ಬೆಂಗಳೂರು: ನವಿರಾದ ಪ್ರೇಮಕತೆ, ಭಾವುಕ ಕ್ಷಣಗಳು, ಸಮುದ್ರದ ಸದ್ದು, ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರ ಮನೋಜ್ಞ ನಟನೆ ಮೂಲಕ ಜನರ ಮನಸೆಳೆದ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ (Sapta Sagaradaache Ello Side A) ಕತೆಯ ಮುಂದುವರಿದ ಭಾಗವಾಗಿ ಸೈಡ್ ಬಿ ಕತೆ ತೆರೆಗೆ ಬರಲು ಸಜ್ಜಾಗಿದೆ. ಇದರ ಬೆನ್ನಲ್ಲೇ, ಚಿತ್ರತಂಡವು ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ (Sapta Sagaradaache Ello Side B) ಟ್ರೈಲರ್ ಬಿಡುಗಡೆ ಮಾಡಿದ್ದು, ಇಲ್ಲೂ ಭಾವನೆ, ಪ್ರೀತಿ, ಪ್ರೇಮ, ನಿರೀಕ್ಷೆ, ಕುತೂಹಲಗಳಿಗೆ ಜಾಗ ನೀಡಲಾಗಿದೆ.
ಜೈಲಿನಲ್ಲಿರುವ ಮನು ಬಿಡುಗಡೆಯಾಗುತ್ತಾನೆ, ಹೊಸ ಜೀವನಕ್ಕೆ ಅಡಿ ಇಡಬೇಕು ಎಂದು ಹಂಬಲಿಸುತ್ತಾನೆ, ಆತನ ಮೊದಲಿನ ಪ್ರೀತಿಯೇ ಸಿಗುತ್ತದೆಯೋ, ಚೈತ್ರಾ ಆಚಾರ್ ರೂಪದಲ್ಲಿ ಮತ್ತೊಂದು ಪ್ರೇಮಕತೆ ಆರಂಭವಾಗುತ್ತದೆಯೋ ಎಂಬ ಕುತೂಹಲವನ್ನು ಟ್ರೈಲರ್ ಹೆಚ್ಚಿಸುವಂತಿದೆ. ಇದೇ ಕಾರಣಕ್ಕಾಗಿ ಸೈಡ್ ಬಿ ಕುತೂಹಲ ಕೆರಳಿಸಿದೆ. ಆದರೆ, ಇಡೀ ಸಿನಿಮಾದ ಸಾರವನ್ನು ತಿಳಿಯಲು ಸಿನಿಮಾ ಬಿಡುಗಡೆಯಾಗುವತನಕ ಕಾಯಲೇಬೇಕಿದೆ.
ಟ್ರೇಲರ್ ನೋಡಿ
ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ನವೆಂಬರ್ 17ರಂದು ರಿಲೀಸ್ ಆಗುತ್ತಿದೆ. ‘ಸಪ್ತ ಸಾಗರಾಲು ದಾಟಿ’ ಟೈಟಲ್‌ನಲ್ಲಿ ಚಿತ್ರವನ್ನು ತೆಲುಗಿನಲ್ಲಿ ಡಬ್ ಮಾಡಿ ರಿಲೀಸ್ ಮಾಡಿದ್ದಾಗಿದೆ. ಸೈಡ್- A ಒಟಿಟಿಗೆ ಎಂಟ್ರಿ ಕೊಟ್ಟಾಗಿದೆ. ಭಾಗ 1 (‘Sapta Sagaralu Dhaati) ಒಟಿಟಿಯಲ್ಲಿ ನೋಡದೆ ಇರುವವರು ನೋಡಬಹುದು. ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳನ್ನು ಬದಲಿಸಿಕೊಂಡು ಸಿನಿಮಾ ನೋಡುವ ಅವಕಾಶ ಕೂಡ ಸಿಕ್ಕಿದೆ.
ಇದನ್ನೂ ಓದಿ: Udhayanidhi Stalin: ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರವನ್ನು ಮೆಚ್ಚಿದ ಸಚಿವ ಉದಯನಿಧಿ ಸ್ಟಾಲಿನ್!
ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜತೆಗೆ ಅಚ್ಯುತ್ ಕುಮಾರ್, ಅವಿನಾಶ್, ಚೈತ್ರಾ ಆಚಾರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ರಕ್ಷಿತ್ ಶೆಟ್ಟಿ. ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್, ಚೈತ್ರಾ ಆಚಾರ್ಯ, ರುಕ್ಮಿಣಿ, ಚರಣ್ ರಾಜ್ ಹೀಗೆ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರಿಗೆ ತಮ್ಮ ಬರಹವನ್ನು ಟ್ಯಾಗ್ ಮಾಡಿದ್ದಾರೆ.