ಬೆಂಗಳೂರು : ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಸಿನಿಮಾದ ನಿರ್ದೇಶಕ ಹೇಮಂತ್ ಎಮ್. ರಾವ್ ಮತ್ತು ಸಿಂಪಲ್ ಸ್ಟಾರ್ ಮತ್ತೆ ಒಂದಾಗುತ್ತಿದ್ದಾರೆ. ʼಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾದ ಮೂಲಕ ಮತ್ತೆ ಇಬ್ಬರೂ ಕೈ ಜೋಡಿಸುತ್ತಿದ್ದು, ಇದೀಗ ಅಭಿಮಾನಿಗಳಿಗೆ ಸಿಂಪಲ್ ಸ್ಟಾರ್ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿಯನ್ನು ನೀಡುತ್ತಿದ್ದಾರೆ.
ಕಳೆದ ವಾರ ಚಾರ್ಲಿ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಮಿಲಿಯನ್ ವ್ಯೂವ್ಸ್‌ನೊಂದಿಗೆ ಜನರನ್ನು ರೀಚ್ ಮಾಡುವಲ್ಲಿ ಯಶಸ್ವಿಯಾಗಿದ್ದಾರು. ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿಯನ್ನು ನೋಡಲು ಬಹಳ ಕಾತರತೆಯಿಂದ ಜನರು ಕಾದಿದ್ದರು. ಇದೀಗ ʼಸಪ್ತ ಸಾಗರದಾಚೆ ಎಲ್ಲೋʼ ಮೂಲಕ ಖದರ್ ಲುಕ್‌ನೊಂದಿಗೆ ಫಸ್ಟ್ ಲುಕ್ ರಿವೀಲ್ ಮಾಡಿದೆ ಚಿತ್ರತಂಡ.
ಇದನ್ನೂ ಓದಿ | Trailer Release | ಧರ್ಮನ ಕಥೆ ಹೇಳುವ ʼ777 ಚಾರ್ಲಿʼ
ಕಳೆದ ಕೆಲವು ತಿಂಗಳುಗಳಿಂದ ರಕ್ಷಿತ್ 20 ಕೆ.ಜಿ. ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಪೋಸ್ಟರ್ ನೋಡುವಾಗಲೇ, ರಕ್ಷಿತ್ ಶೆಟ್ಟಿ ಅವರ ಮುಖದಲ್ಲಿನ ಭಾವ ವಿಭಿನ್ನವಾಗಿರುವುದು ಕಾಣುತ್ತದೆ. ಮುಖದಲ್ಲಿ ಆಗಿರುವ ಗಾಯಗಳನ್ನು ಗಮನಿಸಿದರೆ ಜೀವನದಲ್ಲಿ ಏನೆಲ್ಲ ಅನುಭವಿಸಿದ್ದಾನೆ ಎನ್ನುವ ಜೀವನ ಅರ್ಥವನ್ನು ಪಾತ್ರ ಹೇಳುವಂತಿದೆ. ಮತ್ತು ಈ ರೀತಿ ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಬೇಕು ಎಂದಾಗ ರಕ್ಷಿತ್ ಅವರು ಯೋಚಿಸದೆ ಪಾತ್ರಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ ಎನ್ನುತ್ತಾರೆ ಹೇಮಂತ್.
ಪರಂವಃ ಪಿಕ್ಷರ್ಸ್ ನಿರ್ಮಾಣ ಸಂಸ್ಥೆಯಡಿ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದು, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು, ರಚನೆ ನಿರ್ದೇಶನವನ್ನು ಹೇಮಂತ್ ಅವರು ಮಾಡುತ್ತಿರುವುದು ವಿಶೇಷ. ಈ ಹಿಂದೆ ನಟಿ ರುಕ್ಮಣಿ ವಸಂತ್ ಅವರ ಫಸ್ಟ್ ಲುಕ್ ಬಿಡುಗೊಡೆ ಗೊಂಡಿತ್ತು.
ಇದನ್ನೂ ಓದಿ | Banadariyalli : ರುಕ್ಮಿಣಿ ವಸಂತ್ ಫಸ್ಟ್ ಲುಕ್ ರಿಲೀಸ್