.

ರಕ್ಷಿತ್‌ ಶೆಟ್ಟಿ ಪೋಸ್ಟ್‌ನಲ್ಲಿ ʻʻಪ್ರಾಣ ಪ್ರತಿಷ್ಠೆಯ ದಿನದಿಂದಲೂ ರಾಮಲಲ್ಲಾನನ್ನು ನೇರವಾಗಿ ನೋಡುವ ಹಂಬಲ. ಅವನ ಕಣ್ಣುಗಳು ಎಷ್ಟು ನೈಜವಾಗಿದೆ ಎಂಬುದನ್ನು ನೋಡಲು ನಾನು ಅನೇಕ ಫೋಟೊಗಳನ್ನು ತುಂಬ ಸಲ ಜೂಮ್ ಮಾಡಿದ್ದೇನೆ. ಇಂದು ನಾನು ಶ್ರೀರಾಮನನ್ನು ದೂರದಿಂದ ನೋಡಿದೆ. ನಾನು ಸುಮಾರು ಅರ್ಧ ಗಂಟೆಯವರೆಗೆ ಅವನ ಮುಂದೆ ಕುಳಿತು ಆರಾಧಿಸಿದೆ. ನನ್ನ ಜೀವನದಲ್ಲಿ ಯಾವ ವಿಗ್ರಹದ ಮುಂದೆಯೂ ಈ ರೀತಿ ಕೂತಿಲ್ಲ. ನಾನು ಸಾಮಾನ್ಯವಾಗಿ ಎಲ್ಲಾ ವಿಗ್ರಹಗಳ ಕೆಲಸವನ್ನು ಮೆಚ್ಚುತ್ತೇನೆ. ಆದರೆ ಇದು ವಿಭಿನ್ನವಾಗಿದೆ. ನಾನು ಅವರ ದೈವಿಕ ಕೆಲಸವನ್ನು ನೋಡಿದಾಗ, ಒಂದು ದಿನ ನಾನು ಅವರನ್ನು ಭೇಟಿ ಮಾಡಲು ಮತ್ತು ನಮ್ಮ ಆರಾಧ್ಯ ರಾಮನನ್ನು ಕೆತ್ತಿದ ಅವರ ಅನುಭವದ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಜೈ ಸಿಯಾ ರಾಮ್, ಜೈ ಶ್ರೀ ರಾಮ್”ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Ram Mandir: ರಾಮಲಲ್ಲಾ ಮೂರ್ತಿ ಕೆತ್ತನೆಗೆ ನನಗೆ ಆಹ್ವಾನವೇ ಇರಲಿಲ್ಲ! ಶಿಲ್ಪಿ ಅರುಣ್‌ ಯೋಗಿರಾಜ್‌ ಮನದಾಳದ ಮಾತು

ಇದಕ್ಕೆ ಪ್ರತಿಕ್ರಿಯಿಸಿರುವ ಶಿಲ್ಲಿ ಅರುಣ್ ಯೋಗಿರಾಜ್ “ಕಲಾವಿದನಿಗೆ ಎಂದಿಗೂ ಮತ್ತೊಬ್ಬ ಕಲಾವಿದನನ್ನು ಭೇಟಿ ಮಾಡುವುದು ಖುಷಿ ತರುವ ಸಂಗತಿ. ನಿಮ್ಮಂತಹ ಸೃಜನಶೀಲ ವ್ಯಕ್ತಿಯನ್ನು ಭೇಟಿ ಮಾಡಿ ಸ್ಫೂರ್ತಿ ಪಡೆದುಕೊಳ್ಳುವ ಅವಕಾಶಕ್ಕಾಗಿ ನಾನು ಕೂಡ ಎದುರು ನೋಡುತ್ತಿದ್ದೇನೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ರಕ್ಷಿತ್‌ ಅವರು ತಮ್ಮ ಪೋಸ್ಟ್‌ನಲ್ಲಿ ʻʻಲಾಕ್‌ಡೌನ್ ಸಮಯದಲ್ಲಿ, 504 ಚಂದ್ರನ ಪರಿಭ್ರಮಣೆಯನ್ನು ಲೆಕ್ಕಹಾಕಿ ಇಟ್ಟಿದ್ದೆ. ಆದರೆ, ದಿನಕಳೆದಂತೆ, ನಾನು ಆ ದಿನಾಂಕವನ್ನು ಸಂಪೂರ್ಣವಾಗಿ ಮರೆತಿದ್ದೆ. ಅದಾದ ಬಳಿಕ ಕಾಕತಾಳೀಯವೆಂಬಂತೆ, ಅದೇ ದಿನ ನಾನು ಕೃಷ್ಣ ಪಕ್ಷ ದಶಮಿಯಂದು ಪ್ರಯಾಗ್‌ರಾಜ್‌ನಲ್ಲಿದ್ದೆ. ವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಾ ಕಾಶಿಗೆ ಭೇಟಿ ನೀಡಿದ್ದೆ. ಮರುದಿನ, ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಉತ್ಸವ ಮೂರ್ತಿಯ ಮುಂದೆ ಕೂತು ನನ್ನ ಭವಿಷ್ಯದ ಪ್ರಾಜೆಕ್ಟ್‌ಗಳ ಬಗ್ಗೆ ಸಂಕಲ್ಪ ಮಾಡಿದೆ. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ಸುಂದರ ಪ್ರವಾಸದಲ್ಲಿ ನನ್ನ ಜೊತೆಗಿದ್ದ ನನ್ನ ಸಹೋದರ ರಂಜಿತ್, ಸೋದರ ಸಂಬಂಧಿ ಶ್ರೀನಿಶ್ ಮತ್ತು ನನ್ನ ಸ್ನೇಹಿತರಾದ ಸಂದೇಶ್ ಅಣ್ಣ ಮತ್ತು ದೇವಿ ಚರಣ್ ಕಾವಾ ಅವರಿಗೂ ಧನ್ಯವಾದಗಳು. ಇದು ನಿಜವಾಗಿಯೂ ವಿಶೇಷ ಕ್ಷಣ. ಜೈ ಆಂಜನೇಯ… ಜೈ ಶ್ರೀ ರಾಮ್” ಎಂದು ಬರೆದುಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Kannada New Movie: ‘ಚಿಲ್ಲಿ ಚಿಕನ್​’ ಟ್ರೈಲರ್‌ ಔಟ್‌; ಚೈನೀಸ್ ಹೋಟೆಲ್ ಹುಡುಗರ ಸ್ಟೋರಿ!

Kannada New Movie: ಇದೇ ಸಂದರ್ಭದಲ್ಲಿ ಚಿತ್ರದ ನಾಯಕಿ ರಿನಿ, ಮಣಿಪುರ ನಟ ಬಿಜು ತಾಂಜಿಂ, ಆಸಾಂ ಕಲಾವಿದ ಹಿರಾಕ್ ಸೋನಾವಾಲ್, ಉತ್ತರಕಾಂಡದ ನಟ ಜಿಂಪಾ ಭುಟಿಯಾ, ನಿರ್ಮಾಪಕ ದೀಪ್ ಭೀಮಾಜಿಹಾನಿ ತಮ್ಮ ಅನುಭವ ಹಂಚಿಕೊಂಡರು. ಅಂದಂಗೆ ಈಗಾಗಲೇ ಈ ಚಿತ್ರವನ್ನು ನೋಡಿದ ನಟ ರಮೇಶ್‌ ಅರವಿಂದ್, ಹೇಮಂತ್ ರಾವ್ ಹಾಗೂ ಬೇರೆ ಭಾಷೆಯ ಪ್ರಮುಖರು ಮೆಚ್ಚಿದ್ದಾರೆ. ಈ ತಂಡ ಬೆಂಗಳೂರಿನಲ್ಲಿ ಒಡೆದು ಹಾಕಿರುವ ಕಾವೇರಿ ಥಿಯೇಟರ್ ಬಗ್ಗೆ ಸಾಂಗ್ ಮಾಡಿ ಅದನ್ನು ಟ್ರಿಬ್ಯೂಟ್ ಕೊಡುತ್ತಿದೆ.

VISTARANEWS.COM


on

Kannada New Movie Chilli Chicken Official Trailer
Koo

ಬೆಂಗಳೂರು: ಹೋಟೆಲ್ ಕೆಲಸ ಮಾಡುವ (Kannada New Movie) ಐವರು ಹುಡುಗರ ಸುತ್ತ ನಡೆಯುವ ಕಥೆ ಇಟ್ಟುಕೊಂಡು ಪ್ರತೀಕ್ ಪ್ರಜೋಷ್ ಅವರು ನಿರ್ದೇಶಿಸಿರುವ ಚಿತ್ರ `ಚಿಲ್ಲಿ ಚಿಕನ್’. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ನಡೆಯಿತು.

ಬೆಂಗಳೂರಿನ ಹೋಟೆಲೊಂದರಲ್ಲಿ ದುಡಿಯುತ್ತಾ ಚೈನೀಸ್ ರೆಸ್ಟೋರೆಂಟ್ ಒಂದನ್ನು ಪ್ರಾರಂಭಿಸಬೇಕೆಂಬ ಕನಸು ಕಾಣುವ ಈ ಹುಡುಗರ ಕನಸಿಗೆ ಏನೆಲ್ಲಾ ಅಡೆ ತಡೆಗಳು ಬರುತ್ತವೆ ಎಂಬುದೇ ಒನ್ ಲೈನ್ ಕಥೆ. ಇದು ಬೆಂಗಳೂರಿನಲ್ಲಿ ನಡೆದ ನೈಜ ಘಟಕ ಆಧಾರಿತ ಸಿನಿಮಾ ಎಂಬುದು ವಿಶೇಷ. ಕಳೆದ ತಿಂಗಳು ಟೀಸರ್ ಬಿಡುಗಡೆ ಮಾಡಿದ್ದ ಈ ಚಿತ್ರತಂಡ ಇದೀಗ ಟ್ರೈಲರ್‌ ಹೊರತಂದಿದೆ. ಈ ಚಿತ್ರದ ಕಥೆ ಹುಟ್ಟಿರುವುದೇ ವಿಶೇಷವಾದ ಸ್ಥಳದಲ್ಲಿ.

ಹೌದು ರೆಸ್ಟೋರೆಂಟ್‌ವೊಂದರಲ್ಲಿ ಕುಳಿತಾಗ ಸಂಗೀತ ನಿರ್ದೇಶಕ ಸಿದ್ಧಾಂತ ಸುಂದರ್ ಅವರಿಗೆ ಈ ಕಾನ್ಸೆಪ್ಟ್ ಹೊಳೆದಿದೆ. ಅದನ್ನು ನಿರ್ದೇಶಕ ಪ್ರತೀಕ್ ಪ್ರಜೋಶ್ ಅವರಿಗೆ ಹೇಳುತ್ತಾರೆ. ಅವರು ಆ ಒಂದು ಲೈನ್ ಕಥೆಯ ಮೇಲೆ ಸಾಕಷ್ಟು ವರ್ಕ್ ಮಾಡಿ ಈಗ ಸಿನಿಮಾ ಮಾಡಿ ಬಿಡುಗಡೆಗೆ ಸಿದ್ದಗೊಳಿಸಿದ್ದಾರೆ.

ಸಿದ್ಧಾಂತ ಸುಂದರ್ ಮಾತನಾಡಿ ʻʻನೈಜ ಘಟನೆಯನ್ನು ಕಥೆ ಮಾಡಿ ಸಿನಿಮಾ ಮಾಡೋದು ಸುಲಭವಲ್ಲ. ಚಿತ್ರ ಚೆನ್ನಾಗಿ ಬಂದಿದೆ.‌ ಚಿತ್ರದಲ್ಲಿ 5 ಹಾಡುಗಳಿದ್ದು ಅವುಗಳಿಗೆ ಮಾರ್ಟಿನ್ ಯೋ ಸಾಹಿತ್ಯ ಬರೆದಿದ್ದಾರೆ. ಇದರಲ್ಲಿ ಒಳ್ಳೇ ಕಥೆ, ಜತೆಗೆ ಮನರಂಜನೆ ಎಲ್ಲಾ ಇದೆʼʼ ಎಂದು ಹೇಳಿದರು.

ನಿರ್ದೇಶಕ ಪ್ರತೀಕ್ ಪ್ರಜೋಶ್. ಮಾತನಾಡಿ ʻʻಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸದ್ಯದಲ್ಲೇ ರಿಲೀಸಾಗಲಿದೆ. ನಿಮ್ಮಗಳ ಸಹಕಾರವಿರಲಿ ಎಂದಷ್ಟೇ ಹೇಳಿದರು. ಈ ಚಿತ್ರದ ನಾಯಕನಾಗಿ ಬಿ.ವಿ. ಶೃಂಗಾ ಅಭಿನಯಿಸಿದ್ದು, ಪಾತ್ರದ ಬಗ್ಗೆ ಮಾಹಿತಿ ನೀಡುವ ಅವರು ‘ನಾವೆಲ್ಲಾ ಇಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದು, ನಿಮ್ಮಗಳ ಸಹಕಾರ ಬೇಕು. ನಾನಿಲ್ಲಿ ರೆಸ್ಟೋರೆಂಟ್ ಮಾಲಿಕನ ಪಾತ್ರ ಮಾಡಿದ್ದೇನೆ. ಕಥೆ ಕೇಳಿದಾಗ ಇಂದಿನ ಜನರೇಷನ್ ಗೆ ಹೇಳಬೇಕಾದ ವಿಷಯವಿದೆ ಅನಿಸಿತು. ಇದರಲ್ಲಿ ಹ್ಯೂಮರ್, ಫ್ಯಾಮಿಲಿ ಡ್ರಾಮಾವನ್ನು ನಿರ್ದೇಶಕರು ಚನ್ನಾಗಿ ಬಳಸಿದ್ದಾರೆ. ನಂದಿಲ್ಲಿ ಮಿಡ್ಲ್ ಕ್ಲಾಸ್ ಕುಟುಂಬದಿಂದ ಬಂದು, ಚೈನೀಸ್ ರೆಸ್ಟೋರೆಂಟ್ ಮಾಡುವ ಆಸೆಯಿಂದ ಹೇಗೆಲ್ಲಾ ಅಲೆದಾಡುತ್ತಾನೆ ಎಂಬುದನ್ನು ನೋಡಬಹುದು’ʼ ಎಂದರು.

ಇದನ್ನೂ ಓದಿ: Kannada New Movie: ʻರಮೇಶ್ ಸುರೇಶ್‌ʼ ಸಿನಿಮಾದಲ್ಲಿ ಇಬ್ಬರು ನಿರ್ದೇಶಕರು, ಇಬ್ಬರು ನಾಯಕರು ; ಜೂನ್ 21ರಂದು ತೆರೆಗೆ!

ನಟಿ ನಿತ್ಯಶ್ರೀ ಮಾತನಾಡಿ ʻʻನನಗೆ ಕನ್ನಡದಲ್ಲಿ ಇದು 2ನೇ ಸಿನಿಮಾ. ತಮಿಳು, ತೆಲಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಒಂದಿಷ್ಟು ಸಿನಿಮಾ ಮಾಡಿದ್ದೇನೆ. ಚಿತ್ರಕ್ಕೆ ತಂಡದ ಶ್ರಮ ತುಂಬಾ ಇದ್ದು ಎಲ್ಲಾ ಕಲಾವಿದರು ಭಾಷೆ ಕಲೆತು ಅಭಿನಯ ಮಾಡುವ ಜೊತೆಗೆ ಡಬ್ಬಿಂಗ್ ಕೂಡ ಮಾಡಿದ್ದಾರೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚಿತ್ರದ ನಾಯಕಿ ರಿನಿ, ಮಣಿಪುರ ನಟ ಬಿಜು ತಾಂಜಿಂ, ಆಸಾಂ ಕಲಾವಿದ ಹಿರಾಕ್ ಸೋನಾವಾಲ್, ಉತ್ತರಕಾಂಡದ ನಟ ಜಿಂಪಾ ಭುಟಿಯಾ, ನಿರ್ಮಾಪಕ ದೀಪ್ ಭೀಮಾಜಿಹಾನಿ ತಮ್ಮ ಅನುಭವ ಹಂಚಿಕೊಂಡರು. ಅಂದಂಗೆ ಈಗಾಗಲೇ ಈ ಚಿತ್ರವನ್ನು ನೋಡಿದ ನಟ ರಮೇಶ್‌ ಅರವಿಂದ್, ಹೇಮಂತ್ ರಾವ್ ಹಾಗೂ ಬೇರೆ ಭಾಷೆಯ ಪ್ರಮುಖರು ಮೆಚ್ಚಿದ್ದಾರೆ. ಈ ತಂಡ ಬೆಂಗಳೂರಿನಲ್ಲಿ ಒಡೆದು ಹಾಕಿರುವ ಕಾವೇರಿ ಥಿಯೇಟರ್ ಬಗ್ಗೆ ಸಾಂಗ್ ಮಾಡಿ ಅದನ್ನು ಟ್ರಿಬ್ಯೂಟ್ ಕೊಡುತ್ತಿದೆ. ಈ ಗೀತೆಗೆ ಪತ್ರಕರ್ತ ಶ್ರೀಧರ್ ಶಿವಮೊಗ್ಗ ಸಾಹಿತ್ಯ ಬರೆದಿದ್ದಾರೆ.

Continue Reading

ಸ್ಯಾಂಡಲ್ ವುಡ್

Niveditha Gowda: ದುಡ್ಡಿನ ಹಿಂದೆ ಹೋದವರು ಯಾರಂತ ಗೊತ್ತಾಗುತ್ತೆ; ಚಂದನ್‌ಗೆ ನಮ್ಮ ಸಪೋರ್ಟ್‌ ಎಂದ ಪ್ರಶಾಂತ್‌ ಸಂಬರಗಿ!

Niveditha Gowda: ನಟಿ ನಿವೇದಿತಾ ಗೌಡ (Niveditha Gowda) ಹಾಗೂ ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಆಗಾಗ ತಮ್ಮ ಪೋಸ್ಟ್‌ ಹಾಗೂ ರೀಲ್ಸ್‌ ಮೂಲಕ ಸುದ್ದಿಯಾಗುತ್ತಲೇ ಇರುತ್ತಿದ್ದರು. ಹಿಂದೊಮ್ಮೆ ಅಂಡರ್​ ವಾಟರ್​ ಶೂಟ್​ ಮಾಡಿರುವ ಜೋಡಿ ಲಿಪ್‌ ಕಿಸ್‌ ಮಾಡಿದ ರೊಮ್ಯಾಂಟಿಕ್​ ವಿಡಿಯೊ ಶೇರ್‌ ಮಾಡಿಕೊಂಡಿತ್ತು. ಸಾವಿರಾರು ಜನರು ಲೈಕ್​ ಮಾಡಿದ್ದರು. ಕೆಲವರು ಈ ವಿಡಿಯೊಗೆ ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ನೆಗೆಟಿವ್​ ಕಮೆಂಟ್​ ಕೂಡ ಮಾಡಿದ್ದರು.

VISTARANEWS.COM


on

Niveditha Gowda chandan matters told by Prashanth Sambargi
Koo

ಚಂದನ್‌ ಶೆಟ್ಟಿ (Niveditha Gowda) ಹಾಗೂ ನಿವೇದಿತಾ ಗೌಡ ಅವರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ.  ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ “ಜೊತೆಯಾಗಿರಲು ಗಟ್ಟಿಯಾದ ಭರವಸೆ ಬೇಕು, ದೂರಾಗಲು ಚಿಕ್ಕದಾದ ಸಂಶಯ ಸಾಕು’ಎಂದು ಚಂದನ್‌ ಕುರಿತಾಗಿ ಬರೆದುಕೊಂಡಿದ್ದರು. ಇದೀಗ ಚಂದನ್‌ ಹಾಗೂ ನಿವೇದಿತಾ ಬಗ್ಗೆ ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ʻʻದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಎಂದು ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆʼʼ ಎಂದಿದ್ದಾರೆ.

ಪ್ರಶಾಂತ್‌ ಸಂಬರಗಿ ಮಾತನಾಡಿ ʻʻನನಗೆ ಚಂದನ್‌ ಆತ್ಮೀಯ ಗೆಳೆಯ. ಚಂದನ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’  ಸಿನಿಮಾದಲ್ಲಿ ಚಂದನ್‌ ನಾಯಕ. ನಾನು ಅದರಲ್ಲಿ ಪೊಲೀಸ್‌ ಪಾತ್ರ ಮಾಡಿದ್ದೇನೆ. 15 ದಿನಗಳ ಕಾಲ ಒಟ್ಟಿಗೆ ಶೂಟಿಂಗ್‌ ಮಾಡಿದ್ದೇವೆ. ಖುಷಿ ಪಟ್ಟಿದ್ದೇವೆ, ಹೊಡೆದಾಡಿಕೊಂಡಿದ್ದೇವೆ,, ಮಜಾ ಮಾಡಿದ್ದೇವೆ. ಚಂದನ್‌ ಹಾಗೂ ನಿವೇದಿತಾ ಸ್ಯಾಂಡಲ್‌ವುಡ್‌ ಪವರ್‌ ಕಪಲ್‌. ಆದರೆ ಏಕಾಏಕಿ ಅವರು ದೂರ ಆದರು. ಎಲ್ಲರೂ ಈ ವಿಷಯ ಕೇಳಿ ಶಾಕ್‌ ಆದರು. ಆದರೆ ನನಗೆ ಈ ವಿಚಾರ ಹೊಸದಲ್ಲ. ಒಂದು ವರ್ಷದ ಹಿಂದೆಯೇ ಗೊತ್ತಿತ್ತುʼʼ ಎಂದರು.

ʻʻಚಂದನ್‌ ದಸರಾದಲ್ಲಿ ಪ್ರಪೋಸ್‌ ಮಾಡಿರುವ ಬಗ್ಗೆ ನನ್ನ ಧಿಕ್ಕಾರ ಕೂಡ ಇತ್ತು. ಆದರೂ ಕೊನೆಗೆ ಅವೆಲ್ಲ ಕ್ಷಮಿಸಿ ಮುಂದೆ ಒಳ್ಳೆಯದಾಗಲಿ ಎಂದು ಹಾರೈಸಿದೆ. ಈ ತಿಂಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಪ್ರಮೋಷನ್‌ಗೆ ಚಂದನ್‌ ಬರಲಿಲ್ಲ. ಹಲವು ಪ್ರಮೋಷನ್‌ಗೆ ಬರಲಿಲ್ಲ. 6 ತಿಂಗಳ ಹಿಂದೆಯೇ ಚಂದನ್‌ ಬಗ್ಗೆ ಹಿಂಟ್‌ ಸಿಕ್ಕಿತ್ತು. ಚಂದನ್‌ ಮನಸ್ಥಿತಿ ಸರಿಯಿಲ್ಲ ಎಂದು. ಒಂದು ಪ್ರಪೋಷನ್‌ ಲಾಂಚ್‌ಗೆ ಮನೆಯಲ್ಲಿ ಹಾಕಿರುವ ಡ್ರೆಸ್‌ ಹಾಕಿಕೊಂಡೇ ಚಂದನ್‌ ಬಂದಿದ್ದರು. ಇದಕ್ಕೆ ನಮ್ಮ ಭಿನ್ನಾಭಿಪ್ರಾಯ ಕೂಡ ಇತ್ತು. ನೀವು ಹೀರೊ ಆಗಿ ಹೀರೊ ತರಹ ಪ್ರೆಸೆಂಟ್‌ ಆಗಬೇಕು. ಈ ತರಹ ಅವತಾರದಲ್ಲಿ ಬರೋದು ಸರಿಯಲ್ಲ ಎಂದು ನಿರ್ದೇಶಕರು ಕೇಳಿದಾಗ, ಈ ವಿಚಾರ ಬಹಿರಂಗಪಡಿಸಿದ್ದರು. ನಂದು ಮತ್ತೆ ನಿವೇದಿತಾ ವಿಷನ್‌ ಮ್ಯಾಚ್‌ ಆಗ್ತಿಲ್ಲ. ಒಟ್ಟಿಗೆ ಬದುಕಲು ಆಗ್ತಿಲ್ಲ. ತುಂಬ ಸಮಸ್ಯೆಯಲ್ಲಿದ್ದೇನೆ. ಮುಂದೆ ಗೊತ್ತಾಗತ್ತೆ ಎಂದು ಚಂದನ್‌ ನಿರ್ದೇಶಕರ ಹತ್ತಿರ ಹೇಳಿಕೊಂಡಿದ್ದರು ʼ ಎಂದರು.

ಇದನ್ನೂ ಓದಿ: Niveditha Gowda: ಚಂದನ್‌ ಶೆಟ್ಟಿ-ನಿವೇದಿತಾ ನಡುವಿನ ವಯಸ್ಸಿನ ಅಂತರವೆಷ್ಟು?

ʻʻಚಂದನ್ ಅಮೆರಿಕಾಗೆ ಮ್ಯೂಸಿಕ್ ಕಾರ್ಯಕ್ರಮಕ್ಕೆ ಹೋಗಿದ್ದ. ಆಗ ನಿವೇದಿತಾ ಹೋಗಲಿಲ್ಲ. ನನ್ನ ಮೊದಲನೇ ಪ್ರಶ್ನೆ ಇದ್ದಿದ್ದು ಯಾಕೆ ಅವಳನ್ನು ಕರೆದುಕೊಂಡು ಹೋಗುತ್ತಿಲ್ಲ ಅಂತ. ಆದರೆ, ಬೇರೆ ಟ್ರಿಪ್‌ಗೆ ನೀನು ಕರ್ಕೊಂಡು ಹೋಗಿಲ್ಲ. ಬೇರೆಯವರು ಕರ್ಕೊಂಡು ಹೋಗ್ತಾರೆ. ನೀನು ನಿನ್ನ ಎಮೋಷನ್ಸ್‌ಗೆ ಸ್ಪಂದಿಸಿಲ್ಲ ಅಂದರೆ, ಬೇರೆ ಯಾರೋ ಕೊಡ್ತಾರೆ. ನೀನು ನಿನ್ನ ವಸ್ತುವನ್ನು ಕಾಪಾಡಿಕೋ ಅಂತ ಅನೇಕ ಬಾರಿ ಹೇಳಿದ್ದೇನೆ” ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

ʻʻನಿನ್ನೆ ನಗ್ತಾನೇ ಬಂದು ಹೋದರು. ಆದರೆ ಚಂದನ್‌ಗೆ ನೋವಾಗಿದೆ. ಇರುವ ಸ್ವಿಫ್ಟ್ ಕಾರು ಬಿಟ್ಟು ಬೆನ್ಜ್ ಕಾರು ಬೇಕು ಅಂದರೆ ನಾವೇನು ಮಾಡುವುದಕ್ಕೆ ಆಗುವುದಿಲ್ಲ. ಬೆನ್ಜ್ ಹಿಂದೆ ಹೋಗಿರುವಂತವರು, ದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಅಂತ ಕರ್ನಾಟಕದ ಜನತೆಗೆ ಮುಂದೆ ಗೊತ್ತಾಗುತ್ತೆ. ಚಂದನ್‌ಗೆ ನಮ್ಮ ಬ್ರದರ್ಲಿ ಸಪೋರ್ಟ್, ಎಮೋಷನಲ್ ಸಪೋರ್ಟ್ ಇದೆʼʼಎಂದರು ಪ್ರಶಾಂತ್‌ ಸಂಬರಗಿ.

ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಜೋಡಿ!

ನಟಿ ನಿವೇದಿತಾ ಗೌಡ (Niveditha Gowda) ಹಾಗೂ ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ ಆಗಾಗ ತಮ್ಮ ಪೋಸ್ಟ್‌ ಹಾಗೂ ರೀಲ್ಸ್‌ ಮೂಲಕ ಸುದ್ದಿಯಾಗುತ್ತಲೇ ಇರುತ್ತಿದ್ದರು. ಹಿಂದೊಮ್ಮೆ ಅಂಡರ್​ ವಾಟರ್​ ಶೂಟ್​ ಮಾಡಿರುವ ಜೋಡಿ ಲಿಪ್‌ ಕಿಸ್‌ ಮಾಡಿದ ರೊಮ್ಯಾಂಟಿಕ್​ ವಿಡಿಯೊ ಶೇರ್‌ ಮಾಡಿಕೊಂಡಿತ್ತು. ಸಾವಿರಾರು ಜನರು ಲೈಕ್​ ಮಾಡಿದ್ದರು. ಕೆಲವರು ಈ ವಿಡಿಯೊಗೆ ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ನೆಗೆಟಿವ್​ ಕಮೆಂಟ್​ ಕೂಡ ಮಾಡಿದ್ದರು.

Continue Reading

ಸ್ಯಾಂಡಲ್ ವುಡ್

Uttarakaanda Movie: ‘ಉತ್ತರಕಾಂಡ’ದ ವೀರವ್ವ ಪಾತ್ರದಲ್ಲಿ ಭಾವನಾ‌ ಮೆನನ್!

ಈ ವರ್ಷದ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಚಿತ್ರಗಳ ಪೈಕಿ ʼಉತ್ತರಕಾಂಡʼ (Uttarakaanda Movie)ವೂ ಒಂದು. ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌, ಡಾಲಿ‌ ಧನಂಜಯ್‌ ಮತ್ತೊಮ್ಮೆ ತೆರೆ ಮೇಲೆ ಒಂದಾಗುತ್ತಿರುವ ಕಾರಣಕ್ಕೆ ಈ ಸಿನಿಮಾ ಈಗಾಗಲೇ ಕುತೂಹಲ ಕೆರಳಿಸಿದೆ. ಏ. 15 ಸಿನಿಮಾದ ಶೂಟಿಂಗ್‌ ಆರಂಭಿಸಲಾಗಿದೆ.ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ಧ್ ಮುಖ್ಯ ಸಂಕಲನಕಾರರಾಗಿರುತ್ತಾರೆ.
ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ.

VISTARANEWS.COM


on

Uttarakaanda Movie in bhavana menon
Koo

ಬೆಂಗಳೂರು: ಬಹು ನಿರೀಕ್ಷಿತ ಚಿತ್ರ “ಉತ್ತರಕಾಂಡ” (Uttarakaanda Movie) ಇದೀಗ ಮತ್ತೊಮ್ಮೆ ಸುದ್ದಿ ಮಾಡಿದೆ.
ಬಹುಭಾಷಾ‌ ತಾರೆ ಭಾವನಾ ಮೆನನ್ ಉತ್ತರಕಾಂಡ ಚಿತ್ರದಲ್ಲಿ “ವೀರವ್ವ” ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾವನಾ‌ ಅವರ‌ ಹುಟ್ಟುಹಬ್ಬದ ಅಂಗವಾಗಿ‌ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ಭಾವನಾ ಅವರನ್ನು ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಅವರೊಡನೆ ತೆರೆಯ ಮೇಲೆ ಕಾಣಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ರೋಹಿತ್ ಪದಕಿ ನಿರ್ದೇಶನದ “ಉತ್ತರಕಾಂಡ” ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್, ನಟರಾಕ್ಷಸ ಡಾಲಿ‌ ಧನಂಜಯ, ಐಶ್ವರ್ಯ ರಾಜೇಶ್, ದಿಗಂತ್ ಮಂಚಾಲೆ, ರಂಗಾಯಣ ರಘು, ಚೈತ್ರ ಆಚಾರ್,ವಿಜಯ್ ಬಾಬು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ಧ್ ಮುಖ್ಯ ಸಂಕಲನಕಾರರಾಗಿರುತ್ತಾರೆ.
ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ.

ಈ ವರ್ಷದ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಚಿತ್ರಗಳ ಪೈಕಿ ʼಉತ್ತರಕಾಂಡʼ (Uttarakaanda Movie)ವೂ ಒಂದು. ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌, ಡಾಲಿ‌ ಧನಂಜಯ್‌ ಮತ್ತೊಮ್ಮೆ ತೆರೆ ಮೇಲೆ ಒಂದಾಗುತ್ತಿರುವ ಕಾರಣಕ್ಕೆ ಈ ಸಿನಿಮಾ ಈಗಾಗಲೇ ಕುತೂಹಲ ಕೆರಳಿಸಿದೆ. ಏ. 15 ಸಿನಿಮಾದ ಶೂಟಿಂಗ್‌ ಆರಂಭಿಸಲಾಗಿದೆ.

ಇದನ್ನೂ ಓದಿ: Uttarakaanda Movie:  ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ಶಿವರಾಜ್​ ಕುಮಾರ್​

ಏ.18ರಂದು ಚಿತ್ರತಂಡ ದೂದ್‌ಪೇಡ ದಿಗಂತ್‌ ಅವರ ಲುಕ್‌ ಅನಾವರಣಗೊಳಿಸಿತ್ತು. ಮಿರ್ಚಿ “ಮಲ್ಲಿಗೆ” ಎಂಬ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಟೋಬಿʼ, ʼಸಪ್ತ ಸಾಗರದಾಚೆ ಸೈಡ್‌ ಬಿʼ ಮುಂತಾದ ಸಿನಿಮಾಗಳಲ್ಲಿ ಗಮನ ಸೆಳೆದಿದ್ದ ಚೈತ್ರಾ ʼಉತ್ತರಕಾಂಡʼ ಚಿತ್ರತಂಡವನ್ನು ಸೇರಿದ್ದು, ಇನ್ನಷ್ಟು ನಿರೀಕ್ಷೆ ಮೂಡಿಸಿದೆ.ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯನ್ನು ಒಳಗೊಂಡ ʼಉತ್ತರಕಾಂಡʼ ಸಿನಿಮಾಕ್ಕೆ ರೋಹಿತ್ ಪದಕಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚೈತ್ರಾ ಆಚಾರ್ ಈ ಚಿತ್ರದಲ್ಲಿ ಲಚ್ಚಿ ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಾಯಕಿ ಪಾತ್ರದಿಂದ ಹೊರ ಬಂದಿದ್ದ ರಮ್ಯಾ
ಚಿತ್ರತಂಡ ಆರಂಭದಲ್ಲಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಅವರನ್ನು ಹೆಸರಿಸಿತ್ತು. ಮಾತ್ರವಲ್ಲ ರಮ್ಯಾ ಚಿತ್ರದ ಮುಹೂರ್ತದಲ್ಲಿಯೂ ಭಾಗವಹಿಸಿದ್ದರು. ಆದರೆ ಇತ್ತೀಚೆಗೆ ಅವರು ಚಿತ್ರತಂಡದಿಂದ ಹೊರಬಂದು ಶಾಕ್‌ ನೀಡಿದ್ದರು. ಕಳೆದ ವರ್ಷ ʼಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರದ ನಾಯಕಿ ಪಾತ್ರದಿಂದ ಹಿಂದೆ ಸರಿದಿದ್ದ ರಮ್ಯಾ ಕೆಲವು ದಿನಗಳ ಹಿಂದೆ ʼಉತ್ತರಕಾಂಡʼ ಸಿನಿಮಾದಿಂದಲೂ ಹೊರ ಬಂದಿದ್ದರು. ʼ‘ಡೇಟ್ಸ್​ ಕೊರತೆಯಿಂದಾಗಿ ನಾನು ʼಉತ್ತರಕಾಂಡʼದಲ್ಲಿ ಕೆಲಸ ಮಾಡುತ್ತಿಲ್ಲ (ಸಿನಿಮಾ ಮತ್ತು ರಾಜಕೀಯದ ಕೆಲಸಗಳನ್ನು ನಾನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇನೆ). ಚಿತ್ರತಂಡಕ್ಕೆ ನಾನು ಶುಭ ಹಾರೈಸುತ್ತೇನೆ’ʼ ಎಂದು ರಮ್ಯಾ ಕಾರಣ ತಿಳಿಸಿದ್ದರು. ಆ ಮೂಲಕ ಅನೇಕ ವರ್ಷಗಳ ಬಳಿಕ ಅವರನ್ನು ತೆರೆ ಮೇಲೆ ನೋಡಬೇಕೆಂಬ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.

ವಿಳಂಬಕ್ಕೆ ಕಾರಣವೇನು?
ʼʼಉತ್ತರಕಾಂಡʼದ ಮುಹೂರ್ತ 2022ರಲ್ಲಿ‌ಯೇ ಆಗಿತ್ತು. ಆದರೆ ಇದುವರೆಗೆ ಚಿತ್ರೀಕರಣ ಆರಂಭವಾಗಿರಲಿಲ್ಲ. ಚಿತ್ರಕಥೆಯು ಬಯಲುಸೀಮೆಯ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದರಿಂದ ಹಾಗೂ ಉತ್ತರ ಕರ್ನಾಟಕದ ಆಡುಭಾಷೆಯನ್ನು ಹೊಂದಿರುವುದರಿಂದ ಚಿತ್ರಕ್ಕೆ ನಿಖರವಾದ ಸಂಶೋಧನೆ ಮತ್ತು ಪ್ಲ್ಯಾನಿಂಗ್‌ನ ಅಗತ್ಯವಿತ್ತು. ಈ ಕಾರಣದಿಂದ ಮತ್ತು ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಚಿತ್ರೀಕರಣ ವಿಳಂಬಗೊಂಡಿತು. ಆದರೆ ಇದೀಗ ಸರ್ವ ಸಿದ್ಧತೆಗಳೊಂದಿಗೆ ಚಿತ್ರೀಕರಣ ಆರಂಭಗೊಂಡಿದೆʼʼ ಎಂದು ಚಿತ್ರತಂಡ ತಿಳಿಸಿದೆ. ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Continue Reading

ಸ್ಯಾಂಡಲ್ ವುಡ್

Niveditha Gowda: ಚಂದನ್‌ ಶೆಟ್ಟಿ-ನಿವೇದಿತಾ ನಡುವಿನ ವಯಸ್ಸಿನ ಅಂತರವೆಷ್ಟು?

Niveditha Gowda:  ಬಿಗ್‌ ಬಾಸ್‌ ಜೋಡಿ, ಕ್ಯೂಟ್‌ ಕಪಲ್‌ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda) ದಂಪತಿ ವಿಚ್ಛೇದನ ಪಡೆದುಕೊಂಡಿದೆ. ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಲವ್ ಪ್ರೊಪೋಸಲ್ ಮಾಡಿ ಸುದ್ದಿಯಾಗಿದ್ದರು. ಚಂದನ್ ವರ್ತನೆಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದೇ ವರ್ಷ ಮೇ 12 ರಂದು ನಿವೇದಿತಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು ಚಂದನ್‌.

VISTARANEWS.COM


on

Niveditha Gowda chandan shetty age differance
Koo

ನಿವೇದಿತಾ ಗೌಡ (Niveditha Gowda) ಹಾಗೂ ಚಂದನ್‌ ಶೆಟ್ಟಿ ಕ್ಯೂಟ್‌ ಕಪಲ್‌ ಎಂದೇ ಹೆಸರುವಾಸಿಯಾದವರು.

ಇದೀಗ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. 4 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್‌ಸ್ಟಾಪ್‌ ಇಟ್ಟಿದ್ದಾರೆ.

ಚಂದನ್‌ ಶೆಟ್ಟಿ ಅವರಿಗೆ ಸದ್ಯ 34 ವರ್ಷ. ಹಾಸನದ ಶಾಂತಿಗ್ರಾಮದಲ್ಲಿ 1989ರ ಸೆಪ್ಟೆಂಬರ್‌ 17ರಂದು ಜನಿಸಿದ್ದರು.

ಇದನ್ನೂ ಓದಿ: Niveditha Gowda: ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ರಾ ನಿವೇದಿತಾ ಗೌಡ?

ನಿವೇದಿತಾ ಗೌಡ ಅವರಿಗೆ ಈಗ 26 ವರ್ಷ. 1998ರ ಮೇ 12ರಂದು ಜನಿಸಿದರು. ಇಬ್ಬರ ನಡುವೆ ಒಂಬತ್ತು ವರ್ಷಗಳ ನಡುವೆ ವಯಸ್ಸಿನ ಅಂತರವಿದೆ.

ನಿವೇದಿತಾ ಗೌಡಗೆ ಇರುವ ಅತಿಯಾದ ಸೋಷಿಯಲ್ ಮೀಡಿಯಾ ಕ್ರೇಜ್‌ನಿಂದಾಗಿಯೇ, ರೀಲ್ಸ್ ವ್ಯಾಮೋಹದಿಂದಾಗಿಯೇ ಡಿವೋರ್ಸ್ ಹಂತ ತಲುಪಿದೆ ಎಂಬ ವದಂತಿಗಳೂ ಹಬ್ಬಿವೆ. 

Continue Reading
Advertisement
Karnataka Weather Forecast
ಮಳೆ10 mins ago

Karnataka Weather : ಮುಂದಿನ 48 ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆ; ರೆಡ್‌ ಅಲರ್ಟ್‌ ಘೋಷಣೆ

Modi Cabinet
ಸಂಪಾದಕೀಯ39 mins ago

ವಿಸ್ತಾರ ಸಂಪಾದಕೀಯ: 3ನೇ ಬಾರಿಯ ‘ವಿಸ್ತೃತ’ ಸರ್ಕಾರವು ‘ವಿಕಸಿತ ಭಾರತ’ಕ್ಕೆ ಶ್ರಮಿಸಲಿ

Health Tips Kannada
ಆರೋಗ್ಯ40 mins ago

Health Tips Kannada: ಉಪ್ಪು ತಿನ್ನುವುದು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಮುಖ್ಯ!

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರು ವಿನಾ ಕಾರಣ ಎಲ್ಲದಕ್ಕೂ ಮೂಗು ತೂರಿಸುವುದು ಬೇಡ!

ind vs pak
ಪ್ರಮುಖ ಸುದ್ದಿ5 hours ago

IND vs PAK : ಭಾರತದ ಎದುರು ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ; ಕಡಿಮೆ ಸ್ಕೋರ್ ಇದ್ದಾಗಲೂ 6 ರನ್ ಸೋಲು

Stabbing in Mangalore:
ಪ್ರಮುಖ ಸುದ್ದಿ7 hours ago

Stabbing in Mangalore : ವಿಜಯೋತ್ಸವ ಮುಗಿಸಿ ಮನೆಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚಾಕು ಇರಿತ

Modi 3.0 Cabinet
ದೇಶ7 hours ago

Modi 3.0 Cabinet: ಮೋದಿ ನೂತನ ಸಂಪುಟದಿಂದ ಸ್ಮೃತಿ ಇರಾನಿ ಸೇರಿ ಯಾರಿಗೆಲ್ಲ ಕೊಕ್?‌ ಇಲ್ಲಿದೆ ಮಾಹಿತಿ

IND vs PAK:
ಪ್ರಮುಖ ಸುದ್ದಿ7 hours ago

IND vs PAK : ವಿರಾಟ್​ ಕೊಹ್ಲಿಯಿಂದ ಆಟೋಗ್ರಾಫ್ ಪಡೆದುಕೊಂಡ ಕ್ರಿಸ್​ ಗೇಲ್​! ಇಲ್ಲಿದೆ ವಿಡಿಯೊ

Veeraloka
Latest8 hours ago

Veeraloka Books : ಹೊಸ ಲೇಖಕರಿಗೆ ವೀರಲೋಕ ಪ್ರಕಾಶನ ಹೆದ್ದಾರಿಯನ್ನೇ ಸೃಷ್ಟಿಸಿದೆ: ಜಯಂತ್‌ ಕಾಯ್ಕಿಣಿ ಶ್ಲಾಘನೆ

IND vs PAK
ಪ್ರಮುಖ ಸುದ್ದಿ8 hours ago

IND vs PAK : ಮರೆಗುಳಿ ರೋಹಿತ್​; ಜೇಬಿನಲ್ಲಿ​ ಕಾಯಿನ್​ ಇಟ್ಟು ಹುಡುಕಾಡಿದ ಭಾರತ ತಂಡದ ನಾಯಕ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌