ಬೆಂಗಳೂರು: ʻಬಿಗ್‌ಬಾಸ್ ಒಟಿಟಿ ಸೀಸನ್-1ʼರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಆಗಾಗ ಸುದ್ದಿಯಲ್ಲಿ ಇರುತ್ತಾರೆ (Sonu Srinivas Gowda). ಇದೀಗ ದರ್ಶನ್ ಕುರಿತಾಗಿ ನಾನು ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ. ಸೋನು ಗೌಡ ಅವರು ದರ್ಶನ್ ಪರವಾಗಿ ಮಾತನಾಡಿಲ್ಲ ಎಂದು ದಚ್ಚು ಫ್ಯಾನ್ಸ್ ಕಮೆಂಟ್ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ವಿಡಿಯೊ ಮೂಲಕ ಆರೋಪಿಸಿದ್ದಾರೆ.
ವಿಡಿಯೊದಲ್ಲಿ ಸೋನು ಗೌಡ ಮಾತನಾಡಿ ʻʻಇನ್‌ಸ್ಟಾ ಗ್ರಾಮ್ ಹಾಗೂ ಯುಟ್ಯೂಬ್‌ನಲ್ಲಿ ತುಂಬ ಕೆಟ್ಟ ಕಮೆಂಟ್‌ಗಳು ನನಗೆ ಬರುತ್ತಿವೆ. ದರ್ಶನ್ ಅವರ ಬಗ್ಗೆ ನಾನು ಏನು ಮಾತನಾಡಿಲ್ಲ ಎಂದು. ನಾವು ಇನ್ನೂ ಚಿಕ್ಕವರು. ನಾವು ಅವರ ಬಗ್ಗೆ ಮಾತನಾಡುವಷ್ಟು ಇನ್ನೂ ಬೆಳೆದಿಲ್ಲ. ನಾವು ಒಂದ ಸಲ ಫ್ಯಾನ್ ಅಂತಾದರೆ, ಸಾಯುವರೆಗೂ ನಾವು ಫ್ಯಾನ್. ತಪ್ಪು ಯಾರೇ ಮಾಡಿದ್ರೂ ಶಿಕ್ಷೆ ಆಗೇ ಆಗುತ್ತೆ. ನಾವು ಒಳ್ಳೆಯವರಾಗಿರಬಹುದು, ಕೆಟ್ಟವರಾಗಿರಬಹುದು ಆದರೆ ತೀರ್ಪು ಬಂದೇ ಬರುತ್ತದೆ. ಅಲ್ಲಿಯವರೆಗೂ ಕಾಯಿರಿ. ಅಲ್ಲಿಯವರೆಗೆ ನಮಗೆ ಕೆಟ್ಟ ಕಮೆಂಟ್ ಮಾಡಬೇಡಿ. ಅಲ್ಲಿಯವರೆಗೆ ಆ ದೇವರು ಎರಡೂ ಕುಟುಂಬಕ್ಕೆ ಧೈರ್ಯ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ. ನಮ್ಮ ಬಾಸ್ ದರ್ಶನ್ ಅವರು ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೋಪ್ ಇಟ್ಟುಕೊಂಡಿದ್ದೇನೆʼʼಎಂದು ಹೇಳಿಕೊಂಡಿದ್ದಾರೆ.
ಈ ಮುಂಚೆ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಬಂಧನವಾಗಿದ್ದ ʻಬಿಗ್‌ಬಾಸ್ ಒಟಿಟಿ ಸೀಸನ್-1ʼರ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) 11 ದಿನಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದರು.
ಇದನ್ನೂ ಓದಿ: Actor Darshan: ದರ್ಶನ್ ಅಣ್ಣ ಕನಸಿನಲ್ಲೂ ಯಾರಿಗೂ ತೊಂದರೆ ಕೊಡುವವರಲ್ಲ ಎಂದ ಟಾಲಿವುಡ್ ಸ್ಟಾರ್ ನಾಗ ಶೌರ್ಯ!
ಹಿಂದೊಮ್ಮೆ ಸೋನು ಅವರ ವಿಡಿಯೊ ಒಂದು ಲೀಕ್ ಆಗಿದ್ದೇ ಸೋನು ಗೌಡ ಪದೇ ಪದೇ ಟ್ರೋಲ್ ಆಗಲು ಕಾರಣ. ಸೋನು ಗೌಡ ತಮ್ಮ ನೋವನ್ನು ಈ ಹಿಂದೆ ವಿಡಿಯೊ ಮೂಲಕ ಹಂಚಿಕೊಂಡಿದ್ದರು. ಸೋನು ಗಳಗಳನೇ ಅತ್ತಿದ್ದರು. ಇದರ ಬೆನ್ನಲ್ಲೇ ಮಾಲ್ಡೀವ್ಸ್ ಪ್ರವಾಸಕ್ಕೆ ಹೋದರು. ಅಲ್ಲಿನ ಬೀಚ್‌ನಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿರುವ ಚಿತ್ರಗಳನ್ನು ಸ್ವತಃ ಸೋನು ಗೌಡ ಹಂಚಿಕೊಂಡಿದ್ದರು. ಒಳ ಉಡುಪು ತೊಟ್ಟು, ಹಾಟ್ ಆಗಿ ಪೋಸ್ ನೀಡಿದ್ದ ಬೆನ್ನಲ್ಲೇ ಇದೀಗ ಬಿಕಿನಿ ವಿಡಿಯೊ ಶೇರ್ ಮಾಡಿಕೊಂಡಿದ್ದರು.
ಏನಿದು ರೇಣುಕಾ ಸ್ವಾಮಿ ಕೊಲೆ ಪ್ರಕರಣ?
2024ರ ಜೂನ್ 7ರಂದು ರೇಣುಕಾಸ್ವಾಮಿಯನ್ನು ದರ್ಶನ್ ಸಹಚರ ರಘು ಅಪಹರಿಸಿದ್ದ. ಕೆಲವು ವರದಿಗಳ ಪ್ರಕಾರ, ದರ್ಶನ್ ಸಂತ್ರಸ್ತನನ್ನು ಬೆಲ್ಟ್ ನಿಂದ ಹೊಡೆದರು ಮತ್ತು ಆರೋಪಿಸಲಾಗಿದೆ. ಅವರ ಕುಟುಂಬವು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿತು. ಜೂನ್ 9, 2024 ರಂದು, ದರ್ಶನ್ ತಮ್ಮ ಇತ್ತೀಚಿನ ಚಿತ್ರ “ಡೆವಿಲ್: ದಿ ಹೀರೋ” ಸೆಟ್ನಲ್ಲಿದ್ದಾಗ ಪವಿತ್ರಾ ಗೌಡ ಅವರೊಂದಿಗೆ ವಿಚಾರಣೆಗೆ ಕರೆದೊಯ್ಯಲಾಗಿತ್ತು.
ಸ್ವಾಮಿಯನ್ನು ಕೋಲುಗಳಿಂದ ಥಳಿಸಿ ವಿದ್ಯುತ್ ಆಘಾತಗಳನ್ನು ನೀಡಲಾಗುತ್ತು. ಈ ವೇಳೆ ಪವಿತ್ರಾ ಗೌಡ ಸ್ವಲ್ಪ ಸಮಯದವರೆಗೆ ಶೆಡ್ ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ತೂಗುದೀಪ ಅವರು ಮಾಡಿದ ಪೋಸ್ಟ್ಗಳಿಗೆ ಸ್ವಾಮಿಯನ್ನು ಶಿಕ್ಷಿಸಲು ಶ್ರೀ ತೂಗುದೀಪ ಅವರನ್ನು ಪ್ರಚೋದಿಸಿದ್ದು ಎಂ.ಎಸ್.ಗೌಡ ಎಂದು ಹೇಳಲಾಗಿದೆ. ಇದೇ ರೀತಿಯ ಹಲವಾರು ಮಾಹಿತಿಗಳ ನೀಡಲಾಗಿದೆ.