Site icon Vistara News

Sapthami Gowda: ದಕ್ಷಿಣ ಭಾರತದ ಖ್ಯಾತ ʼಪ್ರವೋಕ್‌ʼ ಮ್ಯಾಗಜಿನ್‌ಗೆ ಸಪ್ತಮಿ ಗೌಡ ಕವರ್‌ ಫೋಟೊ

Sapthami Gowda

#image_title

ಚೆನ್ನೈ: ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ನಟಿ ಸಪ್ತಮಿ ಗೌಡ (Sapthami Gowda) ಅವರ ಖ್ಯಾತಿ ನೂರು ಪಟ್ಟು ಜಾಸ್ತಿಯಾಗಿದೆ. ಕಾಂತಾರ ಯಶಸ್ಸಿನ ಬಳಿಕ ಅವರಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವಂತೆ ಆಫರ್‌ ನೀಡಲಾಗುತ್ತಿದೆ. ಈಗಾಗಲೇ ಅವರು ಬಾಲಿವುಡ್‌ನ ದಿ ವ್ಯಾಕ್ಸಿನ್‌ ವಾರ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಸಪ್ತಮಿ ಗೌಡ ಅವರ ಫೋಟೊವನ್ನು ದಕ್ಷಿಣ ಭಾರತದ ಖ್ಯಾತ ಪ್ರವೋಕ್‌ ಲೈಫ್‌ಸ್ಟೈಲ್‌ ಮ್ಯಾಗಜಿನ್‌ನ ಕವರ್‌ ಫೋಟೊವನ್ನಾಗಿ ಮಾಡಲಾಗಿದೆ.

ಪ್ರವೋಕ್‌ ಲೈಫ್‌ಸ್ಟೈಲ್‌ ಮ್ಯಾಗಜಿನ್‌ ದಕ್ಷಿಣ ಭಾರತದ ಪ್ರಮುಖ ಮ್ಯಾಗಜಿನ್‌ಗಳಲ್ಲಿ ಒಂದಾಗಿದ್ದು, ಸಿನಿಮಾ, ಲೈಫ್‌ಸ್ಟೈಲ್‌, ಫಿಟ್‌ನೆಸ್‌ ಸೇರಿ ಹಲವು ವಿಷಯಗಳ ಕುರಿತು ವರದಿ ಮಾಡುತ್ತದೆ. ಹಾಗಾಗಿ, ಇದರ ಕವರ್‌ ಫೋಟೊವನ್ನಾಗಿ ಸಪ್ತಮಿ ಗೌಡ ಅವರ ಭಾವಚಿತ್ರವನ್ನು ಆಯ್ಕೆ ಮಾಡಿರುವುದು ಸಪ್ತಮಿ ಗೌಡ ಅವರ ಖ್ಯಾತಿಗೆ ಸಾಕ್ಷಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Sapthami Gowda: ಹೊಸ ಫೋಟೊ ಶೂಟ್‌ನಲ್ಲಿ ಕಂಗೊಳಿಸಿದ ಕಾಂತಾರ ಚೆಲುವೆ ಸಪ್ತಮಿ ಗೌಡ

ಸಪ್ತಮಿ ಗೌಡ ಅವರನ್ನು ಮ್ಯಾಗಜಿನ್‌, ದಿ ಸ್ಪೋರ್ಟಿ ಸ್ಟಾರ್‌ ಎಂದು ಕರೆದಿದೆ. ಎಂಜಿನಿಯರ್‌ ಆಗಿದ್ದ ಸಪ್ತಮಿ ಗೌಡ ಅವರ ಹಿನ್ನೆಲೆ ಏನು, ಅವರ ವಿದ್ಯಾಭ್ಯಾಸ, ಸಿನಿಮಾ ಕುರಿತ ಆಸಕ್ತಿ ಸೇರಿ ಹಲವು ವಿಷಯಗಳ ಕುರಿತು ಮ್ಯಾಗಜಿನ್‌ ವರದಿ ಮಾಡಿದೆ.

Exit mobile version