ಬಹುಭಾಷಾ ನಟ ಶರತ್ಕುಮಾರ್ (Varalaxmi Sarathkumar) ಅವರ ಪುತ್ರಿ ಮತ್ತು ಕನ್ನಡದ ʻಮಾಣಿಕ್ಯʼ ಸಿನಿಮಾದಲ್ಲಿ ಸುದೀಪ್ಗೆ ಜೋಡಿಯಾಗಿದ್ದ ನಟಿ ವರಲಕ್ಷ್ಮಿ ಶರತ್ಕುಮಾರ್ ಮುಂಬೈ ಮೂಲದ ಉದ್ಯಮಿ ಜತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ನಿಕೊಲಾಯ್ ಸಚ್ದೇವ್ ಅವರೊಂದಿಗೆ ಸಪ್ತಪದಿ ತುಳಿದಿದ್ದರು. ಥಾಯ್ಲೆಂಡ್ನಲ್ಲಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರು ಮಾತ್ರ ಭಾಗವಹಿಸಿದ್ದರು. ಈ ಬೆನ್ನಲ್ಲೇ ನಿನ್ನೆ (ಜುಲೈ 3) ಚೆನ್ನೈನಲ್ಲಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆರತಕ್ಷತೆಗೆ ಕಿಚ್ಚು ಸುದೀಪ್ ಕೂಡ ಭಾಗವಹಿಸಿದ್ದರು. ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ ಕೂಡ ಜತಗೆ ಇದ್ದರು.
ಚೆನ್ನೈನಲ್ಲಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ತಮಿಳು, ತೆಲುಗು, ಕನ್ನಡ ಚಿತ್ರರಂಗದ ಗಣ್ಯರೇ ಹೆಚ್ಚಾಗಿ ಭಾಗಿವಹಿಸಿದ್ದರು. ನಿರ್ದೇಶಕ ಬಾಲಾ, ನಟ ಜೀವಾ, ನಟಿ ರೋಜಾ, ನಿರ್ದೇಶಕ ಆರ್.ಕೆ.ಸೆಲ್ವಮಣಿ, ನಿರ್ದೇಶಕ ಹರಿ, ನಟ ವಿಜಯಕುಮಾರ್, ನಟ ಬಾಲಕೃಷ್ಣ, ನಟಿ ಆಂಡ್ರಿಯಾ, ನಿರ್ದೇಶಕ ಕೆ.ಎಸ್.ರವಿಕುಮಾರ್, ನಟ ಶಿವಕುಮಾರ್, ಶೋಭಾ, ಸುಂದರ್ ಸಿ. ಖುಷ್ಬೂ, ನಿರ್ದೇಶಕ ಎ.ಎಲ್.ವಿಜಯ್, ಮಣಿರತ್ನಂ, ಸುಹಾಸಿನಿ, ಜಾಕಿ ಶ್ರಾಫ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಬಂದು ಶುಭ ಕೋರಿದ್ದಾರೆ. ಆರತಕ್ಷತೆಯಲ್ಲಿ ವರಲಕ್ಷ್ಮಿ ಶರತ್ಕುಮಾರ್ ಮೆರೂನ್ ಬಣ್ಣದ ಗೌನ್ ಧರಿಸಿದ್ದರೆ, ನಿಕೊಲಾಯ್ ಸಚ್ದೇವ್ ಅದೇ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ್ದರು.
ಇದನ್ನೂ ಓದಿ: Varalaxmi Sarathkumar: ಪ್ರಧಾನಿ ಮೋದಿಗೆ ಮದುವೆ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ
ನಟ ಶರತ್ಕುಮಾರ್ ಅವರ ಮೊದಲ ಪತ್ನಿ ಸಯಾ ಅವರಿಗೆ ಜನಿಸಿದವರೇ ವರಲಕ್ಷ್ಮಿ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ನಟಿ ರಾಧಿಕಾರನ್ನು ವಿವಾಹವಾಗಿದ್ದರು.
ಮೊದಲಿಂದ ಶರತ್ ಕುಮಾರ್ (Varalaxmi Sarathkumar) ಅವರು ಸುದೀಪ್ ಹಾಗೂ ಅವರ ಕುಟುಂಬಕ್ಕೆ ಆತ್ಮೀಯರು. ವರಲಕ್ಷ್ಮೀ ಶರತ್ ಕುಮಾರ್ ಅವರು ಸುದೀಪ್ ಅವರ ಜನುಮದಿನ ವಿಶ್ ಮಾಡದೇ ಇರಲ್ಲ. ಇಬ್ಬರೂ ತುಂಬ ಆತ್ಮಿಯರು.
ವರಲಕ್ಷ್ಮಿ ಮತ್ತು ನಿಕೋಲಾಯ್ ಅವರ ಪ್ರೇಮಕಥೆ!
ರಮೇಶ್ ಅವರು ಜೋಡಿಯ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದರು. “ನಟಿ ವರಲಕ್ಷ್ಮಿ ಶರತ್ಕುಮಾರ್ ಮತ್ತು ಗ್ಯಾಲರಿಸ್ಟ್ ನಿಕೋಲಾಯ್ ಸಚ್ದೇವ್ ಅವರು ಮಾರ್ಚ್ 1ರಂದು ಮುಂಬೈನಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಕಳೆದ 14 ವರ್ಷಗಳಿಂದ ಪರಸ್ಪರ ಪರಿಚಿತರಾದ ವರಲಕ್ಷ್ಮಿ ಮತ್ತು ನಿಕೋಲಾಯ್ ತಮ್ಮ ಪೋಷಕರ ಆಶೀರ್ವಾದದೊಂದಿಗೆ ಉಂಗುರಗಳನ್ನು ಬದಲಾಯಿಸಿಕೊಂಡರು.