ಸಂದರ್ಶನ: ಶೀಲಾ ಸಿ. ಶೆಟ್ಟಿ
ಪುಟ್ಟ ಗೌರಿ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ನಟಿ ಸಾನ್ಯ ಅಯ್ಯರ್ (Star Fashion Interview), ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡ ನಂತರ, ಇದೀಗ ತಮಿಳು ಸಿನಿಮಾ ಮೂಲಕ ನಾಯಕಿಯಾಗಿ ಹಿರಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಮೊದಲಿನಿಂದಲೂ ತಮ್ಮದೇ ಆದ ಸೆಲ್ಫ್ ಡಿಕ್ಲೇರ್ಡ್ ಫ್ಯಾಷನ್ (Star Fashion Interview) ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳಲ್ಲಿ ಅಭಿಮಾನಿಗಳನ್ನು ಸೆಳೆಯುತ್ತಿದ್ದ ಸಾನ್ಯ ಅಯ್ಯರ್, ವೆಲ್ಹೊಜ್ಹ್‌ಇವ್ ಆಯೋಜಿಸಿದ್ದ ಇಂಡಿಯನ್ ವಿಮೆನ್ ಆಚಿವರ್ಸ್ ಆವಾರ್ಡ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಸ್ತಾರದ ಸಂದರ್ಶನದಲ್ಲಿ ತಮ್ಮ ಬಿಂದಾಸ್ ಫ್ಯಾಷನ್, ಸ್ಟೈಲ್, ಡ್ರೀಮ್ ಶಾಪಿಂಗ್ ಡೆಸ್ಟಿನಿ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದರು.
ಈಗಿನ ಯಂಗ್ ಜನರೇಷನ್ ಅಭಿಮಾನಿಗಳನ್ನು ಸೆಳೆಯುತ್ತಿರುವ ನೀವು ಫಾಲೋ ಮಾಡುವ ಫ್ಯಾಷನ್ ಯಾವುದು?
ನಾನಂತೂ ಟ್ರೆಂಡ್ ಸೆಟ್ಟರ್. ಯಾವತ್ತೂ ಫಾಲೋವರ್ ಅಲ್ಲ ಎಂಬುದನ್ನು ಮೊದಲು ಹೇಳಲು ಬಯಸುತ್ತೇನೆ. ಇನ್ನು, ನನಗೆ ನನ್ನದೇ ಆದ ಫ್ಯಾಷನ್ ರೂಲ್ಸ್‌ಗಳಿವೆ. ನನ್ನ ಫ್ಯಾಷನ್ ನನ್ನ ಕಂಫರ್ಟಬಲ್‌ಗೆ ತಕ್ಕಂತೆ ನನ್ನ ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಫ್ಯಾಷನ್ ಮಾಡುತ್ತೇನೆ.
ನಿಮ್ಮದೇ ಆದ ಸಿಗ್ನೇಚರ್ ಸ್ಟೈಲ್ ಏನು?
ಸದ್ಯಕ್ಕೆ ನನ್ನದೇ ಆದ ಯಾವುದೇ ಸಿಗ್ನೇಚರ್ ಸ್ಟೈಲ್‌ಗೆ ಸ್ಟಿಕ್ ಆಗಿಲ್ಲ! ಯಾವುದು ನನಗಿಷ್ಟವೋ ಅಥವಾ ಆಯಾ ಸಂದರ್ಭಕ್ಕೆ ಹೊಂದುತ್ತದೆಯೊ ಅದನ್ನೇ ನಾನು ಪ್ರಿಫರ್ ಮಾಡುತ್ತೇನೆ.
ಇದನ್ನೂ ಓದಿ; Priyanka Upendra Interview: ಸ್ಯಾಂಡಲ್‌ವುಡ್ ನಟಿ ಪ್ರಿಯಾಂಕಾ ಉಪೇಂದ್ರ ಸಿಗ್ನೇಚರ್ ಸ್ಟೈಲ್ ಏನು?
ನಿಮಗೆ ಯಾವ ಬಗೆಯ ಸ್ಟೈಲ್ ಸ್ಟೇಟ್‌ಮೆಂಟ್ಸ್ ಇಷ್ಟ?
ಅದು ಯೂನಿಕ್ ಆಗಿರಬೇಕು. ಎಲ್ಲರೂ ಧರಿಸುವ ಯೂನಿಫಾರ್ಮ್ ನಂತೆ ಕಾಣಬಾರದು. ಹಾಗಾಗಿ ಪ್ರತಿಯೊಂದರಲ್ಲೂ ಡಿಫರೆಂಟ್ ಆಗಿರುವುದನ್ನು ಬಯಸುತ್ತೇನೆ.
ನಿಮ್ಮ ಡ್ರೀಮ್ ಶಾಪಿಂಗ್ ಡೆಸ್ಟಿನೇಷನ್ ಯಾವುದು?
ಫ್ಯಾಷನ್ ಹಬ್ ಪ್ಯಾರೀಸ್….!
ಸದಾ ನಿಮಗಿಷ್ಟವಾಗುವ ಅಟೈರ್ ಯಾವುದು? ಯಾಕೆ?
ನಿಮಗೆ ಅಚ್ಚರಿಯಾಗಬಹುದು. ನನಗೆ ಸೀರೆ ಇಷ್ಟ! ಇದು ಧರಿಸಿದಾಗ ಫೆಮಿನೈನ್ ಲುಕ್ ನೀಡುತ್ತದೆ ಹಾಗೂ ನೋಡುಗರಿಗೆಲ್ಲರಿಗೂ ಪ್ರಿಯವಾಗುತ್ತದೆ. ಹಾಗೆಂದು ಕೇವಲ ಸೀರೆ ಮಾತ್ರ ಎಂದಲ್ಲ! ಇತರೇ ಉಡುಪುಗಳು ಇಷ್ಟವಾಗುತ್ತವೆ. ಅದು ಆಯಾ ಸಂದರ್ಭಕ್ಕೆ ನಿರ್ಧರಿತವಾಗುತ್ತವೆ.
ಬ್ಯೂಟಿ ಅಥವಾ ಫ್ಯಾಷನ್‌ಗೆ ಸಾಥ್ ನೀಡುವ ನೀವು ಬಿಟ್ಟಿರಲಾಗದ ವಸ್ತು ಯಾವುದು?
ಲಿಪ್‌ಸ್ಟಿಕ್ಸ್. ನನ್ನ ಬಳಿ ಸಾಕಷ್ಟು ಕಲೆಕ್ಷನ್ ಇದೆ. ಮೇಕಪ್‌ನಲ್ಲಿ ಏನಿರದಿದ್ದರೂ ಸರಿಯೇ, ಲಿಪ್‌ಸ್ಟಿಕ್ ಬೇಕೇ ಬೇಕು.
ನೀವು ಪರ್ಫ್ಯೂಮ್ ಲವರ್ ಅಂತೆ?
ಹೌದು. ನನಗೆ ಪರ್ಫ್ಯೂಮ್ ಅಂದ್ರೆ ಸಖತ್ ಇಷ್ಟ. ಇದು ಯಾವುದೇ ವ್ಯಕ್ತಿಯ ಅಭಿರುಚಿ ಬಗ್ಗೆ ತಿಳಿಸುತ್ತದೆ ಎನ್ನಬಹುದು.
ನೀವು ಎಷ್ಟೇ ಫ್ಯಾಷನೆಬಲ್ ಆಗಿದ್ದರೂ ಸದಾ ಧರಿಸುವ ಆಕ್ಸೆಸರೀಸ್ ರುದ್ರಾಕ್ಷಿ, ಯಾಕೆ?
ಎಲ್ಲರಿಗೂ ಗೊತ್ತಿರುವಂತೆ ನಾನು ಸ್ಪಿರಿಚ್ಯುಯಲ್ ವ್ಯಕ್ತಿ. ರುದ್ರಾಕ್ಷಿ ಸರವು ಸದಾ ಸಕಾರಾತ್ಮಕ ವೈಬ್ಸ್ ಹೊಂದಿರುತ್ತದೆ. ನನ್ನನ್ನು ಉತ್ತಮ ಮಾರ್ಗದಲ್ಲಿ ನಡೆಸುತ್ತದೆ. ಫ್ಯಾಷನ್‌ಗಾಗಿ ನಾನು ಇದನ್ನು ಧರಿಸಿಲ್ಲ! ನನ್ನ ದೈವದ ನಂಬಿಕೆಯಿಂದ ಇಷ್ಟ ಪಟ್ಟು ಧರಿಸುತ್ತೇನೆ.
ಚಿತ್ರ ಕೃಪೆ: ಗಿರೀಶ್ ಕುಮಾರ್ ಎಸ್